ಇನ್ನೆಷ್ಟು ಓದಬೇಕು ತಿರುಚಿದ ಭಾರತದ ಇತಿಹಾಸ : ಹೊರ ಬರಲಿ ಮುಚ್ಚಿಟ್ಟ ನೈಜ ಇತಿಹಾಸ!
ಇತಿಹಾಸವನ್ನು ವಿದೇಶಿಗರು ಬರೆದಿರುವ ಕಾರಣ ಅನೇಕ ಘಟನೆಗಳು ಮುಚ್ಚಿಹೋಗಿವೆ
Team Udayavani, Dec 31, 2020, 11:20 AM IST
“ಇತಿಹಾಸ ಅರಿತವರು ಮಾತ್ರ ಇತಿಹಾಸ ಸೃಷ್ಟಿಸಬಲ್ಲರು” ಎಂಬ ಮಾತಿದೆ ಆದರೆ ಇತಿಹಾಸದ ಕುರಿತಂತೆ ಅನುಮಾನಗಳೇ ಹೆಚ್ಚಾದಾಗ ಇತಿಹಾಸವನ್ನು ನಂಬಲು ಸಾಧ್ಯವೇ? ಈಗಾಗಲೇ ಭಾರತೀಯ ಇತಿಹಾಸವನ್ನು ತಿರುಚಿದ ಇತಿಹಾಸ ಎಂದು ಹಲವು ವಾದಗಳಿವೆ. ಈ ಅಂತೆ ಕಂತೆಗಳ ಮಧ್ಯೆ ಸಂತೆಯಲ್ಲಿ ಕಳೆದು ಹೋದಂತಾಗಿದೆ ಭಾರತದ ನೈಜ ಇತಿಹಾಸ . ಇಂದು ಶಾಲಾ ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಬಳಿಯಲ್ಲಿನ ಭಾರತದ ಇತಿಹಾಸ ಪುಸ್ತಕವನ್ನು ಒಮ್ಮೆ ತೆಗೆದು ನೋಡಿ ಭಾರತದ ರಾಜರನ್ನು ಹೇಡಿಗಳಂತೆ ವರ್ಣಿಸಿ ಈ ಪುಣ್ಯಭೂಮಿಯ ಮೇಲೆ ದಾಳಿ ಮಾಡಿ ,ದೇಗುಲಗಳ ನಾಶಮಾಡಿ, ಲೂಟಿ ಹೊಡೆದ ವಿದೇಶೀ ಆಕ್ರಮಣಕಾರರನ್ನು ಹಾಡಿಹೊಗಳಿದ ಪುಟಗಟ್ಟಲೆ ಇತಿಹಾಸದ ಸಾಲುಗಳು ದೊರೆಯುತ್ತದೆ.
ನಮ್ಮ ಪೂರ್ವಜರು ನಮ್ಮ ಆದರ್ಶವಾಗುವಂತೆ ಇತಿಹಾಸವಿರಬೇಕು ಬದಲಾಗಿ ಹೇಡಿಗಳು ಎಂದು ಭಾವಿಸುವಂತೆ ಇರಬಾರದು. ಭಾರತದ ಬಹುತೇಕ ಇತಿಹಾಸವನ್ನು ವಿದೇಶಿಗರು ಬರೆದಿರುವ ಕಾರಣ ಅನೇಕ ಘಟನೆಗಳು ಮುಚ್ಚಿಹೋಗಿವೆ ಮತ್ತು ಸಂಶಯಗಳು ನಮ್ಮನ್ನು ಇಂದಿಗೂ ಕಾಡುತ್ತಿವೆ.ವಿದೇಶಿಗರು ಬರೆದಿದ್ದನ್ನೇ ನಂಬಿ ತಲೆ ಅಲ್ಲಾಡಿಸಿದ ನಾವು ವಿದೇಶೀ ಆಕ್ರಮಣಕಾರರನ್ನು ತಡೆದು ಈ ನಾಡನ್ನು ರಕ್ಷಿಸಿ ಈ ಮಣ್ಣಲ್ಲಿ ಮಣ್ಣಾಗಿ ಹೋದ ಅದೆಷ್ಟೋ ರಾಜಮನೆತನಗಳು ಮತ್ತು ವೀರ ಅರಸರ ಬಗ್ಗೆ ತಿಳಿಯಲೇ ಇಲ್ಲ ಹಾಗೂ ಅಂತವುಗಳನ್ನು ತಿಳಿಸಲು ಇಲ್ಲ ನಮ್ಮ ಇತಿಹಾಸದ ಪುಸ್ತಕಗಳು.
ಭಾರತದ ಇತಿಹಾಸದಲ್ಲಿ ಸಂಚಲನವನ್ನೇ ಸೃಷ್ಟಿಸಿದ ಎರಡು ಘಟನೆಯನ್ನು ಉದಾಹರಣೆಗೆ ತೆಗೆದುಕೊಳ್ಳೋಣ ಮೊದಲನೆಯದು ಭಾರತದ ಮೇಲೆ ದಾಳಿ ಮಾಡಿದ ಅಲೆಕ್ಸಾಂಡರನನ್ನು ಭಾರತದ ಬಾಗಿಲಿನಲ್ಲಿ ಎದುರಿಸಿದ ಅಶ್ವಾಯನ ಮತ್ತು ಅಶ್ವಕಾಯನ ಎಂಬ ಯೋಧರ ಕುರಿತಾಗಿ ಪುಸ್ತಕದಲ್ಲಿ ಕಾಣಸಿಗುವುದೇ ಇಲ್ಲ , ಇನ್ನು ಪುರುಷೋತ್ತಮನನ್ನು (ಪೋರಸ್) ಎದುರಿಸಿ ಆತನ ಆನೆಯ ದಾಳಿಗೆ ಸಿಕ್ಕಿ ನಲುಗಿದ ಅಲೆಕ್ಸಾಂಡರ್ ತನ್ನ ಅತ್ಯಂತ ಪ್ರೀತಿಯ ಕುದುರೆ ಬ್ಯುಸೆಫಾಲಸನ್ನು ಕಳೆದುಕೊಂಡು , ಲಕ್ಷಗಟ್ಟಲೆ ಸೈನಿಕರನ್ನು ಕಳೆದುಕೊಂಡರು ತಾನು ಗೆದ್ದ ರಾಜ್ಯವನ್ನು ಮರಳಿ ನೀಡುತ್ತಾನೆ ಎಂದರೆ ನಂಬಲು ಸಾಧ್ಯವೇ? . ಜಗತ್ತನ್ನೇ ಗೆಲ್ಲಲು ಹೊರಟ ಅಲೆಕ್ಸಾಂಡರನನ್ನು ಹೊಗಳಲು ಸುಳ್ಳು ಇತಿಹಾಸವನ್ನು ಹೆರೋಡೋಟಸ್ ಬರೆದ ಎಂದು ಗ್ರೀಕ್ ಇತಿಹಾಸಕಾರರೇ ಆದ ಸ್ಟ್ರಾಬೋ ಅವರು ಹೇಳಿದರೆ , ರಷ್ಯಾದ ಸೇನಾಧಿಕಾರಿಯಾದ್ದ ಗ್ರೆಗರಿ ಜೋಕೊ ಅವರು ರಷ್ಯಾದ ಮೇಲೆ ದಾಳಿ ಮಾಡಿದ ನೆಪೋಲಿಯನ್ನನಿಗೆ ಏಷ್ಟು ನಷ್ಟವಾಗಿತ್ತೋ ಅದಕ್ಕಿಂತ ಹತ್ತುಪಟ್ಟು ನಷ್ಟ ಅಲೆಕ್ಸಾಂಡರನಿಗೆ ಭಾರತದ ಮೇಲೆ ದಾಳಿ ಮಾಡಿದ್ದಕ್ಕಾಗಿತ್ತು ಎಂದು ಬರೆಯುತ್ತಾರೆ .
ಇನ್ನು ಎರಡನೆಯ ಘಟನೆ ಭಾರತದ ಮೇಲೆ 17 ಬಾರಿ ದಾಳಿ ಮಾಡಿದ ಲೂಟಿಕೋರ ಮಹಮದ್ ಘಜ್ನಿಯನ್ನು ಕ್ರಿಸ್ತಶಕ 1015 ರಲ್ಲಿ ಎರಡು ಬಾರಿ ಹೀನಾಯವಾಗಿ ಕಾಶ್ಮೀರದಲ್ಲಿ ಸೋಲಿಸಿದ ಲೋಹರಾ ರಾಜವಂಶದ ಸಂಗ್ರಾಮ ರಾಜ ಮತ್ತು ತ್ರಿಲೋಚನಪಾಲರು ಹಾಗೂ ಅವರ ಸೇನಾಧಿಪತಿಯಾದ ತುಂಗನ ಕುರಿತಂತೆ ವಿವರಣೆಯು ಇತಿಹಾಸದಲ್ಲಿ ಕಾಣಸಿಗದು ಆದರೆ ಅಂದು ಜೀವ ಭಿಕ್ಷೆ ಪಡೆದ ಘಜ್ನಿಯ ಬಗ್ಗೆ ಇಂದು ಸಾವಿರ ಪುಸ್ತಕದಲ್ಲಿ ಸಾಲು ಸಾಲು ವಿವರಣೆ ದೊರೆಯುತ್ತದೆ .
ಇನ್ನು ಇತಿಹಾಸದ ಅನೇಕ ವೈಭವಿಯುತ ಸಾಮ್ರಾಜ್ಯಗಳ ಸಾಮಂತ ಮನೆತನಗಳು ಮತ್ತು ಅರಸರ ಹೆಸರು ಕೂಡ ಇತಿಹಾಸದಲ್ಲಿ ಇಲ್ಲದಂತಾಗಿದೆ . ವಿಜಯನಗರದ ಸಾಮಂತ ಅರಸನಾದ ವಿಜಯಪುರದ ರಾಜ ಹನುಮಪ್ಪನಾಯಕ, ಕಾಳು ಮೆಣಸಿನ ರಾಣಿ ಗೇರುಸೊಪ್ಪೆಯ ಚೆನ್ನಭೈರಾದೇವಿ ಹಾಗೂ ಕೆಳದಿ ಅರಸರ ಕುರಿತಂತೆ ವಿವರಣೆಗಳೇ ಕಡಿಮೆ.ಉತ್ತರದಲ್ಲಿ ಅಕ್ಬರನ ಸೈನ್ಯವನ್ನೇ ಹಿಮ್ಮೆಟ್ಟಿಸಿದ ಗೋಂಡ್ವಾನದ ದುರ್ಗಾವತಿಯ ಹೋರಾಟದ ಕುರಿತಂತೆ ಇತಿಹಾಸದ ಪುಸ್ತಕದಲ್ಲಿ ಎರಡು ಸಾಲಿನಲ್ಲಿ ವಿವರಣೆ ಮುಗಿಸಿ ಬಿಡಲಾಗಿದೆ ಜೊತೆಗೆ ಅಕ್ಬರನ ಸೈನ್ಯವನ್ನು ಎದುರಿಸಿದ ನರ್ಮದಾ ನದಿಯ ತಟದಲ್ಲಿನ ಆನಂದ ನಗರಿಯ ಮಂಡು ಕೋಟೆಯ ಸುಲ್ತಾನ ಬಾಜ್ ಬಹುದ್ದೂರನ ಹೆಸರೇ ಇತಿಹಾಸದಲ್ಲಿ ಇಲ್ಲ.
ಮೇಲಿನವು ಕೇವಲ ಉದಾಹರಣೆ ಮಾತ್ರ ಹೀಗೆ ನೂರಾರು ಘಟನೆಗಳಿವೆ,ಮನೆತನಗಳಿವೆ , ಸಾಹಸಗಾಥೆಗಳಿವೆ ಆದರೆ ಅವುಗಳ ಉಲ್ಲೇಖವೇ ಇಲ್ಲ. ಹಾಗಾದರೆ ನಾವು ಓದಿದ್ದು , ತಿಳಿದಿದ್ದು ಸುಳ್ಳಾ ? ಭಗತ್ ಸಿಂಗನನ್ನು (ಇಂಡಿಯಾಸ್ ಸ್ಟ್ರಗಲ್ ಫಾರ್ ಇಂಡಿಪೆಂಡೆನ್ಸ್ ಪುಸ್ತಕ) ಉಗ್ರ ಎಂದು ನಮೂದಿಸುವ ಇತಿಹಾಸದ ಪುಸ್ತಕಗಳು ನಮಗೆ ಎಷ್ಟರ ಮಟ್ಟಿಗೆ ನಮ್ಮ ನೆಲದ ಸಾಹಸವನ್ನು ತೋರಬಲ್ಲದು?. ನೈಜ ಇತಿಹಾಸ ಹುದುಗಿ ಹೋಗಿರುವುದಾದರು ಏಕೆ? ಭವಿಷ್ಯಕ್ಕೆ ಆದರ್ಶವಾಗಿ , ಸ್ಫೂರ್ತಿಯಾಗಬೇಕಿದ್ದ ಭಾರತದ ಇತಿಹಾಸ ವಿದೇಶಿ ದಾಳಿಕೋರರ, ಸಂಸ್ಕೃತಿ ನಾಶ ಪಡಿಸಿದವರ ಕುರಿತಂತೆ ಮಾತ್ರ ಅಧಿಕ ವಿಶ್ಲೇಷಣೆಯನ್ನು ನೀಡುತ್ತದೆ ಎಂದರೆ ಕೇವಲ ಅಂಕಗಳನ್ನು ಪಡೆಯಲು ಮಾತ್ರ ಇಂತಹ ಇತಿಹಾಸ ಓದಬೇಕೆ? ಈ ಮಣ್ಣಿನ ವೀರತೆ , ಸಾಹಸ ಪರಾಕ್ರಮಗಳನ್ನು ತಿಳಿಯುವುದಾದರೆ ಯುವಪೀಳಿಗೆ ಏನು ಮಾಡಬೇಕೆಂಬುದೇ ಪ್ರಶ್ನೆಯಾಗಿ ಉಳಿದುಕೊಂಡಿದೆ.
ಇನ್ನಾದರೂ ನೈಜ ಇತಿಹಾಸವನ್ನು ಹೊಂದಿರುವ, ನಿರ್ಲಕ್ಷ್ಯಕ್ಕೆ ಒಳಗಾಗಿರುವ ಭಾರತೀಯ ರಾಜ ಮನೆತನಗಳ ಮತ್ತು ಭಾರತೀಯ ವೀರ ಅರಸರ ಸಾಹಸಗಾಥೆ ಸಾರುವಂತ , ಈ ಮಣ್ಣಿನ ಕುರಿತಾಗಿ ಹೆಮ್ಮೆಪಡುವಂಥ ಇತಿಹಾಸವನ್ನು ಹೆಚ್ಚಾನುಹೆಚ್ಚಾಗಿ ಪಠ್ಯಕ್ರಮದಲ್ಲಿ ಅಳವಡಿಸಲಿ ಎಂಬುದೇ ಈ ಲೇಖನದ ಆಶಯ…
ದರ್ಶನ ನಾಯ್ಕ
ಮಿರ್ಜಾನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Border Gavaskar Trophy: ಕಾಂಗರೂ ಚಾಲೆಂಜ್ ಗೆ ಅಣಿಯಾದ ಭಾರತ; ಹೇಗಿದೆ ತಂಡದ ಬಲಾಬಲ
Tulsi Health Benefits: ತುಳಸಿ ಗಿಡದ ಔಷಧೀಯ ಗುಣಗಳ ಮಾಹಿತಿ ಇಲ್ಲಿವೆ…
Naxal: ನ.17 ಈದು ಎನ್‌ಕೌಂಟರ್- ನ.18 ಕಬ್ಬಿನಾಲೆ ಶೂಟೌಟ್: 21 ವರ್ಷದ ಹಿಂದೆ ನಡೆದಿದ್ದೇನು?
ಈ ಎಲೆಯಿಂದ ಮಾಡುವ ಖಾದ್ಯ ಆರೋಗ್ಯಕ್ಕೂ ಉತ್ತಮ… ಅದ್ಯಾವ ಎಲೆ ಅಂತೀರಾ ಇಲ್ಲಿದೆ ರೆಸಿಪಿ…
ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್ ಪಡೆದು ಸಿನಿಮಾದಲ್ಲಿ ಫೇಮ್ ಆದ ಕಲಾವಿದರು
MUST WATCH
ಹೊಸ ಸೇರ್ಪಡೆ
Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ
New Delhi: ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ
Yasin Malik ವಿಚಾರಣೆಗೆ ತಿಹಾರ್ ಜೈಲಿನಲ್ಲೇ ಕೋರ್ಟ್ ರೂಂ: ಸುಪ್ರೀಂ
General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ
Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.