ನಿನ್ನ ನೀ ಗೌರವಿಸದೇ… : ಸಕಾರಾತ್ಮಕ ಬದುಕಿಗೊಂದು ಕೈ ದೀವಿಗೆ
ಶ್ರೀರಾಜ್ ವಕ್ವಾಡಿ, Jul 2, 2021, 9:05 AM IST
ಸಮಸ್ಯೆಗಳು ಮನುಷ್ಯನಿಗೆ ಬಾರದೆ, ಮರಕ್ಕೆ ಬರುವುದಿಲ್ಲ. ಅದನ್ನು ಹೇಗೆ ಎದುರಿಸಿ ಬದುಕ ಬೇಕು ಎನ್ನುವುದು ಅರಿಯಬೇಕಾದದ್ದು ಅಗತ್ಯ. ಆತ್ಮ ಗೌರವ ಇಲ್ಲದವ ಎಲ್ಲಿಯೂ ಸಲ್ಲುವುದಿಲ್ಲ ಎನ್ನುವುದಕ್ಕೆ ಉದಾಹರಣೆ ನೀಡಬೇಕೆಂದಿಲ್ಲ. ನಿನ್ನ ನೀ ಒಪ್ಪದಿರೇ, ನಿನ್ನ ನೀ ನಂಬದಿರೇ, ನಿನ್ನ ನೀ ಗೌರವಿಸದಿರೇ… ಎನೇ ಮಾಡಿದರೂ ಅದು ವ್ಯರ್ಥ.
ನಿನ್ನನ್ನು ನೀನು ಗೌರವಿಸುವುದು, ನಿನ್ನ ಬಗ್ಗೆ ಒಳ್ಳೆಯದ್ದನ್ನು ಆಲೋಚಿಸುವುದು, ಅದರ ವಿಧಾನವನ್ನು ತಿಳಿದುಕೊಳ್ಳುವುದು ಅದರ ರೂಪುರೇಷೆಗಳನ್ನು, ಅದರ ಗುಣಾವಗುಣಗಳನ್ನು ತಿಳಿದುಕೊಳ್ಳುವುದು. ಅದಕ್ಕಾಗಿ ಅಧ್ಯಯನ ಮಾಡುವುದು.
ನಿನ್ನ ಪ್ರಾಧಾನ್ಯತೆ, ಅವಸರ, ನಿನ್ನ ಸ‍್ಥಾನ ಸಮಾಜದಲ್ಲಿ ನಿನಗಿರುವ ಪ್ರಾತಿನಿಧ್ಯವನ್ನು ಗ್ರಹಿಸುವುದು. ನಾನು ಸಮಾಜಕ್ಕೆ ಬೇಕು. ಅದೇ ರೀತಿ ನೀನು ಬೇಕು. ಅದಕ್ಕೆ ನೀನು ನಾನು ಒಂದಾಗಬೇಕು. ಒಂದಾದರೇ ಸಮಾಜಕ್ಕೆ ಮತ್ತೊಂದಿಷ್ಟು ಬಲ ಸಿಕ್ಕಂತಾಗುತ್ತದೆ. ನಮ್ಮಿಬ್ಬರಿಗೂ ಶ್ರೇಯಸ್ಸು.
ನಿನಗೆ ಸಮಾಜ ಏನು ಮಾಡಿದೆ ಎಂಬುವುದಕ್ಕಿಂತ ಮೊದಲು ಸಮಾಜಕ್ಕೆ ಏನು ಮಾಡಿದ್ದೀಯಾ ಎಂದು ನಿನ್ನನ್ನು ನೀನು ಪ್ರಶ್ನಿಸಿಕೋ ಎನ್ನುತ್ತಾರೆ ಅಮೆರಿಕಾದ ಮಾಜಿ ಅಧ್ಯಕ್ಷ ಜಾನ್ ಎಫ್. ಕೆನಡಿ. ಇದರಲ್ಲಿ ಎಷ್ಟೋ ನಿಜಾಂಶ ನಿಕ್ಷಿಪ್ತವಾಗಿದೆ. ಅದರಿಂದಲೇ ಇಂದು ನಾವು ದೇಶಾಧಿನೇತಾರರನ್ನು, ತ್ಯಾಗಿಗಳನ್ನು, ಸ್ವಾತಂತ್ರ್ಯಕ್ಕಾಗಿ ಹಗಲು ರಾತ್ರಿ ಹೋರಾಡಿ ಆತ್ಮಾರ್ಪಣೆ ಮಾಡಿದವ ಅಮರ ಸಮರ ಶಾಂತಿ ಯೋದರನ್ನು ಗುರುತಿಟ್ಟುಕೊಂಡಿದ್ದೇವೆ. ಸಮಾಜ ನಮ್ಮನ್ನು ಗುರುತಿಟ್ಟುಕೊಳ್ಳುವಂತೆ ಮಾಡುವ ಮುನ್ನಾ ನಾವು ನಮಗೇ ಗುರುತಿಟ್ಟುಕೊಳ್ಳುವಂತೆ ಮಾಡಬೇಕು. ಅದು ಹೇಗೆ ಎಂದರೇ, ನಮ್ಮನ್ನು ನಾವು ಮೊದಲಿಗೆ ಗೌರವಿಸಿಕೊಳ್ಳುವಂತೆ ಬದುಕಬೇಕು. ಅದು ನಾವು ಸದಾ ಒಳ್ಳೆಯದನ್ನೇ ಮಾಡುವುದರಿಂದ, ಸದಾ ನಾವು ಧನಾತ್ಮಕತೆಯಿಂದ ಯೋಚನೆ ಮಾಡುವುದರಿಂದ ನಮ್ಮಲ್ಲಿ ಆತ್ಮ ಗೌರವ ಸಹಜವಾಗಿ ಹೆಚ್ಚಳವಾಗುತ್ತದೆ.
ಆತ್ಮ ಗೌರವ ಇರುವವರ ಹಾಗೂ ಆತ್ಮ ಗೌರವ ಇಲ್ಲದೇ ಇರುವವರ ಸಾಮಾನ್ಯ ಸಂಕೇತಗಳನ್ನು ಗಮನಿಸೋಣ ಬನ್ನಿ…
ಆತ್ಮ ಗೌರವದ ಧನಾತ್ಮಕ ಸಂಕೇತಗಳು :
* ನಾನು ಏನೆಯಾಗಲಿ ನನ್ನ ಸ್ವಂತಿಕೆಯಿಂದ ಬದುಕುವುದಕ್ಕೆ ಪ್ರಯತ್ನಿಸುತ್ತೇನೆ
* ಸಾಧ್ಯವಾದಷ್ಟು ಕೃತಕತೆಯಿಂದ ಹೊರತಾಗಿ ಬದುವುದಕ್ಕೆ ಬಯಸುತ್ತೇನೆ.
* ಭಾವನೆಗಳನ್ನು ಬಂದ ಹಾಗೆ ಸ್ವೀಕರಿಸಿ ಮುಂದೆ ನಡೆಯುತತ್ತೇನೆ. ಭಾವನೆಗಳಿಗೆ ಆ ಕ್ಷಣಕ್ಕೆ ಮಾತ್ರ ಸ್ಪಂದಿಸುತ್ತೇನೆ. ಭಾವನೆಗಳಿಗಾಗಿ ಹೆಚ್ಚು ಮರುಗುವುದಿಲ್ಲ.
* ಅನವಶ್ಯಕ ವಿಚಾರಗಳಿಗೆ ತಲೆ ಕೊಡದೆ ಇರುವುದು
* ಭೂತ ಕಾಲ ಹಾಗೂ ಭವಿಷ್ಯದ ಬಗ್ಗೆ ಹೆಚ್ಚು ಚಿಂತಿಸದೇ ವಾಸ್ತವದಲ್ಲಿ ಬದವುದಕ್ಕೆ ಸದಾ ಪ್ರಯತ್ನಿಸುವುದು
* ಎಲ್ಲದಕ್ಕೂ, ಎಲ್ಲರಿಗೂ ಸ್ಪಂದಿಸಿ ಎಲ್ಲರೊಂದಿಗೆ ವಿಶ್ವಾಸದಿಂದ ಇರುವುದಕ್ಕೆ ಪ್ರಯತ್ನ ಪಡುವುದು.
* ಇನ್ನೊಬ್ಬರ ಸಂತೋಷದಲ್ಲಿ ಭಾಗಿಯಾಗುವುದು. ದುಃಖಕ್ಕೆ ಪ್ರತಿಕ್ರಿಯಿಸುವುದು
* ಸುಖ ಹಾಗೂ ದುಃಖಗಳನ್ನು ಸಹಜವಾಗಿ ಸ್ವೀಕರಿಸುವುದು
* ಯೋಚನೆಗಳಿಗೆ ಮಿತಿಯಿಲ್ಲದೆ ಬದುವುದು.
* ನಿಮಗಾಗಿ ಇನ್ನೊಬ್ಬರನ್ನು ಒತ್ತಾಯ ಮಾಡುವುದಕ್ಕೆ ಹೋಗದೇ, ಯಾರಿಗೂ ಭಾರವಾಗದಂತೆ ಬದುಕುವುದು
* ನಿಮ್ಮ ಬದುಕಿಗೆ ನೀವೇ ಅಂತಿಮ ನಿರ್ಣಾಯಕರಾಗಿರುವಂತೆ ಬದುಕುವುದು
* ಸಾಧ್ಯವಾದಷ್ಟು ಆಶಾವಾದದಿಂದ ಬದುಕುವುದು
ಈ ಮೇಲಿನ ಎಲ್ಲಾ ಇರುವಿಕೆಯ ಪ್ರಯತ್ನಗಳು ಆತ್ಮ ಗೌರವದಿಂದ ಬದುಕುವ ಸಾಮಾನ್ಯ ಲಕ್ಷಣಗಳು ಎಂದು ಪರಿಗಣಿಸಬಹುದಾಗಿದೆ.
ಆತ್ಮ ಗೌರವಕ್ಕೆ ತದ್ವಿರುದ್ಧವಾಗಿರುವ ಸಾಮಾನ್ಯ ಸಂಕೇತಗಳು :
* ಬದುಕಿನಲ್ಲಿ ಸಣ್ಣ ಸಣ್ಣ ವಿಚಾರಗಳಿಗೂ ತುಂಬಾ ಕೊರಗುವುದು
* ಬದುಕಿನಲ್ಲಿ ವಾಸ್ತವಕ್ಕಿಂತ ಹೆಚ್ಚಾಗಿ ಮುಂದೇನಾಗುತ್ತದೋ ಎಂದು ತುಂಬಾ ಯೋಚನೆ ಮಾಡುವುದು
* ಅರ್ಹತೆಯನ್ನು ಮೀರಿದ ಆಸೆಗಳನ್ನು ಇಟ್ಟುಕೊಂಡು ಅದು ಫಲಿಸದಿದ್ದಾಗ ವಿಷಾದಿಸುವುದು
* ಪ್ರಯತ್ನ ಮಾಡುವುದಕ್ಕೂ ಹಿಂಜರಿಯುವುದು
* ಸಣ್ಣ ಸಣ್ಣ ವೈಫಲ್ಯಕ್ಕೂ ತುಂಬಾ ಮರುಗುವುದು
* ನ್ಯೂರೋಟಿಕ್ ಸೈನ್ಸ್ ಆಫ್ ಗಿಲ್ಟ್ ಅಥವಾ ಏನೋ ಮಹತ್ತರವಾದ ತಪ್ಪು ಮಾಡಿದ್ದೇವೆ ಎಂದು ಕೊರಗುವುದು. ಆ ಬಗ್ಗೆಯೇ ಹೆಚ್ಚು ತಲೆ ಕೆಡಿಸಿಕೊಳ್ಳುವುದು.
* ಎಲ್ಲಾ ವಿಚಾರಗಳಲ್ಲಿಯೂ ಅಸಂತೃಪ್ತಿಯಿಂದ ಇರುವುದು
* ಜಗತ್ತಿನ ಸಮಸ್ಯೆಯನ್ನು ತನಗೆ ಆಗುತ್ತಿದೆ ಎಂದು ಭಾವಿಸಿಕೊಳ್ಳುವುದು
* ಸುಲಭ ಸಾಧ್ಯವಾದ ವಿಚಾರಗಳಿಗೂ ನಕಾರಾತ್ಮಕವಾಗಿ ಯೋಚಿಸುವುದರ ಮೂಲಕ ಪ್ರಯತ್ನಶೀಲರಾಗದೇ ಇರುವದು.
ಈ ಮೇಲಿನ ಎಲ್ಲಾ ವಿಚಾರಗಳು ಯಾರಿಗೆ ಸಾಮಾನ್ಯವಾಗಿ ಇರುತ್ತದೆಯೋ ಅಂತವರಲ್ಲಿ ಆತ್ಮ ಗೌರವೇ ಇರುವುದಿಲ್ಲ. ಇವುಗಳನ್ನು ಆತ್ಮ ಗೌರವ ಿಲ್ಲದಿರುವವರ ಸಾಮಾನ್ಯ ಲಕ್ಷಣವೆಂದು ಪರಿಗಣಿಸಬಹುದು.
ಇದನ್ನೂ ಓದಿ : ಇಂದಿನಿಂದ ಖಾಸಗಿ ಬಸ್ ಸಂಚಾರ ಆರಂಭ – ಡ್ರೈವರ್ , ಕಂಡಕ್ಟರ್, ಮಾಲಕರ ಪ್ರತಿಕ್ರಿಯೆ ಕೇಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chocolate ಕೇವಲ ಸಸ್ಯಾಹಾರವೇ? ಸಸ್ಯಾಹಾರಿಗಳೇ ಗಮನಿಸಿ…
Guruprasad: ಲಾಟರಿ ಮಾರುತ್ತಿದ್ದ ಹುಡುಗ ʼಮಠʼ ಕಟ್ಟಿ ʼರಂಗನಾಯಕʼನಾಗಿ ಬೆಳೆದಿದ್ದೇಗೆ?
UV Fusion: ಮಾನವನ ಸ್ವಾರ್ಥ ವಿನಾಶಕ್ಕೆ ಕಾರಣವಾಗುತ್ತಿದೆಯೇ?
Shivaji Satam: ಕ್ಯಾಷಿಯರ್ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?
Prashant Kishor; ಸಲಹೆ ನೀಡಲು ಒಂದು ಚುನಾವಣೆಗೆ ಪಡೆಯುಯುತ್ತಿದ್ದ ಶುಲ್ಕ ಬಹಿರಂಗ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.