ಬೌಲರ್ ಆಗಿ ಕ್ರಿಕೆಟ್ ಆರಂಭಿಸಿ ಮುಂದೆ ಶ್ರೇಷ್ಠ ಬ್ಯಾಟ್ಸಮನ್ ಗಳಾದರು..


Team Udayavani, Jun 5, 2020, 6:41 PM IST

ಬೌಲರ್ ಆಗಿ ಕ್ರಿಕೆಟ್ ಆರಂಭಿಸಿ ಮುಂದೆ ಶ್ರೇಷ್ಠ ಬ್ಯಾಟ್ಸಮನ್ ಗಳಾದರು..

ಬಲಗೈ ಪ್ರಾಬಲ್ಯ ಹೊಂದಿದ್ದ ಸೌರವ್ ಗಂಗೂಲಿ ಎಡಗೈ ಬ್ಯಾಟ್ಸಮನ್ ಆದರು, ಎಡಗೈ ಬಲ ಹೊಂದಿದ್ದ ಸಚಿನ್ ಬಲಗೈ ಬ್ಯಾಟ್ಸಮನ್ ಆಗಿ ವಿಶ್ವ ಕ್ರಿಕೆಟ್ ಆಳಿದರು. ಫಾಸ್ಟ್ ಬೌಲರ್ ಆಗಿದ್ದ ಅನಿಲ್ ಕುಂಬ್ಳೆ ಮುಂದೆ ಶ್ರೇಷ್ಠ ಲೆಗ್ ಸ್ಪಿನ್ನರ್ ಆದರು.. ಹೀಗೆ ಮುಂದುವರಿಯುತ್ತದೆ ಒಂದು ತಿರುವುನಲ್ಲಿ ಬದುಕು ಬದಲಾದವರ ಪಟ್ಟಿ.

ಹೌದು. ಕೆಲವೊಂದು ಘಟನೆಗಳು, ತಿರುವುಗಳು ಬದುಕನ್ನು ಬದಲಾಯಿಸುತ್ತದೆ. ಕೆಲವರು ಯಶಸ್ವಿಯಾದರೆ ಮತ್ತೆ ಕೆಲವರ ವೃತ್ತಿ ಜೀವನ ಸಂಕಷ್ಟಕ್ಕೆ ಒಳಗಾಗುತ್ತದೆ. ಹೀಗೆಯೇ ಬೌಲರ್ ಗಳಾಗಿ ಕ್ರಿಕೆಟ್ ಗೆ ಕಾಲಿಟ್ಟು ನಂತರ ಯಶಸ್ವಿ ಬ್ಯಾಟ್ಸಮನ್ ಗಳಾದವರ ಪರಿಚಯ ಇಲ್ಲಿದೆ.

ಸ್ಟೀವ್ ಸ್ಮಿತ್: ಸದ್ಯ ಟೆಸ್ಟ್ ಕ್ರಿಕೆಟ್ ನ ಅಗ್ರ ಸ್ಥಾನೀಯ ಬ್ಯಾಟ್ಸಮನ್ ಮೊದಲ ಸಲ ಆಸೀಸ್ ಜೆರ್ಸಿ ತೊಟ್ಟಾಗ ಆಡಿದ್ದು ಲೆಗ್ ಸ್ಪಿನ್ನರ್ ಆಗಿ. ಹೌದು ಬೌಲರ್ ಆಗಿ ಕಾಂಗರೂ ತಂಡ ಸೇರಿದ ಸ್ಟೀವ್ ಸ್ಮಿತ್ ಕಠಿಣ ಪರಿಶ್ರಮದಿಂದ ಬ್ಯಾಟ್ಸಮನ್ ಆದವರು. ವೃತ್ತಿ ಜೀವನದ ಆರಂಭದಲ್ಲಿ ಬಾಲಂಗೋಚಿಯಾಗಿ ಬ್ಯಾಟಿಂಗ್ ಮಾಡುತ್ತಿದ್ದ ಸ್ಮಿತ್ ಇಂದು ಪಸಕ್ತ ಪೀಳಿಗೆಯ ಶ್ರೇಷ್ಠ ಬ್ಯಾಟ್ಸಮನ್ ಗಳಲ್ಲಿ ಓರ್ವ. ಸದ್ಯ ಸ್ಮಿತ್ 73 ಟೆಸ್ಟ್ ಪಂದ್ಯಗಳಿಂದ 7227 ರನ್ ಗಳಿಸಿದ್ದಾರೆ. ಬ್ಯಾಟಿಂಗ್ ನತ್ತ ಸಂಪೂರ್ಣ ಚಿತ್ತ ಹರಿಸಿದ ಸ್ಟೀವ್ ಸ್ಮಿತ್ ನಂತರ ಬೌಲಿಂಗ್ ಮಾಡುವುದನ್ನು ಕಡಿಮೆ ಮಾಡಿದರು. ಹಾಗಾಗಿ ಟೆಸ್ಟ್ ಕ್ರಿಕೆಟ್ ನಲ್ಲಿ ಗಳಿಸಿದ್ದು 17 ವಿಕೆಟ್ ಮಾತ್ರ. ಏಕದಿನ ಕ್ರಿಕೆಟ್ ನಲ್ಲಿ 4162 ರನ್ ಗಳಿಸಿರುವ ಸ್ಮಿತ್ 28 ವಿಕೆಟ್ ಪಡೆದಿದ್ದಾರೆ.

ರವಿ ಶಾಸ್ತ್ರೀ: ಟೀಂ ಇಂಡಿಯಾ ಮುಖ್ಯ ತರಬೇತುದಾರ ರವಿ ಶಾಸ್ತ್ರೀ ಈ ಹಿಂದೆ ಟೀಂ ಇಂಡಿಯಾದಲ್ಲಿ ಉತ್ತಮ ಆಲ್ ರೌಂಡರ್ ಆಗಿದ್ದರು. 1983ರ ವಿಶ್ವಕಪ್ ವಿಜೇತ ತಂಡದ ಸದಸ್ಯನಾಗಿದ್ದ ರವಿ ಶಾಸ್ತ್ರೀ ಟೀಂ ಇಂಡಿಯಾಗೆ ಆಯ್ಕೆಯಾಗಿದ್ದು ಸ್ಪಿನ್ನರ್ ಆಗಿ. 10ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸುತ್ತಿದ್ದ ರವಿ ಶಾಸ್ತ್ರೀ ನಂತರ ಟೀಂ ಇಂಡಿಯಾದಲ್ಲಿ ಆರಂಭಿಕ ಆಟಗಾರನಾಗಿ ಭಡ್ತಿ ಪಡೆದವರು. ಕೇವಲ 18 ತಿಂಗಳ ಅಂತರದಲ್ಲಿ ಕೆಳ ಕ್ರಮಾಂಕದ ಬ್ಯಾಟಿಂಗ್ ನಿಂದ ಆರಂಭಿಕ ಬ್ಯಾಟ್ಸಮನ್ ವರೆಗೆ ಏರಿದ್ದರು ರವಿ ಶಾಸ್ತ್ರೀ. 80 ಟೆಸ್ಟ್ ಪಂದ್ಯವಾಡಿರುವ ರವಿ ಶಾಸ್ತ್ರಿ 3830 ರನ್ ಗಳಿಸಿದ್ದಾರೆ. ಏಕದಿನ ಕ್ರಿಕೆಟ್ ನಲ್ಲಿ 3108 ರನ್ ಗಳಿಸಿದ್ದಾರೆ. ಟೆಸ್ಟ್ ಕ್ರಿಕೆಟ್ ನಲ್ಲಿ 151 ವಿಕೆಟ್ ಪಡೆದಿರುವ ರವಿ, ಏಕದಿನದಲ್ಲಿ 129 ವಿಕೆಟ್ ಕಬಳಿಸಿದ್ದಾರೆ.

ಕ್ಯಾಮರೂನ್ ವೈಟ್: ಒಂದು ಕಾಲದಲ್ಲಿ ಚುಟುಕು ಮಾದರಿ ಕ್ರಿಕೆಟ್ ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸಿದ್ದ ಕ್ಯಾಮರೂನ್ ಸ್ಪಿನ್ನರ್ ಆಗಿ ತಂಡ ಪ್ರವೇಶಿಸಿದವರು. ಆಸೀಸ್ ತಂಡದ ಪ್ರಧಾನ ಸ್ಪಿನ್ನರ್ ಆಗಿದ್ದ ಕ್ಯಾಮರೂನ್ ವೈಟ್ ಭಾರತ ಪ್ರವಾಸದಲ್ಲಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ವಿಕೆಟ್ ಪಡೆದು ಮಿಂಚಿದ್ದರು. ಆದರೆ ನಂತರ ಬ್ಯಾಟಿಂಗ್ ನತ್ತ ಚಿತ್ತ ಹರಿಸಿದ ವೈಟ್ ಭರ್ಜರಿಯಾಗಿ ಬ್ಯಾಟ್ ಬೀಸಲಾರಂಭಿಸಿದರು. ಐಪಿಎಲ್ ನಲ್ಲೂ ಮಿಂಚಿದ್ದ ನಂತರ ಬ್ಯಾಟ್ಸಮನ್ ಆಗಿಯೇ ಯಶಸ್ಸು ಕಂಡರು. 91 ಏಕದಿನ ಪಂದ್ಯದಲ್ಲಿ 2072 ರನ್ ಗಳಿಸಿರುವ ವೈಟ್, ಟಿ20 ಪಂದ್ಯಗಳಲ್ಲಿ ಆಸೀಸ್ ಪರ 984 ರನ್ ಗಳಸಿದ್ದಾರೆ. ವಿಶೇಷವೆಂದರೆ ಸ್ಪಿನ್ನರ್ ಆಗಿದ್ದ ವೈಟ್ ಏಕದಿನದಲ್ಲಿ ಪಡೆದಿದ್ದು ಕೇವಲ 12 ವಿಕೆಟ್ ಮಾತ್ರ.

ಸನತ್ ಜಯಸೂರ್ಯ: ಕ್ರಿಕೆಟ್ ನಲ್ಲಿ ಪವರ್ ಪ್ಲೇ ಗೆ ಹೊಸ ಅರ್ಥ ನೀಡಿದ ಸ್ಪೋಟಕ ಆಟಗಾರ ಲಂಕಾದ ಸನತ್ ಜಯಸೂರ್ಯ. ಆದರೆ ಸನತ್ ಜಯಸೂರ್ಯ ಬೌಲರ್ ಆಗಿ ತನ್ನ ಕ್ರಿಕೆಟ್ ಜೀವನ ಆರಂಭಿಸಿದವರು. ನಂತರ ಬ್ಯಾಟಿಂಗ್ ನತ್ತ ಚಿತ್ತ ಹರಿಸಿದ ಎಡಗೈ ಆಟಗಾರ ಜಯಸೂರ್ಯ ಕ್ರಿಕೆಟ್ ಜೀವನದಲ್ಲಿ 21 ಸಾವಿರಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. 1996ರ ವಿಶ್ವಕಪ್ ನಲ್ಲಿ ಜಯಸೂರ್ಯ ತನ್ನ ಬ್ಯಾಟಿಂಗ್ ಜಾದೂ ಏನೆಂಬುವುದನ್ನು ವಿಶ್ವಕ್ಕೆ ತೋರಿಸಿದರು. ಒಟ್ಟು 42 ಶತಕ ಸಿಡಿಸಿರುವ ಸನತ್ ಬೌಲಿಂಗ್ ನಲ್ಲೂ ಅದ್ಭುತ ಸಾಧನೆ ಮಾಡಿದ್ದಾರೆ. ಟೆಸ್ಟ್ ನಲ್ಲಿ 98 ವಿಕೆಟ್ ಪಡೆದಿರುವ ಜಯಸೂರ್ಯ ಏಕದಿನ ಕ್ರಿಕೆಟ್ ನಲ್ಲಿ 323 ವಿಕೆಟ್ ಕಬಳಿಸಿದ್ದಾರೆ. ಅಂದರೆ ವಿಶ್ವ ಶ್ರೇಷ್ಠ ಲೆಗ್ ಸ್ಪಿನ್ನರ್ ಶೇನ್ ವಾರ್ನ್ ಗಿಂತ ಹೆಚ್ಚು!

ಕೀರ್ತನ್ ಶೆಟ್ಟಿ ಬೋಳ

ಟಾಪ್ ನ್ಯೂಸ್

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mahakumbha–Kharge-Bjp

MahaKumbh Mela: ಪುಣ್ಯಸ್ನಾನದ ಬಗ್ಗೆ ಪ್ರಶ್ನಿಸಿ ಮಲ್ಲಿಕಾರ್ಜುನ ಖರ್ಗೆ ಸಾಧಿಸಿದ್ದೇನು?

kambalaHigh-tech touch for Kambala race

Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ

JIO SPACE FIBER 1

JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?

thumb news web exclusive uv (2) (1)

“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…

thumb web ex (1) (1) (1) (1) (1) (1) copy (1)

ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.