12 ಕೋಟಿಯಿಂದ 2000 ಕೋಟಿ:ರಾಜಮೌಳಿ ಸಿನಿಮಾ ಕಲೆಕ್ಷನ್ ಎಷ್ಟು?ಇವರು ಬಾಕ್ಸ್ ಆಫೀಸ್ ‘ಬಾಹುಬಲಿ’
Team Udayavani, Sep 30, 2023, 5:30 PM IST
ಎಸ್ ಎಸ್ ರಾಜಮೌಳಿ ಭಾರತೀಯ ಸಿನಿಮಾರಂಗದ ಸೂಪರ್ ಹಿಟ್ ಡೈರೆಕ್ಟರ್ ಗಳಲ್ಲಿ ಒಬ್ಬರು. ಅವರ ಸಿನಿಮಾಗಳಿಗಾಗಿ ಕಾದುಕೂರುವ ಪ್ರತ್ಯೇಕ ವರ್ಗವೇ ಇದೆ. ಅವರು ಮುಟ್ಟಿದೆಲ್ಲ ಚಿನ್ನವಾಗಿ ಬಾಕ್ಸ್ ಆಫೀಸ್ ನಲ್ಲಿ ಹಣದ ಹೊಳೆಯನ್ನೇ ಹರಿಸಿದೆ.
ಇತ್ತೀಚಿನ ವರ್ಷಗಳಲ್ಲಿ ಅಂದರೆ ‘ಬಾಹುಬಲಿ’ ‘ಬಾಹುಬಲಿ-2’ ಸಿನಿಮಾದ ಬಳಿಕ ಅವರು ಮಾರ್ಡನ್ ಯುಗದ ಪ್ರೇಕ್ಷಕರ ಮೆಚ್ಚಿನ ನಿರ್ದೇಶಕರಾಗಿದ್ದಾರೆ. ‘ಆರ್ ಆರ್ ಆರ್’ ಅವರ ನಿರ್ದೇಶನದ ಕ್ಲಾಸ್ ಗೆ ಆಸ್ಕರ್ ಗರಿ ಲಭಿಸಿರುವುದು ಗೊತ್ತೇ ಇದೆ. ಈ ಮೂರು ಸಿನಿಮಾಗಳ ಮೊದಲು ಕೂಡ ರಾಜಮೌಳಿ ಬಾಕ್ಸ್ ಆಫೀಸ್ ನಲ್ಲಿ ಕೋಟಿ ಕೋಟಿ ತಂದುಕೊಟ್ಟ ಸಿನಿಮಾಗಳನ್ನು ಮಾಡಿದ್ದಾರೆ.
ಸಿನಿಮಾವನ್ನು ಅದ್ದೂರಿತನದಿಂದಲೇ ತೆರೆ ಮೇಲೆ ತರುವ ರಾಜಮೌಳಿ ಒಟ್ಟು ಬಾಕ್ಸ್ ಆಫೀಸ್ ಗಳಿಕೆ ಎಷ್ಟು ಎನ್ನುವುದರ ಕುರಿತ ಒಂದು ನೋಟ ಇಲ್ಲಿದೆ.
ಸ್ಟೂಡೆಂಟ್ ನಂ.1:
ಜೂ. ಎನ್.ಆರ್ ಕಾಲೇಜು ಹುಡುಗನಾಗಿ ಕಾಣಿಸಿಕೊಂಡ ಸ್ಟೂಡೆಂಟ್ ನಂ.1 ಸಿನಿಮಾ 2001 ರಲ್ಲಿ ತೆರೆಗೆ ಬಂದಿತ್ತು. ಅಂದಿನ ಕಾಲದಲ್ಲಿ ಯೂತ್ ಮನಗೆದ್ದಿದ್ದ ಸಿನಿಮಾ 2 ಕೋಟಿ ರೂ.ಬಜೆಟ್ ನಲ್ಲಿ ನಿರ್ಮಾಣವಾಗಿತ್ತು. ಪ್ರೀ ರಿಲೀಸ್ ನಲ್ಲಿ 2.75 ಕೋಟಿ ಬ್ಯುಸಿನೆಸ್ ಮಾಡಿದ್ದ ಸಿನಿಮಾ. ಒಟ್ಟು 12 ಕೋಟಿಯ ಬ್ಯುಸಿನೆಸ್ ಮಾಡಿತ್ತು.
ಸಿಂಹಾದ್ರಿ:
2003 ರಲ್ಲಿ ತೆರೆಕಂಡ ಈ ಸಿನಿಮಾದಲ್ಲಿ ಜೂ.ಎನ್.ಟಿ.ಆರ್ ಹಾಗೂ ಭೂಮಿಕಾ ಚಾವ್ಲಾ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು. ಜೂ. ಎನ್. ಟಿ.ಆರ್ ಅವರ ಮಾಸ್ ಅವತಾರ ಸಿನಿಮಾವನ್ನು ಬ್ಲಾಕ್ ಬಸ್ಟರ್ ಹಿಟ್ ಆಗಿಸಿತ್ತು. ಟಾಲಿವುಡ್ ಮಾತ್ರವಲ್ಲದೆ ಸಿನಿಮಾ ಇತರೆ ಭಾಷೆಗೆ ಡಬ್ ಆಗಿಯೂ ಗಮನ ಸೆಳೆದಿತ್ತು.
8 ಕೋಟಿ ಬಜೆಟ್ ನಲ್ಲಿ ನಿರ್ಮಾಣವಾದ ಈ ಸಿನಿಮಾ, 7 ಕೋಟಿ ರೂಪಾಯಿಯ ಪ್ರೀ – ರಿಲೀಸ್ ಬ್ಯುಸಿನೆಸ್ ಮಾಡಿತ್ತು. ಅಂತಿಮವಾಗಿ ಬಾಕ್ಸ್ ಆಫೀಸ್ ನಲ್ಲಿ ಈ ಸಿನಿಮಾ 26 ಕೋಟಿಯ ಕಮಾಯಿ ಮಾಡಿತ್ತು.
ಸೈ:
2004 ರಲ್ಲಿ ಬಂದ ‘ಸೈ’ ಸಿನಿಮಾದಲ್ಲಿ ನಿತಿನ್ ಹಾಗೂ ಜೆನೆಲಿಯಾ ನಾಯಕ – ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಒಂದಷ್ಟು ಸದ್ದು ಮಾಡಿದ್ದ ಈ ಸಿನಿಮಾ 5 ಕೋಟಿ ಬಜೆಟ್ ನಲ್ಲಿ ನಿರ್ಮಾಣವಾದ ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ 9.5 ಕೋಟಿ ಕಮಾಯಿ ಮಾಡಿತ್ತು. 7 ಕೋಟಿಯ ಪ್ರೀ ರಿಲೀಸ್ ಬ್ಯುಸಿನೆಸ್ ಮಾಡಿತ್ತು.
ಛತ್ರಪತಿ:
ರಾಜಮೌಳಿ ಅವರ ಈ ಸಿನಿಮಾದಲ್ಲಿ ಡಾರ್ಲಿಂಗ್ ಪ್ರಭಾಸ್ ,ಶ್ರಿಯಾ ಶರಣ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ನಿರ್ದೇಶನ, ನಟನೆ ಹಾಗೂ ಭಾವನಾತ್ಮಕವಾಗಿ ಸಿನಿಮಾ ಗಮನ ಸೆಳೆದಿತ್ತು.
ಈ ಚಿತ್ರದ ಬಜೆಟ್ 10 ಕೋಟಿ ಆಗಿದ್ದು, 13 ಕೋಟಿ ಪ್ರಿ ರಿಲೀಸ್ ಬ್ಯುಸಿನೆಸ್ ಮಾಡಿತ್ತು. ಛತ್ರಪತಿ ಬಾಕ್ಸ್ ಆಫೀಸ್ ನಲ್ಲಿ 21 ಕೋಟಿ ರೂ.ವಿನ ಗಳಿಕೆಯನ್ನು ಕಂಡಿತ್ತು. 2005 ರಲ್ಲಿ ಬಂದ ಈ ಸಿನಿಮಾ ರಾಜಮೌಳಿ ಅವರ ಬೆಸ್ಟ್ ಸಿನಿಮಾಗಳಲ್ಲಿ ಒಂದು.
ವಿಕ್ರಮಾರ್ಕುಡು:
ರಾಜಮೌಳಿ ವೃತ್ತಿ ಬದುಕಿನಲ್ಲಿ ಈ ಸಿನಿಮಾ ಎಂದಿಗೂ ವಿಶೇಷ. ಟಾಲಿವುಡ್ ಸಿನಿರಂಗದಲ್ಲಿ ‘ವಿಕ್ರಮಾರ್ಕುಡು’ ಬಿಗ್ ಹಿಟ್ ಆಗಿತ್ತು. ಥಿಯೇಟರ್ ನಲ್ಲಿ 100 ಡೇಸ್ ಓಡಿತ್ತು. ಮಾಸ್ ಮಹಾರಾಜ ರವಿತೇಜ ಖಾಕಿ ತೊಟ್ಟು, ಖಡಕ್ ಡೈಲಾಗ್ಸ್ ಹೊಡೆದು ಮಿಂಚಿದ್ದರು.
11 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣದಲ್ಲಿ ತಯಾರಾದ ಈ ಸಿನಿಮಾ ಪ್ರೀ ರಿಲೀಸ್ ನಲ್ಲಿ 14 ಕೋಟಿ ಗಳಿಸಿತ್ತು. ಬಾಕ್ಸ್ ಆಫೀಸ್ ನಲ್ಲಿ ಒಟ್ಟು 23 ಕೋಟಿ ಗಳಿಸಿತ್ತು.
ಯಮದೊಂಗ:
ಈ ಸಿನಿಮಾ ರಾಜಮೌಳಿ ಅವರ ದುಬಾರಿ ಸಿನಿಮಾಗಳಲ್ಲಿ ಒಂದು. ಪೌರಾಣಿಕ ಕಥಾಹಂದರ ಹೊಂದಿರುವ ಈ ಸಿನಿಮಾದಲ್ಲಿ ಜೂ.ಎನ್.ಟಿ.ಆರ್ , ಪ್ರಿಯಮಣಿ,ಮೋಹನ್ ಬಾಬು ಸೇರಿದಂತೆ ಇತರ ಪ್ರಮುಖಕರು ಕಾಣಿಸಿಕೊಂಡಿದ್ದರು.
18 ಕೋಟಿ ವೆಚ್ಚದಲ್ಲಿ ತಯಾರಾದ ಈ ಸಿನಿಮಾ,ಪ್ರೀ ರಿಲೀಸ್ ಆಗಿ 22 ಕೋಟಿ ಮಾಡಿತ್ತು. ಒಟ್ಟು ಬಾಕ್ಸ್ ಆಫೀಸ್ ನಲ್ಲಿ 29 ಕೋಟಿ ಗಳಿಸಿತ್ತು.
ಮಗಧೀರ:
ಈ ಸಿನಿಮಾ ಅಂದು (2009) ರಲ್ಲಿ ಟಾಲಿವುಡ್ ಸಿನಿಮಾರಂಗದಲ್ಲಿದ್ದ ಎಲ್ಲಾ ದಾಖಲೆಗಳನ್ನು ಉಡೀಸ್ ಮಾಡಿತ್ತು. ಮೆಗಾ ಸ್ಟಾರ್ ಪುತ್ರ ರಾಮ್ ಚರಣ್ ಅವರಿಗೆ ಇಂಡಸ್ಟ್ರಿಯಲ್ಲಿ ಹೊಸ ಇಮೇಜ್ ತಂದುಕೊಟ್ಟಿತು. ಲವ್ ಸ್ಟೋರಿಗೆ ರಾಜಮನೆತನದ ಕಥೆಯ ಟಚ್ ಕೊಟ್ಟ ‘ಮಗಧೀರ’ 44 ಕೋಟಿ ಬಜೆಟ್ ನಲ್ಲಿ ನಿರ್ಮಾಣವಾಗಿತ್ತು. ಇಂಡಿಯನ್ ಬಾಕ್ಸ್ ಆಫೀಸ್ ಸೇರಿ ವರ್ಲ್ಡ್ ವೈಡ್ ಈ ಸಿನಿಮಾ 132.65 ಕೋಟಿ ಗಳಿಕೆ ಕಂಡಿತ್ತು.
ಮರ್ಯಾದಾ ರಾಮಣ್ಣ:
ಕಾಮನ್ ಮ್ಯಾನ್ ಲವ್ ಸ್ಟೋರಿ ಕಥೆಯಲ್ಲಿ ಸುನೀಲ್ ಅವರು ನಾಯಕನಾಗಿ ಕಾಣಿಸಿಕೊಂಡಿದ್ದರು. ಪ್ರೀತಿ – ಪ್ರೇಮದ ಕಥೆಯ ಜೊತೆಗೆ ಆ್ಯಕ್ಷನ್ ಅಂಶಗಳು ಈ ಸಿನಿಮಾದಲ್ಲಿದೆ.
14 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ 29 ಕೋಟಿ ಕಲೆಕ್ಷನ್ ಮಾಡಿತ್ತು. ಪ್ರೀ ರಿಲೀಸ್ ನಲ್ಲಿ 20 ಕೋಟಿಯ ವ್ಯವಹಾರ ಮಾಡಿತ್ತು.
ಈಗ:
ರಾಜಮೌಳಿ ಅವರ ವೃತ್ತಿ ಬದುಕಿನ ಮತ್ತೊಂದು ದೊಡ್ಡ ಹಿಟ್ ಕೊಟ್ಟ ಸಿನಿಮಾವೆಂದರೆ ಅದು “ಈಗ”. ಸ್ಪೆಷಲ್ ವಿಎಫ್ ಎಕ್ಸ್ ಮೂಲಕ ಗಮನ ಸೆಳೆದ ಸಿನಿಮಾದಲ್ಲಿ ಕನ್ನಡದ ಸುದೀಪ್, ಟಾಲಿವುಡ್ ನಾನಿ ಮುಖ್ಯವಾಗಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ಬಿಗ್ ಹಿಟ್ ಆಗುವುದರ ಜೊತೆಗೆ ಹಲವು ಪ್ರಶಸ್ತಿ ಪುರಸ್ಕಾರದ ಗೌರವಕ್ಕೂ ಪಾತ್ರವಾಗಿತ್ತು.
26 ಕೋಟಿ ಬಜೆಟ್ ನಲ್ಲಿ ತಯಾರಾದ ಸಿನಿಮಾ ಪ್ರೀ ರಿಲೀಸ್ ನಲ್ಲಿ 32 ಕೋಟಿ ಕಲೆಕ್ಷನ್ ಮಾಡಿತ್ತು. ವರ್ಲ್ಡ್ ವೈಡ್ ಸಿನಿಮಾ 125 ಕೋಟಿಯ ಕಮಾಯಿ ಮಾಡಿತ್ತು.
ಬಾಹುಬಲಿ 1,2:
ರಾಜಮೌಳಿ ಅವರ ನಿರ್ದೇಶನವನ್ನು ಜಗತ್ತೇ ಗುರುತಿಸುವಂತೆ ಸಿನಿಮಾಗಳಲ್ಲಿ ಈ ಎರಡು ಸಿನಿಮಾ ಮೊದಲಿಗೆ ನಿಲ್ಲುತ್ತದೆ. ಮಲ್ಟಿಸ್ಟಾರ್ಸ್ , ದುಬಾರಿ ಸೆಟ್, ಅದ್ಧೂರಿ ಮೇಕಿಂಗ್‌ನಿಂದ ದೊಡ್ಡಮಟ್ಟದಲ್ಲಿ ಬಾಹುಬಲಿ ಪಾರ್ಟ್ 1,2 ಸಿನಿಮಾ ಮಿಂಚಿತು. ಬಹುತೇಕ ದಕ್ಷಿಣದಿಂದ ಉತ್ತರದವರೆಗಿನ ಸಿನಿಮಾ ಮಂದಿ ಈ ಸಿನಿಮಾವನ್ನು ನೋಡಿದ್ದಾರೆ. ರಾಜಮೌಳಿ ಅವರ ಜೊತೆ ಪ್ರಭಾಸ್ ಅವರ ವೃತ್ತಿ ಬದುಕಿಗೂ ಈ ಸಿನಿಮಾ ಕೆರಿಯರ್ ಗೂ ಬಿಗ್ ಟರ್ನಿಂಗ್ ಪಾಯಿಂಟ್ ಆಯಿತು.
ಪ್ಯಾನ್ ಇಂಡಿಯಾ ಮಾತ್ರವಲ್ಲದೆ ಗ್ಲೋಬಲ್ ಮಟ್ಟದಲ್ಲೂ ಈ ಸಿನಿಮಾ ಗಮನ ಸೆಳೆದಿತ್ತು. 180 ಕೋಟಿ ಬಜೆಟ್ ನಲ್ಲಿ ಬಾಹುಬಲಿ 1 ತಯಾರಾಗಿತ್ತು. ಪ್ರೀ ರಿಲೀಸ್ ನಲ್ಲಿ 191 ಕೋಟಿಯ ವ್ಯವಹಾರ ಮಾಡಿತ್ತು.
ಬಾಕ್ಸ್ ಆಫೀಸ್ ನಲ್ಲಿ 600- 650 ಕೋಟಿವರೆಗಿನ ಬ್ಯುಸಿನೆಸ್ ಮಾಡಿತ್ತು.
ಬಾಹುಬಲಿ – 2 ಸಿನಿಮಾ 280 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿತ್ತು. ಪ್ರೀ ರಿಲೀಸ್ ನಲ್ಲಿ 380 ಕೋಟಿ ಗಳಿಕೆ ಕಂಡಿತ್ತು. ವರ್ಲ್ಡ್ ಬಾಕ್ಸ್ ಆಫೀಸ್ ನಲ್ಲಿ ಈ ಸಿನಿಮಾ 2000 ಕೋಟಿಗೂ ಅಧಿಕ ಗಳಿಕೆ ಕಂಡಿತ್ತು.
‘ಆರ್ ಆರ್ ಆರ್’
ಭಾರತಕ್ಕೆ ಆಸ್ಕರ್ ತಂದು ಕೊಟ್ಟು,ಎಲ್ಲಾ ಭಾರತೀಯರ ಹೃದಯದಲ್ಲಿ ‘ನಾಟು ನಾಟು’ ಹೆಜ್ಜೆಯನ್ನು ಹಾಕಿಸಿದ ರಾಜಮೌಳಿ ಅವರ ‘ಆರ್ ಆರ್ ಆರ್’ ಭಾರತೀಯ ಸಿನಿಮಾರಂಗದಲ್ಲಿ ಬಿಗ್ ಹಿಟ್ ಆದ ಸಿನಿಮಾಗಳಲ್ಲೊಂದು. ರಾಮ್ ಚರಣ್, ಜೂ. ಎನ್. ಆರ್ ಅವರನ್ನು ಜೊತೆಯಾಗಿ ಬಿಗ್ ಸ್ಕ್ರೀನ್ ನಲ್ಲಿ ನೋಡಿದ ಪ್ರತಿಯೊಬ್ಬರು ಸಿನಿಮಾ ನೋಡಿ ಭೇಷ್ ಎಂದಿದ್ದರು.
ಅದ್ದೂರಿತನದಿಂದಲೇ ಗಮನ ಸೆಳೆದ ಈ ಸಿನಿಮಾ 550 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿತ್ತು. ಪ್ರೀ ರಿಲೀಸ್ ನಲ್ಲಿ 450 ಬ್ಯುಸಿನೆಸ್ ಮಾಡಿತ್ತು. ವರ್ಲ್ಡ್ ವೈಡ್ ಬಾಕ್ಸ್ ಆಫೀಸ್ ನಲ್ಲಿ 1300 ಕೋಟಿ ಗಳಿಕೆ ಕಂಡಿತ್ತು.
ಸದ್ಯ ರಾಜಮೌಳಿ ಅವರು ಮಹೇಶ್ ಬಾಬು ಅವರೊಂದಿಗೆ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾಕ್ಕೆ ತಾತ್ಕಾಲಿಕವಾಗಿ ‘ಎಸ್ ಎಸ್ ಬಿ29’ ಎಂದು ಟೈಟಲ್ ಇಡಲಾಗಿದೆ. ಇದಲ್ಲದೆ ಇತ್ತೀಚಿಗೆ ‘ಮೇಡ್ ಇನ್ ಇಂಡಿಯಾ’ ಎನ್ನುವ ಸಿನಿಮಾವನ್ನು ಘೋಷಿಸಿದ್ದಾರೆ. ಈ ಸಿನಿಮಾವನ್ನು ನಿತಿನ್ ಕಕ್ಕಡ್ ನಿರ್ದೇಶನ ಮಾಡುತ್ತಿದ್ದಾರೆ. ರಾಜಮೌಳಿ ಸಿನಿಮಾವನ್ನು ಪ್ರೆಸೆಂಟ್ ಮಾಡುತ್ತಿದ್ದಾರೆ.
*ಸುಹಾನ್ ಶೇಕ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Living together; ವಿಚ್ಛೇದನ ತಡೆಯಲು ಲಿವಿಂಗ್ ಟುಗೆದರ್ ಸಹಕಾರಿಯೇ?
Recipe: ಆರೋಗ್ಯಕ್ಕೆ ಅಮೃತ, ರುಚಿಗೆ ಅದ್ಭುತ ಈ ಚಟ್ನಿ!ಒಂದ್ಸಲ ಈ ವಿಧಾನದಲ್ಲಿ ಟ್ರೈ ಮಾಡಿ…
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ : ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?
OneNation, OneElection Bill: 31 JPC ಸದಸ್ಯರ ಕಾರ್ಯವ್ಯಾಪ್ತಿ ಏನು?ಸಲಹೆ ನೀಡುವವರು ಯಾರು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.