Easy recipes: ಬೇಬಿ ಕಾರ್ನ್ ಮಂಚೂರಿಯನ್‌ ಟ್ರೈ ಮಾಡಿ ಟೇಸ್ಟ್ ನೋಡಿ…

ಇದರಲ್ಲಿ ವಿಟಮಿನ್‌ ಎ,ಬಿ,ಸಿ ಮತ್ತು ಇ ನಂತಹ ಪೋಷಕಾಂಶ ಲಭ್ಯ

ಶ್ರೀರಾಮ್ ನಾಯಕ್, Oct 7, 2022, 5:35 PM IST

web baby corner

ವಿವಿಧ ರೀತಿಯ ಹಣ್ಣುಗಳು ಮತ್ತು ತರಕಾರಿಗಳು ಆರೋಗ್ಯಕ್ಕೆ ತುಂಬಾ ಉತ್ತಮ ಅದರಲ್ಲಿ ಬೇಬಿ ಕಾರ್ನ್ ಕೂಡ ಒಂದು. ಬೇಬಿ ಕಾರ್ನ್ ನಲ್ಲಿ ಏನೆಲ್ಲಾ ಇದೆ ಎನ್ನುವುದಕ್ಕಿಂತ ಏನಿಲ್ಲ ಎಂದು ಕೇಳುವುದು ಹೆಚ್ಚು ಸರಿ. ಇದರಲ್ಲಿ ವಿಟಮಿನ್‌ ಎ,ಬಿ,ಸಿ ಮತ್ತು ಇ ನಂತಹ ಪೋಷಕಾಂಶ ಇರುವುದರಿಂದ ಇದನ್ನು ನಿಮ್ಮ ಅಡುಗೆಯಲ್ಲಿ ಬಳಸಿದರೆ ಅದರಿಂದ ಹಲವು ಪ್ರಯೋಜನಗಳನ್ನು ಪಡೆಯಬಹುದು.

ಬೇಬಿ ಕಾರ್ನ್ ನಿಂದ ಏನು ತಯಾರಿಸಿದರೂ ರುಚಿಯೇ ಅದರಲ್ಲೂ ಬೇಬಿ ಕಾರ್ನ್ ಮಂಚೂರಿಯನ್‌ ಎಲ್ಲರ ಬಾಯಿಯಲ್ಲಿ ನೀರೂರಿಸುತ್ತದೆ. ಹಾಗಾದರೆ ಇನ್ನೇಕೆ ತಡ ಸ್ವಾದಿಷ್ಟಕರವಾದ “ಬೇಬಿ ಕಾರ್ನ್ ಮಂಚೂರಿಯನ್‌” ಮನೆಯಲ್ಲೇ ಮಾಡಿ ಸ್ವಾದಿಷ್ಟವಾಗಿ ಸವಿಯಿರಿ..

ಬೇಕಾಗುವ ಸಾಮಗ್ರಿಗಳು
ಬೇಬಿ ಕಾರ್ನ್- 250ಗ್ರಾಂ, ಕಾನ್‌ಫ್ಲೋರ್‌- 4 ಚಮಚ, ಮೈದಾ- 3 ಚಮಚ, ಪೆಪ್ಪರ್‌ ಪುಡಿ- 1 ಚಮಚ, ಈರುಳ್ಳಿ- 3 ಸಣ್ಣಗೆ ಹೆಚ್ಚಿದ್ದು, ಅಚ್ಚ ಖಾರದ ಪುಡಿ-1 ಚಮಚ, ಬೆಳ್ಳುಳ್ಳಿ-1 ಚಮಚ ಸಣ್ಣಗೆ ಹೆಚ್ಚಿದ್ದು, ಶುಂಠಿ-1 ಚಮಚ ಸಣ್ಣಗೆ ಹೆಚ್ಚಿದ್ದು, ಹಸಿಮೆಣಸು-2, ಕ್ಯಾಪ್ಸಿಕಂ-1, ಕೊತ್ತಂಬರಿ ಸೊಪ್ಪು ಸ್ವಲ್ಪ, ಟೊಮೆಟೋ ಸಾಸ್‌-3 ಚಮಚ,ಚಿಲ್ಲಿ ಸಾಸ್‌-2 ಚಮಚ, ಸೋಯಾ ಸಾಸ್‌-2 ಚಮಚ, ವಿನೆಗರ್‌-1 ಚಮಚ, ಎಣ್ಣೆ-ಕರಿಯಲು, ರುಚಿಗೆ ತಕ್ಕಷ್ಟು ಉಪ್ಪು.

ತಯಾರಿಸುವ ವಿಧಾನ
ಮೊದಲು ಬೇಬಿ ಕಾರ್ನ್ ನ್ನು ಚೆನ್ನಾಗಿ ನೀರಿನಲ್ಲಿ ತೊಳೆಯಿರಿ. ನಂತರ ಅದನ್ನು ನಿಮಗೆ ಬೇಕಾಗುವ ರೀತಿಯಲ್ಲಿ ಕಟ್‌ ಮಾಡಿಕೊಳ್ಳಿರಿ. ತದನಂತರ ಒಂದು ಪಾತ್ರೆಗೆ ಕಾನ್‌ಫ್ಲೋರ್‌, ಮೈದಾ, ಅಚ್ಚ ಖಾರದ ಪುಡಿ ಮತ್ತು ಉಪ್ಪನ್ನು ಸೇರಿಸಿ ಚೆನ್ನಾಗಿ ಮಿಕ್ಸ್‌ ಮಾಡಿ ಸ್ವಲ್ಪ ನೀರನ್ನು ಸೇರಿಸಿ ಹಿಟ್ಟಿನ ಹದಕ್ಕೆ ಮಿಶ್ರಣ ಮಾಡಿ ಇಟ್ಟುಕೊಳ್ಳಿ (ಈ ಹಿಟ್ಟು ಅತಿ ದಪ್ಪವೂ ಇರಬಾರದು ತೆಳ್ಳಗೂ ಇರಬಾರದು). ಇದಕ್ಕೆ ಕಟ್‌ ಮಾಡಿಟ್ಟ ಬೇಬಿ ಕಾರ್ನ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಇಟ್ಟುಕೊಳ್ಳಿ. ತದನಂತರ ಒಂದು ಬಾಣಲೆಗೆ ಎಣ್ಣೆಯನ್ನು ಹಾಕಿ, ಕಾದ ಮೇಲೆ ಮಿಶ್ರಣ ಮಾಡಿಟ್ಟ ಬೇಬಿ ಕಾರ್ನ್ ಹಾಕಿ ಹೊಂಬಣ್ಣ(ಕಂದು ಬಣ್ಣ) ಬರುವವರೆಗೂ ಕಾಯಿಸಿರಿ. ನಂತರ ಇನ್ನೊಂದು ಬಾಣಲೆಗೆ 3 ಚಮಚ ಎಣ್ಣೆ ಬಿಸಿ ಮಾಡಿ ಅದಕ್ಕೆ ಶುಂಠಿ, ಬೆಳ್ಳುಳ್ಳಿ ಹಾಕಿ ಹುರಿಯಿರಿ, ಆಮೇಲೆ ಈರುಳ್ಳಿ, ಹಸಿಮೆಣಸು, ಕ್ಯಾಪ್ಸಿಕಂ ಸೇರಿಸಿ ದೊಡ್ಡ ಉರಿಯಲ್ಲಿ ಅರ್ಧ ನಿಮಿಷಗಳವರೆಗೆ ಹುರಿಯಿರಿ. ನಂತರ ಟೊಮೆಟೋ ಸಾಸ್‌, ಚಿಲ್ಲಿ ಸಾಸ್‌, ಸೋಯಾ ಸಾಸ್‌, ವಿನೆಗರ್‌, ಪೆಪ್ಪರ್‌ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಸರಿಯಾಗಿ ಮಿಶ್ರಣ ಮಾಡಿ ಅದಕ್ಕೆ ಕಾಯಿಸಿಟ್ಟ ಬೇಬಿ ಕಾನ್‌ ನ್ನು ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿರಿ. ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಬಿಸಿ-ಬಿಸಿಯಾದ ಸ್ವಾದಿಷ್ಟಕರವಾದ ಬೇಬಿ ಕಾರ್ನ್ ಮಂಚೂರಿಯನ್‌ ಸವಿಯಿರಿ.

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?

Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?

Udupi: ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿ ಬದಲಿಲ್ಲ: ಕೋಟ

Udupi: ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿ ಬದಲಿಲ್ಲ: ಕೋಟ

Foot ball

ಬೆಂಗಳೂರಿನಲ್ಲಿ ಭಾರತ- ಮಾಲ್ಡೀವ್ಸ್‌   ವನಿತಾ ಫುಟ್‌ಬಾಲ್‌

Congress ಸರಕಾರದಿಂದ ಗೂಂಡಾಗಳಿಗೆ ಮಣೆ: ನಳಿನ್‌ ಟೀಕೆ

Congress ಸರಕಾರದಿಂದ ಗೂಂಡಾಗಳಿಗೆ ಮಣೆ: ನಳಿನ್‌ ಟೀಕೆ

Dec.24: ಬಸ್ರೂರು “ಅಪ್ಪಣ್ಣ ಹೆಗ್ಡೆ 90′: ವಕ್ವಾಡಿಯಲ್ಲಿ ಸಾರ್ವಜನಿಕ ಸಂಭ್ರಮ

Dec.24: ಬಸ್ರೂರು “ಅಪ್ಪಣ್ಣ ಹೆಗ್ಡೆ 90′: ವಕ್ವಾಡಿಯಲ್ಲಿ ಸಾರ್ವಜನಿಕ ಸಂಭ್ರಮ

Sasthan Toll Plaza: ವಾಣಿಜ್ಯ ವಾಹನಗಳಿಗೆ ಮತ್ತೆ ಶುಲ್ಕ: ಪ್ರತಿಭಟನೆ

Sasthan Toll Plaza: ವಾಣಿಜ್ಯ ವಾಹನಗಳಿಗೆ ಮತ್ತೆ ಶುಲ್ಕ: ಪ್ರತಿಭಟನೆ

Udupi: ಭಗವಾನುವಾಚ ಪುಸ್ತಕ ಇಂದು ಲೋಕಾರ್ಪಣೆ

Udupi: ಭಗವಾನುವಾಚ ಪುಸ್ತಕ ಇಂದು ಲೋಕಾರ್ಪಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Is Ashwin made a hasty decision: Is this how much Kohli is worth in the dressing room?

BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ :‌ ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?

OneNation, OneElection Bill: 31 JPC ಸದಸ್ಯರ ಕಾರ್ಯವ್ಯಾಪ್ತಿ ಏನು?ಸಲಹೆ ನೀಡುವವರು ಯಾರು

OneNation, OneElection Bill: 31 JPC ಸದಸ್ಯರ ಕಾರ್ಯವ್ಯಾಪ್ತಿ ಏನು?ಸಲಹೆ ನೀಡುವವರು ಯಾರು

3-winter-foods

Winter: ಚಳಿಗಾಲದಲ್ಲಿ ಆರೋಗ್ಯಕರವಾಗಿರಲು ಸೇವಿಸಬೇಕಾದ ಆಹಾರಗಳು ಇವು…

1-bg

Zakir Hussain ; ಸರಸ್ವತಿ, ಗಣಪತಿಯ ಆರಾಧಕರಾಗಿದ್ದರು ತಬಲಾ ಮಾಂತ್ರಿಕ

From 5 Rs Concert to 5 Grammys…: Tabla Ustad Zakir Hussain

Zakir Hussain: ‌5 ರೂ ಕಾನ್ಸರ್ಟ್‌ ನಿಂದ 5 ಗ್ರ್ಯಾಮಿಯವರೆಗೆ…: ತಬಲಾ ಉಸ್ತಾದ್‌ ನಾದಮಯ ಪಯಣ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-jyo

Asian Weightlifting: ಜೋಶ್ನಾ ನೂತನ ದಾಖಲೆ

1-bcc

U-19 ವನಿತಾ ಏಷ್ಯಾ ಕಪ್‌: ಫೈನಲ್‌ಗೆ ಭಾರತ

1-J-PP

Pro Kabaddi: ಜೈಪುರ್‌ 12ನೇ ವಿಜಯ

1-bangla

T20;ಮೂರೂ ಪಂದ್ಯ ಗೆದ್ದ ಬಾಂಗ್ಲಾ: ವಿಂಡೀಸಿಗೆ ವೈಟ್‌ವಾಶ್‌

1-pak

ODI; ತವರಲ್ಲೇ ಎಡವಿದ ದಕ್ಷಿಣ ಆಫ್ರಿಕಾ: ಸರಣಿ ಗೆದ್ದ ಪಾಕಿಸ್ಥಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.