ಮಕ್ಕಳಿಗೆ ಬುದ್ಧಿ ಹೇಳುವಾಗಲೂ ಎಚ್ಚರಿಕೆ ಇರಲಿ

ಕೊರೊನಾ ಕಾಲಘಟ್ಟದಲ್ಲಿ ಹರೆಯದವರ ಮಾನಸಿಕ ಆರೋಗ್ಯ ಹದಗೆಟ್ಟಿದೆ.

Team Udayavani, Nov 27, 2021, 2:21 PM IST

ಮಕ್ಕಳಿಗೆ ಬುದ್ಧಿ ಹೇಳುವಾಗಲೂ ಎಚ್ಚರಿಕೆ ಇರಲಿ

ಇತ್ತೀಚೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಬೆಂಗಳೂರಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ರಾಹುಲ್‌ ನಮ್ಮೆಲ್ಲರ ಮನಕಲಕಿದ್ದಾನೆ. ಗುಂಡು ಹಾರಿಸಿ ಕೊಳ್ಳುವ ಗುಂಡಿಗೆ ಆ ಹದಿಹರೆಯದ ಹುಡುಗನಿಗೆ ಬಂದುದಾದರೂ ಹೇಗೆ ಎಂಬ ಪ್ರಶ್ನೆ ನಮ್ಮೆಲ್ಲರನ್ನೂ ಕಾಡದೇ  ಬಿಡದು. ಕನಸು ಕಾಣುವ ಮನಸಿಗೆ, ಕುಣಿದು ಕುಪ್ಪಳಿಸಿ ಖುಷಿಯಾಗಿ ಇರಬೇಕಿದ್ದ ವಯಸ್ಸಿಗೆ ಜುಗುಪ್ಸೆಯಾಕಾ ದರೂ ಬಂತೋ? ರಾಹುಲ್‌ ಮನಃಸ್ಥಿತಿ ಹೇಗಿತ್ತು ಎಂದು ಊಹಿಸಲು ಅಸಾಧ್ಯವಾದರೂ, ಈ ಘಟನೆಯಿಂದಾಗಿ ಸಮಾಜ, ಕುಟುಂಬ ಮತ್ತು ಪ್ರಾಯದವರು, ಇಂದು, ಹದಿಹರೆಯದಲ್ಲಿನ ಮಾನಸಿಕ ಸ್ಥಿತಿಯ ಬಗ್ಗೆ ಅವ ಲೋಕಿಸುವ ಅಗತ್ಯ ಬಂದಿದೆ.

ಕೊರೊನಾ ಕಾಲಘಟ್ಟದಲ್ಲಿ ಹರೆಯದವರ ಮಾನಸಿಕ ಆರೋಗ್ಯ ಹದಗೆಟ್ಟಿದೆ. ಶಾಲಾ- ಕಾಲೇಜುಗಳ ಚಟುವಟಿಕೆ ಇಲ್ಲದೆ, ಮನೆಯ  ವಾತಾವರಣ ಉಸಿರುಗಟ್ಟಿಸುವಂತಿದೆ. ಮಕ್ಕಳ ಅವಿಧೇಯತನ, ಆಕ್ರಮಣಕಾರಿ ವರ್ತನೆ, ಅನಾ ರೋಗ್ಯಕರ ಜೀವನಶೈಲಿಯಿಂದ ತಂದೆ-ತಾಯಿಗೆ ದೊಡ್ಡ ಸಮಸ್ಯೆಯಾಗುತ್ತಿದ್ದಾರೆ. ಹೆತ್ತವರು ಮಕ್ಕಳಿಗೆ ಹೆದರುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಅವರನ್ನು ಓಲೈಸಬೇಕೇ, ಪ್ರೋತ್ಸಾಹಿಸಬೇಕೇ, ಶಿಕ್ಷಿಸಬೇಕೇ, ಹೋದ ದಾರಿಗೆ ಬಿಡ ಬೇಕೇ ಅಥವಾ ಬುದ್ಧಿವಾದ ಹೇಳಬೇಕೇ ಎಂದು ತಿಳಿಯದೆ ಹೆತ್ತವರು ಪರದಾಡುತ್ತಿದ್ದಾರೆ.

ಇದು ರಾಹುಲ್‌ ಒಬ್ಬನ ಕಥೆಯಲ್ಲ. ಪ್ರಾಯಕ್ಕೆ ಬಂದ ಮಕ್ಕಳ ಅಸಹಜ ವರ್ತನೆಯನ್ನು ಅರ್ಥ ಮಾಡಿಕೊಳ್ಳುವುದೇ ಇಂದು ದೊಡ್ಡ ಸವಾಲು. ಪ್ರಾಯದ ಮಕ್ಕಳು ವಿವೇಕದಿಂದ ವರ್ತಿಸುವುದಿಲ್ಲ ಎಂಬುದು ಹೆತ್ತವರ ಅಳಲು. ಹನ್ನೊಂದು ವರ್ಷದವರೆಗೂ ಏನೂ ಸಮಸ್ಯೆ ಇರುವುದಿಲ್ಲ. ಪ್ರಾಯಕ್ಕೆ ಬಂದ ಕೂಡಲೇ, ವರ್ತನಾ ಸಮಸ್ಯೆ ಅಥವಾ ವ್ಯಕ್ತಿತ್ವದಲ್ಲಿ ನ್ಯೂನತೆಗಳು ತಲೆದೋರುತ್ತವೆ. ಮಕ್ಕಳ ಜತೆ ಹೇಗೆ ನಡೆದುಕೊಳ್ಳುವುದು ಎಂದು ಗೊತ್ತಾಗದೆ ಅನೇಕ ಹೆತ್ತವರು ನನ್ನ ಬಳಿ ಸಲಹೆಗೆ ಬಂದಿದ್ದರು.

ಘಟನೆ 1: ಕೆಲವು ಮಕ್ಕಳು ಅವರೇ ಇಷ್ಟಪಟ್ಟು ಸೇರಿದ ಕೋರ್ಸುಗಳಿಗೆ ಅವರೇ ಗೈರು ಹಾಜರಾಗುತ್ತಿದ್ದಾರೆ. ಬೈಕ್‌ ಇರದೇ ಬಸ್‌ನಲ್ಲಿ ಹೋಗಲು ಸಾಧ್ಯವಿಲ್ಲ ಎಂಬ ಹಠ. ದೊಡ್ಡವರ ಮಾತಿಗೆ ಕಿಮ್ಮತ್ತಿಲ್ಲ.  ಮುನಿಸಿಕೊಂಡರೆ ಮೂರ್ನಾಲ್ಕು ದಿನ ಏಕಾದಶಿ. “ಬೈಕ್‌ಗಾಗಿ ನನ್ನ ಮಗ ಇತ್ತೀಚೆಗೆ ಬಹಳ ಕೋಪ ಮಾಡಿಕೊಳ್ಳುತ್ತಾನೆ.  ಈ ಹಿಂದೆ ಮೊಬೈಲ್‌ ಒಡೆದಿದ್ದ, ಮೊನ್ನೆ ಲ್ಯಾಪ್‌ಟಾಪನ್ನೂ ಒಡೆದು ಬಿಟ್ಟ’ ಅಂತ ತಾಯಿಯೊಬ್ಬರು ಬಿಕ್ಕಳಿಸುತ್ತಿದ್ದರು. ಜೋರು ಮಾಡಿದ್ದಕ್ಕೆ ತಾಯಿಯನ್ನೇ ಬಚ್ಚಲ ಮನೆಯಲ್ಲಿ ಕೂಡಿ ಹಾಕಿದ್ದನಂತೆ. ಅನಂತರ ಫಿನಾಯಿಲ್‌ ಕುಡಿದು ಸಾಯಲೆತ್ನಿಸಿ, ಬದುಕುಳಿದ.

ಘಟನೆ 2: “ಟ್ಯೂಷನ್‌ಗಾಗಿ ಕಳಿಸುತ್ತೇವೆ. ಆದರೆ ಹುಡುಗರ ಜತೆ ತಿರುಗುತ್ತಾಳೆ. ಕೇಳಿದರೆ ಜಗಳಕ್ಕೆ ನಿಲ್ತಾಳೆ. ನೀವೇ ಏನಾದ್ರೂ ಬುದ್ಧಿ ಹೇಳಿ’ ಅಂತ ಇನ್ನೊಬ್ಬರು ತಾಯಿ, ನನ್ನ ಬಳಿ ದೂರು ತಂದಿದ್ದರು. ಹೆಣ್ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಲು ಸರಕಾರ ಅನೇಕ ಯೋಜನೆಗಳನ್ನು ತಂದಿದೆ. ಆದರೆ ಹುಡುಗಿಯರು ಓದುವುದನ್ನು ಬಿಟ್ಟು ಪ್ರೀತಿಯ ಹಿಂದೆ ಅಲೆಯುತ್ತಾರೆ. ಹುಡುಗರಿಂದ ಮೋಸ ಹೋಗಿ ಆತ್ಮಹ ತ್ಯೆಗೆ ಪ್ರಯತ್ನಿಸುತ್ತಾರೆ. ಹುಡುಗರದ್ದೂ ಇದೇ ಪಾಡು.

ಘಟನೆ 3: “ಒಳ್ಳೇ ಮಾರ್ಕ್ಸ್ ಬಂದ್ರೂ, ನಾನು ಯಾವುದಕ್ಕೂ ಲಾಯಕ್‌ ಅಲ್ಲ ಎಂದು ನಮ್ಮ ಮಗಳು ಪದೇಪದೆ ಪುಸ್ತಕ ತೆಗೆದು ಓದುತ್ತಿರುತ್ತಾಳೆ. ಯಾಕಾದರೂ ಪರೀಕ್ಷೆ ಬರುತ್ತದೋ ಎನ್ನುವಷ್ಟರ ಮಟ್ಟಿಗೆ ತಲೆಬಿಸಿ ಮಾಡಿಸುತ್ತಾಳೆ. 100ಕ್ಕೆ 95 ಬಂದರೂ ಆಕೆಯ ಕಣ್ಣಿಗೆ ನಿದ್ದೆ ಇಳಿಯೋದಿಲ್ಲ’- ಇದು ಮತ್ತೂಬ್ಬ ತಾಯಿಯ ಅಳಲು. ದುಃಖದ ಸಂಗತಿಯೆಂದರೆ, ಈ ವಿಚಾರವೂ ಆತ್ಮಹತ್ಯೆಗೆ ಸರಕಾಗಿದೆ. ಅಂಕಗಳಿಂದಲೇ ಆತ್ಮಗೌರವ ಎಂಬ ಕುರುಡು ನಂಬಿಕೆ ಮಕ್ಕಳಲ್ಲಿ ಬೆಳೆಯತೊಡಗಿದೆ.

ಘಟನೆ 4: ಕಾಮದ ಆಲೋಚನೆ ಜಾಸ್ತಿಯಾಗಿ ಚಿಕ್ಕಮ್ಮನಿಗೇ ಮುತ್ತು ಕೊಟ್ಟ ಹುಡುಗನೊಬ್ಬ ತಂದೆ- ತಾಯಿಗೆ ಆತಂಕ ಹುಟ್ಟಿಸಿದ್ದ. ಸದಾ ಕಾಲ ಅಂತರ್ಜಾಲದಲ್ಲಿ ಅಶ್ಲೀಲ ವೀಡಿಯೋ ನೋಡುವ ಆತನ ಚಟ ಬಿಡಿಸಲು ಮುಂದಾಗಿದ್ದರು. ಇದರಿಂದ ಸಿಟ್ಟಿಗೆದ್ದು, ಫ್ಯಾನಿಗೆ  ಹಗ್ಗಕಟ್ಟಿ, ಬ್ಲ್ಯಾಕ್‌ಮೇಲ್‌ ಮಾಡಿದ್ದ.

ಹೆತ್ತವರೇ ದಯವಿಟ್ಟು ಗಮನಿಸಿ… :

1.ಮಕ್ಕಳಿಗೆ ಅವರ ಭಾವನೆಗಳನ್ನು ಗುರುತಿಸಲು ಸಹಾಯಮಾಡಿ.  ಮಕ್ಕಳಿಗೆ ಭವಿಷ್ಯದ ಬಗ್ಗೆ ಆತಂಕವಿರುತ್ತದೆ. ನಿಧಾನವಾಗಿ ಕುಳಿತು ಮಾತನಾಡಿ.

  1. ಸದಾ ಕಾಲ ಮಕ್ಕಳಿಗೆ ಬುದ್ಧಿವಾದ ಹೇಳಬೇಡಿ. ತಲೆಹಿಡುಕ ಹೆತ್ತವರಾದರೆ ಖಂಡಿತ ಮಕ್ಕಳು ರೊಚ್ಚಿಗೇಳುತ್ತಾರೆ.
  2. ಹದಿಹರೆಯದಲ್ಲಿ ಲೈಂಗಿಕ ವಿಚಾರ, ಪಠ್ಯ ವಿಷಯಗಳ ಬಗ್ಗೆ ಮತ್ತು ತಮ್ಮ ಸೌಂದರ್ಯ ದ ಬಗ್ಗೆ ಹೆಚ್ಚಿನ ಕಾಳಜಿ ಉಳ್ಳವರಾಗಿರುತ್ತಾರೆ. ಸ್ನೇಹಿತರಂತೆ ಅಗತ್ಯ ಮಾಹಿತಿ ನೀಡಿ. ಯಾವ ವಿಚಾರದ ಬಗ್ಗೆ ಅವರಿಗೆ ಹೆಚ್ಚಿನ ಸಮಸ್ಯೆ ತೋರುತ್ತದೋ ಆ ವಿಷಯವನ್ನು ಲಘುವಾಗಿ ಪರಿಗಣಿಸದೆ, ಸಮಸ್ಯೆಯನ್ನು ಬಿಡಿಸಿಕೊಳ್ಳುವ ಸಂಯಮ ಕಲಿಸಿ.
  3. ಮನೆಯಲ್ಲಿ ಹೆತ್ತವರೇ ಕೆಲವೊಮ್ಮೆ ನಿಯಮ ಉಲ್ಲಂಘಿಸುತ್ತಾರೆ. ಅಪ್ಪ ಕುಡಿದು ಮನೆಗೆ ಬರಬಹುದು. ತಾಯಿ ಕೆಲವೊಮ್ಮೆ ತಾನೇ ಮಗುವಿನಂತೆ ವರ್ತಿಸಬಹುದು. ಅಜ್ಜಿ- ತಾತ ಮತ್ತು ಹೆತ್ತವರ ನಡುವಿನ ಜಗಳದಿಂದ ಮಕ್ಕಳು ರೋಸಿ ಹೋಗಬಹುದು. ಆಗ ಅವರು ತಮ್ಮದೇ ಭ್ರಮೆಯ ಪ್ರಪಂಚದಲ್ಲಿ ವಿಹರಿಸುವ ರೂಢಿಗಿಳಿಯುತ್ತಾರೆ.
  4. ಹೆತ್ತವರು ತಮ್ಮ ಮಾತಿನಲ್ಲಿ ಮತ್ತು ನಡವಳಿಕೆಯಲ್ಲಿ ಗಾಂಭೀರ್ಯ ತೋರಬೇಕು. ಅತೀ ಶಿಸ್ತು ಬೇಡ. ಸಲುಗೆಯೂ ಬೇಡ. ಮಕ್ಕಳನ್ನು ಸಮಸ್ಯೆ ಇದ್ದಾಗಲೂ ಗೌರವದಿಂದ ಕಾಣಿರಿ.
  5. ಮಾನಸಿಕ ಆರೋಗ್ಯಕ್ಕೆ ಶಾರೀರಿಕ ಚಟುವಟಿಕೆ ಮುಖ್ಯ. ಬೆಳಗ್ಗೆ ನೀವೂ ಬೇಗನೆ ಎದ್ದು ಮಕ್ಕಳನ್ನು ವಾಯುವಿಹಾರಕ್ಕೆ ಕರೆದೊಯ್ಯಿರಿ.
  6. ಕೇಳಿದ ಕೂಡಲೇ ಮಕ್ಕಳ ಆಸೆ ಪೂರೈಸಿದರೆ ಪ್ರತೀ ಸಲವೂ ಅದನ್ನೇ ಎದುರು ನೋಡುತ್ತಾರೆ. ಯಾವುದಾದರೂ ಸಂದರ್ಭದಲ್ಲಿ ಆಸೆ ಪೂರೈಸ ದಿದ್ದರೆ ಹತಾಶೆಗೆ ತಲುಪುತ್ತಾರೆ. ಆಸೆ ಪೂರೈಸುವಾಗ ಮೌಲ್ಯ ಕಲಿಸಿ.
  7. ಜೀವನದಲ್ಲಿ ಬರುವ ವಿವಿಧ ಪರೀಕ್ಷೆಗಳ ಬಗ್ಗೆ ಮಾಹಿತಿ ನೀಡಿ. ಅನಿರೀಕ್ಷಿತ ತಿರುವುಗಳ ಬಗ್ಗೆ ಉದಾಹರಣೆ ಕೊಡಿ. ಶಾಲಾ ಕಾಲೇಜುಗಳ ಪರೀಕ್ಷೆಯ ಬಗ್ಗೆ ಧೈರ್ಯ ನೀಡಿ. ಸೋಲು ಗೆಲುವಿನ ಮೆಟ್ಟಿಲು ಎಂಬ ಧ್ಯೇಯ ಸಾಲನ್ನು ಮನೆಯ ಗೋಡೆಯ ಮೇಲೆ ಬರೆದಿಡಿ.

ಮಕ್ಕಳನ್ನು ಅರಿಯಲು ಸುಲಭ ಗುಟ್ಟು :

ಹದಿಹರೆಯದವರನ್ನು ಅರ್ಥ ಮಾಡಿಕೊಳ್ಳಲು ಪ್ರಖ್ಯಾತ ಮನೋವೈದ್ಯ ಡಾ| ಸಿ.ಆರ್‌. ಚಂದ್ರಶೇಖರ್‌ ಸುಲಭದ ವಿವರಣೆ ನೀಡುತ್ತಾರೆ.ಇಂಗ್ಲಿಷ್‌ನಲ್ಲಿ ಪ್ರಾಯದವರನ್ನು ADOLESCENT ಎಂದು ಕರೆಯುತ್ತೇವೆ. ಪದದ ಒಂದೊಂದು ಅಕ್ಷರ ಅಸಹಜ ವರ್ತನೆಗೆ ಒಂದೊಂದು ಕಾರಣವನ್ನು ಹೇಳುತ್ತದೆ.

A= Autonomy : ಹರೆಯದವರು ಸಂಪೂರ್ಣ ಸ್ವಾತಂತ್ರ್ಯ ಬಯಸುತ್ತಾರೆ. ಸ್ವೇಚ್ಛೆಗೆ ಮನ ಜಾರುತ್ತದೆ. ಎಷ್ಟು ಸ್ವಾತಂತ್ರ್ಯ ಯಾವಾಗ ಕೊಡಬಹುದು ಎಂಬುದರ ಬಗ್ಗೆ ಹೆತ್ತವರು ಮತ್ತು ಮಕ್ಕಳು ರಾಜಿ ಮನೋಭಾವದಿಂದ ನಿರ್ಧರಿಸಬೇಕು.

D=Disappointment:

ಹರೆಯದಲ್ಲಿ ಅಗತ್ಯಗಳು ನೂರಾರು. ಆಹಾರ, ಫ್ಯಾಶನ್‌ ಅಥವಾ ವಾಹನ ವಿಚಾರವಾಗಿ ನಿರಾಶೆ ಸಹಜ. ಇದರಿಂದ ಕೀಳರಿಮೆ ಅಥವಾ ಅಂಜಿಕೆ  ಹುಟ್ಟುತ್ತದೆ. ತೃಪ್ತಿಯ ಮನೋಭಾವವನ್ನು ಕೊಳ್ಳುಬಾಕ ಪ್ರಪಂಚದಲ್ಲಿ ಬೆಳೆಸಿಕೊಳ್ಳುವುದು ಅಗತ್ಯ.

O= Old values V/s New: ಮನೆಯವರೊಂದಿಗೆ ಸಂಪ್ರದಾಯ ಕುರಿತಾಗಿ ಜಗಳಗಳು ಎದ್ದೇಳುತ್ತವೆ. ಮನೆಯವರು ಮತ್ತು ಮಕ್ಕಳು ಹೊಸ ಚಿಗುರು ಹಳೆಬೇರು ಎಂಬ ತಣ್ತೀ ಪಾಲಿಸಿದರೆ ಅನಗತ್ಯ ಚರ್ಚೆಗಳು ಮನಸ್ಸಿಗೆ ನೋವು ಉಂಟುಮಾಡುವುದಿಲ್ಲ.

L=Loneliness :

ಹರೆಯದವರು ಭಾವನಾತ್ಮಕವಾಗಿ ಮನೆಯ ಹಿರಿಯರಿಂದ ದೂರವಾಗುತ್ತಾರೆ. ಒಂಟಿತನ ಅವರನ್ನು ಕಾಡಬಹುದು. ಆತ್ಮೀಯ ಮಿತ್ರರು ಸಿಗುವುದು ಸುಲಭವಲ್ಲ. ಮಿತ್ರದ್ರೋಹಿಗಳು ಇರುತ್ತಾರೆ.

E= Emotionality:

ಲೈಂಗಿಕ ಬೆಳವಣಿಗೆ ಜತೆಗೆ ಭಾವನಾತ್ಮಕ ಬೆಳವಣಿಗೆ ಸಹಜ. ಪ್ರೀತಿ, ಸಿಟ್ಟು, ಖುಷಿ, ಜುಗುಪ್ಸೆ, ಧೈರ್ಯ, ಭಯ ಮತ್ತು  ಮತ್ಸರ ಎಲ್ಲವನ್ನೂ ಅತಿಯಾಗಿ ಅನುಭವಿಸುತ್ತಾರೆ. ಭಾವನೆಗಳ ನಿಯಂತ್ರಣವಿಲ್ಲದೆ ಆತ್ಮಹತ್ಯೆಗೆ ಶರಣಾಗಬಹುದು.

S= Sexual desire and behaviour:

ಲೈಂಗಿಕ ಭಾವನೆಗಳು ಪೂರ್ಣ ಪ್ರಮಾಣದಲ್ಲಿ ಪ್ರಕಟಗೊಳ್ಳುವ ಸಮಯವಿದು. ಲೈಂಗಿಕ ಆಸೆಗಳನ್ನೂ ವ್ಯಕ್ತಪಡಿಸಬೇಕೇ ಬೇಡವೇ ಎಂಬ ಗೊಂದಲ  ನೈತಿಕ ಮೌಲ್ಯಗಳಿಂದಾಗಿ ಬರುತ್ತವೆ. ಪರಿಚಯದ ವೈದ್ಯರಿಂದ ಮಾಹಿತಿ ಕೊಡಿಸಿ. ಇಲ್ಲದಿದ್ದರೆ ಅಂತರ್ಜಾಲದ ಮೊರೆ ಹೋಗುತ್ತಾರೆ.

C= Confusion:

ನಾನು ನನ್ನದು ಎಂಬ ಸ್ವಂತಿಕೆ ಬೆಳೆಯುವಂಥ ಸಮಯವಿದು. ಬೆಳವಣಿಗೆಯಲ್ಲಿನ ಗೊಂದಲ ಗಳಿಂದಾಗಿ, ಐಛಛಿnಠಿಜಿಠಿy crಜಿsಜಿs ನಿಂದಾಗಿ ಆತ್ಮಹತ್ಯೆಯ ಪ್ರಯತ್ನ ನಡೆಯುವ ಸಂದರ್ಭವಿದೆ.

E= Energy and expression :

ಬಿಸಿರಕ್ತದ ಹರೆಯದವರಿಗೆ ಸೃಜನಶೀಲತೆ ಹೆಚ್ಚಾಗಿ ಇರುವುದು. ಶೈಕ್ಷಣಿಕ ಒತ್ತಡಗಳು ಸೃಜನಶೀಲತೆಗೆ ಕಡಿವಾಣ ಹಾಕುತ್ತವೆ. ಅಭಿವ್ಯಕ್ತಿಗೆ ಬೆಲೆ ಸಿಗದೆ ಮಕ್ಕಳು ಕೊರಗುತ್ತಾರೆ. ಹೆತ್ತವರು ಮಕ್ಕಳ ಚಿತ್ರ ಬಿಡಿಸಿದರೆ, ಆಟೋಟಗಳಲ್ಲಿ ಬಹುಮಾನ ಪಡೆದರೆ ಹೆಚ್ಚು ಪ್ರಾಮುಖ್ಯ ಕೊಡುವುದಿಲ್ಲ. ಏನಿದ್ದರೂ ಅಂಕಗಳಿಗೆ ಹೆಚ್ಚಿನ ಮಹತ್ವ. ಎಲ್ಲದರ ಸಮತೋಲನ ಅಗತ್ಯ.

N= negative attitude:

ಪ್ರತಿಭೆಗೆ ಮನ್ನಣೆ ಇಲ್ಲ. ನಾನು ಜೀವನದಲ್ಲಿ ಮುಂದೆ ಬರುವುದು ಅಸಾಧ್ಯ ಎಂಬ ನಕಾರಾತ್ಮಕ ನಂಬಿಕೆ ಹರೆಯದಲ್ಲಿ ಕಾಡುತ್ತದೆ. ಮಕ್ಕಳಿಗೆ ಉತ್ತೇಜನ ನೀಡಿ.

T= Target :

ಜೀವನ ಎಂದರೇನು? ಇದರ ಗುರಿಯೇನು? ಎಂಬ ಪ್ರಶ್ನೆ ಅನೇಕ ಹರೆಯದವರನ್ನು ಅಧ್ಯಾತ್ಮದ ಚಿಂತನೆಗೆ ಹಚ್ಚುತ್ತದೆ. ಒಂದು ದಿನ ಸಾಯುವುದಾದರೆ ಬದುಕಿ ಪ್ರಯೋಜನ ವೇನು, ಸಾಧಿಸಿ ಪ್ರಯೋಜನವೇನು? ಕಷ್ಟ ಪಟ್ಟು ಏನು ಪ್ರಯೋಜನ ಎಂಬ ಪ್ರಶ್ನೆ ಯಿಂದಲೂ ಆತಂಕ ಹೆಚ್ಚಾಗಿ ಮಕ್ಕಳು ಆತ್ಮಹತ್ಯೆಯ ಕಡೆಗೆ ಮುಖ ಮಾಡಬಹುದು.

ಡಾ| ಶುಭಾ

ಮಧುಸೂದನ್‌,

ಮನೋಚಿಕಿತ್ಸಾ ವಿಜ್ಞಾನಿ

ಟಾಪ್ ನ್ಯೂಸ್

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

owaisi (2)

Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು

farukh abdulla

Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

1-jmm

INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

prashanth-Kishore

Prashant Kishor; ಸಲಹೆ ನೀಡಲು ಒಂದು ಚುನಾವಣೆಗೆ ಪಡೆಯುಯುತ್ತಿದ್ದ ಶುಲ್ಕ ಬಹಿರಂಗ!

Kambala: ಹೊಸ ಪ್ರಯೋಗದತ್ತ ಕಂಬಳ: ಈ ಬಾರಿ ಒಂದಲ್ಲ, ಮೂರು ಹೊಸ ತಂತ್ರಜ್ಞಾನ ಅಳವಡಿಕೆ

Kambala: ಹೊಸ ಪ್ರಯೋಗದತ್ತ ಕಂಬಳ: ಈ ಬಾರಿ ಒಂದಲ್ಲ, ಮೂರು ಹೊಸ ತಂತ್ರಜ್ಞಾನ ಅಳವಡಿಕೆ

6

Home made food ನಿಜವಾಗಿಯೂ ಪೋಷಕಾಂಶದಿಂದ ತುಂಬಿದೆಯೇ…?

4-lemon-web

Health benefits: ನಿಂಬೆಹಣ್ಣಿನಿಂದ ಹಲವು ಆರೋಗ್ಯ ಪ್ರಯೋಜನಗಳು…

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

attack

Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ

1-reeee

Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.