ಭೀಮನ ಹೊಡೆತದಿಂದ ನಿರ್ಮಾಣವಾಗಿತ್ತಂತೆ ಈ ಕೆರೆ… ಪ್ರಾಕೃತಿಕ ವಿಕೋಪಗಳ ಸೂಚನೆ ನೀಡುತ್ತಂತೆ

ಇದರ ಆಳ ತಿಳಿಯಲು ಯಾರಿಂದಲೂ ಸಾಧ್ಯವಾಗಲಿಲ್ಲ...

ಸುಧೀರ್, Jul 9, 2024, 2:58 PM IST

ಭೀಮನ ಹೊಡೆತದಿಂದ ನಿರ್ಮಾಣವಾದ ಈ ಕೆರೆ… ಪ್ರಾಕೃತಿಕ ವಿಕೋಪಗಳ ಸೂಚನೆ ನಿಡುತ್ತಂತೆ

ನಮ್ಮ ದೇಶದಲ್ಲಿ ಭೇಟಿ ನೀಡಲು ಅನೇಕ ಐತಿಹಾಸಿಕ ಮತ್ತು ಧಾರ್ಮಿಕ ಸ್ಥಳಗಳಿವೆ. ಈ ಸ್ಥಳಗಳಿಗೆ ಸಂಬಂಧಿಸಿದ ಇತಿಹಾಸ ಅಥವಾ ಅದ್ಭುತ ರಹಸ್ಯಗಳು ಬಹಳಷ್ಟು ಜನರನ್ನು ಆಕರ್ಷಿಸುತ್ತವೆ. ಅಂಥದರಲ್ಲಿ ಮಧ್ಯಪ್ರದೇಶದಲ್ಲಿರುವ ಕೆರೆ ಕೂಡ ಒಂದು ಇದರ ಹೆಸರೇ `ಭೀಮ್ ಕುಂಡ್’ ಇದು ನೋಡಲು ಕಲ್ಲು ಬಂಡೆಗಳ ನಡುವೆ ಇರುವ ಸಣ್ಣ ಕೆರೆಯಂತೆ ಕಂಡರೂ ಇದರ ಆಳ ಎಷ್ಟಿದೆ ಎಂಬುದನ್ನು ಪತ್ತೆಹಚ್ಚಲು ಯಾರಿಗೂ ಸಾಧ್ಯವಾಗಲಿಲ್ಲವಂತೆ, ಬನ್ನಿ ಹಾಗಾದರೆ ಈ `ಭೀಮ್ ಕುಂಡ್’ ಕೆರೆಯ ಹಿಂದಿನ ಕತೆಯೇನು ಎಂಬುದನ್ನು ತಿಳಿದು ಬರೋಣ…

‘ಭೀಮ್ ಕುಂಡ್’ ಅನ್ನು ‘ನೀಲ ಕುಂಡ್’ ಎಂದೂ ಕರೆಯುತ್ತಾರೆ. ಈ ಕೊಳವನ್ನು ಬಂಡೆಕಲ್ಲುಗಳ ಗುಹೆಯ ಮಧ್ಯ ಭಾಗದಲ್ಲಿ ನಿರ್ಮಿಸಲಾಗಿದೆ. ಪ್ರಾಚೀನ ಕಾಲದಿಂದಲೂ ಈ ಸ್ಥಳವನ್ನು ಆಧ್ಯಾತ್ಮಿಕ ಸ್ಥಳವೆಂದು ಪರಿಗಣಿಸಲಾಗಿದೆ. ಅಲ್ಲದೆ ಅನೇಕ ಋಷಿ ಮುನಿಗಳು ಮತ್ತು ತಪಸ್ವಿಗಳು ಇಲ್ಲಿ ತಪಸ್ಸು ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸ್ಥಳವನ್ನು ಭಾರತದ ಅತ್ಯಂತ ಪವಿತ್ರ ಸ್ಥಳವೆಂದು ಪರಿಗಣಿಸಲಾಗಿದೆ.

ಪುರಾಣ ಹಿನ್ನೆಲೆ:

ಈ ಕೆರೆಗೂ ಮಹಾಭಾರತಕ್ಕೂ ಸಂಬಂಧವಿದೆ ಎಂದು ಹೇಳಲಾಗುತ್ತಿದೆ ಅದರಂತೆ ಕೌರವರ ವಿರುದ್ಧ ಸೋತ ನಂತರ ಪಾಂಡವರು ವನವಾಸಕ್ಕೆ ಹೊರಟಿದ್ದ ವೇಳೆ ಕಾಡಿನ ಮೂಲಕ ಹಾದು ಹೋಗುವ ಸಂದರ್ಭ ದ್ರೌಪದಿಗೆ ದಣಿವಾಗಿದೆ ಈ ವೇಳೆ ಐವರು ಸಹೋದರರು ನೀರಿಗಾಗಿ ಹುಡುಕಾಟ ನಡೆಸಿದ್ದಾರೆ. ದಟ್ಟ ಕಾಡಿನ ಮಧ್ಯೆ ಎಲ್ಲೂ ನೀರು ಸಿಗಲಿಲ್ಲ ಆದರೆ ಇತ್ತ ದ್ರೌಪದಿಗೆ ಬಾಯಾರಿಕೆ ಹೆಚ್ಚಾಗತೊಡಗಿದೆ ಈ ವೇಳೆ ಎಲ್ಲೂ ನೀರು ಸಿಗದೇ ಇರುವುದರಿಂದ ಕೋಪಗೊಂಡ ಭೀಮನು ತನ್ನ ಕೈಯಲ್ಲಿದ್ದ ಗದೆಯನ್ನು ಎತ್ತಿಕೊಂಡು ಅದನ್ನು ಪೂರ್ಣ ಬಲದಿಂದ ನೆಲದ ಮೇಲೆ ಹೊಡೆದಿದ್ದಾನೆ ಭೀಮನ ಹೊಡೆತಕ್ಕೆ ದೊಡ್ಡ ಕೆರೆ ನಿರ್ಮಾಣಗೊಂಡು ನೀರು ಹೊರ ಚಿಮ್ಮಿದ್ದು, ಇದೆ ನೀರಿನಿಂದ ತಮ್ಮ ದಾಹವನ್ನು ನಿವಾರಿಸಿಕೊಂಡರು ಎಂಬುದು ಪ್ರತೀತಿ, ಅಲ್ಲಿಂದ ಈ ಕೆರೆಯನ್ನು “ಭೀಮಕುಂಡ್” ಎಂದು ಕರೆಯಲಾಗುತ್ತದೆ.

ಯಾರಿಗೂ ತಿಳಿದಿಲ್ಲ ಕೆರೆಯ ಆಳ:
ಈ ಕೆರೆಯ ರಹಸ್ಯವೆಂದರೆ ಕೆರೆ ಎಷ್ಟು ಆಳವಿದೆ ಎಂದು ತಿಳಿಯಲು ಯಾರಿಂದಲೂ ಸಾಧ್ಯವಾಗಲಿಲ್ಲ ಅಲ್ಲದೆ ಈ ನಿಗೂಢ ಕೊಳದ ಆಳವನ್ನು ಕಂಡುಹಿಡಿಯಲು ಸ್ಥಳೀಯ ಆಡಳಿತದಿಂದ ವಿದೇಶಿ ವಿಜ್ಞಾನಿಗಳು ಮತ್ತು ಡಿಸ್ಕವರಿ ಚಾನೆಲ್ ಸೇರಿದಂತೆ ಹಲವು ತಂಡ ಪ್ರಯತ್ನ ಮಾಡಿತ್ತು ಅಲ್ಲದೆ ವಿದೇಶಿ ವಿಜ್ಞಾನಿಗಳ ತಂಡವೂ ಈ ಕೆರೆಯ ಅಳವನ್ನು ಪತ್ತೆಹಚ್ಚುವ ಕಾರ್ಯ ನಡೆಸಿತ್ತು ಆದರೆ 200 ಮೀಟರ್ ಆಳಕ್ಕೆ ಹೋದ ತಂಡ ಮತ್ತೆ ವಾಪಸ್ಸಾಗಿದೆ. ಇನ್ನೊಂದು ವಿಚಾರ ಏನೆಂದರೆ ಕೆರೆಯ ಆಳಕ್ಕೆ ಹೋದಂತೆ ನೀರಿನ ಸೆಳೆತ ಹೆಚ್ಚಿದೆ ಎಂದು ಹೇಳಲಾಗಿದೆ ಇದರಿಂದ ಕೆರೆಯ ತಳಕ್ಕೆ ಹೋಗಲು ಯಾರಿಂದಲೂ ಸಾಧ್ಯವಾಗಿಲ್ಲ. ಈಗಲೂ ಈ ಕೆರೆಯಲ್ಲಿ ಅನ್ವೇಷಣೆಗಳು ನಡೆಯುತ್ತಿರುತ್ತವೆ ಎಂದು ಹೇಳಲಾಗುತ್ತಿದೆ.

ಸುನಾಮಿ ಭೂಕಂಪದ ಮುನ್ಸೂಚನೆ ನೀಡಿದ್ದ ಕೆರೆ
ಈ ಕೆರೆಯಲ್ಲಿ ಎಲ್ಲಾ ಸಮಯದಲ್ಲೂ ನೀರು ಒಂದೇ ಮಟ್ಟದಲ್ಲಿ ಇರುತ್ತದೆಯಂತೆ ಒಂದು ವೇಳೆ ಭೂಕಂಪ, ಸುನಾಮಿಯಂತಹ ಪ್ರಾಕೃತಿಕ ವಿಕೋಪ ನಡೆಯುತ್ತದೆ ಎಂದಾದರೆ ಈ ಕೆರೆಯಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತದೆಯಂತೆ ಇದಕ್ಕೆ ಉದಾಹರಣೆ 2004 ರಲ್ಲಿ ಸುನಾಮಿ ಸಂಭವಿಸಿದಾಗ, ಅನೇಕ ಜನರು ಪ್ರಾಣ ಕಳೆದುಕೊಂಡರು. ಆದರೆ 2004ರ ಸುನಾಮಿಗೂ ಮುನ್ನ ಭೀಮಕುಂಡದ ನೀರಿನ ಮಟ್ಟ ಏಕಾಏಕಿ ಸುಮಾರು 15 ಮೀಟರ್‌ಗಳಷ್ಟು ಹೆಚ್ಚಿತ್ತು ಎನ್ನುತ್ತಾರೆ ಇಲ್ಲಿನ ಸ್ಥಳೀಯರು. ಅಷ್ಟುಮಾತ್ರವಲ್ಲದೆ ನೇಪಾಳದಲ್ಲಿ ಭೂಕಂಪ ಸಂಭವಿಸಿದಾಗ ಭೀಮಕುಂಡದ ನೀರಿನ ಮಟ್ಟ ಹೆಚ್ಚಾಗಿತ್ತು ಎಂದು ಹೇಳಿದ್ದಾರೆ.

ಮೃತದೇಹ ಮೇಲೆ ಬರಲ್ಲ:
ಸಾಮಾನ್ಯವಾಗಿ ಕೆರೆ ಅಥವಾ ಬಾವಿಗಳಲ್ಲಿ ಮುಳುಗಿ ಮೃತಪಟ್ಟರೆ ಅವರ ದೇಹ ಎರಡು ಮೂರೂ ದಿನಗಳಲ್ಲಿ ನೀರಿನಿಂದ ಮೇಲಕ್ಕೆ ಬರುತ್ತದೆ ಆದರೆ ಈ ಕೆರೆಯಲ್ಲಿ ಆ ರೀತಿ ನಡೆಯುವುದಿಲ್ಲ ಎನ್ನುತ್ತಾರೆ ಇಲ್ಲಿನ ಜನ ಬದಲಾಗಿ ದೇಹ ನೀರಿನ ಆಳಕ್ಕೆ ಹೋಗುತ್ತದೆಯಂತೆ.

ಭೀಮಕುಂಡ್ ತಲುಪುವುದು ಹೇಗೆ:
ಭೀಮಕುಂಡ್ ಮಧ್ಯಪ್ರದೇಶದ ಛತ್ತರ್‌ಪುರ ನಗರದಿಂದ ಸುಮಾರು 30 ಕಿಮೀ ದೂರದಲ್ಲಿದೆ. ಛತ್ತರ್‌ಪುರದಿಂದ ಬಾಡಿಗೆ ವಾಹನಗಳನ್ನು ಗೊತ್ತುಪಡಿಸಿ ಭೀಮಕುಂಡ್ ತಲುಪಬಹುದು ಅಥವಾ ಛತ್ತರ್‌ಪುರದಿಂದ ಬಸ್‌ ಮೂಲಕವೂ ಬರಬಹುದು. ವಿಮಾನ ಹಾಗೂ ರೈಲಿನ ಮೂಲಕ ಬರುವವರು ಖಜುರಾಹೊ ಮೂಲಕ ಬರಬಹುದು ಇಲ್ಲಿಂದ 75 ಕಿಮೀ ದೂರದಲ್ಲಿದೆ.

ಭೇಟಿ ನೀಡಲು ಉತ್ತಮ ಸಮಯ:
ಭೀಮಕುಂಡ್‌ಗೆ ಭೇಟಿ ನೀಡಲು ಫೆಬ್ರವರಿ-ಜೂನ್ ಉತ್ತಮ ಸಮಯವಾಗಿದ್ದು ಇದಲ್ಲದೆ ಅಕ್ಟೋಬರ್-ನವೆಂಬರ್ ಸಮಯದಲ್ಲೂ ಇಲ್ಲಿಗೆ ಭೇಟಿ ನೀಡಬಹುದು.

*ಸುಧೀರ್, ಪರ್ಕಳ

ಟಾಪ್ ನ್ಯೂಸ್

8

Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ವಿಡಿಯೋಗಳಿವು..

14-uv-fusion

Meditation: ವರ್ಧಿತ ಶೈಕ್ಷಣಿಕ ಕಾರ್ಯಕ್ಷಮತೆಗೆ ಧ್ಯಾನ

1-prathvi

Shaw left out; ಓ ದೇವರೇ, ನಾನು ಇನ್ನೇನೆಲ್ಲ ನೋಡಬೇಕು..; ಪೃಥ್ವಿ ಶಾ ನೋವು

Loksabha:ಕಾಂಗ್ರೆಸ್‌ ಅಂಬೇಡ್ಕರ್‌ ಗೆ ಹಲವು ಬಾರಿ ಅವಮಾನ ಮಾಡಿದೆ: ಪ್ರಧಾನಿ ಮೋದಿ ತಿರುಗೇಟು

Loksabha:ಕಾಂಗ್ರೆಸ್‌ ಅಂಬೇಡ್ಕರ್‌ ಗೆ ಹಲವು ಬಾರಿ ಅವಮಾನ ಮಾಡಿದೆ: ಪ್ರಧಾನಿ ಮೋದಿ ತಿರುಗೇಟು

13-belagavi

ತೀವ್ರ ಸ್ವರೂಪ ಪಡೆದ ಅತಿಥಿ ಶಿಕ್ಷಕರ ಪ್ರತಿಭಟನೆ; ಶಿಕ್ಷಕ ಅಸ್ವಸ್ಥ, ಆಸ್ಪತ್ರಗೆ ದಾಖಲು

Yasin Malik

SC;ಪ್ರಕರಣಗಳ ವರ್ಗಾವಣೆ:ಪ್ರತಿಕ್ರಿಯಿಸಲು ಯಾಸಿನ್ ಮಲಿಕ್ ಸೇರಿ ಐವರಿಗೆ 2 ವಾರ ಕಾಲಾವಕಾಶ

ರಿವರ್ಸ್ ತೆಗೆಯುವಾಗ ಸಮುದ್ರಕ್ಕೆ ಬಿದ್ದ ಕಾರು… ನೌಕಾಪಡೆ ಅಧಿಕಾರಿ ಪಾರು, ಚಾಲಕ ನಾಪತ್ತೆ

ರಿವರ್ಸ್ ತೆಗೆಯುವಾಗ ಸಮುದ್ರಕ್ಕೆ ಬಿದ್ದ ಕಾರು… ನೌಕಾಪಡೆ ಅಧಿಕಾರಿ ಪಾರು, ಚಾಲಕ ನಾಪತ್ತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

OneNation, OneElection Bill: 31 JPC ಸದಸ್ಯರ ಕಾರ್ಯವ್ಯಾಪ್ತಿ ಏನು?ಸಲಹೆ ನೀಡುವವರು ಯಾರು

OneNation, OneElection Bill: 31 JPC ಸದಸ್ಯರ ಕಾರ್ಯವ್ಯಾಪ್ತಿ ಏನು?ಸಲಹೆ ನೀಡುವವರು ಯಾರು

3-winter-foods

Winter: ಚಳಿಗಾಲದಲ್ಲಿ ಆರೋಗ್ಯಕರವಾಗಿರಲು ಸೇವಿಸಬೇಕಾದ ಆಹಾರಗಳು ಇವು…

1-bg

Zakir Hussain ; ಸರಸ್ವತಿ, ಗಣಪತಿಯ ಆರಾಧಕರಾಗಿದ್ದರು ತಬಲಾ ಮಾಂತ್ರಿಕ

From 5 Rs Concert to 5 Grammys…: Tabla Ustad Zakir Hussain

Zakir Hussain: ‌5 ರೂ ಕಾನ್ಸರ್ಟ್‌ ನಿಂದ 5 ಗ್ರ್ಯಾಮಿಯವರೆಗೆ…: ತಬಲಾ ಉಸ್ತಾದ್‌ ನಾದಮಯ ಪಯಣ

Benjamin Joby: “ಬೇರೆಯವರ ಯಶಸ್ಸು ನೋಡಿ ಅಳಬೇಡ..” ವೈರಲ್‌ ಆಗುತ್ತಿರುವ ಈ ಬಾಲಕ ಯಾರು?

Benjamin Joby: “ಬೇರೆಯವರ ಯಶಸ್ಸು ನೋಡಿ ಅಳಬೇಡ..” ವೈರಲ್‌ ಆಗುತ್ತಿರುವ ಈ ಬಾಲಕ ಯಾರು?

MUST WATCH

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

ಹೊಸ ಸೇರ್ಪಡೆ

8

Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ವಿಡಿಯೋಗಳಿವು..

14-uv-fusion

Meditation: ವರ್ಧಿತ ಶೈಕ್ಷಣಿಕ ಕಾರ್ಯಕ್ಷಮತೆಗೆ ಧ್ಯಾನ

1-prathvi

Shaw left out; ಓ ದೇವರೇ, ನಾನು ಇನ್ನೇನೆಲ್ಲ ನೋಡಬೇಕು..; ಪೃಥ್ವಿ ಶಾ ನೋವು

Loksabha:ಕಾಂಗ್ರೆಸ್‌ ಅಂಬೇಡ್ಕರ್‌ ಗೆ ಹಲವು ಬಾರಿ ಅವಮಾನ ಮಾಡಿದೆ: ಪ್ರಧಾನಿ ಮೋದಿ ತಿರುಗೇಟು

Loksabha:ಕಾಂಗ್ರೆಸ್‌ ಅಂಬೇಡ್ಕರ್‌ ಗೆ ಹಲವು ಬಾರಿ ಅವಮಾನ ಮಾಡಿದೆ: ಪ್ರಧಾನಿ ಮೋದಿ ತಿರುಗೇಟು

13-belagavi

ತೀವ್ರ ಸ್ವರೂಪ ಪಡೆದ ಅತಿಥಿ ಶಿಕ್ಷಕರ ಪ್ರತಿಭಟನೆ; ಶಿಕ್ಷಕ ಅಸ್ವಸ್ಥ, ಆಸ್ಪತ್ರಗೆ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.