Women’s Day Spcl: ಸೌತ್ ಸಿನಿರಂಗದಲ್ಲಿ ಸದ್ದು ಮಾಡಿದ ಮಹಿಳಾ ಪ್ರಧಾನ ಸಿನಿಮಾಗಳಿವು
Team Udayavani, Mar 7, 2024, 6:07 PM IST
ಪ್ರತಿ ವರ್ಷ ಮಾರ್ಚ್ 8 ರಂದು ಅಂತಾರಾಷ್ಟ್ರೀಯ ಮಹಿಳಾ ದಿನವನ್ನಾಗಿ ಆಚರಿಸಲಾಗುತ್ತದೆ. ಸಿನಿಮಾರಂಗದಲ್ಲೂ ಮಹಿಳಾ ಪ್ರಧಾನ ಸಿನಿಮಾಗಳು ತೆರೆಗೆ ಬಂದಿವೆ. ಸೌತ್ ಸಿನಿವಲಯದಲ್ಲಿ ತನ್ನ ಅಭಿನಯದಿಂದ ಗಮನ ಸೆಳೆದ ನಟಿಯರ ಮಹಿಳಾ ಪ್ರಧಾನಗಳ ಸಿನಿಮಾಗಳ ಪಟ್ಟಿ ಇಲ್ಲಿದೆ..
ಗಾರ್ಗಿ (2022): ಸಾಯಿಪಲ್ಲವಿ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡ ಈ ಸಿನಿಮಾ ವಿಮರ್ಶಕರಿಂದ ಮೆಚ್ಚುಗೆ ಪಡೆದುಕೊಂಡಿತ್ತು. ಶಾಲಾ ಶಿಕ್ಷಕಿಯೊಬ್ಬಳು ಮಗುವಿನ ಮೇಲೆ ಹಲ್ಲೆ ಮಾಡಿದ ಆರೋಪದಲ್ಲಿ ಬಂಧಿತರಾದ ನಿರಾಪರಾಧಿ ತಂದೆಯೊಬ್ಬನಿಗಾಗಿ ಹೋರಾಟ ನಡೆಸುವ ಕಥೆಯನ್ನು ಸಿನಿಮಾ ಒಳಗೊಂಡಿದೆ.
ನಿರ್ದೇಶಕ: ಗೌತಮ್ ರಾಮಚಂದ್ರನ್
ಅವಧಿ: 2 ಗಂಟೆ 20 ನಿಮಿಷಗಳು
IMDB ರೇಟಿಂಗ್: 8.1/10
ಪಾತ್ರವರ್ಗ: ಸಾಯಿ ಪಲ್ಲವಿ, ಆರ್ ಎಸ್ ಶಿವಾಜಿ, ಐಶ್ವರ್ಯ ಲಕ್ಷ್ಮಿ
ಎಲ್ಲಿ ವೀಕ್ಷಿಸಬಹುದು: ಸೋನಿ LIV
ಮಹಾನಟಿ (2018): ನಟಿ ಕೀರ್ತಿ ಸುರೇಶ್ ಮಹಿಳಾ ಪ್ರಧಾನ ಪಾತ್ರದಲ್ಲಿ ಮಿಂಚಿದ ಸಿನಿಮಾವಿದು. ಈ ಸಿನಿಮಾ ನಟಿ ಸಾವಿತ್ರಿ ಅವರ ಜೀವನದ ಕಥೆಯನ್ನು ಒಳಗೊಂಡಿದೆ. ದಿಗ್ಗಜ ನಟಿಯ ಸಿನಿ ಬದುಕಿನ ಕಥೆಯನ್ನು ಸಿನಿಮಾ ಒಳಗೊಂಡಿದೆ. ಸಾಧನೆ – ಸಂಕಷ್ಟದಲ್ಲಿ ಸಾಗಿಬಂದ ನಟಿ ಸಾವಿತ್ರಿ ಬದುಕನ್ನು ಬಹಳ ಸುಂದರವಾಗಿ ಕೀರ್ತಿ ಸುರೇಶ್ ಪಾತ್ರದ ಮೂಲಕ ಜೀವಿಸಿದ್ದಾರೆ.
ನಿರ್ದೇಶಕ: ನಾಗ್ ಅಶ್ವಿನ್
ಅವಧಿ: 2 ಗಂಟೆ 57 ನಿಮಿಷಗಳು
IMDb ರೇಟಿಂಗ್: 8.4/10
ಪಾತ್ರವರ್ಗ: ಕೀರ್ತಿ ಸುರೇಶ್, ದುಲ್ಕರ್ ಸಲ್ಮಾನ್, ಸಮಂತಾ ರುತ್ ಪ್ರಭು, ವಿಜಯ್ ದೇವರಕೊಂಡ
ಎಲ್ಲಿ ವೀಕ್ಷಿಸಬಹುದು: ಪ್ರೈಮ್ ವಿಡಿಯೋ
ಅಮ್ಮು (2022): ಪೊಲೀಸ್ ಅಧಿಕಾರಿಯೊಬ್ಬನನ್ನು ಮದುವೆ ಆಗುವ ಅಮ್ಮು ಎನ್ನುವ ಹೆಣ್ಣೊಬ್ಬಳ ಬದುಕಿನ ಕಥೆಯನ್ನು ಸಿನಿಮಾ ಹೇಳುತ್ತದೆ. ದಾಂಪತ್ಯ ಜೀವನದ ಸಂಕೋಲೆಯಲ್ಲಿ ಬಂಧಿಯಾಗುವ ಅಮ್ಮು ಹೇಗೆ ಎಲ್ಲವನ್ನು ಮೀರಿ ಸೇಡು ತೀರಿಸಿಕೊಳ್ಳಲು ಮತ್ತು ತನ್ನ ಘನತೆಗಾಗಿ ಹೋರಾಡುತ್ತಾಳೆ ಎನ್ನುವುದನ್ನು ಸಿನಿಮಾ ಹೇಳುತ್ತದೆ.
ನಿರ್ದೇಶಕ: ಚಾರುಕೇಶ್ ಸೇಕರ್
ಅವಧಿ: 2 ಗಂಟೆ 16 ನಿಮಿಷಗಳು
IMDb ರೇಟಿಂಗ್: 6.7/10
ಪಾತ್ರವರ್ಗ: ಐಶ್ವರ್ಯ ಲಕ್ಷ್ಮಿ, ನವೀನ್ ಚಂದ್ರ, ಬಾಬಿ ಸಿಂಹ
ಎಲ್ಲಿ ವೀಕ್ಷಿಸಬಹುದು: ಪ್ರೈಮ್ ವಿಡಿಯೋ
ಸಾನಿ ಕಾಯಿದಂ (2022) : ನಟಿ ಕೀರ್ತಿ ಸುರೇಶ್ ʼಮಹಾನಟಿʼ ಬಳಿಕ ಕಾಣಿಸಿಕೊಂಡ ಮತ್ತೊಂದು ಮಹಿಳಾ ಪ್ರಧಾನ ಸಿನಿಮಾವಿದು. ಪಕ್ಕಾ ಮಾಸ್ ಅವತಾರದಲ್ಲಿ ಕೀರ್ತಿ ಸುರೇಶ್ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಕ್ರೈಮ್ ಕಥಾಹಂದರದ ಈ ಕಥೆಯಲ್ಲಿ ಕೀರ್ತಿ ಸುರೇಶ್ ಅಬ್ಬರಿಸಿದ್ದಾರೆ.
ನಿರ್ದೇಶಕ: ಅರುಣ್ ಮಾಥೇಶ್ವರನ್
ಅವಧಿ : 2 ಗಂಟೆ 16 ನಿಮಿಷಗಳು
IMDB ರೇಟಿಂಗ್: 7.5/10
ಪಾತ್ರವರ್ಗ: ಕೀರ್ತಿ ಸುರೇಶ್, ಕೆ.ಸೆಲ್ವರಾಘವನ್
ಎಲ್ಲಿ ವೀಕ್ಷಿಸಬಹುದು: ಪ್ರೈಮ್ ವಿಡಿಯೋ
ಯಶೋದಾ (2022): ನಟಿ ಸಮಂತಾ ಅವರು ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡ ಈ ಸಿನಿಮಾ ಬಾಡಿಗೆ ತಾಯ್ತನದ ಕರಾಳ ಮುಖದ ಕಥೆಯನ್ನು ಹೇಳುತ್ತದೆ. ಬಾಡಿಗೆ ತಾಯ್ತನ ಹಾಗೂ ಅದರ ಸವಾಲು ಹಾಗೂ ಷಡ್ಯಂತ್ರ್ಯದ ಕಥೆಯಲ್ಲಿ ಸಮಂತಾ ಮಿಂಚಿದ್ದಾರೆ.
ನಿರ್ದೇಶಕ: ಹರೀಶ್ ನಾರಾಯಣ್, ಕೆ. ಹರಿ ಶಂಕರ್
ಅವಧಿ: 2 ಗಂಟೆ 15 ನಿಮಿಷಗಳು
IMDb ರೇಟಿಂಗ್: 6.6/10
ಪಾತ್ರವರ್ಗ: ಸಮಂತಾ ರೂತ್ ಪ್ರಭು, ಉನ್ನಿ ಮುಕುಂದನ್, ವರಲಕ್ಷ್ಮಿ ಶರತ್‌ಕುಮಾರ್
ಎಲ್ಲಿ ವೀಕ್ಷಿಸಬಹುದು: ಅಮೆಜಾನ್ ಪ್ರೈಮ್ ವಿಡಿಯೋ
ಉಯರೆ (2019): ಪಾರ್ವತಿ ತಿರುವೋತ್ತು ಕಾಣಿಸಿಕೊಂಡಿರುವ ಈ ಸಿನಿಮಾ ಆ್ಯಸಿಡ್ ದಾಳಿಯ ಸಂತ್ರಸ್ತೆಯ ಕಥೆಯನ್ನೊಳಗೊಂಡಿದೆ. ಮಾಜಿ ಬಾಯ್ ಫ್ರೆಂಡ್ ಯೊಬ್ಬ ಗೆಳತಿಗೆ ಆ್ಯಸಿಡ್ ಎಸೆದ ಬಳಿಕ ಆಕೆಯ ಬದುಕು ಹೇಗೆ ಧೈರ್ಯದಿಂದ ಸಮಾಜದ ಮಾತುಗಳನ್ನು ಸಹಿಸಿಕೊಂಡು ಸವಾಲಿನಿಂದ ಸಾಗುತ್ತದೆ ಎನ್ನುವ ಪಯಣವನ್ನು ಸಿನಿಮಾದಲ್ಲಿ ತೋರಿಸಲಾಗಿದೆ.
ನಿರ್ದೇಶಕ: ಮನು ಅಶೋಕನ್
ಚಾಲನಾ ಸಮಯ: 2 ಗಂಟೆ 05 ನಿಮಿಷಗಳು
IMDb ರೇಟಿಂಗ್: 8.0/10
ಪಾತ್ರವರ್ಗ: ಪಾರ್ವತಿ ತಿರುವೋತ್ತು, ಟೋವಿನೋ ಥಾಮಸ್, ಆಸಿಫ್ ಅಲಿ
ಎಲ್ಲಿ ವೀಕ್ಷಿಸಬಹುದು: ನೆಟ್‌ಫ್ಲಿಕ್ಸ್
ಪೊನ್ಮಗಲ್ ವಂದಾಲ್ (2020): ಈ ಸಿನಿಮಾದಲ್ಲಿ ನಟಿ ಜ್ಯೋತಿಕಾ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವು ಮಹಿಳೆಯರ ಹಕ್ಕುಗಳನ್ನು ಆಧರಿಸಿದ ಕಥಾಹಂದರವನ್ನು ಒಳಗೊಂಡಿದ್ದು, ಸೂಕ್ಷ್ಮ ವಿಚಾರದ ಮೇಲೆ ಬೆಳಕು ಚೆಲ್ಲುತ್ತದೆ.
ನಿರ್ದೇಶಕ: JJ ಫ್ರೆಡ್ರಿಕ್
ಅವಧಿ: 2 ಗಂಟೆ 03 ನಿಮಿಷಗಳು
IMDB ರೇಟಿಂಗ್: 6.7/10
ಪಾತ್ರವರ್ಗ: ಜ್ಯೋತಿಕಾ, ಪಾರ್ತಿಬನ್, ಭಾಗ್ಯರಾಜ್
ಎಲ್ಲಿ ವೀಕ್ಷಿಸಬಹುದು: ಪ್ರೈಮ್ ವಿಡಿಯೋ
ಜಯ ಜಯ ಜಯ ಜಯ ಹೇ (2022): ಮಾಲಿವುಡ್ ನಲ್ಲಿ ಸಣ್ಣ ಬಜೆಟ್ ನಲ್ಲಿ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡಿದ ಸಿನಿಮಾವಿದು. ಮದುವೆಯ ಬಳಿಕ ಸದಾ ಸಿಟ್ಟಾಗುವ ಪತಿ, ಪತ್ನಿಗೆ ಹಲ್ಲೆ ಮಾಡುತ್ತಿರುತ್ತಾನೆ. ಆದರೆ ಅದೊಂದು ದಿನ ಪತ್ನಿಯೇ ಗಂಡನ ವಿರುದ್ಧ ಬಿದ್ದು ಕರಾಟೆ ಕಲಿಯುವ ಕಥೆಯನ್ನೊಳಗೊಂಡಿದೆ.
ನಿರ್ದೇಶಕ: ವಿಪಿನ್ ದಾಸ್
ಅವಧಿ: 2 ಗಂಟೆ 25 ನಿಮಿಷಗಳು
IMDB ರೇಟಿಂಗ್: 7.7/10
ಪಾತ್ರವರ್ಗ: ದರ್ಶನಾ ರಾಜೇಂದ್ರನ್, ಬೆಸಿಲ್ ಜೋಸೆಫ್, ಮಂಜು ಪಿಳ್ಳೈ
ಎಲ್ಲಿ ವೀಕ್ಷಿಸಬಹುದು: ಡಿಸ್ನಿ+ಹಾಟ್‌ಸ್ಟಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Viral: ಸೆ**ಕ್ಸ್ ಗಾಗಿ 65ರ ಮುದುಕನನ್ನು ವಿವಾಹವಾದ್ರಾ ಈ ನಟಿ? ನೆಟ್ಟಿಗರಿಂದ ಭಾರೀ ಟ್ರೋಲ್
AMMA; ಶೀಘ್ರದಲ್ಲೇ ನೂತನ ಸಮಿತಿ: ಸುರೇಶ್ ಗೋಪಿ
Amaran: ಮೇಜರ್ ಮುಕುಂದ್ ಆಗಿ ತೆರೆ ಮೇಲೆ ಜೀವಿಸಿದ ಶಿವಕಾರ್ತಿಕೇಯನ್: ಹೇಗಿದೆ ಸಿನಿಮಾ?
Bagheera Movie : ʼಬಘೀರʼ ನೋಡಿ ಹಬ್ಬದ ಬಾಡೂಟ ಸವಿದ ಸಿನಿಮಂದಿ.. ಹೇಗಿದೆ ಸಿನಿಮಾ?
OTT Release: ರಜಿನಿಕಾಂತ್ ʼವೆಟ್ಟೈಯನ್ʼ ಓಟಿಟಿ ರಿಲೀಸ್‌ಗೆ ಡೇಟ್ ಫಿಕ್ಸ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.