Bollywood ಸ್ಟಾರ್ ಗಳಿಗಿಂತ ಹೆಚ್ಚು ಕಮಾಲ್ – ಕಮಾಯಿ ಮಾಡುವ ಸೌತ್ ಸ್ಟಾರ್ ಗಳಿರುವವರು
ದಕ್ಷಿಣ ಭಾರತದ ಸ್ಟಾರ್ ನಟರ ಸಿನಿಮಾಗಳು ಉತ್ತರ ಭಾರತದ ಸಿನಿ ಪ್ರೇಮಿಗಳಿಗೂ ತಲುಪುತ್ತಿದೆ.
ಸುಹಾನ್ ಶೇಕ್, Jul 13, 2024, 6:23 PM IST
ಒಂದು ಕಾಲದಲ್ಲಿ ಬಾಲಿವುಡ್ (Bollywood) ಚಿತ್ರರಂಗವೆಂದರೆ ಕೋಟಿ ಕೋಟಿ ಗಳಿಸುವ, ಬಂಗಾರದ ಮೊಟ್ಟೆಯಿಡುವ ಚಿತ್ರರಂಗವಾಗಿತ್ತು. ಅದರಲ್ಲೂ ಸಲ್ಮಾನ್, ಶಾರುಖ್ ಹಾಗೂ ಆಮೀರ್ ಖಾನ್ ಅವರ ಸಿನಿಮಾಗಳು ಬಂದರೆ ಆರಾಮವಾಗಿ 100 ಕೋಟಿ ಗಳಿಸುತ್ತಿತ್ತು.
ಆದರೆ ಇತ್ತೀಚೆಗಿನ ವರ್ಷಗಳಲ್ಲಿ ಪ್ರೇಕ್ಷಕರು ಸ್ಟಾರ್ ಗಿರಿ ಬಿಟ್ಟು ʼಕಂಟೆಂಟ್ ಕಿಂಗ್ʼ ಎನ್ನುವುದನ್ನು ಅರ್ಥಮಾಡಿಕೊಂಡಿದ್ದಾರೆ. ಹಾಗಾಗಿ ಯಾವ ಸಲ್ಮಾನ್, ಶಾರುಖ್ ಅಥವಾ ಆಮೀರ್ ಅವರ ಸಿನಿಮಾಗಳೇ ಬರಲಿ ಸಿನಿಮಾದಲ್ಲಿ ಕಥೆ ಚೆನ್ನಾಗಿದ್ದರೆ ಅದನ್ನು ಯಾವ ವರ್ಗದ ಪ್ರೇಕ್ಷಕರು ಬೇಕಾದರೂ ನೋಡಿ ಆನಂದಿಸುತ್ತಾರೆ.
ಶಾರುಖ್ ಖಾನ್ (Shah Rukh Khan) ʼಪಠಾಣ್ʼ ಸಿನಿಮಾದ ಮೂಲಕ ಕಂಬ್ಯಾಕ್ ಮಾಡಿದ್ದಾರೆ. ಅದಕ್ಕಿಂತ ಮುಂಚೆ ಬಂದ ಅವರ ಇತ್ತೀಚೆಗಿನ ಸಿನಿಮಾಗಳು ಸೋತು ಸುಣ್ಣವಾಗಿದೆ. ಇನ್ನು ಆಮೀರ್ ಖಾನ್ ಹಾಗೂ ಸಲ್ಮಾನ್ ಖಾನ್ ಅವರ ಇತ್ತೀಚೆಗಿನ ಸಿನಿಮಾಗಳು ಅಷ್ಟಾಗಿ ಕಮಾಲ್ – ಕಮಾಯಿ ಎರಡನ್ನೂ ಮಾಡಿಲ್ಲ.
ಅಕ್ಷಯ್ ಕುಮಾರ್ (Akshay Kumar) ಇತ್ತೀಚೆಗಿನ ವರ್ಷದ ಎಲ್ಲಾ ಸಿನಿಮಾಗಳು ಹಾಗೇ ಬಂದು ಹೀಗೆ ಹೋಗುವುದೇ ಗೊತ್ತಾಗುತ್ತಿಲ್ಲ. ಒಂದು ಕಾಲದಲ್ಲಿ ಬಾಲಿವುಡ್ ಸಿನಿಮಾಗಳನ್ನು ಆಯಾ ಪ್ರದೇಶದ ಅಂದರೆ ಹಿಂದಿ ಭಾಷಿಗರೇ ಹೆಚ್ಚಾಗಿ ನೋಡುತ್ತಿದ್ದರು. ಆದರೆ ಇತ್ತೀಚೆಗಿನ ವರ್ಷಗಳಲ್ಲಿ ದಕ್ಷಿಣ ಭಾರತದ ಸ್ಟಾರ್ ನಟರ ಸಿನಿಮಾಗಳು ಉತ್ತರ ಭಾರತದ ಸಿನಿ ಪ್ರೇಮಿಗಳಿಗೂ ತಲುಪುತ್ತಿದೆ. ಅದು ಪ್ಯಾನ್ ಇಂಡಿಯಾದ ಮೂಲಕ.
ರಜಿನಿಕಾಂತ್ , ಪ್ರಭಾಸ್, ಯಶ್, ಜೂ.ಎನ್ ಟಿಆರ್ ಹೀಗೆ ದಕ್ಷಿಣ ಭಾರತದ ಖ್ಯಾತ ಸ್ಟಾರ್ ಗಳ ಸಿನಿಮಾಗಳು ಇಂದು ಸೌತ್ ಇಂಡಿಯಾ ಮಾತ್ರವಲ್ಲದೆ ನಾರ್ತ್ ಇಂಡಿಯಾದಲ್ಲೂ ಕಮಾಲ್ ಮಾಡುತ್ತಿದೆ. ದಕ್ಷಿಣ ಭಾರತದ ಸ್ಟಾರ್ ನಟರು ಬಾಲಿವುಡ್ ಸ್ಟಾರ್ ಗಳಿಗಿಂತ ಹೆಚ್ಚು ಗಳಿಕೆಯನ್ನು ಇತ್ತೀಚೆಗಿನ ವರ್ಷಗಳಲ್ಲಿ ಮಾಡುತ್ತಿದ್ದಾರೆ. ಆ ಕಲಾವಿದರ ಪಟ್ಟಿ ಇಲ್ಲಿದೆ.
ರಜಿನಿಕಾಂತ್: ಸೂಪರ್ ಸ್ಟಾರ್ ರಜಿನಿಕಾಂತ್(Rajinikanth), ʼತಲೈವಾʼ ಅವರ ಹೆಸರು ಇಡೀ ಭಾರತಕ್ಕೆ ಗೊತ್ತು. ಸಿನಿಮಾದಲ್ಲಿನ ಅವರ ಗತ್ತು – ಗಾಂಭೀರ್ಯಕ್ಕೆ ಶಿಳ್ಳೆ ಚಪ್ಪಾಳೆಗಳ ಸುರಿಮಳೆಯೇ ಬರುತ್ತದೆ. 73ರ ವಯಸ್ಸಿನಲ್ಲೂ 23ರ ಹರೆಯದ ಯುವಕನಂತೆ ಅವರು ಸ್ಕ್ರೀನ್ ನಲ್ಲಿ ಅಬ್ಬರಿಸುತ್ತಾರೆ.
ವರದಿಗಳ ಪ್ರಕಾರ ರಜಿನಿಕಾಂತ್ ಒಂದು ಸಿನಿಮಾಕ್ಕೆ 150 ಕೋಟಿ ರೂ. ನಿಂದ 220 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ. ಅವರ ಇತ್ತೀಚೆಗಿನ ʼಜೈಲರ್ʼ ಚಿತ್ರ ಬ್ಲಾಕ್ ಬಸ್ಟರ್ ಹಿಟ್ ಆಗಿ ವರ್ಲ್ಡ್ ವೈಡ್ 650 ಕೋಟಿ ರೂ.ಗಳಿಸಿತು.
ಜೂ.ಎನ್ ಟಿಆರ್: ಟಾಲಿವುಡ್ ನ ದೊಡ್ಡ ಹೆಸರುಗಳಲ್ಲಿ ಜೂ.ಎನ್ ಟಿಆರ್(Jr NTR) ಅವರು ಕೂಡ ಒಬ್ಬರು. ʼಆರ್ ಆರ್ ಆರ್ʼ ಬಳಿಕ ಜೂ.ಎನ್ ಟಿಆರ್ ಪ್ಯಾನ್ ಇಂಡಿಯಾದಲ್ಲಿ ಎಲ್ಲರ ಮನಗೆದ್ದಿದ್ದಾರೆ. ಅವರ ಮುಂದಿನ ʼದೇವರʼ ಹಾಗೂ ಪ್ರಶಾಂತ್ ನೀಲ್ ಅವರೊಂದಿಗಿನ ʼಡ್ರ್ಯಾಗ್ಯನ್ʼ (ತಾತ್ಕಾಲಿಕ ಟೈಟಲ್) ಚಿತ್ರ ಕೂಡ ಹವಾ ಕ್ರಿಯೇಟ್ ಮಾಡುವ ಸಾಧ್ಯತೆ ಹೆಚ್ಚಿದೆ. ವರದಿಗಳ ಪ್ರಕಾರ ಪ್ರತಿ ಸಿನಿಮಾಕ್ಕೆ ಜೂ.ಎನ್ ಟಿಆರ್ 60 ಕೋಟಿ ರೂ. ನಿಂದ 100 ಕೋಟಿ ರೂ.ವರೆಗೆ ಸಂಭಾವನೆ ಪಡೆಯುತ್ತಾರೆ.
ರಾಮ್ ಚರಣ್: ಮೆಗಾಸ್ಟಾರ್ ಕುಟುಂಬದ ಯುವಕುಡಿ ರಾಮ್ ಚರಣ್ (Ram Charan)ಇದುವರೆಗೆ ಮಾಡಿದ್ದು ಕೆಲವೇ ಸಿನಿಮಾವಾಗಿದ್ದರೂ ಅವರು ಟಾಲಿವುಡ್ ಹಾಗೂ ಪ್ಯಾನ್ ಇಂಡಿಯಾದಲ್ಲಿ ಮಾಡಿರುವ ಇಂಪ್ಯಾಕ್ಟ್ ದೊಡ್ಡದ್ದು. ಟಾಲಿವುಡ್ ನಲ್ಲಿ ʼಮಗಧೀರʼ, ʼಆರ್ ಆರ್ ಆರ್ʼ ದೊಡ್ಡ ಪೌರಾಣಿಕ ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ರಾಮ್ ಚರಣ್ ಮುಂದೆ ʼಗೇಮ್ ಚೇಂಜರ್ʼ ʼಆರ್ ಸಿ16ʼ ನಂತಹ ಬಿಗ್ ಬಜೆಟ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವರದಿಗಳ ಪ್ರಕಾರ ಪ್ರತಿ ಸಿನಿಮಾಕ್ಕೆ ರಾಮ್ ಚರಣ್ 100ಕೋಟಿ ರೂ. ಸಂಭಾವನೆಯನ್ನು ಪಡೆಯುತ್ತಾರೆ.
ಪವನ್ ಕಲ್ಯಾಣ್: ಟಾಲಿವುಡ್ ಪವರ್ ಸ್ಟಾರ್ ಪವನ್ ಕಲ್ಯಾಣ್ (Pawan Kalyan) ಅವರ ಸಿನಿಮಾಗಳಿಗೆ ನೋಡುಗಗರ ದೊಡ್ಡವರ್ಗವೇ ಇದೆ. ಅವರ ಡೈಲಾಗ್ಸ್, ಖದರ್ ಗಳನ್ನು ನೋಡಿ ಮೆಚ್ಚದವರು ಕಡಿಮೆ. ಇತ್ತೀಚೆಗಿನ ದಿನಗಳಲ್ಲಿ ಅವರು ರಾಜಕೀಯ ಹಾಗೂ ಸಿನಿಮಾ ಎರಡರಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ಅವರ ಯಾವುದೇ ಸಿನಿಮಾ ಬಂದರೂ ಆರಾಮವಾಗಿ ಬಾಕ್ಸ್ ಆಫೀಸ್ ನಲ್ಲಿ ಕೋಟಿ ಕೋಟಿ ಗಳಿಕೆ ಕಾಣುತ್ತದೆ. ಇತ್ತೀಚೆಗೆ ಅವರ ಯಾವುದೇ ಸಿನಿಮಾಗಳು ಅಷ್ಟಾಗಿ ಸದ್ದು ಮಾಡಿಲ್ಲ. ಆದರೆ ಅವರ ಸ್ಟಾರ್ ಗಿರಿ ಒಂದಿಂಚೂ ಕಡಿಮೆಯಾಗಿಲ್ಲ. ವರದಿಗಳ ಪ್ರಕಾರ ಪವನ್ ಕಲ್ಯಾನ್ ದಿನವೊಂದಕ್ಕೆ 2 ಕೋಟಿ ರೂ. ಚಾರ್ಜ್ ಮಾಡುತ್ತಾರೆ.
ಮಹೇಶ್ ಬಾಬು: ಲವರ್ ಬಾಯ್, ಮಾಸ್ ಹೀರೋ ಎಲ್ಲಾ ಶೇಡ್ ಗಳಲ್ಲೂ ಮಿಂಚುವ ಪ್ರಿನ್ಸ್ ಮಹೇಶ್ ಬಾಬು (Mahesh Babu) ಟಾಲಿವುಡ್ ಚಿತ್ರರಂಗದ ದೊಡ್ಡ ಹೆಸರುಗಳಲ್ಲಿ ಒಂದು. ಇತ್ತೀಚೆಗಿನ ಜನರೇಷನ್ ಹಾಗೂ ಹಳೆಯ ಜನರೇಷನ್ ಗೂ ಅವರ ಅಭಿನಯ ಇಷ್ಟವಾಗುತ್ತದೆ.
ರಿಲೀಸ್ ಗೂ ಮುನ್ನ ಹವಾ ಕ್ರಿಯೇಟ್ ಮಾಡುವ ಅವರ ಚಿತ್ರಗಳು ರಿಲೀಸ್ ಬಳಿಕ ಬಾಕ್ಸ್ ಆಫೀಸ್ ಶೇಕ್ ಮಾಡುತ್ತದೆ. ಇತ್ತೀಚೆಗೆ ಬಂದ ಅವರ ʼಗುಂಟೂರು ಕಾರಮ್ʼ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಕೇಳಿ ಬಂದರೂ ಚಿತ್ರ 171 ಕೋಟಿ ರೂ.ಗಳಿಕೆ ಕಂಡಿತು. ವರದಿಗಳ ಪ್ರಕಾರ ಒಂದು ಸಿನಿಮಾಕ್ಕೆ 60-80 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ.
ಪ್ರಭಾಸ್: ಡಾರ್ಲಿಂಗ್ ಪ್ರಭಾಸ್ (Prabhas) ಇತ್ತೀಚೆಗಿನ ವರ್ಷಗಳಲ್ಲಿ ಪ್ಯಾನ್ ಇಂಡಿಯಾದಲ್ಲಿ ಅತೀ ಹೆಚ್ಚು ಸದ್ದು ಮಾಡಿದ ನಟನೆಂದರೆ ತಪ್ಪಾಗದು. ಪ್ಯಾನ್ ಇಂಡಿಯಾ ಮಾತ್ರವಲ್ಲದೆ ವರ್ಲ್ಡ್ ವೈಡ್ ʼಬಾಹುಬಲಿʼ( ಪಾರ್ಟ್ 1,2ʼ) ನೋಡಿ ಪ್ರಭಾಸ್ ಅವರ ಅಭಿನಯವನ್ನು ಶ್ಲಾಘಿಸಿತು. ಆದರೆ ಆದಾದ ಬಳಿಕ ಪ್ರಭಾಸ್ ʼಸಾಹೋʼ ,ʼರಾಧೆ ಶ್ಯಾಮ್ʼ ʼಆದಿಪುರುಷ್ʼ ಚಿತ್ರಗಳು ಅಷ್ಟಾಗಿ ಮಿಂಚಲಿಲ್ಲ. ಇದಾಗಿಯೂ ಪ್ರಭಾಸ್ ಅವರ ಪ್ಯಾನ್ ಇಂಡಿಯಾ ಎಂಬ ಸ್ಟಾರ್ ಪಟ್ಟಕ್ಕೆ ಏಟು ಬಿದ್ದಿಲ್ಲ. ಪ್ರಶಾಂತ್ ನೀಲ್ ಅವರ ʼಸಲಾರ್ʼ ಪ್ರಭಾಸ್ ಅವರನ್ನು ವರ್ಲ್ಡ್ ವೈಡ್ ಮಿಂಚುವಂತೆ ಮಾಡಿದೆ.
ಸದ್ಯ ಪ್ರಭಾಸ್ ‘ಕಲ್ಕಿ 2898 AD’ ಸಿನಿಮಾದ ಯಶಸ್ಸಿನ ಖುಷಿಯಲ್ಲಿದ್ದಾರೆ.
ಮುಂದೆ ಪ್ರಭಾಸ್ ʼಸಲಾರ್ -2ʼ , ʼರಾಜಾಸಾಬ್ʼ, ʼಸ್ಪಿರಿಟ್ʼ ನಂತಹ ಬಿಗ್ ಪ್ರಾಜೆಕ್ಟ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವರದಿಗಳ ಪ್ರಕಾರ ಪ್ರಭಾಸ್ ಒಂದು ಸಿನಿಮಾಕ್ಕೆ 120 ಕೋಟಿ ರೂ.ನಿಂದ 150 ಕೋಟಿ ರೂ.ವರೆಗೆ ಚಾರ್ಜ್ ಮಾಡುತ್ತಾರೆ.
ದಳಪತಿ ವಿಜಯ್: ದಳಪತಿ ವಿಜಯ್(Thalapathy vijay) ಸದ್ಯ ಕಾಲಿವುಡ್ ನಲ್ಲಿ ಟ್ರೆಂಡಿಂಗ್ ನಲ್ಲಿರುವ ನಟ. ಅವರ ವೃತ್ತಿ ಜೀವನ ಶಿಖರದ ಎತ್ತರದಲ್ಲಿದ್ದು, ಈ ವೇಳೆಯೇ ಅವರು ಸಿನಿಮಾ ಬಿಟ್ಟು ರಾಜಕೀಯದಲ್ಲಿ ತೊಡಗಿಸಿಕೊಳ್ಳುವುದಾಗಿ ಹೇಳಿರುವುದು ಅವರ ಅಪಾರ ಅಭಿಮಾನಿಗಳಿಗೆ ನಿರಾಶೆಯಾಗಿಸಿದೆ.
ರಾಜಕೀಯದಲ್ಲಿ ಸಂಪೂರ್ಣವಾಗಿ ತೊಡಗಿಕೊಳ್ಳುವ ಮುನ್ನ ಅವರು ಕೊನೆಯದಾಗಿ ಮತ್ತೊಂದು ಸಿನಿಮಾ ಮಾಡಲಿದ್ದಾರೆ. ಈ ಸಿನಿಮಾಕ್ಕೆ ಯಾರು ನಿರ್ದೇಶಕರೆನ್ನುವುದೇ ಕುತೂಹಲ ಹೆಚ್ಚಾಗಿಸಿದೆ. ವೆಂಕಟ್ ಪ್ರಭು ಅವರ ʼದಿ ಗ್ರೇಟಿಸ್ಟ್ ಆಫ್ ಆಲ್ ಟೈಮ್ʼ ಇದೇ ವರ್ಷದ ಸೆ.5 ರಂದು ರಿಲೀಸ್ ಆಗಲಿದೆ.
150 ಕೋಟಿಯಿಂದ – 250ಕೋಟಿ ರೂ.ವರೆಗೆ ವಿಜಯ್ ಒಂದು ಸಿನಿಮಾಕ್ಕೆ ಚಾರ್ಜ್ ಮಾಡುತ್ತಾರೆ.
ಅಲ್ಲು ಅರ್ಜುನ್: ಪ್ಯಾನ್ ಇಂಡಿಯಾ ಸ್ಟಾರ್ (Allu Arjun) ಅವರ ಅಲ್ಲು ಅರ್ಜುನ್ ʼಪುಷ್ಪʼದಲ್ಲಿನ ಅಭಿನಯವನ್ನು ಮೆಚ್ಚದವರು ಕಡಿಮೆ. ಅಲ್ಲು ಅರ್ಜುನ್ ಅವರಿಗೆ ಬಹುದೊಡ್ಡ ಫ್ಯಾನ್ ಬೇಸ್ ಯಿದೆ. ಅವರ ಯಾವುದೇ ಸಿನಿಮಾಗಳು ಬಂದರೆ ಅಲ್ಲಿ ನಿರ್ಮಾಪಕರಿಗೆ ಖಂಡಿತ ಲಾಸ್ ಆಗದೆ ಬ್ಯುಸಿನೆಸ್ ಮಾಡಿಕೊಡುತ್ತದೆ.
ʼಪುಷ್ಪ-2ʼ (Pushpa 2) ಅವರ ವೃತ್ತಿನ ಜೀವನದ ದೊಡ್ಡ ಪ್ರಾಜೆಕ್ಟ್ ಆ.15ರಂದು ರಿಲೀಸ್ ಆಗಬೇಕಿದ್ದ ಚಿತ್ರ ಮುಂದೂಡಿಕೆ ಆಗಿದೆ. ಮುಂದೂಡಿಕೆ ಆದಷ್ಟು ಚಿತ್ರದ ಬಗೆಗಿನ ಹೈಪ್ ಮತ್ತಷ್ಟು ಹೆಚ್ಚಾಗುತ್ತಿದೆ.
ಪ್ರತಿ ಸಿನಿಮಾಕ್ಕೆ ಅಲ್ಲು ಅರ್ಜುನ್ 150 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ.
ಕಮಲ್ ಹಾಸನ್: ಕಾಲಿವುಡ್ ಚಿತ್ರರಂಗದ ದಿಗ್ಗಜ ನಟರಲ್ಲಿ ಒಬ್ಬರಾಗಿರುವ ಕಮಲ್ ಹಾಸನ್ (Kamal Haasan) 69ರ ವಯಸ್ಸಿನಲ್ಲಿ ಕೋಟಿ ಕಮಾಯಿ ಮಾಡುವ ಚಿತ್ರಗಳನ್ನು ನೀಡುತ್ತಿದ್ದಾರೆ. ʼವಿಕ್ರಮ್ʼ ಮೂಲಕ ಬಾಕ್ಸ್ ಆಫೀಸ್‌ನಲ್ಲಿ ಕಮಾಲ್ ಮಾಡಿರುವ ಕಮಲ್ ಹಾಸನ್ ಈಗ ʼಇಂಡಿಯನ್ -2ʼನಿಂದಲೂ ಅದೇ ರೀತಿಯ ಮ್ಯಾಜಿಕ್ ಮಾಡುವ ನಿರೀಕ್ಷೆಯಲ್ಲಿದ್ದಾರೆ. ಆದರೆ ಚಿತ್ರಕ್ಕೆ ಅಷ್ಟಾಗಿ ಒಳ್ಳೆಯ ರೆಸ್ಪಾನ್ಸ್ ವ್ಯಕ್ತವಾಗುತ್ತಿಲ್ಲ.
ಒಂದು ಸಿನಿಮಾಕ್ಕೆ ಕಮಲ್ ಹಾಸನ್ 150 ಕೋಟಿ ರೂ.ವನ್ನು ಪಡೆಯುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಈ ಎಲೆಯಿಂದ ಮಾಡುವ ಖಾದ್ಯ ಆರೋಗ್ಯಕ್ಕೂ ಉತ್ತಮ… ಅದ್ಯಾವ ಎಲೆ ಅಂತೀರಾ ಇಲ್ಲಿದೆ ರೆಸಿಪಿ…
ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್ ಪಡೆದು ಸಿನಿಮಾದಲ್ಲಿ ಫೇಮ್ ಆದ ಕಲಾವಿದರು
ಖುಷಿ ಕೊಡಬಲ್ಲ ಕೆಲವು ವಿಧಾನ ತಿಳಿಸಿ…ಏನೂ ಇಲ್ಲದೆಯೂ ಸಂತೋಷವಾಗಿರಿ!
Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ
BGT: ವಿರಾಟ್ ಬಗ್ಗೆ ಆಸೀಸ್ ಜನರಿಗೆ ಯಾಕಿಷ್ಟು ಕುತೂಹಲ; ಇದು ಕಿಂಗ್ ಸಾಮ್ರಾಜ್ಯದ ಕಥೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.