ಆನ್ ಲೈನ್ ಡೇಟಾ ಸುರಕ್ಷತೆಗೆ ಯಾವೆಲ್ಲಾ ಕ್ರಮ ಅನುಸರಿಸಬಹುದು ? ಇಲ್ಲಿದೆ ಸರಳ ಉಪಾಯ
ನಿಮ್ಮ ಅಭಿರುಚಿಗೆ ಸಂಬಂಧಿಸಿದ ಜಾಹೀರಾತುಗಳು ಕಾಣಿಸಿಕೊಂಡರೂ ಅವನ್ನು ನಿರ್ಲಕ್ಷಿಸುವ ಹವ್ಯಾಸವನ್ನು ಬೆಳೆಸಿಕೊಳ್ಳಿ
ಮಿಥುನ್ ಪಿಜಿ, Feb 9, 2021, 6:51 PM IST
ಆನ್ ಲೈನ್ ಪ್ರೈವೆಸಿ ಅಥವಾ ಡೇಟಾ ಪ್ರೈವೆಸಿ ಇಂದಿನ ದಿನಮಾನಗಳಲ್ಲಿ ಬಹಳ ಪ್ರಚಲಿತದಲ್ಲಿರುವ ವಿದ್ಯಮಾನ. ಇಂಟರ್ ನೆಟ್ ಬಳಸುವ ಪ್ರತಿಯೊಬ್ಬರೂ ಕೂಡ ಡೇಟಾ ಸುರಕ್ಷತೆ ಕುರಿತು ಅರಿವು ಮೂಡಿಸಿಕೊಳ್ಳಬೇಕು. ಕೋವಿಡ್-19 ಲಾಕ್ ಡೌನ್ ಬಳಿಕ ನಮ್ಮ ಹಲವು ಕೆಲಸಕಾರ್ಯಗಳು ಆನ್ ಲೈನ್ ಗೆ ವರ್ಗಾವಣೆಯಾಗಿದೆ. ಕೆಲವು ವ್ಯಕ್ತಿಗಳು ತಮ್ಮ ಡೇಟಾ ಪ್ರೈವೆಸಿಯ ಬಗ್ಗೆ ಪ್ರತಿನಿತ್ಯ ಹದ್ದಿನ ಕಣ್ಣಿಟ್ಟಿರುತ್ತಾರೆ. ಆದರೆ ಮತ್ತೆ ಕೆಲವರು ಸಣ್ಣ ಸಣ್ಣ Error ಗಳನ್ನೂ ಕೂಡ ನಿರ್ಲಕ್ಷಿಸಿ ಬಹುದೊಡ್ಡ ಬೆಲೆ ತೆರುತ್ತಾರೆ.
ಹೀಗಾಗಿ ಆನ್ ಲೈನ್ ಪ್ರೈವೆಸಿ ಹೆಚ್ಚಿಸಲು ಅನುಸರಿಸಬೇಕಾದ 6 ಮಾರ್ಗಗಳನ್ನು ಈ ಲೇಖನದಲ್ಲಿ ನೀಡಲಾಗಿದೆ. ಸಾಮಾಜಿಕ ಜಾಲತಾಣ, ಅಪ್ಲಿಕೇಶನ್ ಸೇರಿದಂತೆ ಇಂಟರ್ನೆಟ್ ಮೂಲಕ ನೀವು ಶೇರ್ ಮಾಡುವ ಪ್ರತಿಯೊಂದು ಖಾಸಗಿ ಡೇಟಾಗಳ ಮೇಲೆ ಹಿಡಿತ ಹೊಂದಿದ್ದರೇ ಭದ್ರತೆಗೆ ಯಾವುದೇ ಅಪಾಯವಾಗುವುದಿಲ್ಲ ಎಂದು ಆವಸ್ತ್ (Avast) ಸಂಸ್ಥೆಯ ಮುಖ್ಯ ಭದ್ರತಾ ಅಧಿಕಾರಿ ಶೇನ್ ಮ್ಯಾಕ್ ನಮೀ ತಿಳಿಸಿದ್ದಾರೆ.
ಹೀಗಾಗಿ ಈ ಕೆಳಗೆ ನೀಡಿರುವ ಕೆಲವು ಸರಳ ಮಾರ್ಗಗಳನ್ನು ಅನುಸರಿದರೇ ಆನ್ ಲೈನ್ ಡೇಟಾ ಸೋರಿಕೆಯ ಯಾವುದೇ ಅಪಾಯವಿರುವುದಿಲ್ಲ.
- ಜಾಹೀರಾತುಗಳ ಮೇಲೆ ಹಿಡಿತ: ಸಾಮಾಜಿಕ ಜಾಲತಾಣಗಳ ಮೂಲಕ ಡೇಟಾ ಜಾಹೀರಾತುದಾರರು ನಿಮ್ಮನ್ನು ಟಾರ್ಗೆಟ್ ಅಥವಾ ಗುರಿ ಪಡಿಸುವುದರ ಮೇಲೆ ನಿರ್ಬಂಧ ವಿಧಿಸಬಹುದು. ಇದಕ್ಕಾಗಿ ನಿಮ್ಮ ಸಾಮಾಜಿಕ ಜಾಲತಾಣಗಳಲ್ಲಿರುವ (ಫೇಸ್ ಬುಕ್, ಟ್ವಿಟ್ಟರ್ ಇತರೆ) ಪ್ರೈವಸಿ ಅಂಡ್ ಆಡ್ವರ್ಟೈಸಿಂಗ್ ಸೆಟ್ಟಿಂಗ್ ಗೆ ತೆರಳಿ ನೀವು ಅತೀ ಹೆಚ್ಚು ವೀಕ್ಷಿಸಿರುವ ಅಥವಾ ಅಭಿರುಚಿಗೆ ಸಂಬಂಧಿಸಿದ ವಿಚಾರಗಳನ್ನು ರಿಮೂವ್ ಮಾಡುವುದು ಒಳಿತು. ನಿಮ್ಮ ಆಸಕ್ತಿಗೆ/ ಅತೀ ಹೆಚ್ಚು ವೀಕ್ಷಿಸಿದ ಕಂಟೆಂಟ್ ಗಳ ಮೇಲೆಯೇ ಜಾಹೀರಾತು ಬರುವುದು ಎಂಬುದು ನೆನಪಿನಲ್ಲಿರಲಿ. ಇದನ್ನು ಹೊರತುಪಡಿಸಿ ಟ್ವಿಟ್ಟರ್ ನಲ್ಲಿ ‘Off Twitter Activity’ ಹಾಗೂ ಫೇಸ್ ಬುಕ್ ನಲ್ಲಿ ‘Ads shown off on Facebook’ ಆಯ್ಕೆಯನ್ನು ಆಫ್ ಮಾಡಬಹುದು. ಇವು ಆ್ಯಡ್ Tracking ಹಾಗೂ Add Targeting ಗೆ ನೆರವಾಗುತ್ತದೆ
- Location Tracking ಆಫ್ ಮಾಡಿ: ಲೊಕೇಶನ್ ಟ್ರ್ಯಾಕಿಂಗ್ ಮತ್ತು ಹಿಸ್ಟರಿ ಜೊತೆಗೆ ಫೋಟೋಗಳ ಲೊಕೇಶನ್ ಮೆಟಡಾಟ (ನಿಮ್ಮ ಮೊಬೈಲ್ ಮೂಲಕ ಯಾವುದೇ ಚಿತ್ರ ತೆಗೆದರೂ ಸಮಯ ಹಾಗೂ ಲೊಕೇಶನ್ ಸೇವ್ ಆಗಿರುವುದನ್ನು ಗಮನಿಸಿರಬಹುದು) ಇವುಗಳು ಕೂಡ ಸಾಮಾಜಿಕ ಜಾಲತಾಣ, ಅಪ್ಲಿಕೇಶನ್ ಗಳಿಗೆ ನಿಮ್ಮ ಮಾಹಿತಿಗಳ ಸಂಪೂರ್ಣ ಪಟ್ಟಿಯನ್ನು ನೀಡುತ್ತದೆ. ಬಳಿಕ ಜಾಹೀರಾತು ಮೂಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಇದಕ್ಕಾಗಿ ನಿಮ್ಮ ಮೊಬೈಲ್, ಸಾಮಾಜಿಕ ಜಾಲತಾಣ, ಕ್ಯಾಮಾರಗಳ ಲೊಕೇಶನ್ ಅನ್ನು ಟರ್ನ್ ಆಫ್ ಮಾಡುವುದು ಅವಶ್ಯಕ. ನೀವು ಐಫೋನ್ ಬಳಕೆದಾರರಾಗಿದ್ದರೆ, ಸೆಟ್ಟಿಂಗ್ಸ್-ಪ್ರೈವಸಿ- ಲೊಕೇಶನ್ ಸರ್ವಿಸ್ ಆಫ್ ಮಾಡಿ; ಆ್ಯಂಡ್ರಾಯ್ಡ್ ಬಳಕೆದಾರು ಸೆಟ್ಟಿಂಗ್ ಆಯ್ಕೆಗೆ ತೆರಳಿ, ಲೊಕೇಶನ್ ಶೇರಿಂಗ್, ಲೊಕೇಶನ್ ಹಿಸ್ಟರಿ, ಆ್ಯಪ್ ಗಳಿಗಿರುವ ಲೊಕೇಶನ್ ಆ್ಯಕ್ಸಸ್ ಅನ್ನು ಆಫ್ ಮಾಡಿ.
- ಲಾಗ್ ಇನ್ ಆಯ್ಕೆ: ಕೆಲವೊಂದು ಸಾಮಾಜಿಕ ಜಾಲತಾಣಗಳ ಕಂಟೆಂಟ್ ವೀಕ್ಷಿಸಲು ಲಾಗ್ ಇನ್ ಆಗುವ ಅವಶ್ಯಕತೆ ಇರುವುದಿಲ್ಲ. (ಟ್ವಿಟ್ಟರ್, ಟಿಕ್ ಟಾಕ್ ಇತರೆ). ಲಾಗ್ ಇನ್ ಆಗದೆ ಆ್ಯಪ್ ನೊಳಗೆ ಪ್ರವೇಶಿಸುವುದರಿಂದ ಅತೀ ಹೆಚ್ಚಿನ ಪ್ರಮಾಣದಲ್ಲಿ ಆ್ಯಪ್ ಗಳು ಡೇಟಾ ಸಂಗ್ರಹಿಸುವುದನ್ನು ತಡೆಹಿಡಿಯಬಹುದು. ಪ್ರಮುಖವಾಗಿ ಒಮ್ಮೆ ಲಾಗ್ ಇನ್ ಆದ ತಕ್ಷಣ ಆ ನೆಟ್ ವರ್ಕ್ ಮೂಲಕ ಯಾವೆಲ್ಲಾ ಮಾಹಿತಿ ಪಡೆದುಕೊಂಡಿರುವಿರಿ ? ಏನೆಲ್ಲಾ ಸರ್ಚ್ ಮಾಡಿದ್ದೀರಿ ? ಹಾಗೂ ಯಾವ ಜಾಹೀರಾತು ಮೇಲೆ ಕ್ಲಿಕ್ ಮಾಡಿರುವಿರಿ? ಈ ಎಲ್ಲಾ ವಿಚಾರಗಳನ್ನು ಅಪ್ಲಿಕೇಶನ್ ಗಳು ಕ್ರೋಢಿಕರಿಸುತ್ತವೆ.
- ಆ್ಯಪ್ ಮತ್ತು ಗೇಮ್ ಗೆ ಅನುಮತಿ ನೀಡುವುದನ್ನು ರದ್ದು ಮಾಡಿ: ಇಂದು ಹಲವರು ಆ್ಯಪ್ ಗಳಿಗೆ ಮತ್ತು ವೆಬ್ ಸೈಟ್ ಗಳಿಗೆ ಲಾಗ್ ಇನ್ ಆಗುವಾಗ ತಮ್ಮ ಫೇಸ್ ಬುಕ್ ಮತ್ತು ಗೂಗಲ್ ಖಾತೆಯನ್ನೇ ಬಳಸುತ್ತಾರೆ. ಇದೊಂದು ಸುಲಭ ವಿಧಾನ. ಆದರೆ ನಿಮ್ಮ ಡೇಟಾಗಳ ಮೇಲೆ ಇವು ವೆಬ್ ಸೈಟ್ ಗಳಿಗೆ ಪೂರ್ಣ ಹಕ್ಕು ನೀಡುವುದಲ್ಲದೆ, ಫೇಸ್ ಬುಕ್ ಗೆ ನಿಮ್ಮ ಕುರಿತು ಹೆಚ್ಚಿನ ಮಾಹಿತಿ ನೀಡುತ್ತದೆ. ಇದಕ್ಕಾಗಿ ಫೇಸ್ ಬುಕ್ ಸೆಟ್ಟಿಂಗ್ ಅನ್ನು ಅಧ್ಯಯನ ಮಾಡಿ ಅನುಮತಿಯನ್ನು ರದ್ದುಗೊಳಿಸುವುದು ಮತ್ತು ಅಗತ್ಯ ಬದಲಾವಣೆ ತರುವುದೊಳಿತು.
- ಆ್ಯಡ್ ಗಳನ್ನು ಕ್ಲಿಕ್ ಮಾಡಬೇಡಿ: ಸೋಶಿಯಲ್ ಮೀಡಿಯಾಗಳು ಮತ್ತು ಆ್ಯಪ್ ಗಳು ನೀವು ಯಾವ ಆ್ಯಡ್ ಗಳನ್ನು ಕ್ಲಿಕ್ ಮಾಡಿದ್ದೀರಾ ಎಂಬುದನ್ನು ಗಮನಿಸುವುದು ಮಾತ್ರವಲ್ಲದೆ ನೀವೆಷ್ಟು ಬಾರಿ ಆ ಆ್ಯಡ್ ಅನ್ನು ವೀಕ್ಷಿಸಿದ್ದೀರಾ ಎಂಬುದರ ಲೆಕ್ಕವನ್ನೂ ಶೇಖರಿಸಿಡುತ್ತದೆ. ಇದಕ್ಕಾಗಿ ನಿಮ್ಮ ಅಭಿರುಚಿಗೆ ಸಂಬಂಧಿಸಿದ ಜಾಹೀರಾತುಗಳು ಕಾಣಿಸಿಕೊಂಡರೂ ಅವನ್ನು ನಿರ್ಲಕ್ಷಿಸುವ ಹವ್ಯಾಸವನ್ನು ಬೆಳೆಸಿಕೊಳ್ಳಿ. ಮಾತ್ರಲ್ಲದೆ ಇನ್ ಸ್ಟಾಗ್ರಾಂ ಮತ್ತು ಗೂಗಲ್ ನಲ್ಲಿ ಕಾಣಸಿಗುವ ಶಾಫ್ ಫೀಚರ್ ಅನ್ನು ಬಳಕೆ ಮಾಡುವುದನ್ನು ನಿಲ್ಲಿಸಿ.. ಅದಾಗ್ಯೂ ಶಾಫಿಂಗ್ ಮಾಡಲೇಬೇಕು ಎನಿಸಿದರೇ ಬ್ರೌಸರ್ ಮೂಲಕ ವಿಪಿಎನ್ (VPN) ಬಳಸಿ. ಇದು ಥರ್ಡ್ ಪಾರ್ಟಿ ಆ್ಯಪ್ ಗಳು ನಿಮ್ಮ ಆನ್ ಲೈನ್ ಚಟುವಟಿಕೆಗಳನ್ನು ಟ್ರ್ಯಾಕ್ ಮಾಡುವುದನ್ನು ತಪ್ಪಿಸುತ್ತದೆ.
- ಇಮೇಲ್: ಇಂದು ಇಂಟರ್ನೆಟ್ ಬಳಸುವ ಪ್ರತಿಯೊಬ್ಬರು ಜಿ-ಮೇಲ್ ಅಡ್ರೆಸ್ ಹೊಂದಿರುತ್ತಾರೆ. ಇವುಗಳನ್ನು ಕೆಲವೊಂದು ನಿಗದಿತ ಕಾರ್ಯಗಳಿಗೆ ಬಳಸುವ ಅನಿವಾರ್ಯತೆ ಇರುತ್ತದೆ. ಇದರ ಹೊರತಾಗಿ ಮತ್ತೊಂದು ಇಮೇಲ್ ಕ್ರಿಯೇಟ್ ಮಾಡಿ. ಇದನ್ನು ನಿಮ್ಮ ಖಾಸಗಿ ಕೆಲಸ ಕಾರ್ಯಗಳಿಗೆ ಬಳಸಿ. ಇದನ್ನು ಬರ್ನರ್ ಇಮೇಲ್ ಎಂದು ಕೂಡ ಕರೆಯುತ್ತಾರೆ. ಈ ಮೇಲ್ ಅಡ್ರೆಸ್ ಅನ್ನು ಯಾವುದೇ ವೆಬ್ ಸೈಟ್ ಅಥವಾ ಸಾಮಾಜಿಕ ಜಾಲತಾಣಗಳಿಗೆ ಲಿಂಕ್ ಮಾಡಬೇಡಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ : ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?
OneNation, OneElection Bill: 31 JPC ಸದಸ್ಯರ ಕಾರ್ಯವ್ಯಾಪ್ತಿ ಏನು?ಸಲಹೆ ನೀಡುವವರು ಯಾರು
Winter: ಚಳಿಗಾಲದಲ್ಲಿ ಆರೋಗ್ಯಕರವಾಗಿರಲು ಸೇವಿಸಬೇಕಾದ ಆಹಾರಗಳು ಇವು…
Zakir Hussain ; ಸರಸ್ವತಿ, ಗಣಪತಿಯ ಆರಾಧಕರಾಗಿದ್ದರು ತಬಲಾ ಮಾಂತ್ರಿಕ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ
Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.