ಸದಾ ಒಂದೇ ಮಾಸ್ಕ್ ಬಳಸಿದ್ರೆ ಬರುತ್ತಂತೆ ಬ್ಲಾಕ್ ಫಂಗಸ್ : ತಜ್ಞರು ಹೇಳುವುದೇನು ಗೊತ್ತಾ?
Team Udayavani, Jun 1, 2021, 3:16 PM IST
ಸದ್ಯ ಕೋವಿಡ್ ಸೋಂಕು ಎಲ್ಲೆ ಮೀರಿ ಹರಡುತ್ತಿದೆ. ಈ ನಡುವೆ ಜನರಿಗೆ ಮತ್ತೊಂದು ಆತಂಕ ಶುರುವಾಗಿದೆ. ಅದೇನೆಂದರೆ ಬ್ಲಾಕ್ ಫಂಗಸ್. ಈ ಸೋಂಕಿನಿಂದಲೂ ಜನ ಬೆಚ್ಚಿ ಬಿದ್ದಿದ್ದಾರೆ. ಆದ್ರೆ ಕೋವಿಡ್ ತಡೆಯಲು ಬಳಸುವ ಮಾಸ್ಕ್ ನಿಂದಲೇ ಬ್ಲಾಕ್ ಫಂಗಸ್ ಹರುಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಎರಡರಿಂದ ಮೂರು ವಾರಗಳ ಕಾಲ ಒಂದೇ ಮಾಸ್ಕ್ ಅನ್ನು ನಿರಂತರವಾಗಿ ಧರಿಸಿದರೆ ‘ಬ್ಲ್ಯಾಕ್ ಫಂಗಸ್’ ತಗುಲುವ ಸಾಧ್ಯತೆ ಇದೆ ಎಂದು ತಜ್ಞರು ತಿಳಿಸಿದ್ದಾರೆ.
ಭಯಂಕರ ಕೋವಿಡ್ ಜೋರಾಗಿರುವಂತೆಯೇ ಬ್ಲಾಕ್ ಫಂಗಸ್ ಸೋಂಕಿನ ಭೀತಿ ಕೂಡ ವ್ಯಾಪಕವಾಗಿ ಹೆಚ್ಚಾಗುತ್ತಿದೆ. ಇದರ ನಡುವೆಯೇ ಈ ಬ್ಲಾಕ್ ಫಂಗಸ್ ನ ಮೂಲಗಳ ಕುರಿತು ಒಂದೊಂದೇ ಸ್ಫೋಟಕ ಮಾಹಿತಿಗಳನ್ನು ತಜ್ಞರು ನೀಡುತ್ತಿದ್ದು, ಇದೀಗ ಒಂದೇ ಮಾಸ್ಕ್ ಅನ್ನು ಸತತವಾಗಿ ಬಳಕೆ ಮಾಡುವುದರಿಂದಲೂ ಬ್ಲಾಕ್ ಫಂಗಸ್ ಸೋಂಕು ತಗುಲುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಇದೀಗ ಕೋವಿಡ್ ನಡುವೆ ಬ್ಲಾಕ್ ಫಂಗಸ್ ಎಂಬ ಮತ್ತೊಂದು ಮಹಾಮಾರಿ ಜನರನ್ನು ಬೆಚ್ಚಿ ಬೀಳಿಸಿದೆ. ಕೋವಿಡ್ ಸೋಂಕಿನಿಂದ ಗುಣಮುಖರಾದವರಲ್ಲಿ ಹೆಚ್ಚಾಗಿ ಈ ಕಾಯಿಲೆ ಕಾಣಿಸಿಕೊಳ್ಳುತ್ತಿರುವುದು ಆತಂಕಕ್ಕೀಡು ಮಾಡಿದೆ. ಈ ಬಗ್ಗೆ ಏಮ್ಸ್ನ ನ್ಯೂರೋ ಸರ್ಜನ್ ವೈದ್ಯ ಡಾ. ಸರತ್ ಚಂದ್ರ, ಸತತ 2ರಿಂದ 3 ವಾರಗಳ ಕಾಲ ಒಂದೇ ಮಾಸ್ಕನ್ನು ಧರಿಸುವುದರಿಂದಲೂ ಬ್ಲ್ಯಾಕ್ ಫಂಗಸ್ ಬರುತ್ತದೆ ಎಂದು ಹೇಳಿದ್ದಾರೆ.
ಕೆಲವರು ಮಾಸ್ಕ್ ಸ್ವಚ್ಚಗೊಳಿಸದೇ ಅದನ್ನೇ ನಿರಂತರವಾಗಿ ಬಳಕೆ ಮಾಡುತ್ತಾರೆ. ಸತತವಾಗಿ ಒಂದೇ ಮಾಸ್ಕ್ ಧರಿಸುವುದರಿಂದ ಫಂಗಸ್ ಸುಲಭವಾಗಿ ಬೆಳೆಯುತ್ತದೆ. ಆದ್ದರಿಂದ ಸೋಂಕಿತರಲ್ಲಿ ಬ್ಲ್ಯಾಕ್ ಫಂಗಸ್ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಇದಲ್ಲದೆ ಅನಿಯಂತ್ರಿತ ಮಧುಮೇಹ, ಅತಿಯಾದ ಸ್ಟಿರಾಯಿಡ್ ಬಳಕೆ, ಮೆಡಿಕಲ್ ಆಕ್ಸಿಜನ್ ಪಡೆದವರು ಸೋಂಕಿತರಾದ 6 ತಿಂಗಳುಗಳ ಒಳಗೆ ಬ್ಲ್ಯಾಕ್ ಫಂಗಸ್ಗೆ ತುತ್ತಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ ಎಂದು ಹೇಳಿದ್ದಾರೆ.
ಇದೇ ವಿಚಾರವಾಗಿ ಮಾತನಾಡಿರುವ ಇಂದ್ರಪ್ರಸ್ಥ ಅಪೋಲೋ ಆಸ್ಪತ್ರೆಯ ಇಎನ್ ಟಿ ವೈದ್ಯ ಡಾ. ಸುರೇಶ್ ನಾರುಕಾ ಅವರು, ಬ್ಲಾಕ್ ಫಂಗಸ್ ಗೆ ಮೊದಲ ಕಾರಣ ಅವೈಜ್ಞಾನಿಕವಾಗಿ ವೈದ್ಯರ ಸಲಹೆ ಇಲ್ಲದೇ ಸ್ಟಿರಾಯ್ಡ್ ಗಳನ್ನು ತೆಗೆದುಕೊಳ್ಳುವುದು. 2ನೇಯದು ಶುಚಿತ್ವವಿಲ್ಲದ ಜೀವನ. ಅಂದರೆ ಮಾಸ್ಕ್ ಗಳನ್ನು ಸುದೀರ್ಘವಾಗಿ ಸ್ವಚ್ಥಗೊಳಿಸದೇ ಮಾಸ್ಕ್ ಗಳನ್ನು ಧರಿಸುವುದು. ಗಾಳಿ ಬೆಳಕು ಇಲ್ಲದೇ ಇರುವ ರೂಮ್ ಅಥವಾ ಜಾಗಗಳಲ್ಲಿ ಸುಧೀರ್ಘವಾಗಿ ಇರುವುದು ಇದೂ ಕೂಡ ಬ್ಲಾಕ್ ಫಂಗಸ್ ಸೋಂಕಿಗೆ ಕಾರಣವಾಗುತ್ತದೆ ಎಂದು ಹೇಳಿದ್ದಾರೆ.
ಅಂತೆಯೇ ಈ ಬ್ಲಾಕ್ ಫಂಗಸ್ ಸೋಂಕು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗುತ್ತಿದೆ. ಹಿಂದೆಲ್ಲ ವರ್ಷಕ್ಕೆ 7 ಅಥವಾ 8 ಪ್ರಕರಣಗಳು ದಾಖಲಾಗುತ್ತಿದ್ದವು. ಆದರೆ ಇಂದು ನಿತ್ಯ ಹತ್ತಾರು ಸೋಂಕು ಪ್ರಕರಣಗಳು ದಾಖಲಾಗುತ್ತಿವೆ. ಪ್ರಮುಖವಾಗಿ ರೋಗನಿರೋಧಕ ಶಕ್ತಿ ಇರುವವರಲ್ಲಿ ಸೋಂಕು ಹೆಚ್ಚಾಗಿ ಬಾಧಿಸುತ್ತಿದೆ. ಮಧುಮೇಹ, ಬಿಪಿ, ಕಿಡ್ನಿ ಸಮಸ್ಯೆ, ಹೃದ್ರೋಗ ಸಮಸ್ಯೆಯಂತಹ ಅನಾರೋಗ್ಯದಿಂದ ಬಳಲುತ್ತಿರುವವರು ವೈದ್ಯರ ಸಲಹೆ ಇಲ್ಲದೇ ಸ್ಟಿರಾಯ್ಡ್ ಗಳನ್ನು ತೆಗೆದುಕೊಳ್ಳುತ್ತಿದ್ದರೆ ಅವರಲ್ಲಿ ಬ್ಲಾಕ್ ಫಂಗಸ್ ಸೋಂಕು ಬೇಗ ಹರಡುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
ರೋಗ ನಿರೋಧಕ ಶಕ್ತಿ ಕಡಿಮೆ ಇರುವ ವ್ಯಕ್ತಿಗಳಿಗೆ ಬ್ಲಾಕ್ ಫಂಗಸ್ ಸೋಂಕು ತಗುಲಿದರೆ ಅದರ ಪರಿಣಾಮ ಮೂರುಪಟ್ಟು ಹೆಚ್ಚಿರುತ್ತದೆ. ಇದಕ್ಕೆ ಸ್ಟಿರಾಯ್ಡ್ ಗಳ ಅತಿಯಾದ ಬಳಕೆ ಕೂಡ ಕಾರಣವಾಗಿ ಅಂತಹ ಸೋಂಕಿತರಲ್ಲಿ ಕಡಿಮೆ ಸಮಯದಲ್ಲಿ ಸೋಂಕು ಉಲ್ಬಣವಾಗುತ್ತದೆ ಎಂದು ವೈದ್ಯರು ಎಚ್ಚರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BGT: ವಿರಾಟ್ ಬಗ್ಗೆ ಆಸೀಸ್ ಜನರಿಗೆ ಯಾಕಿಷ್ಟು ಕುತೂಹಲ; ಇದು ಕಿಂಗ್ ಸಾಮ್ರಾಜ್ಯದ ಕಥೆ
AIADMK-BJP ಮರು ಮೈತ್ರಿ ಸುದ್ದಿ: ನಿರ್ಧಾರ ಬದಲಿಸುವರೇ ಪಳನಿಸ್ವಾಮಿ?
Recipe: ಚಟ್ ಪಟ್ ಅಂತ ಮಾಡಿ ಪನೀರ್ ಪಕೋಡಾ…
Coconut Oil: ತ್ವಚೆಗೆ ತೆಂಗಿನ ಎಣ್ಣೆ ಹಚ್ಚುವುದರಿಂದಾಗುವ ಉಪಯೋಗಗಳ ಬಗ್ಗೆ ತಿಳಿಯಿರಿ
Box Office: ದೀಪಾವಳಿಗೆ ರಿಲೀಸ್ ಆದ 8 ಸಿನಿಮಾಗಳಲ್ಲಿ ಗೆದ್ದವರು ಯಾರು? ಸೋತವರು ಯಾರು?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.