ಬಾಡಿ ಡಿಸ್ಮಾರ್ಫಿಕ್ ಡಿಸ್ ಆರ್ಡರ್ : ಲಕ್ಷಣಗಳೇನು..?

ಶ್ರೀರಾಜ್ ವಕ್ವಾಡಿ, Apr 30, 2021, 9:45 AM IST

Body dysmorphic disorder is a mental health condition

ದೇಹದ ಬಗ್ಗೆ ಕಡಿಮೆ ಆತ್ಮ ಗೌರವ ಹಾಗೂ ಋಣಾತ್ಮಕ ಯೋಚನೆ ಸಾಮಾನ್ಯವಾಗಿ ಹೆಚ್ಚಿನವರಲ್ಲಿ ಇರುತ್ತದೆ. ಇಂತಹ ಸಮಸ್ಯೆಯನ್ನು ಬಾಡಿ ಡಿಸ್ಮಾರ್ಫಿಕ್ ಡಿಸ್ ಆರ್ಡರ್ ಎಂದು ಕರೆಯುತ್ತಾರೆ. ಇದು ನಮ್ಮ ಮಾನಸಿಕ ಸಮಸ್ಯೆಯ ಬಗ್ಗೆ ಒಂದು. ನಮ್ಮ ಬ್ಯೂಟಿ ಬಗ್ಗೆ ಅಥವಾ ನಮ್ಮ ಸೌಂದರ್ಯದ ಬಗ್ಗೆ ಅತಿಯಾದ ಕಾಳಜಿ ಇರುವುದನ್ನು ಬಾಡಿ ಡಿಸ್ಮಾರ್ಫಿಕ್ ಡಿಸ್ ಆರ್ಡರ್ ಎಂದು ಹೇಳಲಾಗುತ್ತದೆ.

ಇದನ್ನು ಬಿಡಿಡಿ ಎಂದು ಕೂಡ ಕರೆಯಲಾಗುತ್ತದೆ. ಸಾಮಾನ್ಯವಾಗಿ ಎಲ್ಲರಲ್ಲೂ ಈ ಸಮಸ್ಯೆ ಇದ್ದೇ ಇರುತ್ತದೆ. ಟೀನ್ ಏಜ್ ಅಥವಾ ಹರೆಯದ ವಯಸ್ಸಿನವರಲ್ಲಿ ಹೆಚ್ಚಾಗಿ ಈ ಸಮಸ್ಯೆ ಹೆಚ್ಚಾಗಿರುತ್ತದೆ.

ತಮ್ಮ ದೈಹಿಕ ಸೌಂದರ್ಯದ ಬಗ್ಗೆ ಅತಿಯಾದ ಕಾಳಜಿ ಇದಾಗಿದೆ. ಉದಾಹರಣೆಗೆ, ತಲೆ ಕೂದಲು ಉದುರುತ್ತಿದೆ,  ನನ್ನ ಮುಖ ಚೆಂದವಿಲ್ಲ, ನನ್ನ ನಗು ಚೆಂದವಿಲ್ಲ, ನಾನು ನಡೆಯುವುದು ಚೆನ್ನಾಗಿ ಕಾಣಿಸುತ್ತಿಲ್ಲ .. ಹೀಗೆ ತಮ್ಮ ಬಗ್ಗೆಯೇ, ತನ್ನ ದೈಹಿಕ ಸೌಂದರ್ಯದ ಬಗ್ಗೆಯೇ ಹೆಚ್ಚು ಕಾಳಜಿ ಇರುವುದನ್ನು ಈ ಸಮಸ್ಯೆ ಇರುವವರಲ್ಲಿ ಕಾಣುವುದಕ್ಕೆ ಸಿಗುತ್ತದೆ.

ಸೋಶಿಯಲ್ ಲರ್ನಿಂಗ್ ಮೂಲಕ ತಮ್ಮ ಬಗ್ಗೆ ತಾವು ಒಂದು ರೀತಿಯಲ್ಲಿ ಅಸಹ್ಯ ಭಾವನೆಯನ್ನು ಹೊಂದಿರುವುದು ಈ ರೀತಿಯ ಸಮಸ್ಯೆಯನ್ನು ಹೊಂದಿರುವವರಲ್ಲಿ ಆಣಸಿಗುತ್ತದೆ. ಅಂದರೇ, ಇನ್ನೊಬ್ಬರ ಸೌಂದರ್ಯವನ್ನು ನೋಡಿ ನಾವು ಹಾಗಿಲ್ಲವಲ್ಲ ಎಂದು ಪರಿತಪಿಸುವುದು, ನಾನು ಅವರಂತೆ ಕಾಣಬೇಕು, ನಾನು ಅವರ ಹಾಗೆ ಬದುಕಬೇಕು, ನನ್ನ ದೈಹಿಕ ಸೌಂದರ್ಯ ಅವರಂತೆಯೇ ಇರಬೇಕು… ಹೀಗೆ ಇಂತಹ ಸಣ್ಣ ಸಣ್ಣ ಬಯಕೆಗಳಿಂದಲೇ ಕೊರಗುವ ಸಾಮಾನ್ಯ ಹದಿಹರೆಯದವರ ಮಾನಸಿಕ ಸಮಸ್ಯೆ ಇದಾಗಿದೆ.

ಈ ಸಮಸ್ಯೆ ಇರುವವರಲ್ಲಿ ಸಾಮಾನ್ಯವಾಗಿ ಈಟಿಂಗ್ ಡಿಸ್ ಆರ್ಡರ್, ಸೆಲ್ಫ್ ವಾಮಿಟಿಂಗ್, ಡ್ರಗ್ಸ್, ಆಲ್ಕೋ ಹಾಲ್ ಚಟಕ್ಕೆ ಒಳಗಾಗುವುದನ್ನು ನಾವು ಸಾಮಾನ್ಯವಾಗಿ ಕಾಣಬಹುದು. ಸಿಟ್ಟು, ಕೋಪ ಸಾಮಾನ್ಯವಾಗಿ ಹಚ್ಚಾಗಿರುತ್ತದೆ.

ಪದೇ ಪದೇ ಕನ್ನಡಿ ನೋಡಿಕೊಳ್ಳುವುದು, ತಮ್ಮ ದೈಹಿಕ ಬಾಹ್ಯ ಸೌಂದರ್ಯದ ಬಗ್ಗೆಯೇ ಹೆಚ್ಚಾಗಿ ಕೊರಗುವುದರಿಂದ ಅವರು ಸೋಶಿಯಲ್ ಡಿಸ್ಟ್ಯಾನ್ಸ್ ನಿಂದ ಇರುತ್ತಾರೆ. ಅಂದರೇ, ಹೆಚ್ಚಾಗಿ ಒಬ್ಬಂಟಿಯಾಗಿ ಇರಲು ಬಯಸುತ್ತಾರೆ.

ಸಾಮಾನ್ಯವಾಗಿ ಇದು ಇಪ್ಪತ್ತು ವರ್ಷ ಕಳೆಯುವ ತನಕ ಅಂದರೇ ಪದವಿ ಕಾಲೇಜು ಜೀವನ ಕಳೆಯುವುದರ ತನಕ ಹೆಚ್ಚಾಗಿ ಇರುತ್ತದೆ.

ನಮ್ಮಲ್ಲಿ ಹೆಚ್ಚಿನವರಿಗೆ ನಮ್ಮ ದೇಹದ ಕುರಿತು ತೃಪ್ತಿ ಇರುವುದಿಲ್ಲ. ತಮ್ಮ ದೇಹ ಅಥವಾ ದೈಹಿಕ ಆಕೃತಿಯ ಬಗ್ಗೆ ಸಂತೃಪ್ತಿ ಇರುವವರು ಬಹಳ ಕಡಿಮೆ. ಕೆಲವರು ಎತ್ತರವಾಗಲು ಬಯಸಿದರೆ, ಕೆಲವರು ಗಿಡ್ಡವಾಗಲು ಬಯಸುತ್ತಾರೆ. ಇನ್ನು ಕೆಲವರಿಗೆ ಪುಷ್ಟವಾದ ಮೈಕಟ್ಟು ಮತ್ತು ದಪ್ಪ ಕೂದಲಿನ ಬಯಕೆಯಿರುತ್ತದೆ. ಆದರೆ ಕೆಲವರಲ್ಲಿ ಈ ಬಯಕೆಗಳು ಅತ್ಯಂತ ತೀವ್ರವಾಗಿ ಅದೊಂದು ಗೀಳಾಗಿ ಬದಲಾಗುತ್ತದೆ. ಇದರಿಂದಾಗಿ ಅವರು ತಮ್ಮ ಶಾಲೆ, ಕಾಲೇಜು ಅಥವಾ ಕಛೇರಿಗೆ ಹೋಗುವುದನ್ನೇ ನಿಲ್ಲಿಸಬಹುದು.

ಬಾಡಿ ದಿಸ್ಮಾರ್ಫಿಕ್ ಡಿಸ್ ಆರ್ಡರ್ ಒಂದು ಕ್ಲಿನಿಕಲ್ ಪರಿಸ್ಥಿತಿಯಾಗಿದ್ದು, ಇದರಿಂದಾಗಿ ವ್ಯಕ್ತಿಯು ತನ್ನ ದೇಹದ ಆಕೃತಿ ಅಥವಾ ಮೂಗು, ಬಣ್ಣ, ಕಿವಿ, ತುಟಿಗಳಂತಹ ನಿರ್ದಿಷ್ಟ ಅಂಗಾಂಗಗಳ ಆಕಾರಗಳ ಬಗ್ಗೆ ಅತಿಯಾಗಿ ಮತ್ತೆ ಮತ್ತೆ ಚಿಂತೆ ಮಾಡುತ್ತಾರೆ.

ಬಾಡಿ ಡಿಸ್ಮಾರ್ಫಿಕ್ ಡಿಸ್ ಆರ್ಡರ್ ನಿಂದ ಬಳಲುತ್ತಿರುವ ವ್ಯಕ್ತಿಗಳು ತಮ್ಮ ಬಗ್ಗೆ ಅತಿಯಾದ ನಿರೀಕ್ಷೆಯನ್ನು ಹೊಂದಿರುತ್ತಾರೆ ಅಥವಾ ತಮ್ಮನ್ನು ತಾವು ಪರಿಪೂರ್ಣರಾಗಿಸಲು ಪ್ರಯತ್ನಿಸುತ್ತಾರೆ. ಇದರಿಂದ ತಮ್ಮ ತಪ್ಪುಗಳ ಬಗ್ಗೆ ಇತರರಿಂದ ಮತ್ತೆ ಮತ್ತೆ ಅಭಿಪ್ರಾಯಗಳನ್ನು ಪಡೆಯಬಹುದು. ಇಂತಹ ಸಂದರ್ಭಗಳಲ್ಲಿ ವ್ಯಕ್ತಿಯು ಮಾನಸಿಕ ಆರೋಗ್ಯ ತಜ್ಞರನ್ನು ಭೇಟಿಯಾಗುವಂತೆ ಮಾಡುವಲ್ಲಿ ಕುಟುಂಬದ ಪಾತ್ರ ಪ್ರಮುಖವಾಗಿರುತ್ತದೆ. ವ್ಯಕ್ತಿಯು ಚಿಕಿತ್ಸೆ ಪಡೆಯುತ್ತಿರುವಾಗ ಕುಟುಂಬದವರು ಅವರನ್ನು ಅರ್ಥಮಾಡಿಕೊಂಡು ಅಗತ್ಯ ಬೆಂಬಲ ನೀಡುವುದರಿಂದ ಅವರು ಆ ಸಮಸ್ಯೆಯಿಂದ ಹೊರ ಬರಲು ಸಾಧ್ಯವಾಗುತ್ತದೆ.

ಮಾಹಿತಿ : ಸವಿತಾ ಕೆ.

ಮನಃಶಾಸ್ತ್ರ ಉಪನ್ಯಾಸಕರು, ಭಂಡಾರ್ ಕಾರ್ಸ್ ಕಾಲೇಜು, ಕುಂದಾಪುರ  

ಟಾಪ್ ನ್ಯೂಸ್

Bangla–Pak

ಬಾಂಗ್ಲಾದೇಶದ ಭಾರತ ವಿರೋಧಿ ಮನಃಸ್ಥಿತಿ ಖಂಡನೀಯ

Boxing Day Test: ನೀಗಲಿ ಭಾರತದ ಬ್ಯಾಟಿಂಗ್‌ ಬರ; ಇಂದಿನಿಂದ ವರ್ಷಾಂತ್ಯದ ಭಾರತಸ್ಟ್‌

Boxing Day Test: ನೀಗಲಿ ಭಾರತದ ಬ್ಯಾಟಿಂಗ್‌ ಬರ; ಇಂದಿನಿಂದ ವರ್ಷಾಂತ್ಯದ ಭಾರತಸ್ಟ್‌

High-Court

Covid: ಎನ್‌-95 ಮಾಸ್ಕ್ ಅವ್ಯವಹಾರ: ಆತುರದ ಕ್ರಮ ಕೈಗೊಳ್ಳದಂತೆ ಸೂಚನೆ

Udupi: ಗೀತಾರ್ಥ ಚಿಂತನೆ 136: ರಕ್ತ ಸುರಿದರೆ ದುಃಖ ಏತಕ್ಕಾಗಿ? ರಕ್ತ ಸುರಿದದ್ದಕ್ಕಲ್ಲ

Udupi: ಗೀತಾರ್ಥ ಚಿಂತನೆ 136: ರಕ್ತ ಸುರಿದರೆ ದುಃಖ ಏತಕ್ಕಾಗಿ? ರಕ್ತ ಸುರಿದದ್ದಕ್ಕಲ್ಲ

Koteshwar: ಬೀಜಾಡಿಯ ಯೋಧ ಅನೂಪ್‌ ಪೂಜಾರಿ ಮೃತ್ಯು

Koteshwar: ಬೀಜಾಡಿಯ ಯೋಧ ಅನೂಪ್‌ ಪೂಜಾರಿ ಮೃತ್ಯು

pratap-Simha

Name Road: ರಸ್ತೆಗೆ ಸಿದ್ದರಾಮಯ್ಯ ಹೆಸರಿಟ್ಟರೇ ತಪ್ಪೇನು?: ಪ್ರತಾಪ್‌ ಸಿಂಹ

Christmas: ಕರಾವಳಿಯಲ್ಲಿ ಸಂಭ್ರಮದ ಕ್ರಿಸ್ಮಸ್‌ ಆಚರಣೆ

Christmas: ಕರಾವಳಿಯಲ್ಲಿ ಸಂಭ್ರಮದ ಕ್ರಿಸ್ಮಸ್‌ ಆಚರಣೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಜೀವ ರಕ್ಷಕ ಕ್ರಿಟಿಕಲ್‌ ಕೇರ್‌ ಚಿಕಿತ್ಸೆ-ಹೊಸ ಮೈಲಿಗಲ್ಲು; ಮಂಗಳೂರು ಕೆಎಂಸಿ: ಎಕ್ಮೋ  ಸೇವೆ

ಜೀವ ರಕ್ಷಕ ಕ್ರಿಟಿಕಲ್‌ ಕೇರ್‌ ಚಿಕಿತ್ಸೆ-ಹೊಸ ಮೈಲಿಗಲ್ಲು; ಮಂಗಳೂರು ಕೆಎಂಸಿ: ಎಕ್ಮೋ ಸೇವೆ

5–jaundice

Jaundice: ಜಾಂಡಿಸ್‌ ಅಥವಾ ಅರಶಿನ ಕಾಮಾಲೆ

4-oral-cancer-2

Oral cancer: ನಿಶ್ಶಬ್ದ ಅಪಾಯ; ಬಾಯಿಯ ಕ್ಯಾನ್ಸರ್‌ ವಿರುದ್ಧ ಹೋರಾಟ

7-health

Cleft Lip and Palate: ಸೀಳು ತುಟಿ ಮತ್ತು ಅಂಗುಳ- ಹೆತ್ತವರಿಗೆ ತಿಳಿವಳಿಕೆ

6-surgery

Surgery: ನಾನು ಯಾಕೆ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕು?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Bangla–Pak

ಬಾಂಗ್ಲಾದೇಶದ ಭಾರತ ವಿರೋಧಿ ಮನಃಸ್ಥಿತಿ ಖಂಡನೀಯ

Boxing Day Test: ನೀಗಲಿ ಭಾರತದ ಬ್ಯಾಟಿಂಗ್‌ ಬರ; ಇಂದಿನಿಂದ ವರ್ಷಾಂತ್ಯದ ಭಾರತಸ್ಟ್‌

Boxing Day Test: ನೀಗಲಿ ಭಾರತದ ಬ್ಯಾಟಿಂಗ್‌ ಬರ; ಇಂದಿನಿಂದ ವರ್ಷಾಂತ್ಯದ ಭಾರತಸ್ಟ್‌

High-Court

Covid: ಎನ್‌-95 ಮಾಸ್ಕ್ ಅವ್ಯವಹಾರ: ಆತುರದ ಕ್ರಮ ಕೈಗೊಳ್ಳದಂತೆ ಸೂಚನೆ

Udupi: ಗೀತಾರ್ಥ ಚಿಂತನೆ 136: ರಕ್ತ ಸುರಿದರೆ ದುಃಖ ಏತಕ್ಕಾಗಿ? ರಕ್ತ ಸುರಿದದ್ದಕ್ಕಲ್ಲ

Udupi: ಗೀತಾರ್ಥ ಚಿಂತನೆ 136: ರಕ್ತ ಸುರಿದರೆ ದುಃಖ ಏತಕ್ಕಾಗಿ? ರಕ್ತ ಸುರಿದದ್ದಕ್ಕಲ್ಲ

Koteshwar: ಬೀಜಾಡಿಯ ಯೋಧ ಅನೂಪ್‌ ಪೂಜಾರಿ ಮೃತ್ಯು

Koteshwar: ಬೀಜಾಡಿಯ ಯೋಧ ಅನೂಪ್‌ ಪೂಜಾರಿ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.