ಕಿರಿಯ ಯೋಗ ತರಬೇತುದಾರ ಸನ್ ಚುವಾಂಗ್ ಆಟಿಸಂ ಗೆದ್ದ ಕಥೆ
Team Udayavani, Apr 4, 2022, 2:30 PM IST
ಆಟಿಸಂ ಎನ್ನುವಂತದ್ದು ಮಕ್ಕಳನ್ನು ಕಾಡುವುದು ಇತ್ತಿಚೀನ ದಿನಗಳಲ್ಲಿ ಸಾಮಾನ್ಯವಾಗಿ ಬಿಟ್ಟಿದೆ. ಆದರೆ ಅದನ್ನು ಗುರುತಿಸಿ ಅದಕ್ಕೆ ಸರಿಯಾದ ಚಿಕಿತ್ಸೆ ದೊರೆತಾಗ ಮಾತ್ರ ಇದರಿಂದ ಮುಕ್ತಿ ಹೊಂದಲು ಸಾಧ್ಯ. ಇದಕ್ಕೆ ಪೋಷಕರ ಸಹಾಯ ಅತಿ ಮುಖ್ಯ. ಇಂತಹ ಮಕ್ಕಳ ಅಗತ್ಯಕ್ಕೆ ಸ್ಪಂದಿಸುವುದು ಅವರ ಕರ್ತವ್ಯವಾಗಿರುತ್ತದೆ.
ಈ ಸಮಸ್ಯೆಯಿಂದ ಪಾರಾಗುವುದು ಅಥವಾ ಅದರ ಜತೆ ಹೋರಾಡಲು ಅನನ್ಯವಾದ ಶಕ್ತಿ ಮುಖ್ಯವಾಗಿರುತ್ತದೆ. ಇಷ್ಟೆಲ್ಲಾ ಹೇಳಲು ಕಾರಣ 11 ವರ್ಷದ ಬಾಲಕ ಸನ್ ಚುವಾಂಗ್. ಈತ ಆಟಿಸಂನಿಂದ ಬಳಲುತ್ತಿದ್ದರು ತನ್ನ ಎರಡನೇ ವಯಸ್ಸಿನಲ್ಲಿ ಯೋಗ ಕಲಿತು ಅತಿ ಚಿಕ್ಕ ವಯಸ್ಸಿನ ಯೋಗ ತರಬೇತುದಾರ ಎಂಬ ಪಾತ್ರಕ್ಕೆ ಮುನ್ನುಡಿ ಬರೆದಿದ್ದಾನೆ.
ಏನಿದು ಇಷ್ಟು ಸಣ್ಣ ವಯಸ್ಸಿನಲ್ಲಿ ಇನ್ನೊಬ್ಬರಿಗೆ ಯೋಗ ತರಬೇತಿ ಕೊಡಲು ಸಾಧ್ಯವೇ ಎಂದು ಹುಬ್ಬೆರಿಸುವವರಿಗೆ ತಕ್ಕ ಉತ್ತರ ನೀಡಿದ್ದಾನೆ. ಅಷ್ಟೆ ಅಲ್ಲ ಆತನ ಹೆಸರಿನಲ್ಲಿ ಇಲ್ಲಿಯವರೆಗೆ ಎರಡು ದಾಖಲೆಗಳಿವೆ. ಮೊದಲನೆಯದ್ದು ಆತ ಚೀನದ ಅತ್ಯಂತ ಕಿರಿಯ ಯೋಗ ಶಿಕ್ಷಕ ಮತ್ತು ಇವನ ವಯಸ್ಸಿಗೆ ಈತ ಸಂಪಾದಿಸಿರುವ ಆಸ್ತಿಯಿಂದಾಗಿ ಅವನ ವಯಸ್ಸಿನ ಅತ್ಯಂತ ಶ್ರೀಮಂತ ಮಗು ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ. ಈತ ತಿಂಗಳಿಗೆ 10.90 ಲಕ್ಷ ರೂ. ಸಂಪಾದಿಸುತ್ತಾನೆ. ಸನ್ ಚುವಾಂಗ್ ಅತ್ಯಂತ ಕಷ್ಟಕರವಾದ ಯೋಗಾಸನವನ್ನು ಸುಲಭವಾಗಿ ಮಾಡುವ ಮತ್ತು ಜನರಿಗೆ ಅದನ್ನು ಇನ್ನು ಸುಲಭವಾಗಿ ಕಲಿಸುವ ಕಲೆಯಿಂದಾಗಿ ಜಗತ್ತಿನಾದ್ಯಂತ ಮನೆ ಮಾತಾಗಿದ್ದಾನೆ.
ತನ್ನ 2 ವರ್ಷದಲ್ಲಿ ಯೋಗ ಮಾಡಲು ಪ್ರಾರಂಭಿಸಿದ್ದ ಸನ್ ಚುವಾಂಗ್, 6ನೇ ವಯಸ್ಸಿಗೆ ಯೋಗದಿಂದಲೇ ಚೀನದಲ್ಲಿ ಪ್ರಸಿದ್ಧನಾದನು. ತನ್ನ 7ನೇ ವಯಸ್ಸಿಗೆ ಚೀನದಲ್ಲಿ ಯೋಗ ಸೆಲೆಬ್ರಿಟಿ ಎಂದು ಗುರುತಿಸಿಕೊಂಡನು. ಇಲ್ಲಿಯವರೆಗೆ 100ಕ್ಕೂ ಹೆಚ್ಚು ಜನರಿಗೆ ತರಬೇತು ನೀಡಿದ್ದಾನೆ.
ಆಟಿಸಂ ಅನ್ನು ಯೋಗದಿಂದ ಸೋಲಿಸಿದ ಬಾಲಕ;
ಸನ್‌ನ ತಾಯಿ ಹೇಳುವ ಪ್ರಕಾರ ಅವನಿಗೆ 2ನೇ ವಯಸ್ಸಿಗೆ ಆಟಿಸಂ ಇದೆ ಎನ್ನುವುದು ಅವರಿಗೆ ತಿಳಿದು ಅವನನ್ನು ನೇರವಾಗಿ ಯೋಗ ಕೇಂದ್ರಕ್ಕೆ ಕರೆದೊಯ್ಯದರು. ಅಲ್ಲಿ ಅವನು ನಿಧಾನವಾಗಿ ಯೋಗ ಕಲಿಯಲು ಪ್ರಾರಂಭಿಸಿದ. ಯೋಗದಿಂದಾಗಿ ಅವನ ಪ್ರತಿಭೆ ಜನರಿಗೆ ತಿಳಿದು ಸ್ವಲೀನತೆ( ಆಟಿಸಂ) ಸಂಪೂರ್ಣವಾಗಿ ನಿರ್ಮೂಲನೆ ಆಯಿತು. ಅನಂತರ ಆತನ ತಾಯಿ ಕೂಡ ಅವನಿಗಾಗಿ ಯೋಗ ತರಬೇತಿ ತೆಗೆದುಕೊಂಡರು.
ಯೋಗದಿಂದ ಆಟಿಸಂ ಅನ್ನು ನಿರ್ಮೂಲನೆ ಮಾಡಬಹುದು ಎಂಬುದು ಅನೇಕ ಸಂಶೋಧನೆಗಳಿಂದ ತಿಳಿದು ಬಂದಿದೆ. ಇದರಿಂದ ಬಳಲುವ ಮಕ್ಕಳಿಗೆ ಯೋಗದಿಂದ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಸುಧಾರಣೆಯಾಗುತ್ತದೆ. ಆದರೆ ಈ ಮಗು ಅದನ್ನು ಬಳಸಿಕೊಂಡು ತನ್ನ ಭವಿಷ್ಯವನ್ನು ಬದಲಿಸಿಕೊಂಡಿತು ಎಂಬುದು ಸತ್ಯ.
-ಪ್ರೀತಿ ಭಟ್ ಗುಣವಂತೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chocolate ಕೇವಲ ಸಸ್ಯಾಹಾರವೇ? ಸಸ್ಯಾಹಾರಿಗಳೇ ಗಮನಿಸಿ…
Guruprasad: ಲಾಟರಿ ಮಾರುತ್ತಿದ್ದ ಹುಡುಗ ʼಮಠʼ ಕಟ್ಟಿ ʼರಂಗನಾಯಕʼನಾಗಿ ಬೆಳೆದಿದ್ದೇಗೆ?
UV Fusion: ಮಾನವನ ಸ್ವಾರ್ಥ ವಿನಾಶಕ್ಕೆ ಕಾರಣವಾಗುತ್ತಿದೆಯೇ?
Shivaji Satam: ಕ್ಯಾಷಿಯರ್ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?
Prashant Kishor; ಸಲಹೆ ನೀಡಲು ಒಂದು ಚುನಾವಣೆಗೆ ಪಡೆಯುಯುತ್ತಿದ್ದ ಶುಲ್ಕ ಬಹಿರಂಗ!
MUST WATCH
ಹೊಸ ಸೇರ್ಪಡೆ
Vyasanagar: ಮಣ್ಣಿನ ಒಳ ರಸ್ತೆಗಳಿಗೆ ಬೇಕು ಬೀದಿದೀಪ
Mangalore: ಅಡ್ಯಾರ್ ಕಣ್ಣೂರಿನಲ್ಲಿ ತ್ಯಾಜ್ಯ ಸುಡುವಿಕೆಯಿಂದ ಪರಿಸರ ಮಾಲಿನ್ಯ
Dandeli ನಗರ ಠಾಣೆಯ ತನಿಖಾ ವಿಭಾಗದ ಪಿಎಸ್ಐಯಾಗಿ ಕಿರಣ್ ಪಾಟೀಲ್ ಅಧಿಕಾರ ಸ್ಬೀಕಾರ
Thirthahalli: ತುಂಗಾ ನದಿಯಲ್ಲಿ ಅಪರಿಚಿತ ಮೃತದೇಹ ಪತ್ತೆ
Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.