ಅಂದು ಹುಟ್ಟಿಕೊಂಡ ಅಪ್ಪಟ ದೇಶಿ ಉತ್ಪನ್ನ ನಟರಾಜ ಪೆನ್ಸಿಲ್ ಮರೆಯಲು ಸಾಧ್ಯವೇ?
ಅದು ಮರವನ್ನು ಉಪಯೋಗಿಸಿ ಪೆನ್ಸಿಲ್ ತಯಾರಿಬೇಕಾಗಿದ್ದರಿಂದ ಖಾಸಗಿ ಪ್ರದೇಶದಲ್ಲಿ ಮರವನ್ನು ಬೆಳೆಸುತ್ತಿದ್ದರು.
ನಾಗೇಂದ್ರ ತ್ರಾಸಿ, Dec 10, 2020, 5:40 PM IST
ಇಂದು ಬಹುತೇಕ ಎಲ್ಲವೂ ಡಿಜಿಟಲ್ ಮಯ ಆಗತೊಡಗಿದೆ. ಹೀಗಾಗಿ ಪೆನ್ನು, ಪೆನ್ಸಿಲ್ ನಲ್ಲಿ ಬರೆಯುವ ಅವಶ್ಯಕತೆ ಕಡಿಮೆ, ಈಗ ಎಲ್ಲವೂ ಕಂಪ್ಯೂಟರ್ ಕೀಲಿ ಮಣೆ ಮೂಲಕ ಅಥವಾ ಮೊಬೈಲ್ ನಲ್ಲಿಯೇ ಎಲ್ಲವನ್ನೂ ದಾಖಲಿಸಿಕೊಂಡುಬಿಡಬಹುದು. ಏನೇ ಬದಲಾವಣೆ ಆಗಲಿ ನಮಗೆ ಕೆಲವೊಂದು ವಿಷಯ, ವಸ್ತುಗಳನ್ನು ಮರೆಯಲು ಸಾಧ್ಯವೇ? ಅದರಲ್ಲಿಯೂ ಕಪ್ಪು ಹಾಗೂ ಕೆಂಪು ಬಣ್ಣದ ನಟರಾಜ್ ಪೆನ್ಸಿಲ್ ಹೇಗೆ ಮರೆತು ಹೋಗುತ್ತದೆ. ಅದು ಹಿಂದಿನ ಹಾಗೂ ಇಂದಿನ ಯುವ ಪೀಳಿಗೆ ಜತೆಗೆ ಹಾಸು ಹೊಕ್ಕಾಗಿಬಿಟ್ಟಿದೆ!
ಬಾಲ್ಯದ ನೆನಪು ಬಂದಾಗ ನಮಗೆ ತಕ್ಷಣವೇ ಕಣ್ಮುಂದೆ ಬರುವುದು ನಟರಾಜ ಪೆನ್ಸಿಲ್…ಅದಕ್ಕಾಗಿಯೇ ಈಗಲೂ “ನಟರಾಜ ಫಿರ್ ಸೆ ಚಾಂಪಿಯನ್” ಎಂಬ ಜಾಹೀರಾತು ನೋಡಿದ ನೆನಪಿರಬಹುದು. ದುಂಡು, ದುಂಡು ಆಕ್ಷರ ಬರೆಯುವ ಆಗುವ ಸಂತಸ, ಶಾರ್ಪರ್ ನಲ್ಲಿ ಪೆನ್ಸಿಲ್ ನ ಮೊನೆಯನ್ನು ಹರಿತಗೊಳಿಸಿ ಚೂಪಾಗಿ ಮಾಡುವುದು ಇವೆಲ್ಲವೂ ಇನ್ನೂ ಸ್ಮೃತಿಪಟಲದಿಂದ ಮಾಸದ ನೆನಪುಗಳಾಗಿ ಉಳಿದುಬಿಟ್ಟಿದೆ ಎಂಬುದು ಅತಿಶಯೋಕ್ತಿಯಲ್ಲ.
ಅಂದು ಎಲ್ಲರ ಬಳಿಯೂ ನಟರಾಜ ಪೆನ್ಸಿಲ್ ಇರುತ್ತಿತ್ತು. ನಟರಾಜ 621 ಎಚ್ ಬಿ ಪೆನ್ಸಿಲ್ ಅತೀ ಹೆಚ್ಚು ಜನಪ್ರಿಯವಾಗಿತ್ತು..ಅಷ್ಟೇ ಅಲ್ಲ ಅದು ಇಂದಿಗೂ ತನ್ನ ಬೇಡಿಕೆಯನ್ನು ಉಳಿಸಿಕೊಂಡಿದೆ. ಇಂದು ಇಡೀ ಜಗತ್ತೇ ಕೋವಿಡ್ 19 ವೈರಸ್ ಗೆ ತತ್ತರಿಸಿ ಹೋಗಿದೆ. ಇಡೀ ದೇಶವೇ ಲಾಕ್ ಡೌನ್ ಆದ ಸನ್ನಿವೇಶಕ್ಕೆ ನಾವು
ಸಾಕ್ಷಿಯಾಗಿದ್ದೇವೆ. ಅಲ್ಲದೇ ವಿದೇಶಿ ವಸ್ತುಗಳ ಬಳಕೆ ಕಡಿಮೆ ಮಾಡಿ, ಸ್ವದೇಶಿ ವಸ್ತುವಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಸ್ವಾವಲಂಬಿಯಾಗುವ ಮೂಲಕ ದೇಶಿ ಉತ್ಪನ್ನದತ್ತ ದೃಷ್ಟಿ ಹಾಯಿಸಬೇಕು ಎಂದು ಪ್ರಧಾನಿ ಮೋದಿ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದ್ದ ವೇಳೆ ಉಲ್ಲೇಖಿಸಿದ್ದರು. ಅರೇ ನಟರಾಜ ಪೆನ್ಸಿಲ್ ಗೂ, ಕೋವಿಡ್ ಗೂ, ಪ್ರಧಾನಿ ಮಾತಿಗೆ ಏನು ಸಂಬಂಧ ಅಂತ ಹುಬ್ಬೇರಿಸಬೇಡಿ. ಯಾಕೆಂದರೆ ವಿದೇಶಿ ಪೆನ್ಸಿಲ್, ವಿದೇಶಿ ವಸ್ತುಗಳ ಅಬ್ಬರದ ನಡುವೆ ನಲುಗುತ್ತಿದ್ದ ವೇಳೆಯೇ ದೇಶಿಯವಾಗಿ ರೂಪುಗೊಂಡಿದ್ದೇ ಹಿಂದೂಸ್ತಾನ್ ಪೆನ್ಸಿಲ್ಸ್ ಪ್ರೈವೇಟ್ ಲಿಮಿಟೆಡ್!
ಅಂದು ಹುಟ್ಟಿಕೊಂಡ ಅಪ್ಪಟ ದೇಶಿ ಉತ್ಪನ್ನ ನಟರಾಜ ಪೆನ್ಸಿಲ್!
ಸ್ವಾತಂತ್ರ್ಯದ ಮೊದಲು ಭಾರತದಲ್ಲಿ ಪೆನ್ಸಿಲ್ ಉತ್ಪಾದಿಸಲಾಗುತ್ತಿತ್ತು. ಆದರೆ ಈ ಕಂಪನಿಗಳು ಆಮದಾಗುತ್ತಿದ್ದ ಪೆನ್ಸಿಲ್ ನಿಂದಾಗಿ ಮಾರುಕಟ್ಟೆಯಲ್ಲಿ ಭಾರೀ ಸ್ಪರ್ಧೆಯಿಂದ ಆರ್ಥಿಕವಾಗಿ ನಷ್ಟ ಅನುಭವಿಸಿದ್ದವು. ಎರಡನೇ ಜಾಗತಿಕ (1930-40) ಯುದ್ಧಕ್ಕಿಂತ ಮೊದಲು ಬ್ರಿಟನ್, ಜರ್ಮನಿ ಮತ್ತು ಜಪಾನ್ ನಿಂದ ಭಾರತಕ್ಕೆ ಬರೋಬ್ಬರಿ 6.5ಲಕ್ಷ ಪೆನ್ಸಿಲ್ ಗಳನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು. ಬಳಿಕ ಯುದ್ಧದ ಸಂದರ್ಭದಲ್ಲಿ ಈ ಸಂಖ್ಯೆ ಏರುಪೇರಾಗಿತ್ತು. ಕೊನೆಗೆ 1944-45ರ ಹೊತ್ತಿಗೆ ಆಮದಾಗುತ್ತಿದ್ದ ಪೆನ್ಸಿಲ್ 2.3ಲಕ್ಷಕ್ಕೆ ಇಳಿದಿತ್ತು. ಇದು ದೇಶೀಯ ಮಾರುಕಟ್ಟೆ ಬೆಳವಣಿಗೆಗೆ ಸಿಕ್ಕ ಟರ್ನಿಂಗ್ ಪಾಯಿಂಟ್ ಎಂಬುದು ಮನಗಾಣಬೇಕು.
ಅಂದು ವಿದೇಶದಿಂದ ಪೆನ್ಸಿಲ್ ಆಮದು ಭಾರೀ ಪ್ರಮಾಣದಲ್ಲಿ ಇಳಿಕೆಯಾದ ನಂತರ ಕೋಲ್ಕತಾ, ಬಾಂಬೆ ಮತ್ತು ಮದ್ರಾಸ್ ಗಳಲ್ಲಿ ಹಲವಾರು ಪೆನ್ಸಿಲ್ ಉತ್ಪಾದಕರು ಹುಟ್ಟಿಕೊಂಡುಬಿಟ್ಟಿದ್ದರು. ಈ ಸಂದರ್ಭದಲ್ಲಿ ಪೆನ್ಸಿಲ್ ಉತ್ಪಾದಕರು ಭಾರತ ಸರ್ಕಾರ ತಮ್ಮ ದೇಶಿ ಉತ್ಪನ್ನ ರಕ್ಷಿಸುವಂತೆ ಮನವಿ ಮಾಡಿಕೊಂಡಿದ್ದರು. ಆಮದು ಕಡಿಮೆಯಾಗಿದ್ದು, ದೇಶಿ ಇಂಡಸ್ಟ್ರಿ ನಿಧಾನಕ್ಕೆ ಆರಂಭಗೊಂಡರೆ ಚೇತರಿಕೆಯಾಗಲಿದೆ ಎಂದು ಮನವರಿಕೆ ಮಾಡಿದ್ದರು. ಆದರೆ ಈ ಕಂಪನಿಗಳು ತಯಾರಿಸಿದ್ದ ಪೆನ್ಸಿಲ್ ಉತ್ಪನ್ನದ ವಿರುದ್ಧ ಸಾರ್ವಜನಿಕರಿಂದ ದೂರುಗಳು ಬರಲಾರಂಭಿಸಿದ್ದವು. ಅದೇನೆಂದರೆ ವಿದೇಶಿ ಪೆನ್ಸಿಲ್ ಗುಣಮಟ್ಟಕ್ಕಿಂತ ಕಳಪೆಯಷ್ಟೇ ಅಲ್ಲ, ಬೆಲೆಯೂ ತುಂಬಾ ಹೆಚ್ಚು ಎಂಬುದಾಗಿತ್ತು.
ಈ ಎಲ್ಲಾ ಜಟಾಪಟಿ ಬಳಿಕ ಆಹ್ಲಾದಕರ ಕೆಂಪು ಮತ್ತು ಕಪ್ಪು ಪಟ್ಟಿ ಇರುವ ಈ ಉತ್ಪನ್ನ ತಯಾರಿಸಿದ್ದು ಹಿಂದೂಸ್ತಾನ್ ಪೆನ್ಸಿಲ್ಸ್ ಪ್ರೈ.ಲಿಮಿಟೆಡ್. ಈ ಕಂಪನಿ 1958ರಲ್ಲಿ ವಾಣಿಜ್ಯ ನಗರಿ ಬಾಂಬೆಯಲ್ಲಿ ಬಿ.ಜೆ.ಸಂಘ್ವಿ, ರಾಮ್ ನಾಥ್ ಮೆಹ್ರಾ ಹಾಗೂ ಮನ್ಸೂಕಾನಿ ಸೇರಿದಂತೆ ಮೂವರು ಜತೆಗೂಡಿ ಆರಂಭಿಸಿದ್ದರು. ಜರ್ಮನಿಯಲ್ಲಿನ ಪೆನ್ಸಿಲ್ ವಹಿವಾಟಿನ ಗುಟ್ಟನ್ನು ತಿಳಿದಿದ್ದರಿಂದ ವ್ಯವಹಾರಕ್ಕೆ ಇಳಿದಿದ್ದರು, ಸಂಘ್ವಿ ಅವರು ಫ್ಯಾಕ್ಟರಿಯನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡಿದ್ದರು.
ಹಿಂದೂಸ್ತಾನ್ ಪೆನ್ಸಿಲ್ ಸ್ಥಳೀಯವಾಗಿಯೇ ತಯಾರಾಗುತ್ತಿತ್ತು. ಅದು ಮರವನ್ನು ಉಪಯೋಗಿಸಿ ಪೆನ್ಸಿಲ್ ತಯಾರಿಬೇಕಾಗಿದ್ದರಿಂದ ಖಾಸಗಿ ಪ್ರದೇಶದಲ್ಲಿ ಮರವನ್ನು ಬೆಳೆಸುತ್ತಿದ್ದರು. ಪರಿಸರ ಸಮತೋಲನ ಸರಿದೂಗಿಸಿಕೊಂಡು ಹೋಗುತ್ತಿದ್ದ ಹಿಂದೂಸ್ತಾನ್ ಕಂಪನಿ ಐದು ಪ್ರದೇಶಗಳಲ್ಲಿ ಹತ್ತು ಪ್ಲ್ಯಾಂಟ್ ಹೊಂದಿತ್ತು. ಸುಮಾರು 50 ದೇಶಗಳಿಗೆ ಪೆನ್ಸಿಲ್ ಅನ್ನು ರಫ್ತು ಮಾಡುತ್ತಿತ್ತು!
ಹಿಂದೂಸ್ತಾನ್ ಕಂಪನಿ ನಟರಾಜ ಮತ್ತು ಅಪ್ಸರಾ ಬ್ರ್ಯಾಂಡ್ ನ ಪೆನ್ಸಿಲ್ ಅನ್ನು ಮಾರುಕಟ್ಟೆಗೆ ಪರಿಚಯಿಸಿತ್ತು. ಇದರಲ್ಲಿ ಉತ್ತಮ ದರ್ಜೆಯ ಗ್ರಾಫೈಟ್ ಅನ್ನು ಬಳಸಲಾಗುತ್ತಿತ್ತು. ಇದರಿಂದಾಗಿಯೇ ಭಾರತದಲ್ಲಿ ಹಿಂದೂಸ್ತಾನ್ ಕಂಪನಿ ವಿಶ್ವಾಸ ಗಳಿಸಿತ್ತು. ಪೆನ್ಸಿಲ್ ಅನ್ನು ದೊಡ್ಡ ಪ್ರಮಾಣದಲ್ಲಿಯೇ ಬಳಕೆ ಮಾಡಲಾಗುತ್ತಿದೆ ಅದು ವಿದ್ಯಾರ್ಥಿಗಳು ಮಾತ್ರವಲ್ಲ, ವಾಸ್ತುಶಿಲ್ಪಿಗಳು, ಕಾರ್ಪೆಂಟರ್ಸ್, ಚಿತ್ರಕಲಾವಿದರು ಮತ್ತು ಕಚೇರಿಗಳಲ್ಲಿ ಉಪಯೋಗಿಸುತ್ತಾರೆ…
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ : ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?
OneNation, OneElection Bill: 31 JPC ಸದಸ್ಯರ ಕಾರ್ಯವ್ಯಾಪ್ತಿ ಏನು?ಸಲಹೆ ನೀಡುವವರು ಯಾರು
Winter: ಚಳಿಗಾಲದಲ್ಲಿ ಆರೋಗ್ಯಕರವಾಗಿರಲು ಸೇವಿಸಬೇಕಾದ ಆಹಾರಗಳು ಇವು…
Zakir Hussain ; ಸರಸ್ವತಿ, ಗಣಪತಿಯ ಆರಾಧಕರಾಗಿದ್ದರು ತಬಲಾ ಮಾಂತ್ರಿಕ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.