Video: ಬೈಕ್ ಬಿಟ್ಟು ಕುದುರೆ ಏರಿದ ಝೊಮ್ಯಾಟೊ ಡೆಲಿವರಿ ಬಾಯ್…
Team Udayavani, Jan 3, 2024, 11:52 AM IST
ಹೈದರಾಬಾದ್‌ನಲ್ಲಿ ಫುಡ್ ಡೆಲಿವರಿ ಬಾಯ್‌ನ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕಾಪಟ್ಟೆ ವೈರಲ್ ಆಗಿದೆ. ಆತ ಕುದುರೆ ಮೇಲೆ ಕುಳಿತು ಫುಡ್ ಡೆಲಿವರಿ ಮಾಡಿದ್ದೇ ವಿಡಿಯೋ ವೈರಲ್ ಆಗಲು ಕಾರಣವಾಗಿದೆ.
ಫುಡ್ ಡೆಲಿವರಿ ಬಾಯ್ ಹೈದರಾಬಾದ್ ನ ಜನನಿಬಿಡ ಪ್ರದೇಶದಲ್ಲಿ ಕುದುರೆಮೇಲೆ ಕುಳಿತು ಹೆಗಲ ಮೇಲೆ ಬ್ಯಾಗ್ ಹಾಕೊಕೊಂಡು ತೆರಳುವುದು ಕಾಣಬಹುದು ಅಸಲಿಗೆ ಆತ ದಿನಾ ಕುದುರೆ ಮೇಲೆಯೇ ಕುಳಿತು ಫುಡ್ ಡೆಲಿವರಿ ಮಾಡುತ್ತಾನೆ ಅಂದು ಕೊಂಡಿರಾ… ಇಲ್ಲ. ಇದಕ್ಕೊಂದು ಕಾರಣವಿದೆ ಹಿಟ್ ಅಂಡ್ ರನ್ ಕೇಸ್ ಗಳಲ್ಲಿ ಚಾಲಕರಿಗೆ ಭಾರಿ ದಂಡ ಹಾಗೂ ಜೈಲು ಶಿಕ್ಷೆ ವಿಧಿಸಲು ಕೇಂದ್ರ ಸರ್ಕಾರ ಹೊಸ ಕಾನೂನು ತಂದಿರುವುದು ಗೊತ್ತೇ ಇದೆ. ಇದರ ವಿರುದ್ಧ ದೇಶಾದ್ಯಂತ ಟ್ರಕ್ ಚಾಲಕರು ಮುಷ್ಕರ ನಡೆಸಿದರು. ಇದರ ಪರಿಣಾಮ ಪೆಟ್ರೋಲ್ ಬಂಕ್ ಗಳಲ್ಲಿ ಇಂಧನ ದಾಸ್ತಾನು ಕಡಿಮೆಯಾಗಿದೆ.
ಪೆಟ್ರೋಲ್ ಮತ್ತು ಡೀಸೆಲ್ ಕೊರತೆಯ ಸುದ್ದಿ ಹೈದರಾಬಾದ್‌ನಲ್ಲಿ ಸಂಚಲನ ಮೂಡಿಸಿದೆ. ವಾಹನ ಸವಾರರು ಪೆಟ್ರೋಲ್ ಬಂಕ್‌ಗಳತ್ತ ಸಂಚಾರ ಮಾಡಿದರೆ ಒಂದು ಕಡೆಯಿಂದ ಸಂಚಾರ ದಟ್ಟಣೆ ಉಂಟಾಗಿತ್ತು. ಹಲವೆಡೆ ಇಂಧನ ಕೊರತೆಯೂ ಕಂಡುಬಂದಿತು ಕೆಲವೆಡೆ ನೋ ಸ್ಟಾಕ್ ಎಂಬ ಫಲಕವನ್ನೂ ಹಾಕಲಾಯಿತು.
ಈ ಪರಿಸ್ಥಿತಿಗಳಿಂದಾಗಿ, ಆನ್‌ಲೈನ್ ಆಹಾರ ವಿತರಣಾ ಸಿಬ್ಬಂದಿ ತೀವ್ರ ತೊಂದರೆಗಳನ್ನು ಎದುರಿಸಬೇಕಾಯಿತು. ಸಮಯಕ್ಕೆ ಸರಿಯಾಗಿ ಆಹಾರ ವಿತರಿಸಲು ಸಾಧ್ಯವಾಗುತ್ತಿಲ್ಲ ಎಂಬ ದೂರುಗಳು ಕೆಲವು ಕಡೆ ಕೇಳಿ ಬರುತ್ತಿವೆ ಇದರ ನಡುವೆ ಡೆಲಿವರಿ ಬಾಯ್ ಪೆಟ್ರೋಲ್ ಹಾಕಲು ಬಂಕ್ ಬಳಿ ಬಂದಿದ್ದಾನೆ ಆದರೆ ಇಲ್ಲಿದ್ದ ವಾಹನಗಳ ಸಾಲು ಕಂಡು ಇದುಸಾಧ್ಯವಿಲ್ಲ ಎಂಬುದನ್ನು ಅರಿತ ಆತ ಬೈಕ್ ಬಿಟ್ಟು ಬಾಡಿಗೆ ಕುದುರೆ ಪಡೆದು ತನ್ನ ಫುಡ್ ಡೆಲಿವರಿ ಕೊಡಲು ಹೊರಟಿದ್ದಾನೆ. ಈತ ಕುದುರೆ ಮೇಲೆ ಹೋಗುತ್ತಿರುವುದನ್ನು ಕಂಡ ಇತರರು ಆತನ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿದ್ದಾರೆ ಅಲ್ಲದೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
When petrol bunks ran out of fuel in #Hyderabad, @zomato delivery arrived on horseback … at Chanchalguda, next to Imperial Hotel… after long, long queues & closure of petrol pumps as a fallout of #TruckersStrike over #NewLaw on hit-and-run accidents @ndtv @ndtvindia pic.twitter.com/bYLT5BuvQh
— Uma Sudhir (@umasudhir) January 3, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ
Perfect: ಎಡ್ ಶಿರನ್ ಹಾಡಿನಿಂದ ರಾಷ್ಟ್ರೀಯ ಸೆನ್ಸೇಶನ್ ಆದ ಉಡುಪಿಯ ಹುಡುಗ | Video
Kazakhstan: ವಿಮಾನ ದುರಂತ ಸಂದರ್ಭದ ಕೊನೆಯ ಕ್ಷಣದ ಭಯಾನಕ ವಿಡಿಯೋ ವೈರಲ್…
UK: ಒಂದೇ ನಿಮಿಷದಲ್ಲಿ 49 ಗ್ರಾಂ ಕಾಟನ್ ಕ್ಯಾಂಡಿ ಸೇವಿಸಿ ದಾಖಲೆ ಬರೆದ ಮಹಿಳೆ
Speeding Truck : ಟ್ರಕ್ ನಡಿ ಸಿಲುಕಿದ ಬೈಕ್ ಸವಾರರನ್ನು 1ಕಿ.ಮೀ ದೂರ ಎಳೆದೊಯ್ದ ಚಾಲಕ…
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಗೀತಾರ್ಥ ಚಿಂತನೆ 137: ಮನೆಗೆ ಬೆಂಕಿ ಬಿದ್ದರೆ ದುಃಖ ಬೆಂಕಿಗಾಗಿಯಲ್ಲ!
Christmas, ವರ್ಷಾಂತ್ಯ ಸಂಭ್ರಮ; ಬೀಚ್‌ಗಳಿಗೆ ಜೀವಕಳೆ
Captain Brijesh Chowta: ಪಿಎಂ-ವಿಶ್ವಕರ್ಮ ಯೋಜನೆ ಯಶಸ್ವಿ ಅನುಷ್ಠಾನಕ್ಕೆ ಸೂಚನೆ
Kundapura: “ಅವರು ಪ್ರತೀ ದಿನ ಫೋನ್ ಮಾಡುತ್ತಿದ್ದರು… ಅಂದು ನನ್ನ ಕರೆಗೆ ಉತ್ತರಿಸಲಿಲ್ಲ’
Pushpa 2film : 21 ದಿನಗಳಲ್ಲಿ 1100 ಕೋಟಿ ರೂ. ಗಳಿಸಿದ “ಪುಷ್ಪ-2′ ಸಿನೆಮಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.