ಅರಿಶಿನದ 8 ಅದ್ಭುತಗಳು
Team Udayavani, Sep 28, 2019, 2:40 PM IST
ಯಾಕೋ ಗಂಟಲು ಬೆಳಗ್ಗೆಯಿಂದ ಕಿರಿಕಿರಿ ಕೊಡುತ್ತಿತ್ತು. ಸಣ್ಣಗೆ ತಲೆನೋವೂ ಇತ್ತು. ಇದು ಜ್ವರ ಬರುವ ಮುನ್ಸೂಚನೆ. ಯಾವುದಕ್ಕೂ ಇರಲಿ ಒಂದು ಮಾತ್ರೆ ತಗೊಂಡು ಬಿಡೋಣ ಅಂತ , “ಅಮ್ಮಾ, ನೆಗಡಿಯಾಗಿದೆ. ಒಂದು ಮಾತ್ರೆ ಕೊಡು ಎಂದು ಕೇಳಿದೆ. ಅಮ್ಮ 10 ನಿಮಿಷಬಿಟ್ಟು, ಒಂದು ಲೋಟ ತಂದು ನನ್ನ ಮುಂದಿಟ್ಟರು. ಅರ್ಧ ಚಮಚ ಅರಿಶಿನ ಪುಡಿಗೆ ಒಂದು ಕಪ್ ಹಾಲು, ಅರ್ಧ ಲೋಟ ನೀರು, 2-3 ಜಜ್ಜಿದ ಕರಿಮೆಣಸು ಸೇರಿಸಿ ಮಾಡಿದ ಅರಿಶಿನದ ಹಾಲು ಅದು. ನಾನು ಮೂತಿ ಸೊಟ್ಟಗೆ ಮಾಡಿದೆ. ಅರಿಶಿನದ ಬಗೆಗಿನ ನನ್ನ ಅಜ್ಞಾನವನ್ನು ಅರಿತಿದ್ದ ಅಮ,¾ ಅರಿಶಿನದ ಹಾಲನ್ನು ಕುಡಿಯುವುದರಿಂದ ಏನೇನು ಲಾಭವಿದೆ ಅಂತ ಒಂದೊಂದಾಗಿ ಪಟ್ಟಿ ಮಾಡಿದರು. ಅದನ್ನು ನೀವೂ ಒಮ್ಮೆ ಓದಿ.
1. ಪ್ರತಿರೋಧಕ ಶಕ್ತಿ ಹೆಚ್ಚಳ
ಅರಿಶಿನದಲ್ಲಿ ಇರುವ ಲಿಪೋಪೊಲಿಸ್ಯಾಕರೈಡ್ ಎನ್ನುವ ಅಂಶವು ಪ್ರತಿರೋಧಕ ಶಕ್ತಿಯನ್ನು ಬಲಪಡಿಸಿ ಸೋಂಕಿನ ವಿರುದ್ಧ ಸಮರ್ಥವಾಗಿ ಹೋರಾಡುತ್ತದೆ. ಹಾಲಿನೊಂದಿಗೆ ಇದನ್ನು ಸೇವಿಸಿದರೆ ಹಾನಿಕಾರಕ ಬ್ಯಾಕ್ಟೀರಿಯಾಗಳು ಸಾಯುತ್ತವೆ. ಅರಿಶಿನದಲ್ಲಿ ಕುರ್ಕ್ನೂಮಿನ್ ಎಂಬ ಅಂಶವೂ ಅಡಗಿದ್ದು, ಅದು ಉರಿಯೂತ ಶಮನಕಾರಿ ಗುಣಹೊಂದಿದೆ. ಇದರಿಂದ ಸೂûಾ¾ಣು ಜೀವಿಗಳಿಂದ ಹರಡುವ ಕಾಯಿಲೆಗಳನ್ನು ತಡೆಯಬಹುದು.
2. ಶೀತ ಮತ್ತು ಕೆಮ್ಮಿಗೆ
ಅರಿಶಿನಕ್ಕೆ ನಂಜು ನಿವಾರಕ ಗುಣವಿದೆ. ಅರಿಶಿನದ ಹಾಲು ಕುಡಿದರೆ ಶೀತ-ಕೆಮ್ಮು ಹೋಗುವುದಷ್ಟೇ ಅಲ್ಲದೆ, ಶ್ವಾಸನಾಳದಲ್ಲಿ ಕಫ ಶೇಖರಣೆಯಾಗುವುದನ್ನೂ ತಡೆಯಬಹುದು. ಕಿಚ್ ಕಿಚ್ ಎನ್ನುವ ಗಂಟಲಿಗೆ ಸಮಾಧಾನ ಹೇಳಿ, ಕಫ ನಿವಾರಿಸಿ ಕಟ್ಟಿದ ಮೂಗು ತೆರೆಯುವಂತೆಯೂ ಮಾಡುತ್ತದೆ.
3. ಯಕೃತ್‌ಗೆ ಒಳ್ಳೆಯದು
ದೇಹವನ್ನು ಸೇರುವ ಕಲ್ಮಶವನ್ನು ಹೊರ ಹಾಕುವುದರಲ್ಲಿ ಯಕೃತ್‌ನ ಪಾತ್ರ ಮಹತ್ವದ್ದು. ಅರಿಶಿನವು ಯಕೃತ್‌ನ ಕೋಶಗಳನ್ನು ಬಲಪಡಿಸುತ್ತದೆ. ಕಕ್ಯುìಮಿನ್ ಅಂಶವು ವಿಷಕಾರಿ ಅಂಶಗಳನ್ನು ಹೊರಹಾಕುವ ಕಿಣ್ವಗಳ ಸ್ರವಿಸುವಿಕೆಗೆ ನೆರವಾಗಬಲ್ಲದು. ಮಧುಮೇಹಿಗಳಿಗೆ ಅರಿಶಿನ ಬಲು ಉಪಯೋಗಿ.
4. ಉತ್ತಮ ಜೀರ್ಣಕ್ರಿಯೆಗೆ
ಅರಿಶಿನ ಹಾಲು ಪಿತ್ತರಸ ಉತ್ಪತ್ತಿಯನ್ನು ಹೆಚ್ಚಿಸುತ್ತದೆ. ಇದರಿಂದ ಆಹಾರ ಸರಿಯಾಗಿ ಜೀರ್ಣವಾಗುತ್ತದೆ. ಆಮ್ಲದ ಹಿಮ್ಮುಖ ಹರಿವು ಮತ್ತು ಹೊಟ್ಟೆಯುಬ್ಬರವನ್ನು ತಡೆದು, ಕರುಳಿನ ಕ್ರಿಯೆಯನ್ನು ಸರಾಗವಾಗಿಸಿ ಮಲಬದ್ಧತೆಯನ್ನು ನಿವಾರಿಸುತ್ತದೆ.
5. ರಕ್ತ ಶುದ್ಧೀಕರಣ
ದುಗ್ಧರಸ ವ್ಯವಸ್ಥೆಯ ಕ್ರಿಯೆಯನ್ನು ಹೆಚ್ಚಿಸುವ ಅರಿಶಿನ ಹಾಲು, ರಕ್ತ ಸಂಚಲನಕ್ಕೆ ನೆರವಾಗುತ್ತದೆ. ರಕ್ತದಲ್ಲಿರುವ ಎÇÉಾ ರೀತಿಯ ಕಲ್ಮಷವನ್ನು ಹೊರಹಾಕಿ, ರಕ್ತವು ಆಮ್ಲಜನಕದೊಂದಿಗೆ ಸೇರುವಂತೆ ಮಾಡುತ್ತದೆ.
6. ಸಂಧಿವಾತ ನಿವಾರಣೆ
ಅರಿಶಿನದ ಉರಿಯೂತ ಶಮನಕಾರಿ ಗುಣವು ಸಂಧಿವಾತದ ನೋವನ್ನು ನಿವಾರಿಸುತ್ತದೆ. ಮೂಳೆ ಮತ್ತು ಗಂಟುಗಳನ್ನು ಬಲಪಡಿಸಿ, ದ್ರವವನ್ನು ಕಾಪಾಡಿಕೊಳ್ಳುವ ಕಾರಣ ಗಂಟುಗಳಿಗೆ ಶಕ್ತಿ ನೀಡುತ್ತದೆ.
7. ನಿದ್ರಾಹೀನತೆಗೆ
ಮಲಗುವ ಮುನ್ನ ಹಾಲು ಕುಡಿದರೆ ಚೆನ್ನಾಗಿ ನಿದ್ದೆ ಬರುತ್ತದೆ. ಅರಿಶಿನದ ಹಾಲು ಕುಡಿದರೆ ಮೆದುಳಿನ ಆರೋಗ್ಯ ಹೆಚ್ಚಿ ನಿದ್ರಾಹೀನತೆ ದೂರವಾಗುತ್ತದೆ .
8. ಋತುಚಕ್ರದ ನೋವು ನಿವಾರಣೆ
ಮುಟ್ಟಿನ ನೋವಿಗೆ ನೋವು ನಿವಾರಕಗಳನ್ನು ಸೇವಿಸುವುದು ಒಳ್ಳೆಯದಲ್ಲ. ಅರಿಶಿನದ ಹಾಲಿನಲ್ಲಿರುವ ಆ್ಯಂಟಿಸ್ಪಾಸೊ¾ಡಿಕ್ ಅಂಶ ನೋವನ್ನು ನೀಗಿಸುತ್ತದೆ. ಗಭìಕೋಶದ ಆರೋಗ್ಯಕ್ಕೂ ಅರಿಶಿನ ಒಳ್ಳೆಯದು.ಇಷ್ಟೆಲ್ಲಾ ಕೇಳಿದ ಮೇಲೆ ಅಮ್ಮ ಕೊಟ್ಟ ಅರಿಶಿನದ ಹಾಲು ನನಗೆ “ಬಾಲ ಮಂಗಳದ ಶಕ್ತಿ ಮದ್ದಿನಂತೆ ಕಾಣಿಸತೊಡಗಿತು.
– ಮೇಘಾ ಬಿ. ಗೊರವರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್ ಪಡೆದು ಸಿನಿಮಾದಲ್ಲಿ ಫೇಮ್ ಆದ ಕಲಾವಿದರು
ಖುಷಿ ಕೊಡಬಲ್ಲ ಕೆಲವು ವಿಧಾನ ತಿಳಿಸಿ…ಏನೂ ಇಲ್ಲದೆಯೂ ಸಂತೋಷವಾಗಿರಿ!
Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ
BGT: ವಿರಾಟ್ ಬಗ್ಗೆ ಆಸೀಸ್ ಜನರಿಗೆ ಯಾಕಿಷ್ಟು ಕುತೂಹಲ; ಇದು ಕಿಂಗ್ ಸಾಮ್ರಾಜ್ಯದ ಕಥೆ
AIADMK-BJP ಮರು ಮೈತ್ರಿ ಸುದ್ದಿ: ನಿರ್ಧಾರ ಬದಲಿಸುವರೇ ಪಳನಿಸ್ವಾಮಿ?
MUST WATCH
ಹೊಸ ಸೇರ್ಪಡೆ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Re Release: ದರ್ಶನ್ ಮತ್ತೊಂದು ಚಿತ್ರ ಮರು ಬಿಡುಗಡೆ: ರೀರಿಲೀಸ್‌ನತ್ತ ಸಂಗೊಳ್ಳಿ ರಾಯಣ್ಣ
BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್: ಆಸೀಸ್ ಸರಣಿಗೆ ತಂಡ ಸೇರಲಿದ್ದಾರೆ ಶಮಿ
Charmadi: ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.