Winter Skin Care: ಚಳಿಗಾಲದ ತ್ವಚೆಗಾಗಿ ತುಪ್ಪದ ಸೌಂದರ್ಯ ಪ್ರಯೋಜನಗಳು
Team Udayavani, Dec 11, 2024, 6:16 PM IST
ಚಳಿಗಾಲ ಪ್ರಾರಂಭವಾಗಿದ್ದು, ಇದು ತ್ವಚೆಯ ಮೇಲೆ ನೇರ ಪರಿಣಾಮ ಬೀರುತ್ತದೆ. ಹಿಂದಿನ ಕಾಲದಿಂದಲೂ ತುಪ್ಪ ಭಾರತೀಯರ ಅಡುಗೆಯಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ. ಇದು ಆರೋಗ್ಯಕರ ಕೊಬ್ಬಿನಿಂದ ಸಮೃದ್ಧವಾಗಿದೆ. ಅವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ತುಪ್ಪದಲ್ಲಿರುವ ಕೊಬ್ಬಿನಾಂಶ ಆರೋಗ್ಯಕರವಾಗಿದೆ. ಇದು ದೇಹಕ್ಕೆ ಶಕ್ತಿ ನೀಡುವುದರ ಜೊತೆಗೆ ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿರಿಸುತ್ತದೆ. ತುಪ್ಪ ವಿಟಮಿನ್ ಎ, ಡಿ, ಇ ಮತ್ತು ಅಂಶವನ್ನು ಹೊಂದಿದೆ. ಆರೋಗ್ಯ ಮಾತ್ರವಲ್ಲದೇ ತುಪ್ಪ ತ್ವಚೆಯ ಆರೋಗ್ಯವನ್ನು ಕೂಡಾ ಕಾಪಾಡುತ್ತದೆ.
ವಿಟಮಿನ್, ಕೊಬ್ಬಿನಾಮ್ಲ ಮತ್ತು ಉತ್ಕರ್ಷಣ ನಿರೋಧಕಗಳಿಂದ ತುಂಬಿರುವ ತುಪ್ಪ ಚರ್ಮದ ಆರೈಕೆಗೆ ಬಳಸಲಾಗುತ್ತದೆ. ತ್ವಚೆಗೆ ಹಚ್ಚಿದರೂ ಅಥವಾ ಸೇವಿಸಿದರೂ, ಚಳಿಗಾಲದ ಉದ್ದಕ್ಕೂ ಮೃದುವಾದ, ಹೊಳೆಯುವ ಚರ್ಮವನ್ನು ಕಾಪಾಡಿಕೊಳ್ಳುವಲ್ಲಿ ತುಪ್ಪ ಮುಖ್ಯ ಪಾತ್ರ ವಹಿಸುತ್ತದೆ.
ತ್ವಚೆಯ ಆರೈಕೆಗೆ ತುಪ್ಪವನ್ನು ಯಾವೆಲ್ಲಾ ರೀತಿಯಾಗಿ ಉಪಯೋಗಿಸಬಹುದು ಎಂಬುದನ್ನು ತಿಳಿದುಕೊಳ್ಳಲು ಮುಂದೆ ಓದಿ..
ಮಾಯಿಶ್ಚರೈಸೇಶನ್: ತುಪ್ಪ ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿದೆ. ಇದು ಚಳಿಗಾಲದ ಸಮಯದಲ್ಲಿ ಒಣ ತ್ವಚೆ ಹೊಂದಿರುವವರು ಅತ್ಯುತ್ತಮ ನೈಸರ್ಗಿಕ ಮಾಯಿಶ್ಚರೈಸರ್ ಆಗಿ ಉಪಯೋಗಿಸಬಹುದು.
ನೈಸರ್ಗಿಕ ಹೊಳಪು: ತುಪ್ಪದ ನಿಯಮಿತ ಬಳಕೆಯಿಂದ ಚರ್ಮವನ್ನು ಪೋಷಿಸುವ ಮೂಲಕ ಆರೋಗ್ಯಕರ, ನೈಸರ್ಗಿಕ ಹೊಳಪನ್ನು ಕಾಪಾಡಿಕೊಳ್ಳಲು ಸಹಾಯವಾಗುತ್ತದೆ.
ಉರಿಯೂತ ಕಡಿಮೆ ಮಾಡುತ್ತದೆ: ತುಪ್ಪ ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಇದು ಕಿರಿಕಿರಿ ಉಂಟು ಮಾಡುವ ಅಥವಾ ಉರಿಯೂತದ ಚರ್ಮವನ್ನು ಶಮನಗೊಳಿಸುತ್ತದೆ.
ಶೀತ ಹವಾಮಾನದ ವಿರುದ್ಧ ರಕ್ಷಿಸುತ್ತದೆ: ತುಪ್ಪದಲ್ಲಿರುವ ಕೊಬ್ಬಿನಾಮ್ಲಗಳು ತ್ವಚೆಯನ್ನು ಶೀತ ಹವಾಮಾನದ ತಂಪಾದ ಗಾಳಿಯಿಂದಾಗುವ ಪರಿಣಾಮದಿಂದ ರಕ್ಷಿಸುತ್ತದೆ. ಶುಷ್ಕತೆ ಮತ್ತು ಒರಟುತನವನ್ನು ತಡೆಯುತ್ತದೆ.
ಅಕಾಲಿಕ ವಯಸ್ಸನ್ನು ತಡೆಯುತ್ತದೆ: ವಿಟಮಿನ್ ಇ, ತುಪ್ಪದಂತಹ ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿರುವ ಆಕ್ಸಿಡೇಟಿವ್ ಒತ್ತಡ ಎದುರಿಸಲು ಸಹಾಯ ಮಾಡುತ್ತದೆ. ಪರಿಸರ ಹಾನಿಯಿಂದ ಚರ್ಮವನ್ನು ರಕ್ಷಿಸುತ್ತದೆ ಮತ್ತು ವಯಸ್ಸಾದಂತೆ ಕಾಣುವ ಸೂಚನೆಗಳನ್ನು ಕಡಿಮೆಗೊಳಿಸುತ್ತದೆ.
ಒಡೆದ ತುಟಿಗಳಿಗೆ ಪರಿಹಾರ: ತುಟಿಗಳಿಗೆ ತುಪ್ಪ ಹಚ್ಚುವುದರಿಂದ ತೇವಾಂಶ ಮತ್ತು ಮೃದುತ್ವವನ್ನು ಕಾಪಾಡಲು ಸಹಾಯ ಮಾಡುತ್ತದೆ. ಇದು ಚಳಿಗಾಲದಲ್ಲಿ ತುಟಿಗಳಿಗೆ ನೈಸರ್ಗಿಕ ಪರಿಹಾರವಾಗಿದೆ.
ತ್ವಚೆಯನ್ನು ಮೃದುಗೊಳಿಸುತ್ತದೆ: ತುಪ್ಪವನ್ನು ನಿಯಮಿತವಾಗಿ ತ್ವಚೆಗೆ ಹಚ್ಚಿಕೊಳ್ಳುವುದರಿಂದ ಚರ್ಮದ ಮೇಲ್ಮೈ ಮತ್ತು ಪೋಷಿಸುವ ಮೂಲಕ ಚರ್ಮವನ್ನು ಮೃದು ಮತ್ತು ನಯವಾಗಿಸಲು ಸಹಾಯ ಮಾಡುತ್ತದೆ.
ಚರ್ಮದ ಪುನರುತ್ಪಾದನೆಯನ್ನು ಉತ್ತೇಜಿಸುವ ಅಗತ್ಯ ಪೋಷಕಾಂಶಗಳನ್ನು ಒದಗಿಸುವ ಮೂಲಕ ಬಿರುಕುಗೊಂಡ ಚರ್ಮವನ್ನು ಗುಣಪಡಿಸಲು ಇದು ಸಹಾಯ ಮಾಡುತ್ತದೆ.
ತುಪ್ಪದಲ್ಲಿರುವ ವಿಟಮಿನ್‌ಗಳು ಮತ್ತು ಉತ್ಕರ್ಷಣ ನಿರೋಧಕಗಳು ತ್ವಚೆಗೆ ಸಹಕಾರಿಯಾಗಿದೆ. ತ್ವಚೆಯಲ್ಲಿನ ಸುಕ್ಕುಗಳನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ.
ತ್ವಚೆಯ ಮೇಲೆ ತುಪ್ಪವನ್ನು ಹೇಗೆ ಬಳಸಿಕೊಳ್ಳಬಹುದು ಎಂಬ ವಿಧಾನಗಳನ್ನು ತಿಳಿಯಿರಿ..
ಮಾಯಿಶ್ಚರೈಸರ್: ಸಾಮಾನ್ಯ ಮಾಯಿಶ್ಚರೈಸರ್ ಗಳನ್ನು ನೀವು ಹೇಗೆ ಬಳಸುತ್ತೀರೋ ಅದೇ ರೀತಿ ಸ್ವಲ್ಪ ಪ್ರಮಾಣದಲ್ಲಿ ತುಪ್ಪ ತೆಗೆದುಕೊಂಡು ಅದನ್ನು ನಿಮ್ಮ ಮುಖ ಮತ್ತು ದೇಹಕ್ಕೆ ನಿಧಾನವಾಗಿ ಮಸಾಜ್ ಮಾಡಿ. ನಿಯಮಿತವಾಗಿ ಹೀಗೆ ಮಾಡುತ್ತಾ ಬಂದರೆ ತ್ವಚೆ ಮೃದುವಾಗುತ್ತದೆ.
ಲಿಪ್ ಬಾಮ್: ಒಣ ಅಥವಾ ಒಡೆದ ತುಟಿಗಳಿಂದ ಪಾರಾಗಲು ಮಲಗುವ ಮುನ್ನ ತುಟಿಗಳಿಗೆ ತುಪ್ಪ ಹಚ್ಚಿ, ರಾತ್ರಿಯಿಡೀ ಹಾಗೆಯೇ ಬಿಟ್ಟು ಬೆಳಿಗ್ಗೆ ಸ್ವಚ್ಛಗೊಳಿಸುವುದರಿಂದ ತುಟಿಗಳು ಮೃದುವಾಗುತ್ತದೆ. ಉತ್ತಮ ಫಲಿತಾಂಶಕ್ಕಾಗಿ ಚಳಿಗಾಲದ ಉದ್ದಕ್ಕೂ ಈ ದಿನಚರಿಯನ್ನು ಮುಂದುವರಿಸಿ.
ಫೇಸ್ ಮಾಸ್ಕ್: ಕಡ್ಲೆ ಹಿಟ್ಟು, ಅರಿಶಿನ ಹಾಗೂ 2 ಚಮಚ ತುಪ್ಪ ಮಿಶ್ರಣ ಮಾಡಿ ಫೇಸ್ ಮಾಸ್ಕ್ ತಯಾರಿಸಿಕೊಳ್ಳಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ 15-20 ನಿಮಿಷಗಳ ಕಾಲ ಬಿಟ್ಟು ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ತ್ವಚೆಯ ಕಾಂತಿಗೆ ಇದು ಸಹಾಯ ಮಾಡುತ್ತದೆ.
ಬಾಡಿ ಸ್ಕ್ರಬ್: ತುಪ್ಪವನ್ನು ಸಕ್ಕರೆ ಅಥವಾ ಉಪ್ಪಿನೊಂದಿಗೆ ಮಿಶ್ರಣ ಮಾಡಿ ನೈಸರ್ಗಿಕ ಸ್ಕ್ರಬ್ ತಯಾರಿಸಿ. ಇದನ್ನು ತ್ವಚೆಗೆ ಹಚ್ಚಿಕೊಳ್ಳಿ. ಇದು ಸತ್ತ ಚರ್ಮದ ಕೋಶಗಳನ್ನು ನಿಧಾನವಾಗಿ ತೆಗೆದುಹಾಕುತ್ತದೆ. ತ್ವಚೆ ಮೃದು ಮತ್ತು ಕಾಂತಿಯುತವಾಗಿಸುತ್ತದೆ.
ಮೇಕಪ್ ರಿಮೂವರ್: ತುಪ್ಪವನ್ನು ಮೇಕಪ್ ರಿಮೂವರ್ ನಂತೆಯೂ ಬಳಸಬಹುದು. ವಾಟರ್ ಪ್ರೋಫ್ ಮೇಕಪ್ ಅಥವಾ ಇತರ ನೈಸರ್ಗಿಕ ಮೇಕಪ್ ಗಳನ್ನು ತೆಗೆಯಲು ಕಾಟನ್ ಪ್ಯಾಡ್‌ಗೆ ಸ್ವಲ್ಪ ತುಪ್ಪ ಹಚ್ಚಿಕೊಳ್ಳಿ. ಅದರ ಸಹಾಯದಿಂದ ಮೇಕಪ್ ತೆಗೆಯಿರಿ. ನಂತರ ಫೇಸ್‌ವಾಶ್ ಬಳಸಿ ಮುಖ ಸ್ವಚ್ಛಗೊಳಿಸಿ.
ತುಪ್ಪ ಹಲವು ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ತ್ವಚೆಗೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ. ತುಪ್ಪವನ್ನು ಆಹಾರದೊಂದಿಗೆ ಸೇವಿಸುವುದರ ಜೊತೆಗೆ ತ್ವಚೆಗೆ ಹಚ್ಚಿಕೊಳ್ಳುವುದರಿಂದ ಅನೇಕ ಸೌಂದರ್ಯ ಪ್ರಯೋಜನಗಳಿವೆ.
ತುಪ್ಪವನ್ನು ಚಳಿಗಾಲದ ತ್ವಚೆಯ ದಿನಚರಿಯಲ್ಲಿ ಸೇರಿಸಿಕೊಳ್ಳುವ ಮೂಲಕ, ನೀವು ಎಲ್ಲಾ ಋತುವಿನಲ್ಲೂ ಮೃದುವಾದ, ಹೊಳೆಯುವ ತ್ವಚೆ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
SM Krishna: ಕೈ ಪಾಳಯ ಸೇರಿದ್ದ ಸಿದ್ದರಾಮಯ್ಯ…ಬದಲಾದ SMK ರಾಜಕೀಯ ಇತಿಹಾಸ & ಜೀವನ!
Exclusive: ಭಾರತ-ಮ್ಯಾನ್ಮಾರ್ ಗಡಿ; ಮೋದಿ ಸರ್ಕಾರದ Fence ನಿರ್ಮಾಣ ಯೋಜನೆಗೆ ವಿರೋಧವೇಕೆ!
ಅತಿಯಾದ ಉಪ್ಪಿನ ಆಹಾರವನ್ನು ಸೇವಿಸುತ್ತೀರಾ? ಹಾಗಿದ್ರೆ…ನಿಮಗೆ ಅಪಾಯ ಕಟ್ಟಿಟ್ಟ ಬುತ್ತಿ!
Year Ender: ಸೌತ್‌ನಲ್ಲಿ ಈ ವರ್ಷ ಸಿನಿಮಾಗಿಂತ ವಿವಾದಗಳದ್ದೇ ಹೆಚ್ಚು ಸದ್ದು – ಸುದ್ದಿ
Fadnavis; ತಾಳ್ಮೆ, ನಾಯಕತ್ವಕ್ಕೆ ನಿಷ್ಠ ಕುಶಾಗ್ರಮತಿಗೆ ಮತ್ತೆ ಹುದ್ದೆ ಒಲಿಯಿತು
MUST WATCH
ಹೊಸ ಸೇರ್ಪಡೆ
Kanyana: ಅಂಗಡಿ ಮುಂದೆ ಯುವಕನ ಮೃತದೇಹ ಪತ್ತೆ
Madikeri: ವಧುವಿನ ಕೊಠಡಿಯಿಂದ ಚಿನ್ನಾಭರಣ ಕಳವು ಮಾಡಿದ ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸರು
Mangaluru: ಶುಭ ಸುದ್ದಿ… ಹೊಸ ವರ್ಷಕ್ಕೆ ಮಂಗಳೂರಿನಿಂದ ಸಿಂಗಾಪುರಕ್ಕೆ ನೇರ ವಿಮಾನ
Sagara: ಖಾಸಗಿ ಲಾಡ್ಜ್‌ನಲ್ಲಿ ಶಿರಸಿ ಮೂಲದ ವ್ಯಕ್ತಿ ನೇಣಿಗೆ ಶರಣು
ಮಂಗಳೂರು ನಗರ ಭಾಗದ ರೈಲ್ವೆ ಮಾರ್ಗ ನೈರುತ್ಯ ರೈಲ್ವೆಯಡಿ ಕಾರ್ಯನಿರ್ವಹಿಸಲು ಪ್ರಸ್ತಾಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.