ಅಂದು ಪ್ರತಾಪ್‌ ಇಂದು ಹನುಮಂತು: ಫಿನಾಲೆ ತಲುಪಿದ ರೈತನ ಮಗನಿಗೆ ಒಲಿಯುತ್ತಾ ಬಿಗ್‌ಬಾಸ್ ಕಪ್?

ಮರಾಠಿ, ತೆಲುಗು ಬಿಗ್‌ ಬಾಸ್‌ನಂತೆ ಕನ್ನಡದಲ್ಲೂ ಸಾಮಾನ್ಯನಿಗೆ ಒಲಿಯುತ್ತಾ ಟ್ರೋಫಿ?

ಸುಹಾನ್ ಶೇಕ್, Jan 11, 2025, 6:06 PM IST

ಅಂದು ಪ್ರತಾಪ್‌ ಇಂದು ಹನುಮಂತು: ಫಿನಾಲೆ ತಲುಪಿದ ರೈತನ ಮಗನಿಗೆ ಒಲಿಯುತ್ತಾ ಬಿಗ್‌ಬಾಸ್ ಕಪ್?

ಬಿಗ್‌ ಬಾಸ್‌ ಕನ್ನಡ -11 ಫಿನಾಲೆಯತ್ತ ಸಾಗುತ್ತಿದೆ. ಪ್ರತಿ ಬಾರಿಯ ಹಾಗೆ ಈ ಬಾರಿಯೂ ದೊಡ್ಮನೆ ಆಟ ವೀಕ್ಷಕರ ಗಮನ ಸೆಳೆದಿದೆ. ಹತ್ತಾರು ವ್ಯಕ್ತಿತ್ವಗಳ ಒಂದು ಮನೆಯಲ್ಲಿ ನೂರಕ್ಕೂ ಹೆಚ್ಚಿನ ದಿನ ಕಳೆಯಬೇಕು. ಮುಖವಾಡ, ನಾಟಕೀಯತೆ, ಸ್ವಾರ್ಥ, ದುರಾಸೆ ಈ ಎಲ್ಲದರ ಪರಿಚಯ ದೊಡ್ಮನೆಯಲ್ಲಿ ಆಗುತ್ತದೆ. ಯಾರು ಇವೆಲ್ಲವನ್ನು ಮೆಟ್ಟಿನಿಂತು ತಮ್ಮತನವನ್ನು ಬಿಟ್ಟು ಕೊಡದೆ ಆಟವನ್ನು ಆಡುತ್ತಾರೋ ಅಂಥವರೇ ʼಬಿಗ್‌ ಬಾಸ್‌ʼ ಕಿರೀಟಕ್ಕೆ ಅರ್ಹರಾಗುತ್ತಾರೆ.

ಬಿಗ್‌ ಬಾಸ್‌ ಮನೆಗೆ ಪ್ರತಿ ಸೀಸನ್‌ನಲ್ಲಿ ಹಲವು ಕ್ಷೇತ್ರದಿಂದ ಸ್ಪರ್ಧಿಗಳು ಬರುತ್ತಾರೆ. ಈ ಸ್ಪರ್ಧಿಗಳು ಬಿಗ್‌ ಬಾಸ್‌ ಕೊಡುವ ಟಾಸ್ಕ್‌ ಹಾಗೂ ಸವಾಲನ್ನು ಎದುರಿಸುತ್ತಾ ದಿನ ಕಳೆಯಬೇಕು. ಮಾತು, ನಡವಳಿಕೆ, ಪ್ರಾಮಾಣಿಕತೆ  ಎಲ್ಲವನ್ನು ಮನೆಯಲ್ಲಿನ ಕ್ಯಾಮರಾಗಳು ಹೇಗೆ ಸೆರೆ ಹಿಡಿಯುತ್ತದೋ ಹಾಗೆಯೇ ಟಿವಿ ಮುಂದೆ ಕೂತು ವೀಕ್ಷಕರಾಗುವವರು ಸ್ಪರ್ಧಿಗಳ ಈ ಎಲ್ಲ ಅಂಶವನ್ನು ಗಮನಿಸಿ ವೋಟ್‌ ಮಾಡಿ ಸೋಲು – ಗೆಲುವನ್ನು ನಿರ್ಧಾರ ಮಾಡುವ ಪ್ರಭುಗಳಾಗಿರುತ್ತಾರೆ.

ಬಿಗ್‌ ಬಾಸ್ ಕನ್ನಡ ರೋಚಕ ಘಟ್ಟದತ್ತ ತಲುಪಿದೆ. ಫಿನಾಲೆಗೆ ಮೊದಲ ಸ್ಪರ್ಧಿಯಾಗಿ ಹನುಮಂತು ಅವರು ಎಂಟ್ರಿ ಕೊಟ್ಟಿದ್ದಾರೆ. ಆ ಮೂಲಕ ಟ್ರೋಫಿ ಗೆಲ್ಲುವ ಸಮೀಪಕ್ಕೆ ದೊಡ್ಡ ಹೆಜ್ಜೆಯನ್ನಿಟ್ಟಿದ್ದಾರೆ. ಹನುಮಂತು ಬಿಗ್‌ ಬಾಸ್‌ ಫಿನಾಲೆಗೆ ತಲುಪುತ್ತಿದ್ದಂತೆ ರೈತನ ಮಗನೊಬ್ಬ ಬಿಗ್‌ ಬಾಸ್‌ ಫಿನಾಲೆಗೆ ತಲುಪಿದ್ದಾನೆ. ಮತ್ತೆ ರೈತನ ಮಗನೇ ಬಿಗ್‌ ಬಾಸ್‌ ಗೆಲ್ಲುಬಹುದೇ ಎನ್ನುವ ಚರ್ಚೆ ಶುರುವಾಗಿದೆ.

ವೈಲ್ಡ್‌ ಕಾರ್ಡ್‌ ಟು ಫಿನಾಲೆ.. ಹನುಮಂತು ನಡೆದ ಹಾದಿಯೇ ರೋಚಕ..  :

ಪ್ರತಿನಿತ್ಯ ಮನರಂಜನೆ ನೀಡುವ ವಾಹಿನಿಗಳನ್ನು ನೋಡುವವರಿಗೆ ಹನುಮಂತು ಯಾರು ಎನ್ನುವುದು ಈಗಾಗಲೇ ಗೊತ್ತಿರಬಹುದು. ಕನ್ನಡ ಜನಪ್ರಿಯ ಗಾಯನ ಕಾರ್ಯಕ್ರಮ ʼಸರಿಗಮಪ ರಿಯಾಲಿಟಿ ಶೋʼ ಮೂಲಕ ಕರುನಾಡಿನೆಲ್ಲೆಡೆ ಹನುಮಂತು ಫೇಮ್‌ – ನೇಮ್‌ ಪಡೆದುಕೊಂಡವರು.

ಈ ಶೋಗೂ ಬರುವ ಮುನ್ನ ಹನುಮಂತು ಎಂದರೆ ಊರಿನ ಜನರಿಗೆ ಕುರಿಗಾಹಿ ಆಗಿಯೇ ಪರಿಚಯವಾಗಿದ್ದವರು. ಹಾವೇರಿಯ ಚಿಲ್ಲೂರ ಬಡ್ನಿ ಎಂಬ ಪುಟ್ಟ ಗ್ರಾಮದ ಹನುಮಂತು ಪ್ರತಿನಿತ್ಯ ಕುರಿಗಾಹಿ ಕೆಲಸ ಮಾಡಿಕೊಂಡು ಇದ್ದಾತ. ಕುರಿಗಳನ್ನು ಮೇಯಿಸುತ್ತಲೇ ಹಾಡು ಹಾಡುತ್ತಾ ʼಸರಿಗಮಪʼ ನಂತಹ ದೊಡ್ಡ ವೇದಿಕೆಗೆ ಹತ್ತಿ ಗಾಯನದ ಮೂಲಕವೇ ಜನಮನ್ನಣೆ ಗಳಿಸಿಕೊಂಡರು. ಈ ಶೋನಲ್ಲಿ ರನ್ನರ್ ಅಪ್ ಪ್ರಶಸ್ತಿ ಗೆದ್ದು ಜನಪ್ರಿಯತೆಯನ್ನು ಪಡೆದುಕೊಂಡರು.

ಬಿಗ್‌ ಬಾಸ್‌ ಮನೆಗೆ ಹನುಮಂತು ವೈಲ್ಡ್‌ ಕಾರ್ಡ್‌ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದರು. ಬರುತ್ತಲೇ ಮೊದಲ ಎರಡು ವಾರ ಕ್ಯಾಪ್ಟನ್‌ ಆಗಿ ಆಯ್ಕೆಗೊಂಡು ದೊಡ್ಮನೆ ಆಟ ನೋಡುವ ವೀಕ್ಷಕರ ಮೆಚ್ಚಿನ ಸ್ಪರ್ಧಿ ಆದರು.

ಹನುಮಂತು ವೀಕ್ಷಕರಿಗೆ ಇಷ್ಟ ಆಗಿರುವುದು ಯಾಕೆ?

ಮೊದಲೇ ಹೇಳಿದಂತೆ ಹನುಮಂತು ಒಬ್ಬ ಹಳ್ಳಿಹೈದ. ಹನುಮಂತುಗೆ ಗಾಯನದ ಕಾರ್ಯಕ್ರಮಗಳ ವೇದಿಕೆ ಹೊಸತಲ್ಲ. ಆದರೆ ಬಿಗ್‌ ಬಾಸ್‌ ವೇದಿಕೆ ಖಂಡಿತವಾಗಿ ಹೊಸತು. ವ್ಯಕ್ತಿತ್ವಗಳ ಆಟ ಬಿಗ್‌ ಬಾಸ್‌ ಆಗಿರುವುದರಿಂದ ಯಾವುದೇ ಬಣ್ಣ ಬಳಿದುಕೊಂಡು ನಟನೆ ಮಾಡದ ಹನುಮಂತು ತಾನು ಹೇಗೆ ಇದ್ದೇನೋ ಹಾಗೆಯೇ ಇರಲು ಶುರು ಮಾಡಿದ್ದುಅವರ ನೈಜ ಆಟದೊಂದಿಗೆ ವ್ಯಕ್ತಿತ್ವವೂ ಬಹುಬೇಗ ವೀಕ್ಷಕರಿಗೆ ಇಷ್ಟವಾಗಿತ್ತು.

ತನ್ನ ಗ್ರಾಮೀಣ ಭಾಷೆ, ಹಾಡು, ನಡವಳಿಕೆ ಮೂಲಕ ದೊಡ್ಮನೆಯಲ್ಲಿ ಇರಲು ಶುರು ಮಾಡಿದ್ದ. ಮನೆಯಲ್ಲಿ ಏನೇ ಒಂದು ವಿಚಾರವಾದರೂ ಅದಕ್ಕೆ ತಕ್ಕ ಹಾಡು ಹಾಡುತ್ತಾ, ಟಾಸ್ಕ್‌ನಲ್ಲಿ ಗೆಲ್ಲುತ್ತಾ ಹೋದಂತೆ ಹನುಮಂತು ಒಬ್ಬ ಹಳ್ಳಿಹೈದ ಆಗಿರಬಹುದು ಆದರೆ ಆತನಲ್ಲಿ ಬಿಗ್‌ ಬಾಸ್‌ ಗೆಲ್ಲುವ ಸಾಮಾರ್ಥ್ಯ ಇದೆ ಎನ್ನುವುದನ್ನು ವೀಕ್ಷಕರು ಅರ್ಥ ಮಾಡಿಕೊಂಡಿದ್ದಾರೆ.

ಹನುಮಂತು ತಾನು ಹೇಗೆ ಇದ್ದೇನೋ ಹಾಗೆಯೇ ಇದ್ದರೂ ಬಿಗ್‌ ಬಾಸ್‌ ಆಟದಲ್ಲಿ ಅದು ಕೆಲ ಸ್ಪರ್ಧಿಗಳಿಗೆ ನಾಟಕೀಯವಾಗಿ ಕಂಡಿತು.  “ಹನುಮಂತ ಮುಗ್ಧನ ಹಾಗೆ ಕಾಣಿಸುತ್ತಾರೆ ಆದ್ರೆ ಅವರು ಹಾಗೆ ಇಲ್ಲ. ಅವರಿಗೆ ಮೈಂಡ್‌ ಗೇಮ್‌ ಹೇಗೆ ಆಡೋದು ಅಂಥ ಚೆನ್ನಾಗಿ ಗೊತ್ತಿದೆ” ಎಂದು ಕೆಲ ಸ್ಪರ್ಧಿಗಳು ಹನುಮಂತು ಮುಗ್ಧತೆ ಬಗ್ಗೆ ಮಾತನಾಡಿದ್ದರು.

ಧನರಾಜ್‌ಗೆ ದೊಡ್ಮನೆಯಲ್ಲಿ ಮರುಜೀವ ಕೊಟ್ಟ ಹನುಮಂತು: ಆಟದ ವಿಚಾರವನ್ನು ಬದಿಗಿಟ್ಟರೆ ಹನುಮಂತು ಅವರು ಅತೀ ಹೆಚ್ಚು ಕಾಣೋಕೆ ಸಿಕ್ಕಿದ್ದು ಧನರಾಜ್‌ ಅವರ ಜತೆ. ಹನುಮಂತು ಬರುವ ಮುನ್ನ ಚಂಚಲತೆಯಿಂದ ಅಷ್ಟಾಗಿ ಓಪನ್‌ ಅಪ್‌ ಆಗದೆ ಇದ್ದ ಧನರಾಜ್‌ ಅವರಿಗೆ ಮೊದಲ ದಿನದಿಂದಲೇ ಹನುಮಂತು ಅವರೊಂದಿಗೆ ಆತ್ಮೀಯತೆ ಮೂಡಲು ಶುರುವಾಯಿತು. ದಿನ ಕಳೆಯುತ್ತಿದ್ದಂತೆ ಹನುಮಂತು ಧನರಾಜ್‌ ಅವರ ಬೆನ್ನಲುಬಾಗಿ ನಿಂತ ದೋಸ್ತನಾಗುತ್ತಾನೆ. ಆಟದಲ್ಲಿ ತಪ್ಪು ಮಾಡಿದರೆ ಧನರಾಜ್‌ ಅವರ ಹೆಸರನ್ನೇ ಹೇಳಿ ಎಚ್ಚರಿಕೆ ಆಡಬೇಕೆಂದು ಹೇಳಿ ತಾನು ವೈಯಕ್ತಿಕವಾಗಿ ಆಟದಲ್ಲಿ ಸ್ನೇಹವನ್ನು ತರುವುದಿಲ್ಲವೆನ್ನುವ ಸೂಚನೆಯನ್ನು ನೀಡುತ್ತಿದ್ದರು. ಇಬ್ಬರ ನಡುವಿನ ಸ್ನೇಹ ಬಿಗ್‌ ಬಾಸ್‌ ಮೆನಯಲ್ಲಿ ಅಪೂರ್ವ ಕ್ಷಣಗಳಿಗೆ ಕಾರಣವಾಗಿದೆ.

ಕಿಚ್ಚ ಸುದೀಪ್‌ ಹನುಮಂತು ಅವರಿಗೆ ಪ್ರೀತಿಯಿಂದ ಲುಂಗಿ – ಅಂಗಿಯನ್ನು ಉಡುಗೊರೆಯಾಗಿ ಕೊಟ್ಟಿದ್ದರು. ಈ ಎಲ್ಲ ಅಂಶಗಳು ಬಿಗ್‌ ಬಾಸ್‌ ವೀಕ್ಷಕರಿಗೆ ಹನುಮಂತು ಅವರ ಬಗ್ಗೆ ಇಷ್ಟವಾಗುವಂತೆ ಮಾಡಿದೆ ಎಂದರೆ ತಪ್ಪಾಗದು.

ಕ್ಯಾಪ್ಟನ್‌, ಉತ್ತಮ, ಕಳಪೆ ಹೀಗೆ ಎಲ್ಲವನ್ನು ಸಮಾನವಾಗಿ ಸ್ವೀಕರಿಸಿದ ಹನುಮಂತು ʼಟಿಕೆಟ್‌ ಟು ಫಿನಾಲೆʼ ಟಾಸ್ಕ್‌ನಲ್ಲಿ ಗೆದ್ದು ಫಿನಾಲೆಗೆ ಎಂಟ್ರಿ ಕೊಟ್ಟಿದ್ದಾರೆ. ಗೆಲ್ಲೋದು ಹನುಮಂತು ಎಂದು ಒಂದು ವರ್ಗದ ಸೋಶಿಯಲ್‌ ಮೀಡಿಯಾದ ಜನ ಹನುಮಂತು ಪರ ವೋಟಿಂಗ್‌ ಬೆಂಬಲ ಕೋರಿ ಕ್ಯಾಂಪೇನ್‌ ಶುರು ಮಾಡಿದ್ದಾರೆ.

ಮಾತು ಆರಂಭಿಸುವಾಗ ಕೈಕಟ್ಟಿ ವಿನಯತೆಯಿಂದ ಧನ್ಯವಾದ, ಥ್ಯಾಂಕ್ಯೂ ಬಿಗ್‌ ಬಾಸ್‌ ಎನ್ನುತ್ತಲೇ ದೈತ್ಯ ಸ್ಪರ್ಧಿಗಳಿಗೆ ಟಕ್ಕರ್‌ ಕೊಡುತ್ತಾ ಬಿಗ್‌ ಬಾಸ್‌ ಆಟದ ಫಿನಾಲೆ ತಲುಪಿರುವ ಹನುಮಂತು ಗೆಲ್ಲುತ್ತಾರಾ ಇಲ್ವೋ ಎನ್ನುವುದನ್ನು ಕಾದು ನೋಡಬೇಕಿದೆ.

ರೈತನ ಮಗನಿಗೆ ಒಲಿಯುತ್ತಾ ಬಿಗ್‌ ಬಾಸ್‌ ಟ್ರೋಫಿ..?:  ಬಿಗ್‌ ಬಾಸ್‌ ಕನ್ನಡ ಮಾತ್ರವಲ್ಲದೆ ಎಲ್ಲ ಭಾಷೆಯ ಬಿಗ್‌ ಬಾಸ್‌ ಕಾರ್ಯಕ್ರಮವನ್ನು ಗಮನಿಸಿದರೆ ಸಾಮಾನ್ಯ ವರ್ಗದಿಂದ ಬಂದ ಸ್ಪರ್ಧಿಗಳು ಬಿಗ್‌ ಬಾಸ್‌ ಟ್ರೋಫಿ ಗೆದ್ದಿರೋದು ಅಪರೂಪ. ಮರಾಠಿ, ತೆಲುಗು ಹಾಗೂ ಕನ್ನಡದಲ್ಲೂ ಸಾಮಾನ್ಯ ವರ್ಗದಿಂದ ಬಂದು ಬಿಗ್‌ ಬಾಸ್‌ನಲ್ಲಿ ಮಿಂಚಿದ ಹಲವು ಸ್ಪರ್ಧಿಗಳಿದ್ದಾರೆ. ಆದರೆ ಅವರುಗಳು ಟ್ರೋಫಿ ಗೆದ್ದಿರೋದು ಅಪರೂಪ.

ಬಿಗ್‌ ಬಾಸ್‌ ತೆಲುಗು -7 ಗೆದ್ದಿದ್ದ ರೈತ ಪಲ್ಲವಿ ಪ್ರಶಾಂತ್:‌ 
ತೆಲಂಗಾಣದ ಹಳ್ಳಿಯೊಂದರಲ್ಲಿ ಬೆಳೆದ ಪಲ್ಲವಿ ಪ್ರಶಾಂತ್‌ ವೃತ್ತಿಯಲ್ಲಿ ರೈತನಾಗಿದ್ದಾರೆ. ಅವರು ತಮ್ಮದೇ ಆದ ಯೂಟ್ಯೂಬ್‌ ಚಾನೆಲ್‌ ನ್ನು ಹೊಂದಿದ್ದಾರೆ. ಕೃಷಿ ಸಂಬಂಧಿತ ನಿತ್ಯದ ವ್ಲಾಗ್‌ ಗಳನ್ನು ಅವರು ಅಪ್ಲೋಡ್‌ ಮಾಡುತ್ತಿರುತ್ತಾರೆ. ʼನಾನೊಬ್ಬ ರೈತ..ʼ ಎನ್ನುವ ರೈತ ಎನ್ನುವ ಅವರ ವಿಡಿಯೋ ವೈರಲ್‌ ಆಗುತ್ತಿದ್ದವು. ರೀಲ್ಸ್‌ ಹಾಗೂ ವಿಡಿಯೋಗಳಿಂದಲೇ ಅವರು ಅಪಾರ ಫಾಲೋವರ್ಸ್‌ ಗಳನ್ನು ಹೊಂದಿದ್ದ ಅವರಿಗೆ ಬಿಗ್‌ ಬಾಸ್‌ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅಲ್ಲಿ ತಮ್ಮ ಚತುರ ಆಟದಿಂದ ಟ್ರೋಫಿ ಗೆದ್ದಿದ್ದರು. ಸೆಲೆಬ್ರಿಟಿಗಳೊಂದಿಗೆ ಸಾಮಾನ್ಯ ವ್ಯಕ್ತಿಯಾಗಿ ದೊಡ್ಮನೆಯಲ್ಲಿ ನೂರು ದಿನ ಕಳೆದ ಪ್ರಶಾಂತ್‌ ಬಿಗ್‌ ಬಾಸ್‌ ಗೆದ್ದ ಬಳಿಕ ಸಾಮಾನ್ಯದಿಂದ ಸೆಲೆಬ್ರಿಟಿಯಾಗಿದ್ದಾರೆ.

ಬಿಗ್‌ ಬಾಸ್‌ ಮರಾಠಿ ಗೆದ್ದಿದ್ದ ಸೂರಜ್ ಚವಾಣ್: ಬಿಗ್‌ ಬಾಸ್‌ ಮರಾಠಿ ಕಾರ್ಯಕ್ರಮಕ್ಕೆ ಮಹಾರಾಷ್ಟ್ರದಲ್ಲಿ ಅಪಾರ ವೀಕ್ಷಕರಿದ್ದಾರೆ. ರಿತೇಶ್ ದೇಶಮುಖ್ (Riteish Deshmukh) ನಡೆಸಿಕೊಡುವ ಮರಾಠಿ ಬಿಗ್‌ ಬಾಸ್‌ -5ನಲ್ಲಿ ಸೂರಜ್ ಚವಾಣ್‌ ಗೆದ್ದಿದ್ದರು.

ಸೋಶಿಯಲ್‌ ಮೀಡಿಯಾ ಪ್ರಭಾವಿ ಆಗಿರುವ ಸೂರಜ್‌ ಕಂಟೆಂಟ್‌ ಕ್ರಿಯೇಟರ್‌ ಆಗಿ ಗುರುತಿಸಿಕೊಂಡಿದ್ದಾರೆ. ‌ಮಹಾರಾಷ್ಟ್ರದ ಬಾರಾಮತಿಯಲ್ಲಿರುವ ಮೋಧವೆ ಗ್ರಾಮದವರಾದ ಸೂರಜ್‌ ತನ್ನ ಮನರಂಜನೆಯ ರೀಲ್ಸ್‌ ವಿಡಿಯೋಗಳಿಂದ ಮಹಾರಾಷ್ಟ್ರ ಭಾಗದಲ್ಲಿ ಹೆಚ್ಚು ಜನಪ್ರಿಯತೆಯನ್ನು ಹೊಂದಿದ್ದಾರೆ. ಅವರ ರೀಲ್ಸ್‌ ಗಳ ಜನಪ್ರಿಯತೆ ಅವರನ್ನು ಬಿಗ್‌ ಬಾಸ್‌ ವೇದಿಕೆ ಹತ್ತಿಸಿ ಟ್ರೋಫಿ ಗೆಲ್ಲುವಂತೆ ಮಾಡಿತು.

ಬಿಗ್‌ ಬಾಸ್‌ ಕನ್ನಡ ಸೀಸನ್‌ -10ನಲ್ಲಿ ರನ್ನರ್‌ ಅಪ್‌ ಆಗಿದ್ದ ರೈತನ ಮಗ ಪ್ರತಾಪ್:‌ ಬಿಗ್‌ ಬಾಸ್‌ ಸೀಸನ್‌ -10 ಕರುನಾಡಿನಲ್ಲಿ ಅತೀ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿತು. ಈ ಕಾರ್ಯಕ್ರಮದಲ್ಲಿ ಒಬ್ಬೊಬ್ಬ ಸ್ಪರ್ಧಿಗಳು ತಮ್ಮದೇ ಆದ ವ್ಯಕ್ತಿತ್ವದಿಂದ ಖ್ಯಾತಿಗಳಿಸಿದ್ದರು.

ಅವಮಾನ, ಅಪಮಾನವನ್ನು ಎದುರಿಸಿಕೊಂಡು ದೊಡ್ಮನೆಯೊಳಗೆ ಬಂದಿದ್ದ ಡ್ರೋನ್‌ ಪ್ರತಾಪ್‌ ಬಿಗ್‌ ಬಾಸ್‌ ಕಾರ್ಯಕ್ರಮದಲ್ಲಿ ಜನಮನವನ್ನು ಗೆದ್ದು ಎಲ್ಲ ಟೀಕೆಗಳಿಗೂ ಉತ್ತರಿಸಿದ್ದರು. ಸರಳ ವ್ಯಕ್ತಿತ್ವದಿಂದ ವೀಕ್ಷಕರನ್ನು ಸೆಳೆದು ರನ್ನರ್‌ ಅಪ್‌ ಆಗಿದ್ದ ಡ್ರೋನ್‌ ಪ್ರತಾಪ್‌ ಇಂದು ಸಾಮಾಜಿಕ ಕಾರ್ಯಗಳಿಂದ ಗಮನ ಸೆಳೆಯುತ್ತಿದ್ದಾರೆ.

ಗೆದ್ದ ಮೊತ್ತದಿಂದ ಬಡ ಜನರಿಗೆ ಸಹಾಯ ಮಾಡುತ್ತೇನೆ ಎಂದಿದ್ದ ಪ್ರತಾಪ್‌ ತಾವು ವೇದಿಕೆ ಮೇಲೆ ಕೊಟ್ಟಿದ್ದ ಮಾತನ್ನು ಪೂರ್ತಿಗೊಳಿಸಿದ್ದಾರೆ. ಬಿಗ್‌ ಬಾಸ್‌ ಗೆದ್ದ ಬಳಿಕ ಅವರು ದೊಡ್ಮನೆಯ ಹೊರಗೂ ಸಮಾಜಮುಖಿ ಕಾರ್ಯಗಳಿಂದ ಹೆಸರು ಮಾಡಿದ್ದರು.

-ಸುಹಾನ್‌ ಶೇಕ್

ಟಾಪ್ ನ್ಯೂಸ್

TMK-somanna2

ತುಮಕೂರು ಅಥವಾ ನೆಲಮಂಗಲ ಸಮೀಪವೇ ಮತ್ತೊಂದು ಏರ್‌ಪೋರ್ಟ್‌ ಆಗಲಿ: ವಿ.ಸೋಮಣ್ಣ

1-ayodhya

Ayodhya; ರಾಮಮಂದಿರ ಪ್ರಾಣ ಪ್ರತಿಷ್ಠಾ ಮೊದಲ ವಾರ್ಷಿಕೋತ್ಸವ ಸಂಭ್ರಮ

kejriwal 3

Ramesh Bidhuri ಬಿಜೆಪಿಯ ಸಿಎಂ ಫೇಸ್ ಎಂದು ಅಭಿನಂದನೆ ಸಲ್ಲಿಸಿದ ಕೇಜ್ರಿವಾಲ್!

rape

Kerala; 5 ವರ್ಷಗಳಲ್ಲಿ 64 ಜನರಿಂದ ಲೈಂಗಿ*ಕ ದೌರ್ಜನ್ಯ: ಯುವತಿ ಹೇಳಿಕೆ !!

Vijayendra did not go to Kalaburagi due to Priyank Kharge’s threat: MLA Yatnal

BJP: ಪ್ರಿಯಾಂಕ್ ಖರ್ಗೆ ಧಮ್ಕಿಯಿಂದ ಕಲಬುರಗಿಗೆ ಹೋಗದ ವಿಜಯೇಂದ್ರ: ಶಾಸಕ ಯತ್ನಾಳ್

ಅಂದು ಪ್ರತಾಪ್‌ ಇಂದು ಹನುಮಂತು: ಫಿನಾಲೆ ತಲುಪಿದ ರೈತನ ಮಗನಿಗೆ ಒಲಿಯುತ್ತಾ ಬಿಗ್‌ಬಾಸ್ ಕಪ್?

ಅಂದು ಪ್ರತಾಪ್‌ ಇಂದು ಹನುಮಂತು: ಫಿನಾಲೆ ತಲುಪಿದ ರೈತನ ಮಗನಿಗೆ ಒಲಿಯುತ್ತಾ ಬಿಗ್‌ಬಾಸ್ ಕಪ್?

1-asssam-1

New York Time ಟ್ರಾವೆಲ್ 2025 ಲಿಸ್ಟ್; 52 ಸ್ಥಳಗಳ ಪಟ್ಟಿಯಲ್ಲಿ ಅಸ್ಸಾಂಗೆ ನಾಲ್ಕನೇ ಸ್ಥಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BBK11: ನೀರು ತುಂಬಿದ ಪೆಟ್ಟಿಗೆಯಲ್ಲಿ ಮುಳುಗಿದ ಮಂಜು – ಮೋಕ್ಷಿತಾ; ಫಿನಾಲೆಗೆ ತೀವ್ರ ಪೈಪೋಟಿ

BBK11: ನೀರು ತುಂಬಿದ ಪೆಟ್ಟಿಗೆಯಲ್ಲಿ ಮುಳುಗಿದ ಮಂಜು – ಮೋಕ್ಷಿತಾ; ಫಿನಾಲೆಗೆ ತೀವ್ರ ಪೈಪೋಟಿ

Bigg Boss: ಫಿನಾಲೆಗೂ ಮುನ್ನ ವಾರದ ಮಧ್ಯದಲ್ಲೇ ಎಲಿಮಿನೇಷನ್;‌ ಹೊರಗೆ ಹೋದದ್ದು ಇವರೇ

Bigg Boss: ಫಿನಾಲೆಗೂ ಮುನ್ನ ವಾರದ ಮಧ್ಯದಲ್ಲೇ ಎಲಿಮಿನೇಷನ್;‌ ಹೊರಗೆ ಹೋದದ್ದು ಇವರೇ

BBK11: ಫಿನಾಲೆ ಓಟದಿಂದ ಚೈತ್ರಾಳನ್ನು ಹೊರಗಿಟ್ಟ ಮನೆಮಂದಿ..ಕಣ್ಣೀರಿಟ್ಟ ಫೈಯರ್ ಬ್ರ್ಯಾಂಡ್‌

BBK11: ಫಿನಾಲೆ ಓಟದಿಂದ ಚೈತ್ರಾಳನ್ನು ಹೊರಗಿಟ್ಟ ಮನೆಮಂದಿ..ಕಣ್ಣೀರಿಟ್ಟ ಫೈಯರ್ ಬ್ರ್ಯಾಂಡ್‌

ಬರಹಗಾರರಾಗುವ ನಿಮ್ಮ ಕನಸನ್ನು ನನಸಾಗಿಸಲು ಇಲ್ಲಿದೆ ಉತ್ತಮ ವೇದಿಕೆ

Writer’s audition: ಬರಹಗಾರರಾಗುವ ನಿಮ್ಮ ಕನಸನ್ನು ನನಸಾಗಿಸಲು ಇಲ್ಲಿದೆ ಉತ್ತಮ ವೇದಿಕೆ

BBK11: ಸತ್ಯಕ್ಕೆ ಸೋಲಿಲ್ಲ.. ರಜತ್‌ ನಿರ್ಧಾರಕ್ಕೆ ರೊಚ್ಚಿಗೆದ್ದ ಮಂಜು

BBK11: ಸತ್ಯಕ್ಕೆ ಸೋಲಿಲ್ಲ.. ರಜತ್‌ ನಿರ್ಧಾರಕ್ಕೆ ರೊಚ್ಚಿಗೆದ್ದ ಮಂಜು

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

10

Malpe: ಕುಸಿದು ಬಿದ್ದು ವ್ಯಕ್ತಿ ಸಾವು

TMK-somanna2

ತುಮಕೂರು ಅಥವಾ ನೆಲಮಂಗಲ ಸಮೀಪವೇ ಮತ್ತೊಂದು ಏರ್‌ಪೋರ್ಟ್‌ ಆಗಲಿ: ವಿ.ಸೋಮಣ್ಣ

8

Gangolli: 9 ದಿನ ಕಳೆದರೂ ಮೀನುಗಾರನ ಸಿಗದ ಸುಳಿವು

1-ayodhya

Ayodhya; ರಾಮಮಂದಿರ ಪ್ರಾಣ ಪ್ರತಿಷ್ಠಾ ಮೊದಲ ವಾರ್ಷಿಕೋತ್ಸವ ಸಂಭ್ರಮ

Udupi: ಬಸ್‌ನಿಂದ ಬಿದ್ದು ಬಾಲಕನಿಗೆ ಗಾಯ

Udupi: ಬಸ್‌ನಿಂದ ಬಿದ್ದು ಬಾಲಕನಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.