ಇಂದಿಗೆ ಚಿಕ್ಕಬಳ್ಳಾಪುರ ಜಿಲ್ಲೆಯಾಗಿ 14 ವರ್ಷ: ಗುಡಿಬಂಡೆ ತಾಲೂಕಿಗಿಲ್ಲ ಸೂಕ್ತ ಸ್ಥಾನ ಮಾನ
ಪ್ರವಾಸೋದ್ಯಮ ಇಲಾಖೆಯ ಕೆಂಗಣ್ಣಿಗೆ ಗುರಿಯಾಗಿ, ಅಭಿವೃದ್ದಿ ಹೊಂದದೆ ಇರುವ ಗುಡಿಬಂಡೆ ತಾಲ್ಲೂಕಿನ ಸುರಸದ್ಮಗಿರಿ ಬೆಟ್ಟ.
Team Udayavani, Aug 23, 2021, 10:34 AM IST
ಗುಡಿಬಂಡೆ : ಅವಿಭಜಿತ ಕೋಲಾರ ಜಿಲ್ಲೆಯ ಉಪ ವಿಭಾಗವಾಗಿದ್ದ ಚಿಕ್ಕಬಳ್ಳಾಪುರ, ಸ್ವತಂತ್ರ ಜಿಲ್ಲೆಯಾಗಿ ರಚನೆಗೊಂಡು ಆ.23ಕ್ಕೆ 14 ವರ್ಷ ತುಂಬಿ 15 ಕ್ಕೆ ಪಾದಾರ್ಪಣೆ ಮಾಡುತ್ತಿದೆ, ಆದರೆ ಈ ಅವಧಿಯಲ್ಲಿ ಗುಡಿಬಂಡೆ ತಾಲೂಕಿಗೆ ಯಾವುದೇ ಸ್ಥಾನ ಮಾನ ನೀಡಿ ತಾಲ್ಲೂಕನ್ನು ಅಭಿವೃದ್ದಿ ಪಡಿಸದೇ ಇರುವುದು ದುರಂತವೇ ಸರಿ.
ಇದನ್ನೂ ಓದಿ : ನಮಗೇ ಸಡ್ಡು ಹೊಡೆಯುತ್ತೀರಾ…ಅಫ್ಘಾನ್ ನ ಪಂಜ್ ಶೀರ್ ಕಣಿವೆ ವಶಕ್ಕೆ ತಾಲಿಬಾನ್ ಉಗ್ರರ ಸಿದ್ಧತೆ
ಸರ್ಕಾರದ ಹಾಗೂ ತಾಲೂಕಿನ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ತಾಲೂಕಿಗೆ ಹೆಚ್ಚಿನ ಅನುದಾನ ತಂದು ಅಭಿವೃದ್ದಿ ಪಡಿಸದೇ ಹಾಗೂ ತಾಲೂಕಿನ ಬಹು ದಿನಗಳ ಕನಸಿನ ಕೂಸಾದ ಪ್ರತ್ಯೇಕ ವಿಧಾನ ಸಭಾ ಕ್ಷೇತ್ರವಾಗದೆ ಉಳಿದು ರಾಜ್ಯದಲ್ಲೇ ಅತಿ ಹಿಂದುಳಿದ ತಾಲ್ಲೂಕಿಗಳ ಪಟ್ಟಿಯಲ್ಲಿ ಸ್ಥಾನ ಇನ್ನೂ ಗಟ್ಟಿಯಾಗಿಸಿಕೊಂಡಿದೆ.
ವಿಧಾನ ಸಭಾ ಕ್ಷೇತ್ರದ ಕೂಗು : ಸ್ವತಂತ್ರ್ಯ ನಂತರದ ಮೈಸೂರು ರಾಜ್ಯದಿಂದ ಕರ್ನಾಟಕ ರಾಜ್ಯ ಎಂಬ ಹೆಸರು ಪಡೆದಾಗನಿಂದಲೂ ಗುಡಿಬಂಡೆ ತಾಲ್ಲೂಕು ಬಾಗೇಪಲ್ಲಿ ತಾಲ್ಲೂಕಿಗೆ ಸೇರಿಕೊಂಡು, ಬಾಗೇಪಲ್ಲಿ ವಿಧಾನ ಸಬಾಕ್ಷೇತ್ರವಾಗಿ, ಬಾಗೇಪಲ್ಲಿ ತಾಲ್ಲೂಕು ಸರ್ಕಾರದಿಂದ ಬಂದಂತಹ ಎಲ್ಲಾ ರೀತಿಯ ಸೌಲಬ್ಯಗಳನ್ನು ಪಡೆದುಕೊಂಡು ಅಭಿವೃದ್ದಿ ಹೊಂದುತ್ತಿದೆಯೇ ಹೊರತು, ತಾಲ್ಲೂಕನ್ನು ಅಭಿವೃದ್ದಿ ಪತದಿಂದ ದೂರ ಮಾಡಿ, ಮಲತಾಯಿ ದೋರಣೆ ಮಾಡುತ್ತಿದ್ದಾರೆಯೇ ಹೊರತು, ತಾಲೂಕನ್ನು ಅಭಿವೃದ್ದಿ ಪತದತ್ತ ಕೊಂಡೊಯ್ಯತ್ತಿಲ್ಲವಾದ್ದರಿಂದ ಅಂದಿನಿಂದಲೂ ಇಂದಿನವರೆಗೂ ಪ್ರತ್ಯೇಕ ವಿಧಾನ ಸಬಾ ಕೂಗು ಹೇಳಿತ್ತಿದೆಯೇ ಹೊರತು ಸರ್ಕಾರ ಮಾತ್ರ ತಾಲೂಕಿನತ್ತ ಕಣ್ಣಿದ್ದು, ಜಾಣ ಕುರುಡು ತನ ತೋರುತ್ತಿದೆ.
ಸಾರಿಗೆ ವ್ಯವಸ್ಥೆ ಇಲ್ಲ: ಗುಡಿಬಂಡೆ ತಾಲೂಕು ಹೆಸರಿಗಷ್ಟೆ ತಾಲೂಕಾಗಿದೆ, ಇಲ್ಲಿಗೆ ಬೇರೆ ಊರಿದಿಂದ ಬಂದು ಹೋಗಬೇಕಾದರೇ ಸೂಕ್ತ ಸಾರಿಗೆ ಸೌಕರ್ಯವಿಲ್ಲ, ಸಾರಿಗೆ ಅಭಿವೃದ್ದಿಯಾಗಲೆಂದು ತಾಲೂಕಿನ ಹಿರಿಯರು ಹೋರಾಟಗಳು ಮಾಡಿ ಬಸ್ ಡಿಪೋ ಗಾಗಿ ಸುಮಾರು 10 ಎಕರೆ ಜಮೀನನ್ನು ಕೆ.ಎಸ್.ಆರ್.ಟಿ.ಸಿ. ಇಲಾಖೆಗೆ ವರ್ಗಾಯಿಸಿ 10 ವರ್ಷ ಕಳೆಯುತ್ತಿದ್ದರು, ಸಾರಿಗೆ ಇಲಾಖೆ ಮಾತ್ರ ತಾಲೂಕಿನತ್ತ ಕಣ್ಣೇತ್ತು ಸಹ ನೋಡುತ್ತಿಲ್ಲ, ಬಸ್ ಡಿಪೋ ಮಂಜೂರು ಮಾಡಿದಿದ್ದರು ಸರಿ, ಆದರೆ 75 ವರ್ಷಗಳ ಸ್ವಾತಂತ್ರ್ಯ ಅವಧಿಯಲ್ಲಿ ತಾಲ್ಲೂಕಿನ ಹೋಬಳಿ ಕೇಂದ್ರಕ್ಕೆ ಪ್ರತಿ ದಿನ ಒಂದೇ ಬಸ್ ಬಂದು ಹೋಗುವುದು, ಅದು ಕೇವಲ ಬೆಳಿಗ್ಗೆ ಮಾತ್ರ, ಆದರೆ ಅದೇ ಹೋಬಳಿ ಕೇಂದ್ರಕ್ಕೆ ಬೇರೆ ತಾಲ್ಲೂಕಿಗಳಿಗೆ ಬಸ್ ಸಂಪರ್ಕ ಕೊಟ್ಟಿದ್ದಾರೆ ಹೊರತು, ಅದರ ತಾಲೂಕು ಕೇಂದ್ರಕ್ಕೆ ಮಾತ್ರ ಸಂಪರ್ಕ ಕೊಟ್ಟಿಲ್ಲ.
ಯಾವುದೇ ಕೈಗಾರಿಕೆಗಳ ಸ್ಥಾಪನೆ ಇಲ್ಲ: ಜಿಲ್ಲೆಯಲ್ಲಿ ಗುಡಿಬಂಡೆ ತಾಲೂಕು ಹೊರತು ಪಡಿಸಿ ಸಣ್ಣ ಪುಟ್ಟ ಗಾರ್ಮೆಂಟ್ಸ್ ಇಂದ ಸ್ಥಾಪನೆ ಗೊಂಡು ಅನೇಕ ರೀತಿಯ ಕೈಗಾರಿಕೆಗಳು ಸ್ಥಾಪನೆಗೊಂಡು ನಿರುದ್ಯೋಗ ಯುವಕ/ಯುವತಿಯರಿಗೆ ಕೆಲಸಗಳನ್ನು ಕೊಟ್ಟಿವೆ, ಆದರೆ ಇಂದಿಗೂ ಸಹ ಒಂದು ಚಿಕ್ಕ ಕೈಗಾರಿಕೆಯೂ ಇಂದಿಗೂ ಇಲ್ಲಿ ಸ್ಥಾಪನೆಗೊಳ್ಳದೇ ಬೇರೆ ಊರುಗಳತ್ತ ಕೆಲಸಕ್ಕೆ ವಲಸೆ ಹೋಗಿ ಗ್ರಾಮಗಳು ಬಿಡುತ್ತಿದ್ದಾರೆ.
ಶೈಕ್ಷಣಿಕ ಅಭಿವೃದ್ದಿ ಇಲ್ಲ: ತಾಲೂಕಿನಲ್ಲಿ ಕೇವಲ ಒಂದು ಪ್ರಥಮ ದರ್ಜೆ ಮತ್ತು ಪದವಿ ಪೂರ್ವ ಕಾಲೇಜು ಇದ್ದು, ಈ ಕಾಲೇಜಿಗೆ ಬೇರೆ ಊರಿನಿಂದ ಬಂದು ಹೋಗಲು ಸಾರಿಗೆ ಸಂಪರ್ಕ ವಿಲ್ಲದೆ ಬೇರೆ ಊರುಗಳ ಕಾಲೇಜಿಗೆ ಸೇರುತ್ತಿದ್ದಾರೆ, ತಾಲೂಕಿನ ಹೋಬಳಿ ಕೇಂದ್ರವಾದ ಸೋಮೇನಹಳ್ಳಿ ಯಿಂದ ತಾಲೂಕು ಕೇಂದ್ರದ ಕಾಲೇಜಿಗೆ ಬರಲು ಸುಮಾರು 35 ಕಿ.ಮೀ ಇದ್ದು, ಈ ಅಂತರದ ಪ್ರಯಾಣಕ್ಕೆ ಸರಿಯಾದ ಸಾರಿಗೆ ಸಂಪರ್ಕ ಇಲ್ಲದಿರುವ ಕಾರಣ ಬೇರೆ ತಾಲೂಕುಗಳ ಕಾಲೇಜಿಗೆ ಹೋಗುತ್ತಿದ್ದು, ಹೋಬಳಿ ಕೇಂದ್ರದಲ್ಲಿ ಒಂದು ಪದವಿ ಪೂರ್ವ ಕಾಲೇಜು ಸ್ಥಾಪಿಸಲು ಬೇಡಿಕೆಯಿದೆ.
ಪ್ರವಾಸೋದ್ಯಮ ಇಲಾಖಾ ಧೋರಣೆ: ತಾಲೂಕಿನಲ್ಲಿ ಚೋಳರ, ಗಂಗರ ಕಾಲದ ಇತಿಹಾಸ ಪ್ರಸಿದ್ದ ಸುರಸದ್ಮಗಿರಿ ಬೆಟ್ಟ, ವರಹಗಿರಿ ಬೆಟ್ಟ, ಕೂರ್ಮಗಿರಿ ಬೆಟ್ಟ, ಭಾರತ ಭೂಪಟವನ್ನು ಹೊಲುವ ಅಮಾನಿಬೈರಸಾಗರ ಕೆರೆ ಇತ್ತಿಚೀನ ದಿನಗಳಲ್ಲಿ ಪ್ರವಾಸಿಗರ ಒಂದು ದಿನದ ಪ್ರವಾಸಕ್ಕೆ ಹೇಳಿ ಮಾಡಿಸಿದಂತಹ ಸ್ಥಳಗಳಾಗಿದ್ದು, ಆದರೆ ಪ್ರವಾಸೋದ್ಯಮ ಇಲಾಖಾಧಿಕಾರಿಗಳು ಮಾತ್ರ ದೇವರು ವರಕೊಟ್ಟರು, ಪೂಜಾರಿ ವರ ನೀಡಲಿಲ್ಲವೆಂಬಂತೆ, ಶಾಸಕರು ಅನುದಾನ ತಂದರೂ ಅಧಿಕಾರಿಗಳು ತಾಲೂಕಿನತ್ತ ಧೋರಣೆ ಮಾಡುತ್ತಿದ್ದಾರೆ.
ಎ.ಪಿ.ಎಂ.ಸಿ. ಮಾರುಕಟ್ಟೆ ಇಲ್ಲ: ತಾಲೂಕಿನಲ್ಲಿ ಕೈಗಾರಿಕೆಗಳು ಮತ್ತು ಅದಾಯ ತರುವಂತಹ ಮೂಲಗಳು ಇಲ್ಲದೆ ಇರುವುದರಿಂದ ಹೆಚ್ಚಿನದಾಗಿ ಕೃಷಿಯನ್ನು ಅವಲಂಭಿತರಾಗಿದ್ದು, ರೈತರು ತಮ್ಮ ಬೆಳೆಗಳನ್ನು ಮಾತ್ರ ಬಾಡಿಗೆ ವಾಹನಗಳ ಬೇರೆ ಎ.ಪಿ.ಎಂ.ಸಿ. ಮಾರುಕಟೆಗಳಿಗೆ ಸಾಗಿಸಬೇಕಾಗಿದೆ, ಹೆಚ್ಚಿನ ಮೊತ್ತದಲ್ಲಿ ಬೆಳೆ ಮಾರಾಟವಾದರೇ ಸರಿ ಇಲ್ಲದಿದ್ದರೆ, ಅವರ ಬಾಡಿಗೆಗೆ ಹೋದ ವಾಹನಕ್ಕೂ ಸಹ ಬಾಡಿಗೆ ಪಾವತಿಸಲಾಗದೆ ಸಾಲದ ಸುಳಿಗೆ ಸಿಲುಕುತ್ತಿದ್ದಾರೆ, ಇಲ್ಲಿ ಎ.ಪಿ.ಎಂ.ಸಿ. ಮಾರುಕಟ್ಟೆಗೆ ಸೂಕ್ತ ಜಾಗ ತೋರಿಸಿ ವರ್ಷಗಳೇ ಕಳೆಯುತ್ತಿದ್ದರು, ಅಧಿಕಾರಿಗಳು ಮಾತ್ರ ಜಮೀನು ವರ್ಗಾಯಿಸಿಕೊಂಡು ಮಾರುಕಟ್ಟೆ ಸ್ಥಾಪಿಸಲು ಮೀನಾವೇಶ ತೋರುತ್ತಿದ್ದಾರೆ.
ಒಟ್ಟಾರೆ ಜಿಲ್ಲೆಯಾದಾಗಿನಿಂದ ತಾಲೂಕಿನಲ್ಲಿ ಸುಸಜ್ಜಿತ ಮಿನಿ ವಿಧಾನ ಸೌಧ ಆಗಿರುವುದು ಬಿಟ್ಟರೆ ಬಸ್ ನಿಲ್ದಾಣ ಸ್ಥಾಪನೆ ಜನರಲ್ಲಿ ತುಸು ಸಮಾಧಾನ ಇದೆ. ಆದರೆ ತಾಲೂಕಿನ ಅಭಿವೃದ್ಧಿಗೆ ಪೂರಕವಾಗಿ ಶಾಶ್ವತ ನೀರಾವರಿ, ಕೈಗಾರಿಕೆಗಳ ಸ್ಥಾಪನೆ, ಬಸ್ ಡಿಪೋ, ಜಿಲ್ಲಾ ಕೇಂದ್ರಕ್ಕೆ ಮೂಲ ಸೌಕರ್ಯ, ಕೃಷಿ ಆಧಾರಿತ ಕೈಗಾರಿಕೆಗಳ ಸ್ಥಾಪನೆ ತಾಲೂಕಿನ ಪಾಲಿಗೆ ಇನ್ನೂ ಮರೀಚಿಕೆಯಾಗಿ ಉಳಿದಿದ್ದು, ಇದರ ಜೊತೆಗೆ ಸತತವಾಗಿ ಕಾಡುತ್ತಿರುವ ಕೊರೋನ ಮಹಮ್ಮಾರಿ ಜನ ಜೀವನವನ್ನು ಸಂಕಷ್ಟಕ್ಕೆ ತಳ್ಳಿದೆ.
ಇದನ್ನೂ ಓದಿ : ಶಾಲಾ- ಕಾಲೇಜುಗಳಿಗೆ ಮಕ್ಕಳನ್ನು ಕಳುಹಿಸಿ: ಸಚಿವ ಈಶ್ವರಪ್ಪ ಮನವಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkaballapura: ಕಾರಿನಲ್ಲಿ ಸಾಗಿಸುತ್ತಿದ್ದ 7.20 ಲಕ್ಷ ರೂ. ಮೌಲ್ಯದ ಗಾಂಜಾ ವಶ
Karnataka Govt: ಹಿಂದೂಗಳ ದಮನಕ್ಕೆ ಮುಂದಾದ ಕಾಂಗ್ರೆಸ್: ಆರ್. ಅಶೋಕ್ ಆರೋಪ
Dr. Sudhakar: ಹಿಂದಿನ ಕಾಂಗ್ರೆಸ್‌ರ ಸರ್ಕಾರದ ಭ್ರಷ್ಟಾಚಾರ ಬಿಚ್ಚಿಡುವೆ
Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್
Chikkaballapur: ಪರಿಹಾರ ಕೊಡದ ಎಸಿ ಕಚೇರಿ ಸಂತ್ರಸ್ತರಿಂದ ಜಪ್ತಿ!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.