ಬರಿಗಾಲಿನಲ್ಲಿ ಓಡಲಾರಂಭಿಸಿ ರಾಷ್ಟ್ರಮಟ್ಟದಲ್ಲಿ ಮಿಂಚಿದ ಅಥ್ಲೆಟಿಕ್ಸ್ ತಾರೆ ʼಸಿಮಿʼ ಪಯಣ
Team Udayavani, Oct 5, 2021, 2:48 PM IST
ಮುಂಡಗೋಡ: ತಾಲೂಕಿನ ಪುಟ್ಟ ಗ್ರಾಮದಲ್ಲಿ ಹುಟ್ಟಿದ ಯುವತಿಯೊಬ್ಬಳು ಅಥ್ಲೆಟಿಕ್ಸ್ ನಲ್ಲಿ ರಾಷ್ಟ್ರಮಟ್ಟದಲ್ಲಿ ಮಿಂಚಿ ತಾಲೂಕಿನ ಕೀರ್ತಿ ಹೆಚ್ಚಿಸುತ್ತಿದ್ದಾಳೆ.
ಹೌದು, ಇದು ಮುಂಡಗೋಡ ತಾಲೂಕಿನ ಚವಡಳ್ಳಿ ಗ್ರಾಪಂ ವ್ಯಾಪ್ತಿಯ ಲಕ್ಕೊಳ್ಳಿ ಗ್ರಾಮದ ಎನ್.ಎಸ್. ಸಿಮಿ ಅವರು ರಾಷ್ಟ್ರಮಟ್ಟದಲ್ಲಿ ಮಿಂಚುತ್ತಿದ್ದಾರೆ.
ಈಕೆ ಚವಡಳ್ಳಿ ಗ್ರ‍್ರಾ.ಪಂ ವ್ಯಾಪ್ತಿಯ ಲಕ್ಕೊಳ್ಳಿ ಗ್ರಾಮದ ಎನ್.ವಿ.ಸಾಮ್ಯುವೆಲ್ ಮತ್ತು ಸುಜಾ ದಂಪತಿಯ ಪುತ್ರಿಯಾಗಿದ್ದಾಳೆ. ಮೊದಲಿಗೆ ಇಲ್ಲಿನ ಲೊಯೋಲ ಶಾಲೆಯಲ್ಲಿ ಮೂರನೇ ತರಗತಿಯಿಂದ 7ನೇ ತರಗತಿಯವರೆಗೆ ವ್ಯಾಸಂಗ ಮಾಡಿದ್ದಾರೆ. ಆರನೇ ತರಗತಿಯಲ್ಲಿದ್ದಾಗ ಜಿಲ್ಲಾ ಮಟ್ಟದಲ್ಲಿ 100ಮೀ, 200ಮೀ, 400ಮೀ, ಮತ್ತು ರಿಲೇ ಓಟಗಳ ಸ್ಪರ್ಧೆಗಳಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದರು.
ಬಾಲ್ಯದಿಂದಲೂ ಅಥ್ಲೆಟಿಕ್ಸ್ ನಲ್ಲಿ ತುಂಬಾ ಆಸಕ್ತಿ ಹೊಂದಿದ ಸಿಮಿ ಅವರ ತಂದೆ ಧೈರ್ಯ ತುಂಬಿದರು. ತಂದೆ ಎನ್.ವಿ.ಸಾಮ್ಯುವೆಲ್ ಕ್ರೀಡಾಪಟುವಾಗಿದ್ದರು ಅವರು ಪಟ್ಟಣದ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 5ನೇ ತರಗತಿಯಿಂದ 7ನೇ ತರಗತಿಯವರೆಗೆ ವಿದ್ಯಾಬ್ಯಾಸ ಮಾಡಿದ್ದಾರೆ. ಈ ಅವಧಿಯಲ್ಲಿ ಕಬ್ಬಡಿಯಲ್ಲಿ ಎರಡು ಬಾರಿ ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾಗಿ ಆಟವಾಡಿದ್ದಾರೆ.
7ನೇ ತರಗತಿಯಲ್ಲಿದ್ದಾಗ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಸಿಮಿ ಬಳಿ ಶೂ ಇರಲಿಲ್ಲ. ಬರಿಗಾಲಲ್ಲೇ ಓಡಿದ್ದರು. ನಂತರ, ಮೂಡಬಿದ್ರೆ ಆಳ್ವಾಸ್ ಸ್ಪೋರ್ಟ್ಸ್ ಸ್ಕೂಲ್ ಸೇರಿದಾಗ 8ನೇ ತರಗತಿಯಲ್ಲಿ ಶೂ ನೀಡಲಾಯಿತು. 8 ನೇ ತರಗತಿಯಿಂದ ದ್ವಿತೀಯ ಪಿಯುಸಿವರೆಗೆ ಮೂಡಬಿದ್ರೆ ಆಳ್ವಾಸ್ ಕಾಲೇಜನಲ್ಲಿ ವಿದ್ಯಾಬ್ಯಾಸ ಮಾಡುತ್ತಿರುವಾಗ ಅಥ್ಲೆಟಿಕ್ಸ್ನಲ್ಲಿ ರಾಜ್ಯ ಮಟ್ಟದ ಚಾಂಪಿಯನ್ ಆದರು. ನಂತರ ಕೇರಳದ ಪಾಲ್ ಸ್ಪೋರ್ಟ್ಸ್ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದು ಮೂಡಬಿದ್ರೆ ಆಳ್ವಾಸ್ ಕಾಲೇಜನಲ್ಲಿ ನಡೆದ ರಾಷ್ಟ್ರ ಮಟ್ಟದ ಕ್ರೀಡಾಕೂಟದಲ್ಲಿ ಸಿಮಿಯವರು 11 ಸೆಕೆಂಡ್ 56 ಪಾಯಿಂಟ್‌ನಲ್ಲಿ ಓಡಿ 28 ವರ್ಷದ ಹಿಂದೆ ಇದ್ದ 11 ಸೆಕೆಂಡ್ 60 ಪಾಯಿಂಟ್‌ನಲ್ಲಿ ಓಡಿದ ದಾಖಲೆಯನ್ನು ಮುರಿದಿದ್ದರು.
2021ರ ಸೆ.15 ರಂದು ತೆಲಂಗಾಣದಲ್ಲಿ ನಡೆದ ನ್ಯಾಷನಲ್ ಓಪನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಬೆಂಗಳೂರಿನ ಮೆಜೆಸ್ಟಿಕ್ ರೈಲ್ವೇಸ್ ಪರವಾಗಿ ಸಿಮಿ ಅವರು ಭಾಗಿಯಾಗಿ 100 ಮೀಟರ್ ಓಟದ ಸ್ಫರ್ಧೇಯಲ್ಲಿ ತೃತೀಯ ಸ್ಥಾನ ಮತ್ತು ರಿಲೇಯಲ್ಲಿ ಭಾಗಿಯಾಗಿ ಪ್ರಥಮ ಸ್ಥಾನ ಪಡೆಯುವಲ್ಲಿ ಇವರು ಪ್ರಮುಖ ಪಾತ್ರ ವಹಿಸಿ ರಾಜ್ಯ ಜಿಲ್ಲೆಯ ಮತ್ತು ತಾಲೂಕಿನ ಕೀರ್ತಿ ಪತಾಕೆ ಹಾರಿಸಿದ್ದಾರೆ. ಈಗಾಗಲೇ ತಾಲೂಕಿನ ವಿವಿಧ ಸಂಘ ಸಂಸ್ಥೆಯವರು ಸಿಮಿಯವರ ಸಾಧನೆಯನ್ನು ಗುರುತಿಸಿ ಸನ್ಮಾನಿಸಿ ಪ್ರೋತ್ಸಾಹ ನೀಡುತ್ತಿದ್ದಾರೆ.
ಇದನ್ನೂ ಓದಿ:ಆರೋಗ್ಯ ಸಮಸ್ಯೆ ಹೇಳಿಕೊಂಡ “ಉಲ್ಲಾಸ ಉತ್ಸಾಹ” ನಟಿ ಯಾಮಿ
ಎನ್.ವಿ.ಸಾಮ್ಯುವೆಲ್ ಸಿಮಿ ತಂದೆ: ನಾನು ಒಬ್ಬ ಮಾಜಿ ಕ್ರೀಡಾಪಟು. ನನಗೆ ಮೂವರು ಹೆಣ್ಣು ಮಕ್ಕಳು. ನಾನು, ನಮ್ಮ ಹೆಣ್ಣು ಮಕ್ಕಳು ಸ್ಪೋರ್ಟ್ಸ್ ನಲ್ಲಿ ಏನು ಮಾಡುತ್ತಾರೆ ಎಂದು ತಿಳಿದಿದ್ದೆ. ಬಾಲ್ಯದಲ್ಲಿ ಒಂದು ಬಾರಿ ತಾಲೂಕು ಮಟ್ಟದ ಕ್ರೀಡಾ ಸ್ಪರ್ಧೆಯಲ್ಲಿ ನಾನು ಆಯ್ಕೆಯಾಗಿದ್ದೇನೆ ಎಂದು ಸಿಮಿ ಕರೆದಳು. ಅಂದರಂತೆ ನಾನು ಹೋಗಿ ನೋಡಿದಾಗ 100 ಮೀಟರ್ ಓಟದ ಸ್ಪರ್ಧೆಯಲ್ಲಿ ಅವಳ ಓಟವನ್ನು ನೋಡಿ ಮುಂದೊಂದು ದಿನ ನನ್ನ ಮಗಳು ಏನಾದರೂ ಸಾಧನೆ ಮಾಡುತ್ತಾಳೆ ಎಂದು ತಿಳಿದೆ. ಅಂದಿನಿಂದ ಇಂದಿನವರೆಗೆ ಅವಳಿಗೆ ಬೆನ್ನಲುಬಾಗಿ ನಿಂತು ಪ್ರೋತ್ಸಾಹ ನೀಡುತ್ತಿದ್ದೇನೆ. ಬಡತನದ ಪರಿಸ್ಥಿತಿಯಲ್ಲೂ ಕಷ್ಟಪಟ್ಟು ಚಿಕ್ಕ ಹಿಡುವಳಿದಾರನಾಗಿ ಕೃಷಿ ಕೂಲಿ ಮಾಡಿ ಸಿಮಿಯ ಆಸೆಗೆ ನೀರೆರೆಯುತ್ತಾ ಬಂದಿದ್ದೇನೆ. ಅವಳು ಗುರಿ ತಲುಪುವರೆಗೂ ನಾನು ಪ್ರೋತ್ಸಾಹ ನೀಡುತ್ತೇನೆ.
ಎನ್.ಎಸ್. ಸಿಮಿ ಅಥ್ಲೆಟಿಕ್ಸ್ ಕ್ರೀಡಾಪಟು : ಮುಂದಿನ ಏಷ್ಯನ್ ಗೇಮ್ಸ್ ಕಾಮನ್‍ವೆಲ್ತ್ ಕೂಟ ಇದ್ದು, ಇಂಡಿಯನ್ ತಂಡದ ಪರವಾಗಿ ಅಹ೯ತೆ ಪಡೆಯುವ ತರಬೇತಿಗೆ ಆಯ್ಕೆಯಾಗಿದ್ದೇನೆ. ಅದಕ್ಕಾಗಿ ಪಂಜಾಬ್ ಗೆ ತೆರೆಳುತ್ತಿದ್ದಾರೆ….. ಈಗ ಮಾಡಿರುವ ಸಾಧನೆ ಏನೂ ಅಲ್ಲ. ಅಂತಾರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಬೇಕಿದೆ. ಅವಳು, ಹುಡುಗಿ ಸ್ಪೋರ್ಟ್ಸ್ ನಲ್ಲಿ ಏನು ಮಾಡುತ್ತಾಳೆ ಅವಳನ್ನು ಓದಿಸಿ ಮದುವೆ ಮಾಡಿಸು ಎಂದು ಅನೇಕರು ನಮ್ಮ ತಂದೆ ಮತ್ತು ಫ್ಯಾಮಿಲಿ ಮುಂದೆ ಹೇಳುತ್ತಿದ್ದರು. ಸ್ಪೋರ್ಟ್ಸ್ ಅಂದರೆ ಕೆಲ ಜನರು ಕೀಳಾಗಿ ನೋಡುತ್ತಾರೆ. ಆದರೆ ನನ್ನ ತಂದೆ ಬಾಲ್ಯದಿಂದಲೂ ನನಗೆ ಸಂಪೂರ್ಣ ಬೆಂಬಲ ನೀಡಿ ಈ ಹಂತಕ್ಕೆ ತಂದಿದ್ದಾರೆ.
ಸಿಮಿಯವರು ನಾಲ್ಕು ಬಾರಿ ಕರ್ನಾಟಕ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಅಥ್ಲೆಟಿಕ್ಸ್ ನಲ್ಲಿ ಅವರು ಒಟ್ಟು 61 ಬಂಗಾರ, 25 ಬೆಳ್ಳಿ ಹಾಗೂ 15 ಕಂಚಿನ ಪದಕಗಳು ದೊರೆತಿವೆ. ಇವರ ಸಾಧನೆಯನ್ನು ಗುರುತಿಸಿ 2009ರಲ್ಲಿ ಟ್ಯಾಲೆಂಟ್ ಕೋಟಾದಲ್ಲಿ ಬೆಂಗಳೂರಿನ ಮೆಜೆಸ್ಟಿಕ್ ರೈಲು ನಿಲ್ದಾಣದಲ್ಲಿ ಕ್ಲರ್ಕ್ ಹುದ್ದೆಯನ್ನು ನೀಡಿದ್ದಾರೆ.
ಮುನೇಶ ತಳವಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
New Delhi: 5ಜಿ ಸೇವೆಗಾಗಿ ಬಿಎಸ್‌ಎನ್ಎಲ್‌ನಿಂದ ಟೆಂಡರ್ ಆಹ್ವಾನ
J&K: ವಾಜಪೇಯಿ ಬದುಕಿದ್ದರೆ ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗುತ್ತಿರಲಿಲ್ಲ: ಒಮರ್
Session:ನ.25- ಡಿ.20- ಸಂಸತ್ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?
DGP: ಮಹಾರಾಷ್ಟ್ರದ ನೂತನ ಡಿಜಿಪಿ ಆಗಿ ಐಪಿಎಸ್ ಅಧಿಕಾರಿ ಸಂಜಯ್ ವರ್ಮಾ ನೇಮಕ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
MUST WATCH
ಹೊಸ ಸೇರ್ಪಡೆ
Salman Khan: ಕ್ಷಮೆ ಕೇಳಿ ಇಲ್ಲವೇ 5 ಕೋಟಿ ಕೊಡಿ: ನಟ ಸಲ್ಮಾನ್‌ಗೆ ಮತ್ತೂಂದು ಬೆದರಿಕೆ
Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ
New Delhi: 5ಜಿ ಸೇವೆಗಾಗಿ ಬಿಎಸ್‌ಎನ್ಎಲ್‌ನಿಂದ ಟೆಂಡರ್ ಆಹ್ವಾನ
KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ; ಪ್ರವೇಶಾತಿ ಆರಂಭ
Ayushman Bharat; ಎಲ್ಲ ಖಾಸಗಿ ಆಸ್ಪತ್ರೆಗಳ ಸೇರ್ಪಡೆಗೆ ಸಂಸದರ ಸೂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.