ಬಾಂಗ್ಲಾ: ಹಿಂದೂಗಳ ಮೇಲೆ ದಾಳಿ; ಇತಿಹಾಸದ ಕಹಿನೆನಪು

Team Udayavani, Oct 20, 2021, 6:21 AM IST

ಬಾಂಗ್ಲಾ: ಹಿಂದೂಗಳ ಮೇಲೆ ದಾಳಿ; ಇತಿಹಾಸದ ಕಹಿನೆನಪು

ಬಾಂಗ್ಲಾದೇಶದಲ್ಲಿನ ಹಿಂದೂಗಳ ಮೇಲಿನ ದಾಳಿಗೆ ಕರಾಳ ಇತಿಹಾಸವೇ ಇದೆ. ಅಂದರೆ, ಸ್ವಾತಂತ್ರ್ಯೋತ್ಸವದ ಹಿಂದಿನಿಂದಲೂ ಬಾಂಗ್ಲಾದೇಶದ ಕೆಲವು ಕಡೆಗಳಲ್ಲಿ ಹಿಂದೂಗಳ ಮೇಲೆ ದಾಳಿ ನಡೆಯುತ್ತಲೇ ಇದೆ. ವಿಚಿತ್ರವೆಂದರೆ, ಜಲಿಯನ್‌ವಾಲಾ ಬಾಗ್‌ನಲ್ಲಿ ಬ್ರಿಟಿಷರು ನಡೆಸಿದ ನರಮೇಧಕ್ಕಿಂತಲೂ ದೊಡ್ಡ ನರಮೇಧಗಳು ಬಾಂಗ್ಲಾದಲ್ಲಿ ನಡೆಯುತ್ತಲೇ ಇವೆ.

ಇತಿಹಾಸಕ್ಕೆ ಹೋಗುವುದಾದರೆ, ಭಾರತಕ್ಕೆ ಸ್ವಾತಂತ್ರ್ಯ ಬರುವ ಮುನ್ನ ಈ ಭಾಗದಲ್ಲಿ ಹಿಂದೂಗಳ ಸಂಖ್ಯೆ ಒಟ್ಟಾರೆ ಜನಸಂಖ್ಯೆಯ ಶೇ.30ರಷ್ಟಿತ್ತು. ಆದರೆ ಈಗ ಹಿಂದೂ, ಕ್ರೈಸ್ತರು ಮತ್ತು ಬೌದ್ಧರನ್ನು ಸೇರಿಸಿ ಶೇ.8ರಷ್ಟಿದೆ. ಈ 75 ವರ್ಷಗಳಲ್ಲಿ ಇವರೆಲ್ಲ ಎಲ್ಲಿ ಹೋದರು ಎಂಬ ಪ್ರಶ್ನೆಗೆ ಸಿಗುವ ಉತ್ತರ, ಆಗಾಗ್ಗೆ ನಡೆಯುತ್ತಿರುವ ನರಮೇಧಗಳು ಮತ್ತು ಹೆಚ್ಚಿನವರು ಭಾರತಕ್ಕೆ ಪಲಾಯನ ಮಾಡಿರುವುದು.

1941ರ ಜನಗಣತಿ ಪ್ರಕಾರ, ಈಗಿನ ಬಾಂಗ್ಲಾದೇಶವಿರುವ ಭಾಗದಲ್ಲಿ ಇದ್ದ ಹಿಂದೂಗಳು ಸ್ಥಿತಿವಂತರು ಮತ್ತು ಶೈಕ್ಷಣಿಕವಾಗಿ ಬುದ್ಧಿವಂತರೂ ಆಗಿದ್ದರು. ನಗರಗಳಲ್ಲಿ ಪುಟ್ಟ ಸಂಖ್ಯೆಯಲ್ಲಿದ್ದ ಇವರು, ವೈದ್ಯ ವೃತ್ತಿ, ವಕೀಲಿಕೆ ಮಾಡುತ್ತಿದ್ದರೆ, ಹಳ್ಳಿಗಳಲ್ಲಿದ್ದ ಹಿಂದೂಗಳು ಕಲಾವಿದರು, ಮೀನುಗಾರಿಕೆ ಮಾಡುತ್ತಿದ್ದರು.

1946ರ ಅಕ್ಟೋಬರ್‌ನಲ್ಲಿ ನೋಖಾಲಿ ಎಂಬ ಜಿಲ್ಲೆಯಲ್ಲಿ ಹಿಂದೂಗಳ ಮೇಲೆ ಅವ್ಯಾಹತವಾಗಿ ದಾಳಿ ನಡೆದಿತ್ತು. ಮುಸ್ಲಿಂ ಲೀಗ್‌ನ ಪುಂಡರು ಹಿಂದೂಗಳ ಮೇಲೆ ದಾಳಿ ಮಾಡಿ ಕೊಲೆ, ಅತ್ಯಾಚಾರ, ಹಸುಗಳ ವಧೆ ಮಾಡಿದ್ದರು. ಇದಾದ ಮೇಲೆ ಇಲ್ಲಿ ಶೇ.20ರಷ್ಟಿದ್ದ ಹಿಂದೂಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಲೇ ಬಂದಿತು. ಈಗ ಇದೇ ಜಿಲ್ಲೆಯಲ್ಲಿ ಇರುವ ಹಿಂದೂಗಳ ಸಂಖ್ಯೆ ಶೇ.2-3 ಮಾತ್ರ.  1946ರ ಗಲಭೆ ಬಳಿಕ ಸ್ವತಃ ಮಹಾತ್ಮಾ ಗಾಂಧಿ ಅವರೇ ಕೋಲ್ಕತಾಗೆ ತೆರಳಿ ಹಿಂದೂ-ಮುಸ್ಲಿಮರ ಮಧ್ಯೆ ಶಾಂತಿ ಏರ್ಪಡಿಸುವ ಪ್ರಯತ್ನ ಮಾಡಿದ್ದರು. ಹೀಗಾಗಿಯೇ ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಅವರು ದಿಲ್ಲಿಯಲ್ಲಿ ಇರಲೇ ಇಲ್ಲ. ಕೋಲ್ಕತಾದಲ್ಲಿದ್ದು, ಶಾಂತಿ ಮಾತುಕತೆ ನಡೆಸಿದ್ದರು. ಆದರೆ ಇದು ಆಗ ಮಾತ್ರ ನಿಯಂತ್ರಣಕ್ಕೆ ಬಂದಿತ್ತೇ ಹೊರತು ಬಳಿಕ ಸರಿಯಾಗಲೇ ಇಲ್ಲ.

1950ರ ಜನವರಿಯಲ್ಲಿ ಭಾರತ ಸಂವಿಧಾನವನ್ನು ಅಳವಡಿಸಿಕೊಂಡ ಮೇಲೆ, ಪೂರ್ವ ಪಾಕಿಸ್ಥಾನದಲ್ಲಿ ಇನ್ನಷ್ಟು ಹಿಂಸೆ ಜಾಸ್ತಿಯಾಯಿತು. ಇದಕ್ಕೆ ಉದಾಹರಣೆ ಎಂದರೆ, ಬಾಂಗ್ಲಾದಲ್ಲಿದ್ದ ರೈಲ್ವೇ ಸೇತುವೆ ಮೇಲಿನ ನರಮೇಧ. ಅಂದರೆ 1950ರ ಫೆ.12ರಂದು ಇಲ್ಲಿನ ಆಶುಗೋಂಜ್‌ ಮತ್ತು ಭೈರಾಬ್‌ ಬಜಾರ್‌ ನಡುವಿನ ನದಿಯೊಂದರ ರೈಲ್ವೇ ಸೇತುವೆ ಮೇಲೆ ರೈಲೊಂದನ್ನು ನಿಲ್ಲಿಸಿ ಅದರಲ್ಲಿದ್ದ ಹಿಂದೂಗಳನ್ನು ಗುರುತಿಸಿ ನದಿಗೆ ಎಸೆಯಲಾಯಿತು.

ಇದನ್ನೂ ಓದಿ:ಬಾಂಗ್ಲಾ ಹಿಂದುಗಳ ರಕ್ಷಣೆಗೆ ಸಿಎಎ ಬೇಕು: ಕಾಂಗ್ರೆಸ್‌ ನಾಯಕ ಮಿಲಿಂದ್‌ ದೇವ್ರಾ!

ಈ ಘಟನೆಗಳ ಸಂಬಂಧವಾಗಿಯೇ ನೆಹರೂ ಸಂಪುಟದಲ್ಲಿ ಕ್ಯಾಬಿನೆಟ್‌ ದರ್ಜೆಯ ಸಚಿವರಾಗಿದ್ದ ಡಾ| ಶ್ಯಾಮ್‌ ಪ್ರಸಾದ್‌ ಮುಖರ್ಜಿ ಅವರು, ನೆಹರೂ ಅವರ ಮುಂದೆ ಪೂರ್ವ ಪಾಕಿಸ್ಥಾನ ಮತ್ತು ಭಾರತದ ನಡುವೆ ಜನರ ಪರಸ್ಪರ ಸ್ಥಳಾಂತರ ಮತ್ತು ಇಲ್ಲಿಗೆ ಬಂದ ಹಿಂದೂಗಳಿಗಾಗಿ ಭೂಮಿಯನ್ನು ಕೇಳುವಂತೆ ಸಲಹೆ ನೀಡಿದ್ದರು. ಆದರೆ ನೆಹರೂ ಇದಕ್ಕೆ ಒಪ್ಪಿಗೆ ನೀಡಿರಲಿಲ್ಲ. ಆದರೆ ಪಶ್ಚಿಮ ಬಂಗಾಲದಲ್ಲಿ ಮುಸ್ಲಿಮರ ಮೇಲೆ ದಾಳಿಯಾದ ಮೇಲೆ ನೆಹರೂ ಮತ್ತು ಪಾಕ್‌ ಪ್ರಧಾನಿ ಲಿಯಾಖತ್‌ ಅಲಿ ಖಾನ್‌ ಪರಸ್ಪರ ಒಪ್ಪಂದಕ್ಕೆ ಸಹಿ ಹಾಕಿದರು. ಈ ಒಪ್ಪಂದವನ್ನು ವಿರೋಧಿಸಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಶ್ಯಾಮ್‌ ಪ್ರಸಾದ್‌ ಮುಖರ್ಜಿ ಅವರು ಜನಸಂಘವನ್ನು ಕಟ್ಟಿದರು.

ಮುಖರ್ಜಿ ಅವರ ರಾಜೀನಾಮೆ ಅನಂತರ ಪಶ್ಚಿಮ ಬಂಗಾಲದವರೇ ಆದ ಕೆ.ಸಿ. ನಿಯೋಗಿ ಅವರೂ ಒಪ್ಪಂದ ವಿರೋಧಿಸಿ ರಾಜೀನಾಮೆ ಸಲ್ಲಿಸಿದರು. ಈ ಒಪ್ಪಂದದಂತೆ ಪೂರ್ವ ಪಾಕಿಸ್ಥಾನದಲ್ಲಿ ಹಿಂದೂಗಳಿಗೆ ರಕ್ಷಣೆ ಸಿಗಲೇ ಇಲ್ಲ. ಅಲ್ಲಿಂದ ಭಾರತಕ್ಕೆ ಬರುವ ಹಿಂದೂಗಳ ಸಂಖ್ಯೆಯೂ ಹೆಚ್ಚಾಯಿತು. ಜತೆಗೆ ಅಲ್ಲಿ ಹಿಂದೂಗಳ ನರಮೇಧವೂ ಮುಂದುವರಿಯಿತು. ಆದರೆ ನೆಹರೂ ಅವರು ತಮ್ಮ ಒಪ್ಪಂದವನ್ನೇ ನಂಬಿಕೊಂಡು ಕುಳಿತರು.

ಆದರೆ ಇದು ಎಂದಿಗೂ ಜಾರಿಯಾಗಲೇ ಇಲ್ಲ. ಪರಸ್ಪರ ದೇಶಗಳಲ್ಲಿನ ಅಲ್ಪಸಂಖ್ಯಾಕರ ರಕ್ಷಣೆಗಾಗಿ ಈ ಒಪ್ಪಂದಕ್ಕೆ ಸಹಿ ಹಾಕಿದರೂ ಪಾಕಿಸ್ಥಾನ ಸರಕಾರವೇ ಈ ಒಪ್ಪಂದವನ್ನು ಉಲ್ಲಂಘನೆ ಮಾಡಿತು. ಇದಕ್ಕೆ ಬಹುದೊಡ್ಡ ಉದಾಹರಣೆ ಎಂದರೆ 1971ರಲ್ಲಿ ಪಾಕಿಸ್ಥಾನ ಸೇನೆಯೇ ಬಾಂಗ್ಲಾದಲ್ಲಿ ನಡೆಸಿದ ಹಿಂದೂಗಳ ನರಮೇಧ. ಈ ವೇಳೆ ಸುಮಾರು 10 ಸಾವಿರ ಹಿಂದೂಗಳನ್ನು ಹತ್ಯೆ ಮಾಡಲಾಯಿತು ಎಂಬ ವರದಿಗಳಿವೆ.

ಇದಾದ ಬಳಿಕವೂ ಕೆಲವೊಮ್ಮೆ ಹಿಂದೂಗಳ ಸ್ಥಿತಿ ಉತ್ತಮವಾಗಿರುತ್ತದೆ, ಕೆಲವೊಮ್ಮೆ ಈಗ ಉದ್ಭವಿಸಿರುವಂಥ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

-ತಥಾಗತ ರಾಯ್‌
ತ್ರಿಪುರಾದ ಮಾಜಿ ರಾಜ್ಯಪಾಲರು

ಟಾಪ್ ನ್ಯೂಸ್

BGV-Gruhalkmi

Belagavi: ಮಹಿಳೆಯರ ಸಬಲರಾಗಿಸುವ ಗೃಹಲಕ್ಷ್ಮಿ ಯೋಜನೆ ನಿಲ್ಲಿಸುವ ಮಾತೇ ಇಲ್ಲ: ಸಿದ್ದರಾಮಯ್ಯ

Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ

Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ

ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು

ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು

Mulabagil

Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!

Karnataka: “ಸೈಬರ್‌ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್‌

Karnataka: “ಸೈಬರ್‌ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್‌

Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ

Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ

Renukaswamy Case: ಕೊನೆಗೂ ಶಿವಮೊಗ್ಗ ಜೈಲಿನಿಂದ ಜಗದೀಶ್ ಬಿಡುಗಡೆ

Renukaswamy Case: ಕೊನೆಗೂ ಶಿವಮೊಗ್ಗ ಜೈಲಿನಿಂದ ಬಿಡುಗಡೆಯಾದ ಜಗದೀಶ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

8

Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ವಿಡಿಯೋಗಳಿವು..

ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!

ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

Zakir Hussain; ನಾದಯೋಗಿಯ ನಿನಾದ ಸ್ತಬ್ಧ

Zakir Hussain; ನಾದಯೋಗಿಯ ನಿನಾದ ಸ್ತಬ್ಧ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

BGV-Gruhalkmi

Belagavi: ಮಹಿಳೆಯರ ಸಬಲರಾಗಿಸುವ ಗೃಹಲಕ್ಷ್ಮಿ ಯೋಜನೆ ನಿಲ್ಲಿಸುವ ಮಾತೇ ಇಲ್ಲ: ಸಿದ್ದರಾಮಯ್ಯ

Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ

Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ

ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು

ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು

Mulabagil

Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!

Karnataka: “ಸೈಬರ್‌ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್‌

Karnataka: “ಸೈಬರ್‌ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.