ರಷ್ಯಾ-ಉಕ್ರೇನ್ ನಡುವೆ ಯುದ್ಧಕ್ಕೆ ಕ್ಷಣಗಣನೆ? ಕೂಡಲೇ ಉಕ್ರೇನ್ ಬಿಟ್ಟು ಹೊರಡಿ…ಭಾರತ ಕಳವಳ
ಉಕ್ರೇನ್ ಮೇಲಾಗುವ ದುರಂತವನ್ನು ತಪ್ಪಿಸಬೇಕೆಂದು ಬ್ರಿಟನ್ ಮತ್ತು ಅಮೆರಿಕ ಅಧ್ಯಕ್ಷರ ಮನವಿ
Team Udayavani, Feb 15, 2022, 1:06 PM IST
ಮಾಸ್ಕೋ: ಈ ವಾರದೊಳಗೆ ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಲಿದೆ ಎಂದು ಉಕ್ರೇನ್ ಅಧ್ಯಕ್ಷ ವ್ಲಾದಿಮಿರ್ ಝೆಲೆನ್ ಸ್ಕಿ ಆತಂಕ ವ್ಯಕ್ತಪಡಿಸಿದ ಬೆನ್ನಲ್ಲೇ ಉಕ್ರೇನ್ ತೊರೆಯುವಂತೆ ಭಾರತ ಮಂಗಳವಾರ (ಫೆ.15) ಮಾರ್ಗಸೂಚಿಯನ್ನು ಹೊರಡಿಸಿದೆ.
ಇದನ್ನೂ ಓದಿ:ಭಕ್ತಿ ಮಾತ್ರವಲ್ಲ ಎಚ್ಚರಿಕೆಯೂ ಅಗತ್ಯ; ದೇವಸ್ಥಾನದಲ್ಲಿ ಜೋರಾಗಿ ಘಂಟೆ ಬಾರಿಸಿದರೆ ಕೇಸ್
ಉಕ್ರೇನ್ ನಲ್ಲಿರುವ ಮುಖ್ಯವಾಗಿ ವಿದ್ಯಾರ್ಥಿಗಳು ವಾಸ್ತವ್ಯ ಮುಂದುವರಿಸುವುದು ಸೂಕ್ತವಲ್ಲ, ಕೂಡಲೇ ತಾತ್ಕಾಲಿಕವಾಗಿ ಉಕ್ರೇನ್ ತೊರೆಯುವಂತೆ ಭಾರತ ತನ್ನ ಪ್ರಜೆಗಳಲ್ಲಿ ಮನವಿ ಮಾಡಿಕೊಂಡಿರುವುದಾಗಿ ವರದಿ ತಿಳಿಸಿದೆ.
ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧಭೀತಿ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಅನಗತ್ಯವಾಗಿ ಉಕ್ರೇನ್ ಗೆ ಭೇಟಿ ನೀಡುವುದಾಗಲಿ ಅಥವಾ ಉಕ್ರೇನ್ ನಲ್ಲಿಯೇ ವಾಸ್ತವ್ಯ ಮುಂದುವರಿಸುವುದು ಔಚಿತ್ಯವಲ್ಲ ಎಂದು ಭಾರತ ವಿವರಿಸಿದೆ.
ರಷ್ಯಾ ತನ್ನ ಗಡಿಭಾಗದಲ್ಲಿ ಸೇನೆ ಹಾಗೂ ಅತ್ಯಾಧುನಿಕ ಯುದ್ಧ ಟ್ಯಾಂಕ್ ಗಳನ್ನು ಜಮಾವಣೆಗೊಳಿಸುತ್ತಿರುವುದು ಯುದ್ಧಭೀತಿಯನ್ನು ಹೆಚ್ಚಿಸಿದೆ. ಅಲ್ಲದೇ ರಷ್ಯಾ ಮಾತುಕತೆ ಮೂಲಕ ತೀವ್ರ ಬಿಕ್ಕಟ್ಟನ್ನು ಶಮನಗೊಳಿಸುವ ಮೂಲಕ ಉಕ್ರೇನ್ ಮೇಲಾಗುವ ದುರಂತವನ್ನು ತಪ್ಪಿಸಬೇಕೆಂದು ಬ್ರಿಟನ್ ಮತ್ತು ಅಮೆರಿಕ ಅಧ್ಯಕ್ಷರು ಮನವಿ ಮಾಡಿಕೊಂಡಿರುವುದಾಗಿ ವರದಿ ತಿಳಿಸಿದೆ.
ಸೋವಿಯತ್ ಒಕ್ಕೂಟದ ವಿಘಟನೆಯ ಬಳಿಕ 1990ರ ದಶಕದಿಂದಲೂ ಉಕ್ರೇನ್ ನ್ಯಾಟೋ(NATO) ಸದಸ್ಯ ರಾಷ್ಟ್ರವಾಗಿದೆ. ಈ ಎರಡರ ಮೇಲೂ ಇರುವ ತನ್ನ ದೀರ್ಘಕಾಲದ ದ್ವೇಷವನ್ನು ಈ ಬಾರಿ ತೀರಿಸಿಕೊಳ್ಳಲು ರಷ್ಯಾ ಬಯಸುತ್ತಿದೆ ಎಂದು ವಿಶ್ಲೇಷಿಸಲಾಗಿದೆ. ಯುಎಸ್ ಎಸ್ ಆರ್ ಪತನದ ಬಳಿಕ, ಪೂರ್ವ ಯುರೋಪಿನ ಅನೇಕ ದೇಶಗಳು ಸ್ವತಂತ್ರವಾದವು. ರಷ್ಯಾ ಇದನ್ನು ಪ್ರಮುಖ ಬೆದರಿಕೆಯಾಗಿ ನೋಡುತ್ತದೆ. ಏಕೆಂದರೆ ತನ್ನ ದೀರ್ಘ ಶ್ರೇಣಿಯ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸುವ ನೆಲೆಯಾಗಿ ಉಕ್ರೇನ್ ಅನ್ನು ಬಳಸಿಕೊಳ್ಳಲು NಅಖO ಗೆ ಅವಕಾಶ ಲಭಿಸುತ್ತದೆ. ರಷ್ಯಾದೊಳಕ್ಕೆ ನುಸುಳಲು ಉಕ್ರೇನ್ ಕಳ್ಳದಾರಿಯೂ ಆಗಿದೆ.
ಹೀಗಾಗಿ ರಷ್ಯಾ ಉಕ್ರೇನ್ ಮೇಲೆ ದಾಳಿ ನಡೆಸಲು ಸಜ್ಜಾಗಿದ್ದು, ಒಂದು ವೇಳೆ ಯುದ್ಧ ಆರಂಭವಾದರೆ ಭಾರತಕ್ಕೂ ಕಳವಳ, ಯಾಕೆಂದರೆ ರಷ್ಯಾದ ಜತೆ ಭಾರತ ಉತ್ತಮ ಸಂಬಂಧ ಹೊಂದಿದ್ದು, ಯುದ್ಧ ಶಸ್ತ್ರಾಸ್ತ್ರಗಳ ಖರೀದಿಗೆ ಒಪ್ಪಂದ ಮಾಡಿಕೊಂಡಿದೆ. ರಾಜತಾಂತ್ರಿಕ ಬಿಕ್ಕಟ್ಟು ಎದುರಿಸುವ ಬಗ್ಗೆ ಭಾರತಕ್ಕೆ ಕಳವಳ ಮೂಡಿಸಿದೆ ಎಂದು ವರದಿ ವಿವರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LignoSat: ಮರದಿಂದ ತಯಾರಿಸಿದ ವಿಶ್ವದ ಮೊದಲ ಉಪಗ್ರಹ ಉಡಾವಣೆ!
US Parliament Election: ಭಾರತ ಮೂಲದ 9 ಅಭ್ಯರ್ಥಿಗಳ ಅದೃಷ್ಟ ಪರೀಕ್ಷೆ
US Election 2024: ಟ್ರಂಪ್,ಕಮಲಾ ಮಧ್ಯೆ ತೀವ್ರ ಪೈಪೋಟಿ
Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ ಪ್ರತಿಭಟನೆ
US Election 2024, Kamala Vs Trump: ಅಮೆರಿಕ ಅಧ್ಯಕ್ಷರ ಚುನಾವಣೆ ಹೇಗೆ? ಏನು? ಎತ್ತ?
MUST WATCH
ಹೊಸ ಸೇರ್ಪಡೆ
Assembly Election: ಮಹಾರಾಷ್ಟ್ರ ಗೆಲ್ಲಲು 10 ಗ್ಯಾರಂಟಿಗಳ ಕೊಟ್ಟ ʼಮಹಾಯುತಿʼ!
By Election: ಮುಖ್ಯಮಂತ್ರಿ ಗರ್ವದ ಸೊಕ್ಕು ಮುರಿಯಬೇಕು: ಎಚ್.ಡಿ.ದೇವೇಗೌಡ ಗುಡುಗು
Super App: ರೈಲು ಬುಕಿಂಗ್, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್’: ಮುಂದಿನ ತಿಂಗಳು ಬಿಡುಗಡೆ
Kambala: ಪೆಟಾ ಪಿಐಎಲ್; ವಿಚಾರಣೆ ನ.12ಕ್ಕೆ ಮುಂದೂಡಿದ ಹೈಕೋರ್ಟ್
MUDA Case: ಕೇವಲ 14 ಸೈಟ್‌ಗಾಗಿ ನಾನು ರಾಜಕಾರಣ ಮಾಡಬೇಕಾ?: ಸಿಎಂ ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.