BJP;ಯತ್ನಾಳ್ ವಿರುದ್ಧ ಕ್ರಮ ಕೈಗೊಳ್ಳುವ ಮುನ್ನ ಆ ಇಬ್ಬರ ಮೇಲೆ ಕೈಗೊಳ್ಳಬೇಕಲ್ಲ?!
ತಣ್ಣಗಿದ್ದ ವರಿಷ್ಠರು ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ ಎನ್ನುವುದೇ ಕುತೂಹಲ!!
ವಿಷ್ಣುದಾಸ್ ಪಾಟೀಲ್, Nov 30, 2024, 7:08 PM IST
ಸದ್ಯ ಕರ್ನಾಟಕದ ರಾಜಕೀಯದಲ್ಲಿ ಬಿಜೆಪಿ(BJP) ಭಿನ್ನಮತ ತಾರಕಕ್ಕೇರಿದ್ದು, ಬೀದಿಯಲ್ಲಿ ಬಡಿದಾಟವಾಡುವ ಸ್ಥಿತಿಗೆ ಬಂದು ನಿಂತಿದೆ. ಹತ್ತಾರು ಕಾರಣಗಳು ಕೇಸರಿ ಪಕ್ಷದ ಭಿನ್ನಮತಕ್ಕೆ ಕಾರಣವಾಗಿರಬಹುದು. ಪಕ್ಷದ ಸಂಘಟನೆಗೇ ಸವಾಲು ಎನಿಸುವಂತಹ ಪರಿಸ್ಥಿತಿ ಬಿಜೆಪಿ ಪಾಲಿಗೆ ಎದುರಾಗಿದೆ. ಉಪಚುನಾವಣೆಯಲ್ಲಿ ಇದ್ದ ಒಂದು ಶಿಗ್ಗಾವಿ ವಿಧಾನಸಭಾ ಕ್ಷೇತ್ರವನ್ನೂ,ಗೆಲ್ಲಲು ಪಣತೊಟ್ಟಿದ್ದ ಸಂಡೂರನ್ನೂ ಕಳೆದುಕೊಂಡು ಆತ್ಮಾವಲೋಕನ ಮಾಡಿಕೊಳ್ಳುವ ಸ್ಥಿತಿಯಲ್ಲಿರುವಾಗಲೇ ಭಿನ್ನಮತದ ಜ್ವಾಲೆ ವ್ಯಾಪಿಸತೊಡಗಿದೆ.
ಪ್ರಮುಖವಾಗಿ ಎರಡು ಬಣಗಳ ಬಡಿದಾಟ ಹೈಕಮಾಂಡ್ ಅಂಗಳವನ್ನು ತಲುಪಿದ್ದು ಸ್ಪಷ್ಟ ನಿರ್ಧಾರ ತಳೆಯಲು ಮೀನ ಮೇಷ ಎಣಿಸುತ್ತಿದ್ದ ವರಿಷ್ಠರು ರಾಜ್ಯ ಬಿಜೆಪಿಯ ವಿಚಾರದಲ್ಲಿ ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ ಎನ್ನುವುದೇ ಸದ್ಯ ರಾಜಕೀಯ ವಲಯದ ಕುತೂಹಲ. ಲೋಕಸಭಾ ಚುನಾವಣೆಯಲ್ಲಿ ಒಂದು ಮಟ್ಟಕ್ಕೆ ಹೊಂದಾಣಿಕೆ ಮಾಡಿಕೊಂಡು, ಜೆಡಿಎಸ್ ನೊಂದಿಗೆ ಕೈಜೋಡಿಸಿ ಯಶಸ್ಸು ಕಾಣಲು ಯಶಸ್ವಿಯಾಗಿದ್ದ ಬಿಜೆಪಿ ಗೆ ಕೆಲ ಕ್ಷೇತ್ರಗಳ ಸೋಲು ಆಂತರಿಕ ಕಚ್ಚಾಟದಿಂದಲೇ ಆಗಿದೆ ಎನ್ನುವುದು ಸ್ಪಷ್ಟವಾಗಿ ಅರಿವಿಗೆ ಬಂದಿತ್ತು. ಅನೇಕರು ಈ ಕುರಿತು ಬಹಿರಂಗ ಅಸಮಾಧಾನವನ್ನೂ ಹೊರ ಹಾಕಿದ್ದರು.
ಯತ್ನಾಳ್ ಹೇಳಿಕೆ ನಿರಂತರ!!!
ಬಿಜೆಪಿ ರಾಜ್ಯ ಬಿಜೆಪಿ ಸಂಘಟನೆಯ ವಿಚಾರದಲ್ಲಿ ಹೊಸ ಲೆಕ್ಕಾಚಾರಗಳನ್ನು ಮಾಡಿ, ವರಿಷ್ಠ ನಾಯಕ ಮಾಜಿ ಸಿಎಂ ಯಡಿಯೂರಪ್ಪ ಅವರ ಮತಬ್ಯಾಂಕ್ ಮರಳಿ ಪಡೆಯಲು ಮತ್ತು ಉಳಿಸಿಕೊಳ್ಳಲು ಬಿ.ವೈ.ವಿಜಯೇಂದ್ರ ಅವರಿಗೆ ರಾಜ್ಯಾಧ್ಯಕ್ಷ ಹುದ್ದೆ ನೀಡಿತ್ತು. ಅನೇಕರಿಗೆ ಈ ವಿಚಾರದಲ್ಲಿ ಅಸಮಾಧಾನ ಇದ್ದರೂ ಬಹಿರಂಗ ಅಸಮಾಧಾನ ಹೊರ ಹಾಕುತ್ತಲೇ ನಿರಂತರ ವಾಗ್ದಾಳಿ ಮಾಡುತ್ತಲೇ ಇದ್ದವರು ವಿಜಾಪುರದ ಶಾಸಕ,ಮಾಜಿ ಕೇಂದ್ರ ಸಚಿವ, ಬಸನಗೌಡ ಪಾಟೀಲ್ ಯತ್ನಾಳ್.
ರಾಜ್ಯದ ಜನರಿಗೆ ಎಷ್ಟರ ಮಟ್ಟಿಗೆ ಎಂದರೆ ಯತ್ನಾಳ್ ಯಾವುದೇ ವಿಚಾರಕ್ಕೆ ಮಾಧ್ಯಮಗಳ ಎದುರು ಬಂದರೂ ವಿಜಯೇಂದ್ರ ಮತ್ತು ಯಡಿಯೂರಪ್ಪ ಅವರನ್ನು ಟೀಕಿಸುವುದು ಸಾಮಾನ್ಯ ಎನ್ನುವ ಮಟ್ಟಿನ ವಿಚಾರವಾಗಿತ್ತು.
ಯತ್ನಾಳ್ ಅವರು ಏಕಾಂಗಿಯಾಗಿ ಟೀಕಾ ಪ್ರಹಾರ ಮಾಡಿದರೆ ಅದು ಗಂಭೀರ ಪ್ರಮಾಣದಲ್ಲಿ ತಲೆ ನೋವಿನ ವಿಚಾರ ಎನಿಸಿಕೊಳ್ಳುತ್ತಿರಲಿಲ್ಲ. ಒಂದೆಡೆ ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ಮುಂಚೂಣಿಯಲ್ಲಿರುವ, ಇನ್ನೊಂದೆಡೆ ಹಿಂದುತ್ವದ ವಿಚಾರದಲ್ಲಿ ಮುಂದಿರುವ ಯತ್ನಾಳ್ ಇತರ ಪ್ರಮುಖ ನಾಯಕರನ್ನೂ ಸಂಘಟಿಸಿ ಪಕ್ಷದ ರಾಜ್ಯ ನಾಯಕತ್ವದ ವಿರುದ್ದ ಹೋರಾಟಕ್ಕಿಳಿದಿರುವುದು ವರಿಷ್ಠರು ಯಾವುದಾದರೊಂದು ಕ್ರಮ ಕೈಗೊಳ್ಳಲೇಬೇಕಾದ ಅನಿವಾರ್ಯತೆಗೆ ದೂಡಿದೆ.
2028 ರ ವಿಧಾನಸಭಾ ಚುನಾವಣೆಗೆ ಜೆಡಿಎಸ್ ನೊಂದಿಗೆ ಮೈತ್ರಿ ಮುಂದುವರಿಯಲಿದೆಯೋ ಎನ್ನುವುದು ದೂರದ ವಿಚಾರ ಆದರೆ ಬಿಜೆಪಿಯಲ್ಲಿನ ನಾಯಕತ್ವ ಮತ್ತು ಒಗ್ಗಟ್ಟು ಅತ್ಯಂತ ನಿರ್ಣಾಯಕ ಅಂಶವಾಗಲಿದೆ.ಹಾಗಾಗಿ ಪಕ್ಷದ ನಾಯಕರು ಕಾದು ನೋಡುವ ತಂತ್ರ ಬಿಟ್ಟು ಪರಿಹಾರ ಕಂಡುಕೊಳ್ಳಲೇಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ. ರಾಜಿ ಸಂಧಾನದ ಮೂಲಕ ಪರಿಹಾರ ಕಂಡುಕೊಳ್ಳುವುದು ಸದ್ಯಕ್ಕೆ ದೂರದ ಮಾತು ಎಂದು ಅಂದಾಜಿಸಲಾಗಿದೆ. ಲೋಕಸಭಾ ಚುನಾವಣೆ ವೇಳೆಯೇ ಅದು ಸಾಧ್ಯವಾಗದೆ ಬಿಜೆಪಿ ಕೆಲ ಸ್ಥಾನಗಳನ್ನು ಕಳೆದುಕೊಳ್ಳಬೇಕಾಗಿತ್ತು. 2019 ರಲ್ಲಿ 25 ಸ್ಥಾನ ಹೊಂದಿದ್ದ ಬಿಜೆಪಿ ಯು ಜೆಡಿಎಸ್ ನೊಂದಿಗೆ ಮೈತ್ರಿ ಮಾಡಿಕೊಂಡರೂ 17 ಸ್ಥಾನಗಳನ್ನು ಗೆದ್ದಿತ್ತು. ಪ್ರಮುಖವಾಗಿ ಬೀದರ್, ದಾವಣಗೆರೆ ಯಲ್ಲಿ ಆಂತರಿಕ ಭಿನ್ನಮತದಿಂದಲಾಗಿಯೇ ಬಿಜೆಪಿ ಸೋಲು ಅನುಭವಿಸಿತ್ತು ಎಂಬುದು ಬಹಿರಂಗವಾಗಿತ್ತು.
ಈಗ ಯತ್ನಾಳ್ ಅವರ ಬಣದಲ್ಲಿ ಗುರುತಿಸಿಕೊಂಡಿರುವ ಮಾಜಿ ಸಚಿವ ಶಾಸಕ ರಮೇಶ್ ಜಾರಕಿಹೊಳಿ, ಮಾಜಿ ಕೇಂದ್ರ ಸಚಿವ ಜಿ.ಎಂ. ಸಿದ್ದೇಶ್ವರ, ಮಾಜಿ ಸಂಸದ ಪ್ರತಾಪ್ ಸಿಂಹ ಸೇರಿ ಇತರರು ಒಂದಲ್ಲ ಒಂದು ರೀತಿಯಲ್ಲಿ ಅಸಮಾಧಾನವನ್ನು ಹೊರ ಹಾಕಲೆಂದೇ ಸಂಘಟಿತರಾದಂತೆ ಕಂಡು ಬರುತ್ತಿದೆ. ಮೈಸೂರಿನಲ್ಲಿ ಟಿಕೆಟ್ ವಂಚಿತರಾಗಿದ್ದ ಸಿಂಹ ಅವರು ಹಿಂದುತ್ವದ ಸಿದ್ದಂತಾದ ಪ್ರತಿಪಾದಕರಾಗಿ ವಕ್ಫ್ ವಿರೋಧಿ ಹೋರಾಟದಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದು, ಇತರರು ಹೋರಾಟದಲ್ಲಿ ತೊಡಗಿಸಿಕೊಳ್ಳುವ ಮೂಲಕ ಸೈದ್ಧಾಂತಿಕ ಬದ್ಧತೆಯನ್ನು ತೋರಿಸುತ್ತಿದ್ದಾರೆ.
ಯತ್ನಾಳ್ ನೇತೃತ್ವದಲ್ಲಿ ನಡೆದ ಹೋರಾಟದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಭಾಗಿಯಾಗಿ ಅಚ್ಚರಿಗೂ ಕಾರಣವಾಗಿದ್ದರು!.
ಸೋಮಶೇಖರ್, ಹೆಬ್ಬಾರ್ ವಿರುದ್ಧ ಕ್ರಮವಿಲ್ಲ
ಬಿಜೆಪಿಯಿಂದ ಸಂಪೂರ್ಣವಾಗಿ ದೂರವಾಗಿರುವ ಯಶವಂತಪುರದ ಶಾಸಕರಾದ ಎಸ್.ಟಿ.ಸೋಮಶೇಖರ್ ಮತ್ತು ಯಲ್ಲಾಪುರ ಶಾಸಕ ಶಿವರಾಂ ಹೆಬ್ಬಾರ್ ಅವರು ಲೋಕಸಭಾ ಚುನಾವಣೆಯಿಂದಲೂ ಪಕ್ಷದಿಂದ ದೂರವಾಗಿದ್ದಾರೆ. ಅವರ ವಿರುದ್ಧ ಬಿಜೆಪಿ ಯಾವುದೇ ಕಠಿನ ಕ್ರಮಕ್ಕೆ ಮುಂದಾಗಿಲ್ಲ. ಸಂದರ್ಭ ಈ ರೀತಿಯಲ್ಲಿ ಇರುವ ವೇಳೆ ಯತ್ನಾಳ್ ಮತ್ತು ಬೆಂಬಲಿಗರನ್ನು ಏಕಾಏಕಿ ಪಕ್ಷದಿಂದ ಹೊರ ಹಾಕುವುದಕ್ಕೆ ಬಿಜೆಪಿ ಮುಂದಾಗಲಿದೆಯೇ ಎನ್ನುವುದು ದೊಡ್ಡ ಪ್ರಶ್ನೆಯಾಗಿದೆ. ಒಂದು ವೇಳೆ ಯತ್ನಾಳ್ ವಿರುದ್ಧ ಕ್ರಮ ಕೈಗೊಂಡಿದ್ದೇ ಆದರೆ, ಬೆಂಬಲಿಗರು ಯಾವ ತೀರ್ಮಾನ ಕೈಗೊಳ್ಳಲಿದ್ದಾರೆ, ಅದು ಪಕ್ಷಕ್ಕೆ ಯಾವ ಮಟ್ಟಿಗಿನ ಪರಿಣಾಮ ಬೀರಲಿದೆ ಎನ್ನುವುದು ಸವಾಲಿನ ವಿಚಾರವೇ ಆಗಿದೆ.
ಮಹಾರಾಷ್ಟ್ರ, ಜಾರ್ಖಂಡ್ ಚುನಾವಣೆಯಲ್ಲಿ ಮಗ್ನರಾಗಿದ್ದ ಬಿಜೆಪಿ ವರಿಷ್ಠರು ಈಗ ರಾಜ್ಯ ಬಿಜೆಪಿ ಕುರಿತು ಗಟ್ಟಿ ನಿರ್ಧಾರ ಕೈಗೊಳ್ಳಲೇಬೇಕಾದ ಸಮಯ ಬಂದಿದೆ. ಆರೋಪ-ಪ್ರತ್ಯಾರೋಪಗಳ ಪಟ್ಟಿಯೊಂದಿಗೆ ದೆಹಲಿಗೆ ಹಾರಲು ರಾಜ್ಯ ಬಿಜೆಪಿ ಬಣಗಳು ಸಿದ್ಧವಾಗಿದ್ದು, ವರಿಷ್ಠರ ಮನೆಗಳ ಬಾಗಿಲು ಬಡಿದಾಗ ಸಮಾಧಾನ ಯಾವ ರೀತಿಯಲ್ಲಿ ಮಾಡುತ್ತಾರೆ, ಪರಿಹಾರ ಹೇಗೆ ಕಂಡುಕೊಳ್ಳಲಿದ್ದಾರೆ ಎನ್ನುವುದೂ ರಾಜಕೀಯ ವಲಯದ ಕುತೂಹಲ.
ಆರ್ ಎಸ್ ಎಸ್ ಪ್ರವೇಶ?
ಸದ್ಯದ ಪರಿಸ್ಥಿತಿಯಲ್ಲಿ ಬಿಕ್ಕಟ್ಟು ಶಮನಕ್ಕೆ ಆರ್ ಎಸ್ ಎಸ್ ನಾಯಕರು ಮಧ್ಯ ಪ್ರವೇಶಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಬದಲಾವಣೆ ಮೂಲಕ ಸಂಘ ನಿಷ್ಠೆಯ, ಬಣಗಳಿಗೆ ಸಂಬಂಧವೇ ಇಲ್ಲದ ನಾಯಕತ್ವಕ್ಕೆ ಮಣೆ ಹಾಕಿ ಎರಡೂ ಬಣಗಳನ್ನು ತಣ್ಣಗಾಗಿಸುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ.ಮಹಾರಾಷ್ಟ್ರ ಚುನಾವಣೆಯಲ್ಲಿ ಆರ್ ಎಸ್ ಎಸ್ ನೆಲ ಮಟ್ಟದಲ್ಲಿ ಕೆಲಸ ನಿರ್ವಹಿಸಿ ದೊಡ್ಡ ಯಶಸ್ಸು ಕಂಡುಕೊಂಡಿತ್ತು. ರಾಜ್ಯ ಬಿಜೆಪಿಯ ವಿಚಾರದಲ್ಲಿ ಯಾವ ರೀತಿಯಲ್ಲಿ ಕೆಲಸ ಮಾಡಲಿದೆ ಎನ್ನುವುದೂ ಕುತೂಹಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jagdeep Singh: ಈ ಸಿಇಒ ಪ್ರತಿದಿನ ಪಡೆಯುವ ಸಂಬಳ 48 ಕೋಟಿ ರೂ!…ಯಾರೀತ ಜಗದೀಪ್ ಸಿಂಗ್?
Retirement: ವೃತ್ತಿ ನಿವೃತ್ತಿ ವ್ಯಕ್ತಿಯಲ್ಲಿ ಖಿನ್ನತೆಗೆ ಕಾರಣವಾಗುವುದೇ? ಇಲ್ಲಿದೆ ಮಾಹಿತಿ
Rohit Sharma; ಮುಗಿಯಿತಾ ರೋಹಿತ್ ಕ್ರಿಕೆಟ್ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?
Healthy Recipe: ಹಳೇ ಕಾಲದ ರುಚಿ; ಈ ರೆಸಿಪಿ ಮಾಡದಿದ್ದರೆ ಒಮ್ಮೆಯಾದ್ರು ಮಾಡಿ ನೋಡಿ…
International: New Orleans-ದಾಳಿ ನಡೆಸಿದಾತ ಅಮೆರಿಕದ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.