ದೀಪಾವಳಿ, ಪೊಂಗಲ್.. ಕಾಲಿವುಡ್ ಬಿಗ್ ಸಿನಿಮಾಗಳ ರಿಲೀಸ್ ಗೆ ಹಬ್ಬದ ದಿನಗಳೇ ಫಿಕ್ಸ್
Team Udayavani, Apr 10, 2023, 5:40 PM IST
ಮುಂಬಯಿ: ದಕ್ಷಿಣ ಭಾರತದ ಸಿನಿಮಾರಂಗದಲ್ಲಿ ವಿಶೇಷವಾಗಿ ತಮಿಳು ಹಾಗೂ ತೆಲುಗು ಭಾಷೆಯ ಸಿನಿಮಾರಂಗದ ಬಹು ನಿರೀಕ್ಷಿತ ಚಿತ್ರಗಳನ್ನು ಹಬ್ಬದ ದಿನದಲ್ಲಿ ರಿಲೀಸ್ ಮಾಡುವುದು ಇತ್ತೀಚೆಗೆ ಟ್ರೆಂಡ್ ಆಗಿದೆ.
ಈ ವರ್ಷ ಪೊಂಗಲ್ ಹಬ್ಬಕ್ಕೆ ಟಾಲಿವುಡ್ ನಲ್ಲಿ ಬಾಲಕೃಷ್ಣ ಅವರ ʼವೀರ ನರಸಿಂಹ ರೆಡ್ಡಿʼ, ಚಿರಂಜೀವಿ ಅವರ ʼ ವಾಲ್ಟೇರ್ ವೀರಯ್ಯʼ ಸಿನಿಮಾಗಳು ರಿಲೀಸ್ ಆಗಿದ್ದವು. ಕಾಲಿವುಡ್ ನಲ್ಲಿ ವಿಜಯ್ ಅವರ ʼವಾರಿಸುʼ ಹಾಗೂ ಅಜಿತ್ ಅವರ ʼತುನಿವುʼ ಸಿನಿಮಾ ರಿಲೀಸ್ ಆಗಿತ್ತು. ಅಂತಿಮವಾಗಿ ʼವಾರಿಸುʼ ಸಿನಿಮಾ ಪೊಂಗಲ್ ರೇಸ್ ನಲ್ಲಿ ಪ್ರೇಕ್ಷಕರನ್ನು ಹೆಚ್ಚು ಗಮನ ಸೆಳೆದರೂ, ರಿಲೀಸ್ ಆದ ಎಲ್ಲಾ ಸಿನಿಮಾಗಳು ಭರ್ಜರಿ ಕಲೆಕ್ಷನ್ ಮಾಡಿತ್ತು.
ಪೊಂಗಾಲ್ ಹಾಗೂ ದೀಪಾವಳಿ ಹಬ್ಬಕ್ಕೆ ದಕ್ಷಿಣ ಭಾರತದಲ್ಲಿ ಬಿಗ್ ಸ್ಟಾರ್ ಗಳ ಸಿನಿಮಾಗಳು ರಿಲೀಸ್ ಆಗುತ್ತದೆ. ಹಬ್ಬದ ರಜಾದಿನಗಳಲ್ಲಿ ತನ್ನ ಮೆಚ್ಚಿನ ಸ್ಟಾರ್ಸ್ ಗಳ ಸಿನಿಮಾವನ್ನು ಪ್ರೇಕ್ಷಕರು ನೋಡೇ ನೋಡುತ್ತಾರೆ ಎನ್ನುವ ಡೈರೆಕ್ಟರ್ಸ್ ಗಳ ಲಾಜಿಕ್ ಗಳು ವರ್ಕೌಟ್ ಆಗುತ್ತದೆ.
ಈ ವರ್ಷ ತಮಿಳಿನಲ್ಲಿ ರಜಿನಿಕಾಂತ್ ಅವರ ‘ಜೈಲರ್ʼ, ವಿಜಯ್ ಅವರ ʼ ಲಿಯೋʼ, ʼ ಪೊನ್ನಿಯಿನ್ ಸೆಲ್ವನ್: (ಪಾರ್ಟ್ -2) ನಂಥ ದೊಡ್ಡ ಸಿನಿಮಾ ರಿಲೀಸ್ ಆಗಲಿದೆ. ಇದು ಬಿಟ್ಟು ರಿಲೀಸ್ ಆಗಲಿರುವ ಮತ್ತೊಂದು ದೊಡ್ಡ ಸಿನಿಮಾವೆಂದರೆ ಅದು ಕಮಲ್ ಹಾಸನ್ ಅವರ ʼಇಂಡಿಯನ್-2ʼ. ಆದರೆ ಈ ಸಿನಿಮಾ ಈ ವರ್ಷ ರಿಲೀಸ್ ಆಗುವುದು ಡೌಟ್ ಎನ್ನಲಾಗುತ್ತಿದೆ.
ಪೊಂಗಾಲ್ ಗೆ ಬರುತ್ತಾ “ಇಂಡಿಯನ್ -2”?:
ಸೂಪರ್ ಹಿಟ್ ನಿರ್ದೇಶಕರಲ್ಲಿ ಒಬ್ಬರಾಗಿರುವ ಶಂಕರ್ ಅವರ ʼಇಂಡಿಯನ್ -2ʼ ಸಿನಿಮಾ ಸೆಟ್ಟೇರಿದ ದಿನದಿಂದಲೇ ಸುದ್ದಿಯಲ್ಲಿದೆ. ʼಇಂಡಿಯನ್ʼ ಮೊದಲ ಭಾಗದಲ್ಲಿನ ಕ್ಲಾಸ್ ಅಂಶವನ್ನು ಪ್ರೇಕ್ಷಕರು ಎರಡನೇ ಭಾಗದಲ್ಲೂ ನೋಡಲು ಕಾಯುತ್ತಿದ್ದಾರೆ. ಸದ್ಯ ಈ ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಸಿನಿಮಾ ರಿಲೀಸ್ ಮಾಡಬಹುದಿತ್ತು. ಆದರೆ ಕಮಲ್ ಹಾಸನ್ ʼಗೇಮ್ ಚೇಂಜರ್ʼ ಶೂಟ್ ನಲ್ಲೂ ಬ್ಯುಸಿಯಾಗಿದ್ದಾರೆ. ಇದಲ್ಲದೇ ʼಇಂಡಿಯನ್ -2ʼ ಸಿನಿಮಾದ ಪೋಸ್ಟ್ ಪ್ರೂಡಕ್ಷನ್ ಕೆಲಸ ಸ್ವಲ್ಪ ಹೆಚ್ಚೇ ಇರುವುದರಿಂದ ಮುಂದಿನ ವರ್ಷ (2024) ಪೊಂಗಾಲ್ ಹಬ್ಬಕ್ಕೆ ಸಿನಿಮಾ ರಿಲೀಸ್ ಮಾಡುವ ಪ್ಲ್ಯಾನ್ ನಲ್ಲಿ ಚಿತ್ರತಂಡ ಇದೆ.
ಒಂದು ವೇಳೆ ಹೀಗೆ ಆದರೆ ಪೊಂಗಾಲ್ ಹಬ್ಬಕ್ಕೆ ʼನಾಯಕನ್ʼ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ಸಿಗುವುದು ಖಂಡಿತ.
ʼಅಯಾಲನ್ʼ ಮೂಲಕ ಹಿಟ್ ಟ್ರ್ಯಾಕ್ ಗೆ ಬರುತ್ತಾರ ಶಿವಕಾರ್ತಿಕನ್? :
ಇನ್ನೊಂದೆಡೆ ತಮಿಳಿನಲ್ಲಿ ಇತ್ತೀಚೆಗೆ ತನ್ನ ವಿಭಿನ್ನ ಸ್ಕ್ರಿಪ್ಟ್ ಆಯ್ಕೆಯ ಮೂಲಕ ಉತ್ತಮ ಚಿತ್ರಗಳನ್ನು ನೀಡುವಲ್ಲಿ ಸ್ವಲ್ಪ ಹಿಂದಕ್ಕೆ ಬಿದ್ದಿರುವ ನಟ ಶಿವಕಾರ್ತಿಕನ್ ದೀಪಾವಳಿ ಹಬ್ಬದ ರಜಾ ದಿನಗಳಲ್ಲಿ ಥಿಯೇಟರ್ ಗೆ ಪ್ರೇಕ್ಷಕರನ್ನು ಕರೆ ತರುವ ಪ್ರಯತ್ನದಲ್ಲಿದ್ದಾರೆ. ಶಿವಕಾರ್ತಿಕನ್ ಅವರ ವೃತ್ತಿ ಜೀವನದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದು ಎಂದು ಹೇಳಲಾಗುತ್ತಿರುವ ಸೈನ್ಸ್ ಫಿಕ್ಷನ್ ʼಅಯಾಲನ್ʼ ಸಿನಿಮಾ ಈ ವರ್ಷದ ದೀಪಾವಳಿಗೆ ರಿಲೀಸ್ ಆಗಲಿದೆ ಎನ್ನಲಾಗುತ್ತಿದೆ.
ಈ ವರ್ಷ ಶಿವಕಾರ್ತಿಕನ್ ಅವರ ʼ ಮಹಾವೀರನ್ʼ ಸಿನಿಮಾ ರಿಲೀಸ್ ಆಗಲಿದೆ. ಈಗಾಗಲೇ ಈ ಸಿನಿಮಾದ ಚಿತ್ರೀಕರಣವೂ ಮುಗಿದಿದೆ. ಇತ್ತ ʼಅಯಾಲನ್ʼ ಚಿತ್ರದ ಚಿತ್ರೀಕರಣವೂ ಮುಗಿದಿದ್ದು, ಪೋಸ್ಟ್ ಪ್ರೂಡಕ್ಷನ್ ಹಂತದಲ್ಲಿ ಸಿನಿಮಾ ತಂಡ ಬ್ಯುಸಿಯಾಗಿದೆ. ದೀಪಾವಳಿಗೆ ಪ್ರೇಕ್ಷಕರನ್ನು ರಂಜಿಸಲು ʼ ʼಅಯಾಲನ್ʼ ರಿಲೀಸ್ ಮಾಡುವ ಯೋಜನೆಯಲ್ಲಿ ಚಿತ್ರತಂಡವಿದೆ.
ಸೌತ್ ನಲ್ಲಿ ಹಬ್ಬಕ್ಕೆ ಬಿಗ್ ಸ್ಟಾರ್ ಸಿನಿಮಾಗಳು ರಿಲೀಸ್ ಮಾಡುವುದು ಟ್ರೆಂಡ್ ಆದರೂ ಅವು ಪ್ರತಿಸಲಿ ವರ್ಕೌಟ್ ಆಗುತ್ತದೆ ಎನ್ನಲಾಗದು. ಬಿಗ್ ಸ್ಟಾರ್ ಹೆಸರಿನಲ್ಲಿ ಬಾಕ್ಸ್ ಆಫೀಸ್ ನಲ್ಲಿ ಸಿನಿಮಾ ಹಣ ಮಾಡಿದರೂ ಎಲ್ಲ ಸಂದರ್ಭದಲ್ಲಿ ಅವು ಪ್ರೇಕ್ಷಕರ ಮನ ಗೆಲ್ಲಲು ಯಶಸ್ವಿ ಆಗುವುದಿಲ್ಲ ಎನ್ನುವುದು ಗಮನಿಸಬೇಕಾದ ಅಂಶ.
-ಸುಹಾನ್ ಶೇಕ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
Year Ender: Horror movies-2024 ರ ಟಾಪ್ 5 ಹಾರರ್ ಚಲನಚಿತ್ರಗಳು
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
Bollywood: ಬಾಲಿವುಡ್ ನಟ ಶಾಹಿದ್ ಕಪೂರ್ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?
Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ
ಕೊಡುವುದರಿಂದ ಕೊರತೆಯಾಗದು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.