ಸೋಲಾರ್ ದೀಪದ ಕೆಳಗೆ ಕೃಷಿರಂಗ
Team Udayavani, Jun 8, 2022, 11:35 AM IST
ನಮಸ್ಕಾರ ನೀವು ಕೇಳುತ್ತಿದ್ದೀರಿ ಆಕಾಶವಾಣಿ ಹಾಸನ… ಹೀಗೆನ್ನುತ್ತಲೇ ಚಿರಪರಿಚಿತವಾದ ಸಮುದಾಯ ರೇಡಿಯೋವೊಂದು ಇಂದಿಗೂ ಹಳೆ ಕಾಲದ ಅರಳಿಕಟ್ಟೆಯಲ್ಲಿ ಕೂತು ರೇಡಿಯೋ ಕೇಳುವ ಸಂಪ್ರದಾಯವನ್ನು ಬೆಂಬಲಿಸಿದೆ…
ರೇಡಿಯೋಗಳಲ್ಲಿ ಎಫ್ ಎಂ ಬಾನುಲಿಗಳ ಪ್ರಬಲ ಪೈಪೋಟಿ ಒಂದೆಡೆಯಾದರೆ, ಸಾಕಷ್ಟು ರೇಡಿಯೋ ಕೇಳುಗರು ಟಿವಿ, ಮೊಬೈಲ್ ಬಳಕೆಗೆ ಹೆಚ್ಚಿನ ಆದ್ಯತೆ ನೀಡುತ್ತಾ ಬಂದದ್ದು ಸಹ ಇನ್ನೊಂದು ಸಮಸ್ಯೆ. ಹೀಗಿರುವಾಗ ಹೊಸ ಆವಿಷ್ಕಾರ ವಿನೂತನ ಪ್ರಯೋಗಗಳು ಮಾಡಬೇಕಾದ ಅನಿವಾರ್ಯತೆ ಸಹಜವಾಗಿ ಬಂದೊದಗುತ್ತದೆ. ಆ ಪ್ರಯೋಗಾರ್ಥವೇ ಅರಸೀಕೆರೆ ಸಮೀಪ ಸಮುದಾಯಾಧಾರಿತ ರೇಡಿಯೋವನ್ನು ಸೌರವಿದ್ಯುತ್ ಚಾಲಿತ ನಿರ್ಮಿಸಲಾಗಿದ್ದು, ಜನರಿಗೆ ಮಾಹಿತಿ ನೀಡುವುದರ ಜೊತೆಗೆ ದಾರಿ ದೀಪದಂತೆಯೂ ಕಾರ್ಯನಿರ್ವಹಿಸುತ್ತಿರುವುದು ವಿಶೇಷ.
ಒಂದು ಕಾಲದಲ್ಲಿ ಹಳ್ಳಿಯಿಂದ ದಿಲ್ಲಿಯವರೆಗೂ ಚಿರಪರಿಚಿತವಾದ ರೇಡಿಯೋ ಮಾಧ್ಯಮಕ್ಕೆ ಅಭಿವೃದ್ಧಿ ಮಾಧ್ಯಮಗಳ ಸವಾಲು ಕಾಡತೊಡಗಿ ಕಾಲಕಳೆದಂತೆ ಕೇಳುಗರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದ್ದು, ಇದನ್ನು ಸರಿ ಪಡಿಸುವ ನಿಟ್ಟಿನಲ್ಲಿ ಸಾಕಷ್ಟು ಹೊಸ ಹೊಸ ಕಾರ್ಯಕ್ರಮ ಪ್ರಸ್ತುತಪಡಿಸುವಿಕೆಯೂ ವಿವಿಧ ರೇಡಿಯೋ ಬಾನುಲಿಗಳಿಂದ ಬರುತ್ತಲೇ ಇದ್ದು, ಈಗ ಹಾಸನದ ಆಕಾಶವಾಣಿ ರೇಡಿಯೋ ಸಹ ಇದರಿಂದ ಹೊರತಾಗಿಲ್ಲ.
ಹಾಸನ ಜಿಲ್ಲೆಯ ಅರಸೀಕೆರೆ ಸಮೀಪದ ಸಿಂಗಟಗೆರೆಯಲ್ಲಿ ನಬಾರ್ಡ್ ಮತ್ತು ಸೆಲ್ಕೋ ಸಂಸ್ಥೆಯ ಸಹಯೋಗದಲ್ಲಿ ಸಿಎಸ್ಆರ್(ಸಾಮಾಜಿಕ ಜವಬ್ದಾರಿಯ) ಅಡಿಯಲ್ಲಿ ಸಮುದಾಯ ರೇಡಿಯೋ ಸ್ಥಾಪಿಸಲಾಗಿದ್ದು, ಜನರಿಗೆ ಅಂತಾರಾಷ್ಟ್ರೀಯ ಮಟ್ಟದ ಮಾಹಿತಿ ವಿನಿಯೋಗಿಸಲು ನೆರವಾಗಿದೆ. ಇದರಲ್ಲಿ ರಿಮೋಟ್ ಚಾಲಿತ ತಂತ್ರಜ್ಞಾನದ ರೇಡಿಯೋ ಪ್ರಸಾರ ಮತ್ತು ಸೋಲಾರ್ ದೀಪವನ್ನು ಸಹ ಅಳವಡಿಸಲಾಗಿದ್ದು ಸುಮಾರು 35 ಸಾವಿರ ರೂ. ವೆಚ್ಚವಾಗಿದೆ. ಜನರಿಗೆ ಇದು ಉಚಿತ ಸೇವೆ ಒದಗಿಸುತ್ತಿದೆ. ಹಾಸನದಲ್ಲಿಯೇ ಸುಮಾರು 15 ರೇಡಿಯೋ ಕೇಂದ್ರಗಳಿದ್ದು ಸಾಮಾನ್ಯ ಹಳ್ಳಿಗೂ ಅಂತಾರಾಷ್ಟ್ರೀಯ ಮಟ್ಟದ ಸುದ್ದಿ, ಉಪಯುಕ್ತ ಮಾಹಿತಿಯನ್ನು ನೀಡುತ್ತಾ ಬಂದಿರುವುದನ್ನು ಕಾಣಬಹುದು.
ಯಾವೆಲ್ಲ ಕಾರ್ಯಕ್ರಮ?
ಹಳ್ಳಿಗಳಿಗೆ ಬಹಳ ಉಪಯುಕ್ತವಾಗುವ ಕೃಷಿ ಕುರಿತಾದ ಮಾಹಿತಿಗೆ ಕೃಷಿರಂಗ ಎಂಬ ಕಾರ್ಯಕ್ರಮ ಸಂಜೆ 6 ರಿಂದ 7 ಪ್ರಸಾರವಾಗುತ್ತಿದ್ದು, ಮೊದಮೊದಲು ಆಕಾಶವಾಣಿ ಸಿಬಂದಿ ರೈತರನ್ನು ಆಕಾಶವಾಣಿ ಹಾಸನ ಕೇಂದ್ರಕ್ಕೆ ಕರೆಸಿ ಮಾಹಿತಿ ನೀಡುತ್ತಿದ್ದು, ಕಾಲಕ್ರಮೇಣ ಜನರನ್ನು ಮತ್ತಷ್ಟು ಸೆಳೆಯಲೆಂದು ರೈತರಿದ್ದಲ್ಲಿಗೆ ತೆರಳಿ ಅವರ ಕೆಲಸದ ನಡುವೆ ಕೃಷಿ ಮಾಹಿತಿ ಸಂಗ್ರಹಿಸುತ್ತಿದ್ದರು. ಅನಂತರ ರೈತರೇ ಮುಖ್ಯ ರೇಡಿಯೋ ವರದಿಗಾರರೆಂಬಂತೆ ಕಾರ್ಯಕ್ರಮದ ಬಹುಭಾಗ ಅವರೇ ನಡೆಸಿಕೊಡುವಂತೆ ಮಾಡುತ್ತಾರೆ ಇದು ಬಹುತೇಕ ರೈತರ ಬಳಗಕ್ಕೆ ಮಾಹಿತಿ ಇನ್ನಷ್ಟು ಅರ್ಥವಾಯಿತು ಮಾತ್ರವಲ್ಲದೇ ಸಾಮಾಜಿಕ ರಂಗದಲ್ಲೂ ಅವರನ್ನು ಗುರುತಿಸುವ ಕಾರ್ಯವಾಯಿತು.
ಕೃಷಿ ಮಾತ್ರವಲ್ಲದೆ ಹೈನುಗಾರಿಕೆ, ಕರಕುಶಲ ಕಲೆ, ರಾಜ್ಯಸುದ್ದಿ, ಯಕ್ಷಗಾನ ಸೇರಿದಂತೆ ಹಳೆ ಮತ್ತು ಈಗಿನ ಕಾಲದ ಸಿನೆಮಾ ಹಾಡನ್ನು ಸಹ ಪ್ರಸಾರ ಮಾಡಲಾಗುತ್ತಿದ್ದು ಮನೋರಂಜನೆಯೊಂದಿಗೆ ಮಾಹಿತಿ ನೀಡುವ ನೆಲೆಯಲ್ಲಿ ಸೌರವಿದ್ಯುತ್ ಆಧಾರಿತ ರೇಡಿಯೋ ತಂತ್ರಜ್ಞಾನ ಅಳವಡಿಸಿದ ಸೆಲ್ಕೋ ಸೋಲಾರ್ ಸಂಸ್ಥೆಯ ಕಾರ್ಯ ಮನಮೆಚ್ಚುವಂತದ್ದಾಗಿದೆ.
– ರಾಧಿಕಾ, ಕುಂದಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Border Gavaskar Trophy: ಕಾಂಗರೂ ಚಾಲೆಂಜ್ ಗೆ ಅಣಿಯಾದ ಭಾರತ; ಹೇಗಿದೆ ತಂಡದ ಬಲಾಬಲ
Tulsi Health Benefits: ತುಳಸಿ ಗಿಡದ ಔಷಧೀಯ ಗುಣಗಳ ಮಾಹಿತಿ ಇಲ್ಲಿವೆ…
Naxal: ನ.17 ಈದು ಎನ್‌ಕೌಂಟರ್- ನ.18 ಕಬ್ಬಿನಾಲೆ ಶೂಟೌಟ್: 21 ವರ್ಷದ ಹಿಂದೆ ನಡೆದಿದ್ದೇನು?
ಈ ಎಲೆಯಿಂದ ಮಾಡುವ ಖಾದ್ಯ ಆರೋಗ್ಯಕ್ಕೂ ಉತ್ತಮ… ಅದ್ಯಾವ ಎಲೆ ಅಂತೀರಾ ಇಲ್ಲಿದೆ ರೆಸಿಪಿ…
ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್ ಪಡೆದು ಸಿನಿಮಾದಲ್ಲಿ ಫೇಮ್ ಆದ ಕಲಾವಿದರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.