ಚಳಿಗಾಲದ ಸ್ಪೆಷಲ್ ತಿಂಡಿ ಅವರೇಕಾಳಿನ ಸಮೋಸ
ಅವರೇಕಾಳಿನ ಸಮೋಸ ತುಂಬಾನೇ ವಿಶೇಷ. ಇದನ್ನು ನಿಮ್ಮ ಮನೆಯಲ್ಲಿ ತಯಾರಿಸಬಹುದು.
Team Udayavani, Dec 22, 2020, 6:19 PM IST
ಎಲ್ಲೆಡೆ ಈ ಬಾರಿಯ ಚಮು ಚಮು ಚಳಿ ಚಳಿಗಾಲ ಶುರುವಾಗಿದ್ದು. ಏನಾದರೂ ಖಾರಖಾರವಾಗಿ ತಿನ್ನಬೇಕೆಂಬ ಬಾಯಿಚಪಲ ಹುಟ್ಟುತ್ತದೆ. ನೀವು ವಿವಿಧ ರೀತಿಯ ಸಮೋಸವನ್ನು ತಿಂದಿರಬಹುದು . ಆದರೆ ಅವರೇಕಾಳಿನ ಸಮೋಸ ತುಂಬಾನೇ ವಿಶೇಷ. ಇದನ್ನು ನಿಮ್ಮ ಮನೆಯಲ್ಲಿ ತಯಾರಿಸಬಹುದು.
ಬೇಕಾಗುವ ಸಾಮಾಗ್ರಿಗಳು:
ಗೋಧಿಹಿಟ್ಟು 2 ಕಪ್, ಮೈದಾಹಿಟ್ಟು 2 ಕಪ್, ಅವರೇಕಾಳು 1ಕಪ್, ಸಣ್ಣಗೆ ಕತ್ತರಿಸಿಟ್ಟ (ಬೀನ್ಸ್ ,ಕ್ಯಾರೆಟ್, ಈರುಳ್ಳಿ , ಬೀಟ್ರೂಟ್ ಸೇರಿ 2 ಕಪ್) ಕೊತ್ತಂಬರಿ ಸೊಪ್ಪು, ಕರಿಬೇವಿನ ಸೊಪ್ಪು , ಶುಂಠಿ, ಕರಿಯಲು ಬೇಕಾದಷ್ಟು ಎಣ್ಣೆ , ಲಿಂಬೆಹಣ್ಣು 1, ಗರಂಮಸಾಲೆಪುಡಿ 1 ಚಮಚ, ರುಚಿಗೆ ಉಪ್ಪು.
ತಯಾರಿಸುವ ವಿಧಾನ : ಗೋಧಿಹಿಟ್ಟು , ಮೈದಾಹಿಟ್ಟಿಗೆ ಸ್ವಲ್ಪ ಉಪ್ಪು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ.
ಅವರೇಕಾಳಿನ ಜೊತೆ ಎಲ್ಲ ತರಕಾರಿಗಳನ್ನು ಸ್ವಲ್ಪ ಉಪ್ಪು ಹಾಕಿ ಬೇಯಿಸಿ ಗರಂ ಮಸಾಲೆ ಪುಡಿಯನ್ನು ಸೇರಿಸಿ. ಕೊತ್ತಂಬರಿ ಸೊಪ್ಪು, ಕರಿಬೇವು, ಶುಂಠಿ ಹಾಕಿ ಪಲ್ಯದಂತೆ ಮಾಡಿಟ್ಟುಕೊಳ್ಳಿ. ಆರಿದ ನಂತರ ಲಿಂಬೆರಸ ಸೇರಿಸಿ.
ಗೋಧಿ/ಮೈದಾ ಹಿಟ್ಟಿನ ಮಿಶ್ರಣವನ್ನು ಪೂರಿಯಂತೆ ಲಟ್ಟಿಸಿ, ಸರಿ ಅರ್ಧಕ್ಕೆ ಕತ್ತರಿಸಿ. ಒಂದೊಂದು ಭಾಗವನ್ನು ಶಂಕುವಿನ ಆಕಾರದಲ್ಲಿ ಸುತ್ತಿ ಅದರ ಒಳಗೆ ಮಾಡಿಟ್ಟ ಪಲ್ಯದ ಮಿಶ್ರಣವನ್ನು ತುಂಬಿಸಿ.
ಮಿಶ್ರಣ ಹೊರಬಾರದಂತೆ ಸುತ್ತಲೂ ಸರಿಯಾಗಿ ಒತ್ತಿ. ಎಣ್ಣೆಯನ್ನು ಕಾಯಲು ಇಟ್ಟು ಒಂದೊಂದೇ ಸಮೋಸವನ್ನು ಹಾಕುತ್ತಾ ನಿಧಾನವಾಗಿ ಹೊಂಬಣ್ಣ ಬರುವವರೆಗೆ ಕಾಯಿಸಿರಿ. ಸ್ವಾದಿಷ್ಟವಾದ ಅವರೇಕಾಳಿನ ಸಮೋಸ ಸವಿಯಲು ಸಿದ್ಧ…
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chocolate ಕೇವಲ ಸಸ್ಯಾಹಾರವೇ? ಸಸ್ಯಾಹಾರಿಗಳೇ ಗಮನಿಸಿ…
Guruprasad: ಲಾಟರಿ ಮಾರುತ್ತಿದ್ದ ಹುಡುಗ ʼಮಠʼ ಕಟ್ಟಿ ʼರಂಗನಾಯಕʼನಾಗಿ ಬೆಳೆದಿದ್ದೇಗೆ?
UV Fusion: ಮಾನವನ ಸ್ವಾರ್ಥ ವಿನಾಶಕ್ಕೆ ಕಾರಣವಾಗುತ್ತಿದೆಯೇ?
Shivaji Satam: ಕ್ಯಾಷಿಯರ್ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?
Prashant Kishor; ಸಲಹೆ ನೀಡಲು ಒಂದು ಚುನಾವಣೆಗೆ ಪಡೆಯುಯುತ್ತಿದ್ದ ಶುಲ್ಕ ಬಹಿರಂಗ!
MUST WATCH
ಹೊಸ ಸೇರ್ಪಡೆ
US Polls: ಕಮಲಾ ಗೆಲುವಿಗಾಗಿ ಪೂರ್ವಿಕರ ಗ್ರಾಮದಲ್ಲಿ ಅರ್ಚನೆ, ಅಭಿಷೇಕ!
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.