ಅಮೆರಿಕದಲ್ಲಿ ಜೋಂಬಿ ಅಟ್ಯಾಕ್! ನಡು ರಸ್ತೆಯಲ್ಲೇ ಜನರಿಂದ ವಿಚಿತ್ರ ವರ್ತನೆ
Team Udayavani, Feb 24, 2023, 8:18 AM IST
ಜೋಂಬಿ! ಈ ಪದ ಕೇಳಿದ್ದೇವೆ, ಹಲವರು ಕೊರಿಯಾ ಮೂಲದ ಸಿನೆಮಾವೊಂದರಲ್ಲಿ ಮನುಷ್ಯರು ಜೋಂಬಿಗಳಂತಾಗುವ ದೃಶ್ಯ ವನ್ನೂ ನೋಡಿದ್ದೇವೆ. ಆದರೆ ಜೋಂಬಿ ಎನ್ನುವ ಪರಿಕಲ್ಪನೆಯೇ ಕಾಲ್ಪನಿಕ ಎಂದುಕೊಂಡಿದ್ದರು. ಇಂದು ಅಮೆರಿಕದಲ್ಲಿ ಜೋಂಬಿ ನಿಜವಾಗಿಬಿಟ್ಟಿದೆ!
ರಸ್ತೆಯಲ್ಲಿ ಬಿದ್ದು ಒದ್ದಾಡುವ ಜನ
ಇತ್ತೀಚೆಗಷ್ಟೇ ಫಿಲಡೆಲ್ಫಿಯಾದಲ್ಲಿ ರಸ್ತೆಯಲ್ಲೇ ಮಹಿಳೆಯೊಬ್ಬರು ಜೋಂಬಿಯಂತೆ ವರ್ತಿಸಿದ್ದ ವೀಡಿಯೋ ವೈರಲ್ ಆಗಿತ್ತು. ಅಲ್ಲದೇ ಜನರ ಚರ್ಮ ಕೂಡ ಜೋಂಬಿಗಳಂತೆ ಕೊಳೆಯು ತ್ತಿರುವುದು ಆರೋಗ್ಯ ತಜ್ಞರಲ್ಲಿ ಆತಂಕ ಮೂಡಿಸಿದೆ. ಇದಕ್ಕೆಲ್ಲ ಕಾರಣ “ಜೋಂಬಿ ಡ್ರಗ್’.
ಜೋಂಬಿ ವರ್ತನೆ ಏಕೆ?
ಡ್ರಗ್ ಓವರ್ಡೋಸ್ ಆಗುತ್ತಿದ್ದಂತೆ ಹಲವು ರೀತಿಯ ಸಮಸ್ಯೆ ಎದುರಾಗುತ್ತದೆ. ತೀವ್ರ ನಿದ್ರೆ, ಖನ್ನತೆ, ಮೈ ಮೇಲಿನ ನಿಯಂತ್ರಣ ತಪ್ಪು ವುದು ವರದಿಯಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಜನರು ಜೋಂಬಿ ಗಳ ರೀತಿಯೇ ವರ್ತಿಸುತ್ತಿದ್ದು, ಈ ಔಷಧ ಮನುಷ್ಯರನ್ನು ಜೋಂಬಿಗಳಾಗಿ ಪರಿವರ್ತಿಸುತ್ತಿದೆಯೇ ಎನ್ನುವ ಆತಂಕವೂ ಮೂಡಿದೆ. ಡ್ರಗ್ ಓವರ್ಡೋಸ್ನಿಂದ 2020ರಲ್ಲಿ ಮೃತಪಟ್ಟವರಲ್ಲಿ ಶೇ.6.7 ಮಂದಿಯಲ್ಲಿ ಕ್ಸೆ„ಲಾಜಿನ್ ಅಂಶವಿರುವುದು ಪತ್ತೆಯಾಗಿತ್ತು. ಈಗ ಮತ್ತೆ ಅದರ ಅಕ್ರಮ ಬಳಕೆ ಹೆಚ್ಚಾಗಿರುವುದು ವರದಿಯಾಗಿದೆ.
ಏನಿದು ಜೋಂಬಿ ಡ್ರಗ್?
ಕ್ಸೆ„ಲಾಜಿನ್ ಅಥವಾ ಜೋಂಬಿ ಡ್ರಗ್ ಎನ್ನುವ ಔಷಧವನ್ನು ಪ್ರಾಣಿಗಳಿಗೆ ಮಾತ್ರ ಬಳಸಲು ಪ್ರಮಾಣೀಕರಿಸಲಾಗಿದೆ. ಆದರೆ ನಿಷೇಧಿತ ಮಾದಕವಸ್ತುಗಳಲ್ಲಿಯೂ ಈ ಡ್ರಗ್ ಅನ್ನು ಅಕ್ರಮವಾಗಿ ಬಳಸುತ್ತಿರುವುದು ವರದಿಯಾಗಿದೆ. ಮನುಷ್ಯರು ಇದರ ಬಳಿಯಿರುವ ಮಾದಕ ವಸ್ತುಗಳನ್ನು ಸೇವಿಸು ತ್ತಿದ್ದಂತೆ ಡ್ರಗ್ ಓವರ್ ಡೋಸ್ ಆಗಿ ಸಾಯು ತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shanghai: ಎಐ ಆಧಾರಿತ ರೋಬೋಟ್ನಿಂದ 12 ರೋಬೋಗಳ ಕಿಡ್ನಾಪ್!
Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ
Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…
India Gate; ಅಸಹ್ಯ ಟವೆಲ್ ಡ್ಯಾನ್ಸ್ ಮಾಡಿದ ಮಾಡೆಲ್: ಆಕ್ರೋಶ
Viral: ಮದುವೆ ಸಂಭ್ರಮದಲ್ಲಿ 20 ಲಕ್ಷ ರೂಪಾಯಿಯನ್ನು ಗಾಳಿಯಲ್ಲಿ ಎಸೆದ ಅತಿಥಿಗಳು.!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.