BGT: ವಿರಾಟ್ ಬಗ್ಗೆ ಆಸೀಸ್ ಜನರಿಗೆ ಯಾಕಿಷ್ಟು ಕುತೂಹಲ; ಇದು ಕಿಂಗ್ ಸಾಮ್ರಾಜ್ಯದ ಕಥೆ
ಆಸೀಸ್ ಪ್ರೇಕ್ಷಕರಿಗೆ, ಮೀಡಿಯಾಗಳಿಗೆ ವಿರಾಟ್ ಕೊಹ್ಲಿ ಒಬ್ಬ ಅಚ್ಚರಿಯಾಗಿದ್ದ...
ಕೀರ್ತನ್ ಶೆಟ್ಟಿ ಬೋಳ, Nov 14, 2024, 5:30 PM IST
ಬಾರ್ಡರ್-ಗಾವಸ್ಕರ್ ಟ್ರೋಫಿ (Border Gavaskar Trophy) ಆರಂಭಕ್ಕೆ ಇನ್ನೂ ಒಂದು ವಾರ ಬಾಕಿಯಿದೆ. ಆದರೆ ಟೀಂ ಇಂಡಿಯಾದ ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ (Virat Kohli) ಅವರು ಕಾಂಗರೂ ನೆಲಕ್ಕೆ ಕಾಲಿಟ್ಟೊಡನೆ ಅಲ್ಲಿನ ಪತ್ರಿಕೆಗಳಲ್ಲಿ ವಿರಾಟ್ ರಾರಾಜಿಸುತ್ತಿದ್ದಾರೆ. ದೊಡ್ಡ ಪತ್ರಿಕೆಗಳು ವಿರಾಟ್ ಕೊಹ್ಲಿಗಾಗಿ ತಮ್ಮ ಮುಖಪುಟವನ್ನು ಮೀಸಲಿಟ್ಟಿವೆ. ಟೀಂ ಇಂಡಿಯಾ ಬಿಡಿ, ಆಸ್ಟ್ರೇಲಿಯಾದ ಆಟಗಾರರಿಗೆ ಸಿಗದ ಮರ್ಯಾದೆ ಕಿಂಗ್ ಕೊಹ್ಲಿ ಸಿಗುತ್ತಿದೆ. ಹಾಗಾದರೆ ವಿರಾಟ್ ಕೊಹ್ಲಿ ಬಗ್ಗೆ ಆಸ್ಟ್ರೇಲಿಯನ್ನರಿಗೆ ಅಷ್ಟೊಂದು ಕುತೂಹಲ ಯಾಕೆ? ಅವರ ವಿರುದ್ದ ಅಷ್ಟೊಂದು ರನ್ ಬಾರಿಸಿದ್ದರೂ ಕಿಂಗ್ ಬಗೆಗಿನ ಆ ಕೌತುಕ ಯಾಕೆ ಇನ್ನೂ ತಣಿದಿಲ್ಲ..?
ಹಾಗಾದರೆ, ಕ್ರಿಕೆಟ್ ಸಾಮ್ರಾಜ್ಯದ ಚಕ್ರವರ್ತಿಯ ಆಸೀಸ್ ವಸಾಹತಿನ ದಿಗ್ವಿಜಯದ ಬಗ್ಗೆ ಓದ್ಕೊಂಡು ಬರೋಣ.
ಟೆಸ್ಟ್ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ ವರ್ಷದಲ್ಲೇ ವಿರಾಟ್ ಕೊಹ್ಲಿಗೆ ಆಸೀಸ್ ಪ್ರವಾಸ ಮಾಡುವ ಅವಕಾಶ ಸಿಕ್ಕಿತ್ತು. ಕೋಪಿಷ್ಠ- ಬಿಸಿ ರಕ್ತದ ಸೊಕ್ಕಿನ ಹುಡುಗ ಎಂಬ ಹಣೆಪಟ್ಟಿಯೊಂದಿಗೆ ಅಂದು ವಿರಾಟ್ ಆಸ್ಟ್ರೇಲಿಯಾಗೆ ಬಂದಿದ್ದರು. ಆಸೀಸ್ ಪ್ರೇಕ್ಷಕರು ಕೂಡಾ ವಿರಾಟ್ ನನ್ನು ಹಾಗೆಯೇ ಸ್ವಾಗತಿಸಿದ್ದರು. ಇದೇ ವೇಳೆ ವಿರಾಟ್ ತನ್ನ ಮಧ್ಯದ ಬೆರಳನ್ನು ಪ್ರೇಕ್ಷಕರಿಗೆ ತೋರಿಸಿ ಅಸಭ್ಯ ರೀತಿಯಲ್ಲಿ ವರ್ತಿಸಿದ್ದರು. ಇದು ಆಸ್ಟ್ರೇಲಿಯನ್ನರನ್ನು ಉರಿಸಿತ್ತು. ಆಸೀಸ್ ಪತ್ರಿಕೆಗಳು ಇದಕ್ಕೆ ಮತ್ತಷ್ಟು ಉಪ್ಪು ಖಾರ ಸೇರಿಸಿದ್ದವು. ಹೀಗೆ ಮೊದಲ ಪ್ರವಾಸದಲ್ಲಿಯೇ ವಿರಾಟ್ ʼವಿಲನ್ʼ ಆಗಿದ್ದರು.
ಆಸ್ಟ್ರೇಲಿಯನ್ನರ ಕೊಂಕಿಗೆ ವಿರಾಟ್ ಬ್ಯಾಟ್ ನಿಂದಲೇ ಉತ್ತರ ನೀಡಿದ್ದರು. ಅಡಿಲೇಡ್ ನಲ್ಲಿ ಭರ್ಜರಿ ಶತಕ ಬಾರಿಸಿ ತನ್ನ ಆಟವೇನೆಂದು ರೂಪಿಸಿದ್ದರು.
ಮುಂದಿನ ಬಾರಿ ವಿರಾಟ್ ಆಸ್ಟ್ರೇಲಿಯಾಗೆ ನಾಯಕನಾಗಿ ಬಂದಿದ್ದರು. ಅದಾಗಲೇ ದಿಗ್ಗಜ ಆಟಗಾರನಾಗುವತ್ತ ದಾಪುಗಾಲು ಇಡುತ್ತಿದ್ದರು. ತನ್ನ ಸಾಧನೆಯಿಂದಲೇ ʼʼಸೊಕ್ಕಿನ ಆಟಗಾರನಿಂದ ಇಡೀ ದೇಶವನ್ನೇ ಆವರಿಸುವ ಮ್ಯಾಜಿಕ್” ಆಗಿ ಬದಲಾಗಿದ್ದರು.
ಆಸ್ಟ್ರೇಲಿಯಾ ನೆಲದಲ್ಲಿ ಭಾರತ ಹಿಂದೆಯೂ ಹಲವು ಸರಣಿಗಳನ್ನು ಆಡಿದೆ. ಆಸೀಸ್ ಆಟಗಾರರ ಸ್ಲೆಡ್ಜಿಂಗ್ ಗಳಿಗೆ ತಿರುಗಿ ಉತ್ತರಿಸಿದೆ, ಸುಮ್ಮನೆ ಹೋಗುತ್ತಿದ್ದ ಭಾರತೀಯರನ್ನು ಕಂಡಿದ್ದ ಆಸೀಸ್ ಪ್ರೇಕ್ಷಕರಿಗೆ, ಮೀಡಿಯಾಗಳಿಗೆ ವಿರಾಟ್ ಕೊಹ್ಲಿ ಒಬ್ಬ ಅಚ್ಚರಿಯಾಗಿದ್ದ. ಯಾವ ಆಟಗಾರನೆಂದು ಲೆಕ್ಕಿಸದೆ, ತಾನೇ ಹೋಗಿ ಸ್ಲೆಡ್ಜ್ ಮಾಡುತ್ತಿದ್ದ ವಿರಾಟ್ ಕೊಹ್ಲಿ ಕಾಂಗರೂ ನೆಲದಲ್ಲಿ ಭಾರತೀಯರ ಬಗೆಗಿನ ಅಭಿಪ್ರಾಯವನ್ನೇ ಬದಲಿಸಿಬಿಟ್ಟರು. ಭಾರತೀಯ ತಂಡಕ್ಕೂ ವಿಶೇಷ ಸ್ವಾಗತ, ಆತಿಥ್ಯ ಸಿಗಲು ಆರಂಭವಾಗಿತ್ತು.
ತಂಡದ ನಾಯಕತ್ವ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಏರುತ್ತಿದ್ದ ವಿರಾಟ್ ಪ್ರಭೆ, ಮಿಚೆಲ್ ಜಾನ್ಸನ್ ನಂತಹ ಘಾತಕ ವೇಗಿಯನ್ನು ಅವರದ್ದೇ ನೆಲದಲ್ಲಿ ಅಟ್ಟಾಡಿಸಿದ್ದು, ತನ್ನ ನಾಯಕತ್ವದಲ್ಲಿ ಮುಂದಿನ ಸರಣಿಯಲ್ಲಿ ಗೆಲುವು, ರನ್ ರಾಶಿ, ಆಸೀಸ್ ಮಾಧ್ಯಮಗಳ ಚುಚ್ಚು ಪ್ರಶ್ನೆಗಳಿಗೆ ಚಾಟಿ ಏಟಿನಂತಹ ಉತ್ತರ, ಇದೆಲ್ಲವೂ ವಿರಾಟ್ ಕೊಹ್ಲಿ ಎಂಬ ದೆಹಲಿ ಹುಡುಗನ ಹವಾ ಆಸ್ಟ್ರೇಲಿಯಾದಲ್ಲಿ ಹೆಚ್ಚುವಂತೆ ಮಾಡಿತು.
ಆಸೀಸ್ ನೆಲದಲ್ಲಿ ವಿದೇಶಿ ಆಟಗಾರನೊಬ್ಬ ಅಂತಹ ಭಯ-ಕಾತರತೆ ಹುಟ್ಟುಹಾಕಿದ್ದು ಕಡಿಮೆ. ವಿದೇಶಿ ಆಟಗಾರರಿಗೆ ಆಸ್ಟ್ರೇಲಿಯನ್ನರು ನೀಡುವ ಮರ್ಯಾದೆಯೂ ಅಷ್ಟಕ್ಕಷ್ಟೇ. ಅಲ್ಲಿನ ಬೌನ್ಸಿ ಪಿಚ್ ಗಳಲ್ಲಿ ಬೆಂಕಿಯುಗುಳುವ ಆಸೀಸ್ ವೇಗಿಗಳ ಮಧ್ಯೆ ಆಡಿ, ಅವರಿಂದಲೇ ಮರ್ಯಾದೆ ಪಡೆಯುವ ಮಟ್ಟಕ್ಕೆ ಬೆಳೆದಿರುವುದು ವಿರಾಟ್ ಹೆಚ್ಚುಗಾರಿಕೆ.
ವಿರಾಟ್ ತನ್ನ ಆಟ ಮತ್ತು ಅಟಿಟ್ಯೂಡ್ ನಿಂದ ಆಸೀಸ್ ನೆಲದಲ್ಲಿ ಹೀರೋ ಆದವರು. ಆಸ್ಟ್ರೇಲಿಯಾ ಆಟಗಾರರು ವಿರಾಟ್ ಕೊಹ್ಲಿ ಬಗ್ಗೆ ಉತ್ತಮ ಮಾತುಗಳನ್ನೇ ಆಡುತ್ತಾರೆ. ಆದರೆ ಮೈದಾನದಲ್ಲಿ ಆತನನ್ನು ಕೆಣಕುವ ಸಾಹಸಕ್ಕೆ ಮುಂದಾಗುವುದಿಲ್ಲ. ವಿರಾಟ್ ಕೊಹ್ಲಿ ಕೂಡಾ ಆಸ್ಟ್ರೇಲಿಯಾ ಆಟಗಾರರ ಜತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಅದರಲ್ಲೂ ಐಪಿಎಲ್ ಕಾರಣದಿಂದ ಉತ್ತಮ ಹೊಂದಾಣಿಕೆಯಿದೆ.
ಆಲ್ ರೌಂಡರ್ ಗ್ಲೆನ್ ಮ್ಯಾಕ್ಸವೆಲ್ ಅವರು ಆಸೀಸ್ ದಿಗ್ಗಜರೊಂದಿಗೆ ಆಡಿದ್ದರೂ, ಅವರ ಆತ್ಮಚರಿತ್ರಯಲ್ಲಿ ಮುನ್ನುಡಿ ಬರೆದಿದ್ದು ಭಾರತದ ವಿರಾಟ್ ಕೊಹ್ಲಿ. ಅಲ್ಲದೆ 2019ರ ಏಕದಿನ ವಿಶ್ವಕಪ್ ವೇಳೆ ಸ್ಯಾಂಡ್ ಪೇಪರ್ ಹಗರಣದ ಕಾರಣದಿಂದ ಆಸೀಸ್ ಆಟಗಾರ ಸ್ಟೀವನ್ ಸ್ಮಿತ್ ಅವರಿಗೆ ಗೇಲಿ ಮಾಡುತ್ತಿದ್ದ ಇಂಗ್ಲೆಂಡ್ ಪ್ರೇಕ್ಷಕರ ವಿರುದ್ದ ವಿರಾಟ್ ನಿಂತಿದ್ದರು. ಮಧ್ಯೆ ಮೈದಾನದಲ್ಲಿ ನಿಂತು ಎದುರಾಳಿ ತಂಡದ ಆಟಗಾರನ ಗೇಲಿ ಮಾಡುವ ಬದಲು ಪ್ರೋತ್ಸಾಹ ನೀಡಿ ಎಂದಿದ್ದರು ಆಗ ನಾಯಕರಾಗಿದ್ದ ವಿರಾಟ್. ಅಲ್ಲದೆ ಚೆಂಡೇಟಿನಿಂದ ಸಾವನ್ನಪ್ಪಿದ್ದ ಆಸ್ಟ್ರೇಲಿಯಾದ ಫಿಲಿಪ್ ಹ್ಯೂಸ್ ಅಂತಿಮ ಸಂಸ್ಕಾರದ ವೇಳೆ ವಿರಾಟ್ ಕೊಹ್ಲಿ ಅವರು ಆಗಿನ ಕೋಚ್ ರವಿ ಶಾಸ್ತ್ರಿ ಮತ್ತು ವಿರಾಟ್ ಕೊಹ್ಲಿ ಜತೆ ಭಾಗವಹಿಸಿದ್ದರು. ಈ ಎಲ್ಲಾ ಘಟನೆಗಳು ಆಸೀಸ್ ಜನರ ಮನಸ್ಸಿನಲ್ಲಿ ವಿರಾಟ್ ಅವರನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದಿದೆ.
ವಿರಾಟ್ ಎಷ್ಟೊಂದು ಆವರಿಸಿದ್ದಾರೆ ಎಂದರೆ ವಿರಾಟ್ ಆಸ್ಟ್ರೇಲಿಯಾದಲ್ಲಿ ಇರದಿದ್ದರೂ ಅವರ ಸುದ್ದಿ ಸದಾ ಆಸ್ಟ್ರೇಲಿಯಾದಲ್ಲಿ ಇರುತ್ತದೆ. ಅಲ್ಲಿನ ಬ್ರಾಡ್ ಕಾಸ್ಟಿಂಗ್ ನಲ್ಲಿ ವಿರಾಟ್ ಪ್ರಮುಖ ಟಿಆರ್ ಪಿ ಅಂಶ. ವಿರಾಟ್ ಬಗ್ಗೆ ಸದಾ ಒಂದಿಲ್ಲೊಂದು ಕ್ರಿಕೆಟ್ ಚರ್ಚೆ ನಡೆಯುತ್ತಿರುತ್ತದೆ. ಅಥವಾ ಕ್ರಿಕೆಟ್ ಚರ್ಚೆಯ ನಡುವೆ ವಿರಾಟ್ ಕೊಹ್ಲಿ ಉಲ್ಲೇಖ ಇದ್ದೇ ಇರುತ್ತದೆ.
ಬಾರ್ಡರ್ ಗಾವಸ್ಕರ್ ಟ್ರೋಫಿಯಲ್ಲಿ ವಿರಾಟ್ ಬ್ಯಾಟಿಂಗ್ ಗೆ ಇಳಿದಾಗೆಲ್ಲಾ ಆಸೀಸ್ ಪ್ರೇಕ್ಷಕರು ʼವಿರಾಟ್-ವಿರಾಟ್ʼ ಎಂದು ಬೊಬ್ಬೆ ಇಡದೇ ಇರಬಹುದು, ಅಥವಾ ಅವರ ಗಳಿಸುವ ಪ್ರತಿ ರನ್ ಗೆ ಕರತಾಡನ ಮಾಡದೇ ಇರಬಹುದು, ಆದರೆ ಅವರ ಪ್ರತಿ ಮೈಲಿಗಲ್ಲನ್ನು ಅಲ್ಲಿ ಹೃದಯತುಂಬಿ ಕೊಂಡಾಡುತ್ತಾರೆ. ವಿರಾಟ್ ಬಗ್ಗೆ ಕೆಲವು ಆಸೀಸ್ ಪ್ರೇಕ್ಷಕರಿಗೆ ದ್ವೇಷವೂ ಇರಬಹುದು, ಯಾಕೆಂದರೆ ತಮ್ಮ ಎದುರಾಳಿ ಅತ್ಯುತ್ತಮ ಮಟ್ಟದವ ಎಂದಾಗ ಅಸೂಯೆ ಹುಟ್ಟುವುದು ಸಹಜ ಅಲ್ಲವೆ?
ವಿರಾಟ್ ಕೊಹ್ಲಿಯನ್ನು ಸುಮ್ಮನೆ ʼಕಿಂಗ್ʼ ಎಂದು ಕರೆದಿಲ್ಲ. ಆತ ಯಾರೋ ಬಿಟ್ಟು ಹೋದ ಪೀಠದ ಮೇಲೆ ಕೂತವನಲ್ಲ. ತನ್ನದೇ ಸಾಮ್ಯಾಜ್ಯ ಕಟ್ಟಿ ಮೆರೆದವ..!
*ಕೀರ್ತನ್ ಶೆಟ್ಟಿ ಬೋಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ : ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?
OneNation, OneElection Bill: 31 JPC ಸದಸ್ಯರ ಕಾರ್ಯವ್ಯಾಪ್ತಿ ಏನು?ಸಲಹೆ ನೀಡುವವರು ಯಾರು
Winter: ಚಳಿಗಾಲದಲ್ಲಿ ಆರೋಗ್ಯಕರವಾಗಿರಲು ಸೇವಿಸಬೇಕಾದ ಆಹಾರಗಳು ಇವು…
Zakir Hussain ; ಸರಸ್ವತಿ, ಗಣಪತಿಯ ಆರಾಧಕರಾಗಿದ್ದರು ತಬಲಾ ಮಾಂತ್ರಿಕ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
BBMP Notice: ವಿರಾಟ್ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.