ನಿಮ್ಮ ಬ್ಯಾಂಕ್ ಖಾತೆಯನ್ನು ಹೇಗೆಲ್ಲಾ ಹ್ಯಾಕ್ ಮಾಡಲಾಗುತ್ತದೆ ಗೊತ್ತಾ?

ಆನ್ ಲೈನ್ ಬ್ಯಾಂಕಿಂಗ್ ಮಾಡುವ ಮೊದಲು ಈ ಸ್ಟೋರಿ ಓದಿ

Team Udayavani, Sep 1, 2020, 4:20 PM IST

hack

ಡಿಜಿಟಲ್ ಯುಗ ಬೆಳೆದಂತೆಲ್ಲಾ ಹಣದ ವ್ಯವಹಾರವೂ ಕೂಡ ಡಿಜಿಟಲ್ ಆಗಿದೆ. ಡಿಡಿ, ಚೆಕ್ ಹೋಗಿ ಮೊಬೈಲ್ ಬ್ಯಾಂಕಿಂಗ್, ಯುಪಿಐ ಪೇಮೆಂಟ್, ಇಂಟರ್ ನೆಟ್ ಬ್ಯಾಂಕಿಂಗ್ ವ್ಯವಸ್ಥೆ ಬಂದಿದೆ. ಬ್ಯಾಂಕಿಗೆ ಬಾಗಿಲು ಹಾಕುವಷ್ಟರಲ್ಲಿ ಹಣ ಪಾವತಿಸಬೇಕೆಂಬ ತರಾತುರಿಯಿಲ್ಲ. ಹೊಸ ಸ್ಕೀಂಗಳ ಬಗ್ಗೆ ಮಾಹಿತಿ ಪಡೆಯಲು ಬ್ಯಾಂಕ್ ಸಿಬ್ಬಂದಿಯೇ ಬೇಕಾಗಿಲ್ಲ. ಕೈಯಲ್ಲಿ ಮೊಬೈಲ್ ಒಂದು ಇದ್ದರೇ ಸಾಕು.

ಆನ್ ಲೈನ್ ಮೂಲಕ ವ್ಯವಹರಿಸುವಾಗ ಕನಿಷ್ಠ ಸುರಕ್ಷಾ ನಿಯಮ ಪಾಲಿಸದಿದ್ದರೆ ಬ್ಯಾಂಕುಗಳ ವೆಬ್ ಸೈಟ್ ಎಷ್ಟೇ ಭದ್ರವಾಗಿದ್ದರೂ ಕನ್ನ ಹಾಕುವವರಿಗೆ ಕೀಲಿ ಕೈ ಕೊಟ್ಟಂತಾಗುತ್ತದೆ.

ಒಂದು ಘಟನೆ: ಮಹೇಶ್ ತನ್ನ ಆಫೀಸ್ ಕೆಲಸದಲ್ಲಿ ತಲ್ಲೀನನಾಗಿರುತ್ತಾನೆ. ಆಗಲೇ ಆತನ ಮೊಬೈಲ್ ಗೊಂದು ಸಂದೇಶ ಬರುತ್ತದೆ. ಆತನ ಬ್ಯಾಂಕ್ ಆಕೌಂಟ್ ನಿಂದ  ಹತ್ತು ಸಾವಿರ ರೂ ವಿಥ್ ಡ್ರಾ ಆಗಿತ್ತು. ಒಂದು ಕ್ಷಣ ವಿಚಲಿತನಾದ ಮಹೇಶ್. ತಾನು ಡ್ರಾ  ಮಾಡಿಲ್ಲವಾದರೂ ಈಗೇಕೆ ಮೆಸೇಜ್ ಬಂತು  ? ತಕ್ಷಣ ಬ್ಯಾಂಕ್ ಬ್ಯಾಲೆನ್ಸ್ ಚೆಕ್ ಮಾಡಿದಾಗ ನಿಜವಾಗಲೂ ಆತನ ಆಕೌಂಟ್ ನಿಂದ ಹತ್ತು ಸಾವಿರ ಡ್ರಾ ಆಗಿತ್ತು. ಇದರಲ್ಲಿ ಯಾರ ಕೈವಾಡವಿತ್ತು ?

ಇಂತಹ ಸಾವಿರಾರು ಪ್ರಕರಣಗಳು ಪ್ರತಿನಿತ್ಯ ನಡೆಯುತ್ತಲೇ ಇರುತ್ತದೆ. ಹಣ ವರ್ಗಾವಣೆ, ನಾನಾ ಬಗೆಯ ಬಿಲ್ ಪಾವತಿ, ರೈಲು ಟಿಕೆಟ್, ಸಿನಿಮಾ ಟಿಕೆಟ್ ಬುಕ್ಕಿಂಗ್, ಮೊಬೈಲ್ ರಿಚಾರ್ಜ್ ಸೇರಿದಂತೆ ಅನೇಕ ಉಪಯೋಗಗಳು ಆನ್‌ಲೈನ್ ಬ್ಯಾಂಕಿಂಗ್‌ನಿಂದ ಲಭ್ಯ. ಆದರೆ ಯಾವುದೇ ಯೋಜನೆ ಎಷ್ಟು ಉಪಯೋಗವಿರುತ್ತದೆಯೋ ಅಷ್ಟೇ ದುರ್ಬಳಕೆ ಮಾಡಿಕೊಳ್ಳುವವರ ಸಂಖ್ಯೆಯೂ ಹೆಚ್ಚಿರುತ್ತದೆ.

ಇತ್ತೀಚಿನ ದಿನಗಳಲ್ಲಿ ಹಲವಾರು ಸೈಬರ್ ಕ್ರೈಂ ಪ್ರಕರಣಗಳನ್ನು ಕೇಳಿರುತ್ತೀರಾ. ಬ್ಯಾಂಕ್ ಸಿಬ್ಬಂದಿಯ ಸೋಗಿನಲ್ಲಿ ಕರೆ ಮಾಡಿ, ಗ್ರಾಹಕರ ಖಾತೆಯ ಸಂಪೂರ್ಣ ವಿವರ ಪಡೆದು ವಂಚನೆ ಮಾಡಿರುವ ವರದಿಗಳು, ಇ-ಮೇಲ್ ಅಥವಾ ಎಸ್ಎಂಎಸ್ ಗಳಿಂದ ಬಂದ ಅದೆಷ್ಟೋ ಲಿಂಕ್ ಗಳನ್ನು ಒತ್ತಿ ಹಣ ಕಳೆದುಕೊಂಡ ವರದಿಗಳನ್ನು ಪ್ರತಿನಿತ್ಯ ಟಿವಿ, ಪೇಪರ್ ನಲ್ಲಿ ಪ್ರಕಟವಾಗುತ್ತಿರುತ್ತವೆ.   ಇಂದು ಹ್ಯಾಕಿಂಗ್ ಕೂಡ ಪ್ರಬಲವಾಗಿದ್ದು ಹ್ಯಾಕಿಂಗ್ ಜಗತ್ತಿನಲ್ಲಿ ನಿಮ್ಮ ಹಣ ಸೇಫ್ ಆಗಿರಬೇಕಾದರೇ ನೀವೂ ಕೂಡ ಎಚ್ಚರವಿರಬೇಕು.

ಆನ್ ಲೈನ್  ಬ್ಯಾಂಕಿಗ್ ಗೆ ಮುನ್ನ ತೆಗೆದುಕೊಳ್ಳಬೇಕಾದ ಮುನ್ನೇಚ್ಚರಿಕೆಗಳು:

ಪಬ್ಲಿಕ್ ವೈಫೈನಲ್ಲಿ ಹಣ ವ್ಯವಹಾರ ಬೇಡ: ಹಣಕಾಸು ವ್ಯವಹಾರವನ್ನು ಪಬ್ಲಿಕ್ ವೈಫೈ ಅಥವಾ ಅಸುರಕ್ಷಿತ ವೈಫೈ ನಲ್ಲಿ ಮಾಡಲೇಬೇಡಿ . ಪಬ್ಲಿಕ್ ವೈಫೈ ಸಂಪರ್ಕ ಪಡೆದುಕೊಂಡು ನಿಮ್ಮ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಮಾಹಿತಿಯನ್ನು ನಮೂದಿಸಿದ್ದೀರಿ ಎಂದರೆ ಹ್ಯಾಕರ್ ಗಳ ಕೈಯಲ್ಲಿ ಸಿಲುಕಿದಂತೆ. ಅದ್ದರಿಂದ ಬಳಕೆ ಮಾಡುವಾಗ ಎಚ್ಚರವಿರಲಿ.

ಪಾಸ್ ವರ್ಡ್ ನಿಯಮಿತವಾಗಿ ಬದಲಾಯಸಿ: ಅತೀ ಸರಳ ವಿಧಾನವೆಂದರೇ ಪಾಸ್ ವರ್ಡ್ ಅನ್ನು ನಿಯಮಿತವಾಗಿ ಬದಲಾಯಿಸುವುದು. ಪಾಸ್ ವರ್ಡ್ ನಲ್ಲಿ ನಿಮ್ಮ ಹೆಸರು. ಆಪ್ತರ ಹೆಸರು, ಹುಟ್ಟಿದ ದಿನಾಂಕ. ಮೊಬೈಲ್ ಸಂಖ್ಯೆ ಬಳಸುವುದನ್ನು ಆದಷ್ಟು ಕಡಿಮೆ ಮಾಡಿ. ಪಾಸ್ ವರ್ಡ್ ಯಾವಾಗಲೂ ಅಕ್ಷರ ಮತ್ತು ಸಂಖ್ಯೆಯ ಕಾಂಬಿನೇಷನ್ ನನ್ನು ಹೊಂದಿರಲಿ.

ಇಮೇಲ್ ಲಿಂಕ್ ಗಳಿಂದ ನೆಟ್ ಬ್ಯಾಂಕಿಂಗ್ ಸೈನ್ಇನ್ ಬೇಡ: ಎಲ್ಲರೂ ಮಾಡುವ ಸಾಮಾನ್ಯ ತಪ್ಪೆಂದರೆ ಯಾರಾದರೂ ಲಿಂಕ್ ಕಳುಹಿಸಿದ ತಕ್ಷಣ ಅದರ ಮೂಲಕ ಲಾಗಿನ್ ಆಗುವುದು. ಇದರಿಂದ ನಿಮ್ಮ ಮಾಹಿತಿಗಳು ಹ್ಯಾಕರ್ ಗಳಿಗೆ ಸುಲಭವಾಗಿ ಸಿಗುತ್ತದೆ. ಇಮೇಲ್ ನಲ್ಲಿ ಶೇ . 90 ರಷ್ಟು ಮಾಹಿತಿ ಗಳು ಸ್ಪ್ಯಾಮ್ ಆಗುತ್ತವೆ ಎಂಬ ಮಾಹಿತಿ ಇದೆ.

ಕಾಲಕಾಲಕ್ಕೆ ಖಾತೆಯನ್ನು ಪರೀಕ್ಷಿಸಿ: ನೆಟ್ ಬ್ಯಾಂಕಿಂಗ್ ಗೆ ಲಾಗ್ ಇನ್ ಆದ ತಕ್ಷಣ ಲಾಸ್ಟ್ ಲಾಗ್ ಇನ್ ಆದ ಪ್ಯಾನೆಲ್ ಚೆಕ್ ಮಾಡಿ. ಸರಿಯಾದ ನೆಟ್ ವರ್ಕ್ ಇಲ್ಲದಿದ್ದರೆ ಆನ್ ಲೈನ್  ಬ್ಯಾಂಕಿಂಗ್ ನಡೆಸಲೇಬಾರದು. ಯುಪಿಐ ಪಾಸ್ ವರ್ಡ್ ಮತ್ತು ಪಿನ್ ನಂಬರ್ ಕ್ಲಿಷ್ಟಕರವಾಗಿದ್ದರೆ ಒಳಿತು.  ಪ್ಯಾಡ್ ಲಾಕ್ ಆಗಿರುವ ಸುರಕ್ಷಿತ ವೆಬ್ ಸೈಟ್ ನ್ನೆ  ಹೆಚ್ಚಾಗಿ ಬಳಸಬೇಕು.

ನೆಟ್ ಬ್ಯಾಕಿಂಗ್ ಮಾಡುವಾಗ ನೀವು ಬಳಸುತ್ತಿರುವ ವೆಬ್ ಸೈಟ್ ಸೆಕ್ಯೂರ್ ಆಗಿವೆಯೇ ಎಂದು ಪರಿಶೀಲಿಸಿ. ವೆಬ್ ಸೈಟ್ URL ನಲ್ಲಿ http ಎಂಬಲ್ಲಿ https ಇದೆಯಾ ಎಂದು ಖಚಿತಪಡಿಸಿಕೊಳ್ಳಿ. S ಎಂಬುದು ಸೆಕ್ಯೂರ್ ಎಂಬರ್ಥವನ್ನು ನೀಡುತ್ತದೆ.

ಸ್ವೈಪಿಂಗ್ ಮಶೀನ್ ಮತ್ತು ಎಟಿಎಂನಲ್ಲಿ ಇದೇ ರೀತಿಯ ಎಚ್ಚರ ವಹಿಸುವುದು ಸೂಕ್ತ. ಕಾರ್ಡ್ ಕ್ಲೋನರ್ (ತದ್ರೂಪು), ಕಾರ್ಡ್ ಸ್ಕಿಮ್ಮರ್, ರಹಸ್ಯ ಕ್ಯಾಮಾರಗಳ ಮೂಲಕ ಎಟಿಎಂ ಪಿನ್ ಗಳನ್ನು ಸುಲಭವಾಗಿ  ನಕಲು ಮಾಡಬಹುದು.

ಇ- ಬ್ಯಾಂಕ್ ವ್ಯವಹಾರ ಮುಗಿದ ತಕ್ಷಣ ಲಾಗೌಟ್ ಮಾಡುವುದು ಅವಶ್ಯ. ಲಾಗೌಟ್ ಮಾಡದಿದ್ದರೇ ಹ್ಯಾಕರ್ ಗಳು ಮಾಹಿತಿಯನ್ನು ಸುಲಭವಾಗಿ ಕದಿಯುವ ಸಾಧ್ಯತೆಯಿರುತ್ತದೆ.  ಇಲ್ಲವೇ ಯಾರಾದರೂ ತಪ್ಪಿ ಬಳಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.  ಮಾತ್ರಲ್ಲದೆ ಬ್ಯಾಂಕಿನ ಅಧಿಕೃತ ಆ್ಯಪ್ ಗಳನ್ನು ಬಳಸುವುದು ಹೆಚ್ಚು ಸೂಕ್ತ. ಆ್ಯಂಟಿ ವೈರಸ್ ಗಳನ್ನು ಅಪಡೇಟ್ ಮಾಡಿ ಮೊಬೈಲ್ ಮತ್ತು ಪಿಸಿ ಗಳನ್ನು ಹೆಚ್ಚು ಸುರಕ್ಷಿತವಾಗಿ ನೋಡಿಕೊಳ್ಳ ಬೇಕಾಗುವುದು. ಬೇರೆಯವರ ಡಿವೈಸ್ ಬಳಕೆ ಮಾಡುವಾಗಲೂ ಇದೇ ಎಚ್ಚರಿಕೆಯನ್ನು ಕಾಯ್ದುಕೊಳ್ಳಬೇಕಾಗುತ್ತದೆ. ಕೀ ಲಾಗರ್ ಅನ್ನು ಇನ್ ಸ್ಟಾಲ್ ಮಾಡಿಕೊಂಡು ನಿಮ್ಮ ಪಾಸ್ ವರ್ಡ್ ಸೇವ್ ಮಾಡಿಕೊಳ್ಳುವ ಅವಕಾಶವೂ ಇದೆ.

ಯಾವುದರಿಂದ ಹೆಚ್ಚು ಉಪಯೋಗವಿರುತ್ತದೆಯೋ ಯಾವುದನ್ನು ಹೆಚ್ಚು ಜನರು ಬಳಸುತ್ತಾರೋ ಅದನ್ನೇ  ದುರ್ಬಳಕೆ ಮಾಡಿಕೊಳ್ಳುವ ವ್ಯವಸ್ಥಿತ ಜಾಲವೂ ಇರುತ್ತದೆ. ಎಚ್ಚರ ತಪ್ಪಿ ಮೋಸ ಹೋಗುವ ಮುನ್ನ ಸುರಕ್ಷತಾ ಕ್ರಮಗಳನ್ನು ಬಳಸಿ ನಿಮ್ಮ ಆನ್‌ಲೈನ್ ಬ್ಯಾಂಕಿಂಗ್‌ನ್ನು ಸುರಕ್ಷಿತವಾಗಿ ನಡೆಸುವುದು ಒಳಿತು.

ಮಿಥುನ್ ಮೊಗೇರ

ಟಾಪ್ ನ್ಯೂಸ್

Pushpa 2: ಖಾಕಿಗೆ ಸವಾಲು‌ ಹಾಕುವ ʼಪುಷ್ಪ-2ʼ ಹಾಡು ರಿಲೀಸ್; ವಿವಾದದ ಬೆನ್ನಲ್ಲೇ ಡಿಲೀಟ್

Pushpa 2: ಖಾಕಿಗೆ ಸವಾಲು‌ ಹಾಕುವ ʼಪುಷ್ಪ-2ʼ ಹಾಡು ರಿಲೀಸ್; ವಿವಾದದ ಬೆನ್ನಲ್ಲೇ ಡಿಲೀಟ್

IRCTC: ತಾಂತ್ರಿಕ ದೋಷ- ರೈಲು ಟಿಕೆಟ್‌ ಬುಕ್ಕಿಂಗ್‌ ಸಮಸ್ಯೆ-ಪ್ರಯಾಣಿಕರ ಆಕ್ರೋಶ

IRCTC Down: ತಾಂತ್ರಿಕ ದೋಷ- ರೈಲು ಟಿಕೆಟ್‌ ಬುಕ್ಕಿಂಗ್‌ ಸಮಸ್ಯೆ-ಪ್ರಯಾಣಿಕರ ಆಕ್ರೋಶ

Kazakhstan: ವಿಮಾನ ದುರಂತ ಸಂದರ್ಭದ ಕೊನೆಯ ಕ್ಷಣದ ಭಯಾನಕ ವಿಡಿಯೋ ವೈರಲ್…

Kazakhstan: ವಿಮಾನ ದುರಂತ ಸಂದರ್ಭದ ಕೊನೆಯ ಕ್ಷಣದ ಭಯಾನಕ ವಿಡಿಯೋ ವೈರಲ್…

Belagavi: ಮಹಾತ್ಮ ಗಾಂಧಿ ಪುತ್ಥಳಿ ಅನಾವರಣಗೊಳಿಸಿದ ಸಿಎಂ ಸಿದ್ದರಾಮಯ್ಯ

Belagavi: ಮಹಾತ್ಮ ಗಾಂಧಿ ಪುತ್ಥಳಿ ಅನಾವರಣಗೊಳಿಸಿದ ಸಿಎಂ ಸಿದ್ದರಾಮಯ್ಯ

ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ನೆರವು: ಸಿಎಂ ಘೋಷಣೆ

Belagavi: ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ನೆರವು: ಸಿಎಂ ಘೋಷಣೆ

Mumbai: ಚಲಿಸುತ್ತಿರುವಾಗಲೇ ರಸ್ತೆ ಮಧ್ಯೆ ಹೊತ್ತಿ ಉರಿದ ಲ್ಯಾಂಬೋರ್ಘಿನಿ ಕಾರು!

Mumbai: ಚಲಿಸುತ್ತಿರುವಾಗಲೇ ರಸ್ತೆ ಮಧ್ಯೆ ಹೊತ್ತಿ ಉರಿದ ಲ್ಯಾಂಬೋರ್ಘಿನಿ ಕಾರು!

INDvAUS: ಯುವ ಆಟಗಾರನ ಕೆಣಕಿ ತಪ್ಪು ಮಾಡಿದರೆ ಕೊಹ್ಲಿ? ಶಿಕ್ಷೆ ಗ್ಯಾರಂಟಿ!

INDvAUS: ಯುವ ಆಟಗಾರನ ಕೆಣಕಿ ತಪ್ಪು ಮಾಡಿದರೆ ಕೊಹ್ಲಿ? ಶಿಕ್ಷೆ ಗ್ಯಾರಂಟಿ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2

Living together; ವಿಚ್ಛೇದನ ತಡೆಯಲು ಲಿವಿಂಗ್‌ ಟುಗೆದರ್‌ ಸಹಕಾರಿಯೇ?

am

Recipe: ಆರೋಗ್ಯಕ್ಕೆ ಅಮೃತ, ರುಚಿಗೆ ಅದ್ಭುತ ಈ ಚಟ್ನಿ!ಒಂದ್ಸಲ ಈ ವಿಧಾನದಲ್ಲಿ ಟ್ರೈ ಮಾಡಿ…

Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..

Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..

Is Ashwin made a hasty decision: Is this how much Kohli is worth in the dressing room?

BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ :‌ ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?

OneNation, OneElection Bill: 31 JPC ಸದಸ್ಯರ ಕಾರ್ಯವ್ಯಾಪ್ತಿ ಏನು?ಸಲಹೆ ನೀಡುವವರು ಯಾರು

OneNation, OneElection Bill: 31 JPC ಸದಸ್ಯರ ಕಾರ್ಯವ್ಯಾಪ್ತಿ ಏನು?ಸಲಹೆ ನೀಡುವವರು ಯಾರು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Pushpa 2: ಖಾಕಿಗೆ ಸವಾಲು‌ ಹಾಕುವ ʼಪುಷ್ಪ-2ʼ ಹಾಡು ರಿಲೀಸ್; ವಿವಾದದ ಬೆನ್ನಲ್ಲೇ ಡಿಲೀಟ್

Pushpa 2: ಖಾಕಿಗೆ ಸವಾಲು‌ ಹಾಕುವ ʼಪುಷ್ಪ-2ʼ ಹಾಡು ರಿಲೀಸ್; ವಿವಾದದ ಬೆನ್ನಲ್ಲೇ ಡಿಲೀಟ್

IRCTC: ತಾಂತ್ರಿಕ ದೋಷ- ರೈಲು ಟಿಕೆಟ್‌ ಬುಕ್ಕಿಂಗ್‌ ಸಮಸ್ಯೆ-ಪ್ರಯಾಣಿಕರ ಆಕ್ರೋಶ

IRCTC Down: ತಾಂತ್ರಿಕ ದೋಷ- ರೈಲು ಟಿಕೆಟ್‌ ಬುಕ್ಕಿಂಗ್‌ ಸಮಸ್ಯೆ-ಪ್ರಯಾಣಿಕರ ಆಕ್ರೋಶ

Kazakhstan: ವಿಮಾನ ದುರಂತ ಸಂದರ್ಭದ ಕೊನೆಯ ಕ್ಷಣದ ಭಯಾನಕ ವಿಡಿಯೋ ವೈರಲ್…

Kazakhstan: ವಿಮಾನ ದುರಂತ ಸಂದರ್ಭದ ಕೊನೆಯ ಕ್ಷಣದ ಭಯಾನಕ ವಿಡಿಯೋ ವೈರಲ್…

Belagavi: ಮಹಾತ್ಮ ಗಾಂಧಿ ಪುತ್ಥಳಿ ಅನಾವರಣಗೊಳಿಸಿದ ಸಿಎಂ ಸಿದ್ದರಾಮಯ್ಯ

Belagavi: ಮಹಾತ್ಮ ಗಾಂಧಿ ಪುತ್ಥಳಿ ಅನಾವರಣಗೊಳಿಸಿದ ಸಿಎಂ ಸಿದ್ದರಾಮಯ್ಯ

Bengaluru: ಚಲಿಸುತ್ತಿದ್ದ ರೈಲಿಗೆ ಸಿಲುಕಿ ಇಬ್ಬರು ಯುವಕರು ಸಾವು

Bengaluru: ಚಲಿಸುತ್ತಿದ್ದ ರೈಲಿಗೆ ಸಿಲುಕಿ ಇಬ್ಬರು ಯುವಕರು ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.