![kambala2](https://www.udayavani.com/wp-content/uploads/2025/02/kambala2-1-415x249.jpg)
![kambala2](https://www.udayavani.com/wp-content/uploads/2025/02/kambala2-1-415x249.jpg)
Team Udayavani, Nov 27, 2020, 4:25 PM IST
ವೃತ್ತಿಪರ ಬ್ಯಾಟ್ಸ್‌ಮನ್‌ಗಳ ಆಟವಾಗಿರುವ ಏಕದಿನ ಹಾಗೂ ಟಿ20 ಕ್ರಿಕೆಟ್‌ನಲ್ಲಿ ಚೇಸಿಂಗ್ ಎಂಬುದು ಈಗ ಸಮಸ್ಯೆಯೇ ಅಲ್ಲ. ಪಿಚ್ ಬ್ಯಾಟ್ಸ್‌ಮನ್‌ಗಳಿಗೆ ಸಹಕರಿಸಿದರೆ ಎಷ್ಟೇ ದೊಡ್ಡ ಮೊತ್ತವನ್ನೂ ನಿರಾಯಾಸವಾಗಿ ಹಿಂದಿಕ್ಕಬಹುದು. ಅಂತಿಮ ಓವರಿನಲ್ಲಿ ಬೃಹತ್ ಮೊತ್ತದ ಸವಾಲಿದ್ದರೂ ವಿಚಲಿತರಾಗಬೇಕಿಲ್ಲ.
ಹಾಗಾದರೆ ಏಕದಿನ ಪಂದ್ಯದ ಕೊನೆಯ ಓವರಿನಲ್ಲಿ ಅತ್ಯಧಿಕ ರನ್ ಬಾರಿಸಿ ಜಯಶಾಲಿಯಾದ ತಂಡ ಯಾವುದು ಎಂಬುದೊಂದು ಕುತೂಹಲದ ಸಂಗತಿ. ಇದಕ್ಕೆ ಉತ್ತರವಾಗುವ ತಂಡ ನ್ಯೂಜಿಲ್ಯಾಂಡ್. ಎದುರಾಳಿ ಶ್ರೀಲಂಕಾ. ಇದೇನೂ ತೀರಾ ಹಿಂದಿನ ಪಂದ್ಯವಲ್ಲ. 2013ರ ಹಂಬಂತೋಟ ಮುಖಾಮುಖಿ.
ಇಲ್ಲಿ ನ್ಯೂಜಿಲ್ಯಾಂಡ್ ಗೆಲುವಿಗೆ ಕೊನೆಯ ಓವರಿನಲ್ಲಿ 20 ರನ್ ಸವಾಲು ಎದುರಾಗಿತ್ತು. ಅದು ಒಟ್ಟು 25 ರನ್ ಬಾರಿಸಿ ಜಯಭೇರಿ ಮೊಳಗಿಸಿತು.
ಕಿವೀಸ್‌ಗೆ ಕಠಿನ ಸವಾಲು
ಮಳೆಯಿಂದ ಇಲ್ಲೇ ನಡೆಯಬೇಕಿದ್ದ ಮೊದಲ ಪಂದ್ಯ ರದ್ದುಗೊಂಡಿತ್ತು. ದ್ವಿತೀಯ ಮುಖಾಮುಖೀಗೂ ಮಳೆ ಎದುರಾಯಿತು. ಶ್ರೀಲಂಕಾ 23 ಓವರ್‌ಗಳಲ್ಲಿ ಒಂದಕ್ಕೆ 138 ರನ್ ಪೇರಿಸಿತು. ನ್ಯೂಜಿಲ್ಯಾಂಡಿಗೆ ಡಿ-ಎಲ್ ನಿಯಮದಂತೆ 23 ಓವರ್‌ಗಳಿಂದ 198 ರನ್ ತೆಗೆಯುವ ಕಠಿನ ಸವಾಲು ಎದುರಾಯಿತು.
11ನೇ ಓವರ್ ವೇಳೆ ಕಿವೀಸ್ ಸ್ಥಿತಿ 68ಕ್ಕೆ 4. ಟಾಮ್ ಲ್ಯಾಥಂ-ಲ್ಯೂಕ್ ರಾಂಚಿ 9.3 ಓವರ್‌ಗಳಿಂದ 93 ರನ್ ಜತೆಯಾಟ ನಡೆಸಿ ತಂಡವನ್ನು ಮೇಲೆತ್ತಿದರು. ಆದರೆ 21ನೇ ಓವರಿನಲ್ಲಿ ಇಬ್ಬರೂ ಒಟ್ಟೊಟ್ಟಿಗೇ ನಿರ್ಗಮಿಸಿದಾಗ ಲಂಕಾ ಮೇಲುಗೈ ಸಾಧಿಸಿತು.
ಕಿವೀಸ್ 13 ಎಸೆತಗಳಿಂದ 33 ರನ್ ತೆಗೆಯುವ ಒತ್ತಡದಲ್ಲಿತ್ತು. ಈ ಹಂತದಲ್ಲಿ ಸಿಡಿದು ನಿಂತವರೇ ನಥನ್ ಮೆಕಲಮ್ ಮತ್ತು ಜಿಮ್ಮಿ ನೀಶಮ್. ಲಸಿತ ಮಾಲಿಂಗ ಪಾಲಾದ 22ನೇ ಓವರಿನ ಮೊದಲ ಹಾಗೂ ಕೊನೆಯ ಎಸೆತದಲ್ಲಿ ಮೆಕಲಮ್ ಬೌಂಡರಿ ಸಿಡಿಸಿದರು. ಕೊನೆಯ ಓವರಿನಲ್ಲಿ 20 ರನ್ ತೆಗೆಯುವ ಸವಾಲು ಎದುರಾಯಿತು.
ಬೌಲರ್ ರಂಗನ ಹೆರಾತ್. ಮೊದಲೆರಡು ಎಸೆತಗಳಲ್ಲಿ ನೀಶಮ್ 3 ರನ್ ತೆಗೆದರು. ಮೆಕಲಮ್ ಸತತ ಎಸೆತಗಳಲ್ಲಿ ಬೌಂಡರಿ, ಸಿಕ್ಸರ್ ಬಾರಿಸಿದರು. ಅಷ್ಟೇ ಅಲ್ಲ, ಕೊನೆಯ ಎರಡೂ ಎಸೆತಗಳನ್ನು ಲಾಂಗ್-ಆಫ್ ಹಾಗೂ ಲಾಂಗ್-ಆನ್ ಮೂಲಕ ಸಿಕ್ಸರ್‌ಗೆ ರವಾನಿಸಿ ತಂಡದ ಜಯಭೇರಿ ಮೊಳಗಿಸಿದರು. ಹೆರಾತ್ ಅವರ ಆ ಓವರಿನಲ್ಲಿ ಒಟ್ಟು 25 ರನ್ ಹರಿದು ಹೋಯಿತು!
* ಇಂಗ್ಲೆಂಡ್ ಸಾಧನೆ
ಇದಕ್ಕೂ ಮೊದಲಿನ ದಾಖಲೆ 1987ರ “ಬೆನ್ಸನ್ ಆ್ಯಂಡ್ ಹೆಜಸ್’ ತ್ರಿಕೋನ ಸರಣಿಯ ವೇಳೆ ನಿರ್ಮಾಣಗೊಂಡಿತ್ತು. ಸಿಡ್ನಿಯಲ್ಲಿ ಏರ್ಪಟ್ಟ ಆತಿಥೇಯ ಆಸ್ಟ್ರೇಲಿಯ ವಿರುದ್ಧದ ಮೇಲಾಟದಲ್ಲಿ ಇಂಗ್ಲೆಂಡ್ ಅಂತಿಮ ಓವರಿನಲ್ಲಿ 18 ರನ್ ಬಾರಿಸಿ ಗೆದ್ದು ಬಂದಿತ್ತು.
ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯ 8ಕ್ಕೆ 233 ರನ್ ಗಳಿಸಿತ್ತು. ಇಂಗ್ಲೆಂಡ್ 47ನೇ ಓವರ್ ಮುಕ್ತಾಯಕ್ಕೆ 7 ವಿಕೆಟಿಗೆ 202 ರನ್ ಗಳಿಸಿದಾಗ ಪಂದ್ಯ ರೋಚಕ ಅಂತ್ಯ ಕಾಣುವ ಎಲ್ಲ ಸಾಧ್ಯತೆ ನಿಚ್ಚಳವಾಯಿತು. ಆದರೂ ಬ್ರೂಸ್ ರೀಡ್ ಪಾಲಾದ ಕೊನೆಯ ಓವರಿನಲ್ಲಿ 18 ರನ್ ತೆಗೆಯುವ ಒತ್ತಡ ಇಂಗ್ಲೆಂಡ್ ಮೇಲಿತ್ತು. ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಅಲನ್ ಲ್ಯಾಂಬ್ ಸಾಹಸದಿಂದ ಇಂಗ್ಲೆಂಡ್ ಅಮೋಘ ಜಯವೊಂದನ್ನು ಕಂಡಿತು.
MahaKumbh Mela: ಪುಣ್ಯಸ್ನಾನದ ಬಗ್ಗೆ ಪ್ರಶ್ನಿಸಿ ಮಲ್ಲಿಕಾರ್ಜುನ ಖರ್ಗೆ ಸಾಧಿಸಿದ್ದೇನು?
Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ
JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?
“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…
ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!
You seem to have an Ad Blocker on.
To continue reading, please turn it off or whitelist Udayavani.