![Sunitha](https://www.udayavani.com/wp-content/uploads/2025/02/Sunitha-415x249.jpg)
![Sunitha](https://www.udayavani.com/wp-content/uploads/2025/02/Sunitha-415x249.jpg)
Team Udayavani, Feb 4, 2021, 10:50 AM IST
ಜಗತ್‌ವಿಖ್ಯಾತ ಮ್ಯೂಸಿಯಂ, ಕೋಟೆಗಳು, ಜಲಪಾತಗಳು ಮತ್ತು ಐತಿಹಾಸಿಕ ಗ್ರಾಮಗಳನ್ನೊಳಗೊಂಡ ಮಧ್ಯಪ್ರದೇಶದ ರೇವಾನಗರ ಜಿಲ್ಲಾ ಕೇಂದ್ರವೂ ಹೌದು. ಇಲ್ಲಿ ಪ್ರಕೃತಿ ದತ್ತ ಮತ್ತು ಮಾನವ ನಿರ್ಮಿಸ ಸೌಂದರ್ಯಗಳ ಸಮ್ಮಿಲನವಾಗಿದೆ.
ಇಲ್ಲಿರುವ ಬಿಳಿ ಹುಲಿಗಳು ಪ್ರಮುಖ ಆಕರ್ಷಣೆಯೂ ಹೌದು. ಬಿಂಜ್ ಪಹಾರ್, ಲೋವರ್ ನಾದರ್ನ್ ಪ್ಲೆ„ನ್, ಕೈರ್ಮೋ ಮತ್ತು ರೇವಾ ತಪ್ಪಲೆಂದು ನಾಲ್ಕು ಭಾಗಗಳಾಗಿ ವಿಂಗಡಿಸಿರುವ ರೇವಾ ನಗರದಲ್ಲಿ ನೋಡಲು ಬೇಕಾದಷ್ಟು ಸ್ಥಳಗಳಿವೆ. ಈ ನಗರವು ಬಿಳಿ ಹುಲಿಗಳ ತಾಣವೆಂದೇ ಗುರುತಿಸಲ್ಪಟ್ಟಿದೆ. ಇದರೊಂದಿಗೆ ಬಾಗೇಲ್ ಮ್ಯೂಸಿಯಂ, ರೇವಾ ಕೋಟೆ, ಪಿಲಿಕೋತಿ, ಗೋವಿಂದಗಡ್ ಕೋಟೆ, ಅರಮನೆ, ವೆಂಕಟ್ ಭವನ್, ರಾಣಿ ತಲಾಬ್, ಎಪಿಎಸ್ ವಿಶ್ವವಿದ್ಯಾಲಯದ ಮೈದಾನ, ಬೈರೂಮ್ ಬಾಬಾ ಪುತ್ಥಳಿ, ರಾಣಿಪುರ ಕಾರ್ಚುಯುಲಿಯಾನ್, ಕಿಯೋಂತಿ ಜಲಪಾತ, ಪೂರ್ವ ಜಲಪಾತ, ಚಾಚಾಯ್ ಜಲಪಾತವನ್ನು ಇಲ್ಲಿ ಕಾಣಬಹುದು.
ಜಿಲ್ಲೆಯ ಹೆಸರಿನಿಂದಲೇ ಕರೆಯಲ್ಪಡುವ ರೇವಾ ನಗರ ಕ್ರಿ.ಶ. ಮೂರನೇ ಶತಮಾನದಲ್ಲಿ ಮೌರ್ಯರಿಂದ ಆಳಲ್ಪಟ್ಟಿತ್ತು ಎನ್ನುವ ಇತಿಹಾಸವೂ ಇದೆ. ರೇವಾ ಎನ್ನುವುದು ನರ್ಮದಾ ನದಿಯ ಇನ್ನೊಂದು ಹೆಸರು ಎನ್ನುವುದು ಪುರಾಣಗಳಲ್ಲಿ ಉಲ್ಲೇಖಗೊಂಡಿದೆ.ಅಲ್ಲದೇ ಮೊದಲ ಬಿಳಿ ಹುಲಿಯನ್ನು ರೇವಾದಲ್ಲಿಯೇ ಕಂಡುಹಿಡಿಯಲಾಯಿತು ಎನ್ನುವ ಪ್ರತೀತಿಯೂ ಇದೆ.
ರೇವಾ ನಗರವನ್ನು ರಸ್ತೆ, ವಾಯು, ರೈಲ್ವೇ ಮೂಲಕ ತಲುಪಬಹುದು. ಹತ್ತಿರವೇ ವಿಮಾನ ನಿಲ್ದಾಣವಾದ ಖುಜರಾಹೋ ಇಲ್ಲಿಂದ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುತ್ತದೆ. ರೈಲಿನಲ್ಲಿ ಪ್ರಯಾಣಿಸುವುದಾದರೆ ರೇವಾ ರೈಲು ನಿಲ್ದಾಣಕ್ಕೆ ತಲುಪಬಹುದು. ಜುಲೈ-ಸೆಪ್ಟಂಬರ್ ಅವಧಿಯಲ್ಲಿ ರೇವಾಗೆ ಭೇಟಿ ನೀಡುವುದು ಅತ್ಯಂತ ಸೂಕ್ತ ಸಮಯ.
ಮೀನುಗಾರಿಕೆ ಟು ಪಾಕ್ ಜೈಲಿನ ನರಕಯಾತನೆ.. ʼತಾಂಡೇಲ್ʼ ಸಿನಿಮಾ ಹಿಂದಿನ ರಿಯಲ್ ನಾಯಕನ ಕಥೆ
Kumbh Melaಗಳಿಗೆ ತೆರಳುವ ಯೋಚನೆ-ಸಿದ್ದತೆ ಇದ್ದರೆ “ಈ ಹತ್ತು” ಅಂಶಗಳು ಗಮನದಲ್ಲಿರಲಿ!
Winter Skin Care Routine: ಚಳಿಗಾಲದಲ್ಲಿ ಚರ್ಮದ ಆರೈಕೆಗೆ ಅತ್ಯುತ್ತಮ ಸಲಹೆಗಳು…
Mahakumbh; ಪುಣ್ಯಸ್ನಾನದ ವೇಳೆ ಮೂರು ವಿಭಿನ್ನ ಗೆಟಪ್ ಗಳಲ್ಲಿ ಗಮನ ಸೆಳೆದ ಮೋದಿ
Donald Trump: ಗಾಜಾದ ಜನಸಂಖ್ಯಾ ಸ್ಥಳಾಂತರ: ಡೊನಾಲ್ಡ್ ಟ್ರಂಪ್ ಅವಾಸ್ತವಿಕ ಕನಸು
Space Station: ಸುನೀತಾ ವಿಲಿಯಮ್ಸ್ ವಾಪಸ್ ವಿಳಂಬ: ಶುಭಾಂಶು ಯಾತ್ರೆಗೂ ತೊಡಕು
Slams: ಮಸೂದೆಗೆ ಗವರ್ನರ್ ಸಹಿ ಹಾಕದಿದ್ದರೆ ಸರಕಾರಕ್ಕೆ ತಿಳಿಸಬೇಕಲ್ಲ?: ಸುಪ್ರೀಂ ಕೋರ್ಟ್
Mahakumbha: 25 ದಿನದಲ್ಲಿ 40 ಕೋಟಿ ಭಕ್ತರಿಂದ ಪುಣ್ಯಸ್ನಾನ
Buy Food: ವಂದೇ ಭಾರತ್‌ನಲ್ಲಿನ್ನು ಬುಕ್ಕಿಂಗ್ ಇಲ್ಲದೆಯೂ ಆಹಾರ ಖರೀದಿ ಸಾಧ್ಯ
Dantewada: ಕೊಡಲಿಯಿಂದ ಕೊಚ್ಚಿ ಮತ್ತೊಬ್ಬ ನಾಗರಿಕನ ಹತ್ಯೆಗೈದ ನಕ್ಸಲರು!
You seem to have an Ad Blocker on.
To continue reading, please turn it off or whitelist Udayavani.