Indian Movies: ಪಾಕ್‌ನಲ್ಲಿ ಬ್ಯಾನ್‌ ಆದ ಭಾರತದ ಸೂಪರ್‌ ಹಿಟ್ ಸಿನಿಮಾಗಳಿವು; ಕಾರಣಗಳೇನು?


Team Udayavani, Aug 23, 2023, 2:38 PM IST

Indian Movies: ಪಾಕ್‌ನಲ್ಲಿ ಬ್ಯಾನ್‌ ಆದ ಭಾರತದ ಸೂಪರ್‌ ಹಿಟ್ ಸಿನಿಮಾಗಳಿವು; ಕಾರಣಗಳೇನು?

ಭಾರತೀಯ ಸಿನಿಮಾಗಳು ಇಂದು ವಿಶ್ವಾದ್ಯಂತ ರಿಲೀಸ್‌ ಆಗುತ್ತವೆ. ಪ್ಯಾನ್‌ ಇಂಡಿಯಾ ಮಾತ್ರವಲ್ಲದೆ ಗ್ಲೋಬಲ್‌ ಮಟ್ಟದಲ್ಲಿ ಆಯಾ ಭಾಷೆಯಲ್ಲಿ ಭಾರತೀಯ ಸಿನಿಮಾಗಳು ದೇಶ- ವಿದೇಶದಲ್ಲಿ ರಿಲೀಸ್‌ ಆಗುತ್ತಿವೆ.

ಭಾರತೀಯ ಸಿನಿಮಾ ಕಲಾವಿದರ ಅಭಿಮಾನಿಗಳು ದೇಶ – ವಿದೇಶದಲ್ಲಿದ್ದಾರೆ. ಈಗಿನ ಕಲಾವಿದರರಾದ ಶಾರುಖ್‌, ಸಲ್ಮಾನ್‌ ಸೇರಿದಂತೆ ಹಿಂದಿನ ದಿಗ್ಗಜರಾದ ಅಮಿತಾಭ್‌ , ಧರ್ಮೇಂದ್ರ.. ಮುಂತಾದವರ ಸಿನಿಮಾಗಳಿಗೆ ಎಲ್ಲೆಡೆ ಅಭಿಮಾನಿಗಳಿದ್ದಾರೆ.

ನಮ್ಮ ನೆರೆಯ ದೇಶವಾದ ಪಾಕಿಸ್ತಾನದಲ್ಲೂ ಭಾರತೀಯ ಸಿನಿಮಾಗಳಿಗೆ ಅಭಿಮಾನಿಗಳಿದ್ದಾರೆ. ಹಿಂದಿನ ಹಾಗೂ ಇಂದಿನ  ಹಿಂದಿ ಸಿನಿಮಾಗಳನ್ನು ಪಾಕ್‌ ನಲ್ಲಿ ನೋಡುವ ಪ್ರೇಕ್ಷಕರಿದ್ದಾರೆ.

ಆದರೆ ಕೆಲ ಭಾರತೀಯ ಸಿನಿಮಾಗಳನ್ನು ಪಾಕಿಸ್ತಾನ ಬ್ಯಾನ್‌ ಮಾಡಿದೆ. ಆ ಸಿನಿಮಾಗಳು ಯಾವುದು ಎನ್ನುವುದರ ಪಟ್ಟಿ ಇಲ್ಲಿದೆ..

ಗದರ್‌(ಏಕ್ ಪ್ರೇಮ್ ಕಥಾ) : ಸನ್ನಿ ಡಿಯೋಲ್‌, ಅಮೀಶಾ ಪಟೇಲ್‌ ಅಭಿನಯದ ʼಗದರ್‌ʼ ಭಾರತೀಯ ಸಿನಿಮಾರಂಗದಲ್ಲಿ ಹೊಸ ಇತಿಹಾಸ ಬರೆದ ಸಿನಿಮಾಗಳಲ್ಲೊಂದು. 2001 ರಲ್ಲಿ ಬಂದ ಈ ಸಿನಿಮಾ ಅಂದು ಬಾಕ್ಸ್‌ ಆಫೀಸ್‌ ನಲ್ಲಿ ದೊಡ್ಡ ಹಿಟ್‌ ಆಗಿತ್ತು. ಭಾರತ ವಿಭಜನೆ ವೇಳೆಗಿನ ತಾರಾ ಸಿಂಗ್‌ – ಸಕೀನಾ ( ಹಿಂದೂ – ಮುಸ್ಲಿಂ) ಜೋಡಿಯ ಕಥೆಯನ್ನು ಸಿನಿಮಾ ಒಳಗೊಂಡಿದೆ.

ಬ್ಯಾನ್‌ ಯಾಕೆ?: ಇಂಡೋ – ಪಾಕ್‌ ಯುದ್ದ ಹಾಗೂ ಹಿಂದೂ – ಮುಸ್ಲಿಂ ಜೋಡಿಯ ಪ್ರೇಮ ಕಥೆಯನ್ನು ಒಳಗೊಂಡಿರುವುದರಿಂದ ಸಿನಿಮಾವನ್ನು ಪಾಕ್‌ ನಲ್ಲಿ ಬ್ಯಾನ್‌ ಮಾಡಿಲಾಗಿದೆ.

ಪ್ಯಾಡ್‌ ಮ್ಯಾನ್:‌ 2018 ರಲ್ಲಿ ಬಂದ ಅಕ್ಷಯ್‌ ಕುಮಾರ್‌ ಅಭಿನಯದ ʼಪ್ಯಾಡ್‌ ಮ್ಯಾನ್‌ʼ ಸಿನಿಮಾ ಸಾಮಾಜಿಕ ಸಂದೇಶವನ್ನು ಸಾರುವ ಸಿನಿಮಾ. ಮುಟ್ಟಿನ ಅರಿವನ್ನು ಸಾರುವ ಚಿತ್ರಕ್ಕೆ ಭಾರತದಲ್ಲಿ ಅಪಾರ ಮನ್ನಣೆ ಸಿಕ್ಕಿತ್ತು. ಆದರೆ ಪಾಕ್‌ ನಲ್ಲಿ ಈ ಸಿನಿಮಾವನ್ನು ಬ್ಯಾನ್‌ ಮಾಡಲಾಗಿದೆ.

ಬ್ಯಾನ್‌ ಯಾಕೆ?: ಮುಟ್ಟಿನ ಅರಿವನ್ನು ಸಾರುವ ʼಪ್ಯಾಡ್‌ ಮ್ಯಾನ್‌ʼ ಸಿನಿಮಾವನ್ನು ʼಫಡೆರಲ್‌ ಸೆನ್ಸಾರ್‌ ಬೋರ್ಡ್‌ ಆಫ್‌ ಪಾಕಿಸ್ತಾನ್‌ʼ ಈ ಸಿನಿಮಾ ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಕ್ಕೆ ವಿರೋಧವಾಗಿದೆ ಎಂದು ಬ್ಯಾನ್‌ ಮಾಡಿದೆ.

ಫ್ಯಾಂಟಮ್: ಸೈಫ್‌ ಆಲಿಖಾನ್‌,ಕತ್ರಿನಾ ಕೈಫ್ ಅಭಿನಯದ ʼಫ್ಯಾಂಟಮ್‌ʼ ಜಬರ್‌ ದಸ್ತ್ ಆ್ಯಕ್ಷನ್‌ ಅಂಶಗಳನ್ನು ಒಳಗೊಂಡಿರುವ ಸಿನಿಮಾ. 26/11 ಉಗ್ರ ದಾಳಿಯ ಸುತ್ತ ಸಿನಿಮಾದ ಕಥಾ ಹಂದರ ಸಾಗುತ್ತದೆ.

ಬ್ಯಾನ್‌ ಯಾಕೆ?:  26/11 ಉಗ್ರ ಕೃತ್ಯದ ಮಾಸ್ಟರ್ ಮೈಂಡ್ ಹಫೀಸ್ ಸಯೀದ್‌ ಅವರನ್ನು ಸಿನಿಮಾದ ಕಥೆಯಲ್ಲಿ ನೆಗೆಟಿವ್‌ ಶೇಡ್‌ ನಲ್ಲಿ ತೋರಿಸಲಾಗಿದೆ. ಈ ಕಾರಣದಿಂದ ಪಾಕ್‌ ಸೆನ್ಸಾರ್‌ ಬೋರ್ಡ್‌ ಇದರ ಮೇಲೆ ಬ್ಯಾನ್‌ ವಿಧಿಸಿದೆ.

ರಾಝೀ: ಆಲಿಯಾ ಭಟ್‌ ಅಭಿನಯದ ʼರಾಝೀʼ ಸಿನಿಮಾ ಭಾರತೀಯ ಸೇನೆಯ ಸೀಕ್ರೆಟ್‌ ಮಿಷನ್‌ ಕಥೆಯನ್ನು ಒಳಗೊಂಡಿದೆ. ʼರಾಝೀʼ ಸಿನಿಮಾದಲ್ಲಿ ಹರೀಂದರ್ ಸಿಕ್ಕಾರ ‘ಕಾಲಿಂಗ್ ಸೆಹಮತ್ʼ ಕಾದಂಬರಿಯಲ್ಲಿ ಎಳೆಯನ್ನು ತೋರಿಸಲಾಗಿದೆ. ಭಾರತದ ʼರಾʼ ಏಜೆಂಟ್‌ ಯುವತಿಯೊಬ್ಬಳು ಪಾಕಿಸ್ತಾನ ವ್ಯಕ್ತಿಯೊಂದಿಗೆ ಮದುವೆ ಆಗುವ ಮೂಲಕ ದೇಶದ ಪರವಾಗಿ ಕೆಲಸ ಮಾಡುವ ಕುರಿತಾದ ಕಥೆಯನ್ನು ಒಳಗೊಂಡಿದೆ.

ಬ್ಯಾನ್‌ ಯಾಕೆ? : ಯುವತಿಯೊಬ್ಬಳು ಭಾರತದ ಸೀಕ್ರೆಟ್‌ ಮಿಷನ್‌ ಗಾಗಿ ಪಾಕ್‌ ಗೆ ಬರುವ ಕಥೆಯನ್ನು ಒಳಗೊಂಡಿರುವ ಸಿನಿಮಾದಲ್ಲಿ ಪಾಕ್ ಬಗ್ಗೆ ತೋರಿಸಿರುವ ಅಂಶದ ಕಾರಣ ಈ ಸಿನಿಮಾವನ್ನು ಪಾಕ್‌ ನಲ್ಲಿ ಬ್ಯಾನ್‌ ಮಾಡಲಾಗಿದೆ.

‘ರಾಂಜಾನ’: ಕಾಲಿವುಡ್‌ ಸ್ಟಾರ್‌ ಧನುಷ್ ಅಭಿನಯದ ‘ರಾಂಜಾನ’ ಬಾಲಿವುಡ್‌ ನಲ್ಲಿ ದೊಡ್ಡಹಿಟ್‌ ಆಗಿತ್ತು. ಸೋನಮ್‌ ಕಪೂರ್‌ ನಾಯಕಿಯಾಗಿ ಕಾಣಿಸಿಕೊಂಡ ಈ ಸಿನಿಮಾದಲ್ಲಿ ಹಿಂದೂ ಮುಸ್ಲಿಂ ಪ್ರೇಮ ಕಥೆಯನ್ನು ಹೇಳಲಾಗಿದೆ.  ಕುಂದನ್‌ –  ಜೋಯಾ ಕಥೆ ಬಾಕ್ಸ್‌ ಆಫೀಸ್‌ ನಲ್ಲಿ ಭರ್ಜರಿ ಕಮಾಯಿ ಮಾಡಿತ್ತು.

ಬ್ಯಾನ್‌ ಯಾಕೆ? :  ಸಿನಿಮಾದಲ್ಲಿ ಸೋನಮ್‌ ಕಪೂರ್‌ ಅಭಿನಯ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಆದರೆ ಸೋನಮ್‌ ಅವರ ಪಾತ್ರ ತುಂಬಾ ಬೋಲ್ಡ್‌ ಆಗಿದೆ ಎನ್ನುವ ಕಾರಣಕ್ಕೆ ಸಿನಿಮಾವನ್ನು ಪಾಕ್‌ ನಲ್ಲಿ ಬ್ಯಾನ್‌ ಮಾಡಲಾಗಿದೆ.

ಭಾಗ್ ಮಿಲ್ಕಾ ಭಾಗ್‌: ಭಾರತದ ಲೆಜೆಂಡ್ರಿ ರನ್ನರ್‌  ಮಿಲ್ಕಾ ಸಿಂಗ್‌ ಅವರ ಜೀವನದ ಕಥೆಯನ್ನು ಒಳಗೊಂಡಿರುವ  ʼಭಾಗ್ ಮಿಲ್ಕಾ ಭಾಗ್‌ʼ ಸಿನಿಮಾ ಬಾಲಿವುಡ್‌ ನಲ್ಲಿ ಭರ್ಜರಿ ಸದ್ದು ಮಾಡಿತ್ತು.  ಸ್ಪೂರ್ತಿದಾಯಕ ಕಥೆ ಫರ್ಹಾನ್‌ ಅಖ್ತರ್‌ ಮಿಲ್ಕಾ ಸಿಂಗ್‌ ಅವರ ಪಾತ್ರವನ್ನು ನಿಭಾಯಿಸಿದ್ದರು. ಆದರೆ ಆ ಒಂದು ಕಾರಣದಿಂದ ಸಿನಿಮಾವನ್ನು ಪಾಕ್‌ ನಲ್ಲಿ ಬ್ಯಾನ್‌ ಮಾಡಲಾಯಿತು.

ಬ್ಯಾನ್‌ ಯಾಕೆ?:  ʼಭಾಗ್ ಮಿಲ್ಕಾ ಭಾಗ್‌ʼಸಿನಿಮಾದಲ್ಲಿ  ಮಿಲ್ಕಾ ಸಿಂಗ್‌ ರನ್ನಿಂಗ್‌ ವೇಳೆ ಒಂದನ್ನು ಮಾತನ್ನು ಹೇಳುತ್ತಾರೆ.  “Mujhse nahi hoga. Main Pakistan nahin jaaunga.” (I can’t do it. I won’t go to Pakistan).”ನನ್ನಿಂದ ಆಗದು, ನಾನು ಪಾಕಿಸ್ತಾನಕ್ಕೆ ಹೋಗಲ್ಲ” ಎನ್ನುವ ಡೈಲಾಗ್‌ ಗೆ ಪಾಕ್‌ ತಕರಾರು ಮಾಡಿತ್ತು. ಈ ಕಾರಣದಿಂದ ಸಿನಿಮಾವನ್ನು ಅಲ್ಲಿ ಬ್ಯಾನ್‌ ಮಾಡಲಾಗಿದೆ.

ಬೇಬಿ: ಭಯೋತ್ಪಾದಕರು ಮತ್ತು ಅವರ ಸಂಚುಗಳನ್ನು ಪತ್ತೆಹಚ್ಚಲು ಗುಪ್ತಚರ ಇಲಾಖೆ ಆಫೀಸರ್‌ ಒಬ್ಬರು ಮಿಷನ್‌ ನ್ನು ಲೀಡ್‌ ಮಾಡುವ ಕಥೆಯನ್ನು ಈ ಸಿನಿಮಾ ಒಳಗೊಂಡಿದೆ.

ಬ್ಯಾನ್‌ ಯಾಕೆ?: ಸಿನಿಮಾದಲ್ಲಿ ಮುಸ್ಲಿಂಮರನ್ನು ನೆಗೆಟಿಟ್‌ ಶೇಡ್‌ ನಲ್ಲಿ ತೋರಿಲಾಗಿದೆ.  ಸಿನಿಮಾದಲ್ಲಿ ನಟಿಸಿರುವ ಕೆಲ ನೆಗೆಟಿವ್‌ ಪಾತ್ರಗಳಿಗೆ ಮುಸ್ಲಿಂ ಹೆಸರುಗಳನ್ನು ಇಡಲಾಗಿದೆ. ಈ ಕಾರಣದಿಂದ ಸಿನಿಮಾವನ್ನು ಇಸ್ಲಾಮಾಬಾದ್ , ಕರಾಚಿ ಸೆನ್ಸಾರ್‌ ಬೋರ್ಡ್‌ ಸಿನಿಮಾದ ಮೇಲೆ ನಿಷೇಧ ಹೇರಿತ್ತು.

ಟಾಪ್ ನ್ಯೂಸ್

Congress: DK Shivakumar will become Chief Minister during this period: MLA Shivaganga

Congress: ಇದೇ ಅವಧಿಯಲ್ಲಿ ಡಿ.ಕೆ.‌ ಶಿವಕುಮಾರ್ ಮುಖ್ಯಮಂತ್ರಿಯಾಗ್ತಾರೆ: ಶಾಸಕ ಶಿವಗಂಗಾ

Chhattisgarh: ಮೂವರು ನಕ್ಸಲರ ಎನ್‌ಕೌಂಟರ್‌… ವರ್ಷ ಆರಂಭದಲ್ಲೇ 9 ನಕ್ಸಲರು ಉಡೀಸ್

Chhattisgarh: ಮೂವರು ನಕ್ಸಲರ ಎನ್‌ಕೌಂಟರ್‌… ವರ್ಷ ಆರಂಭದಲ್ಲೇ 9 ನಕ್ಸಲರು ಉಡೀಸ್

Champions Trophy: Bangladesh squad announced; two senior players not included

Champions Trophy: ಬಾಂಗ್ಲಾದೇಶ ತಂಡ ಪ್ರಕಟ; ಇಬ್ಬರು ಹಿರಿಯ ಆಟಗಾರರಿಗೆ ಇಲ್ಲ ಸ್ಥಾನ

12-cancer

Breast Cancer: ಸ್ತನಗಳ ಕ್ಯಾನ್ಸರ್‌ ನಿಗಾ ಇರಿಸಬೇಕಾದ ಆರಂಭಿಕ ಲಕ್ಷಣಗಳು

ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಮತಾಂಧರ ಹಾವಳಿ‌ ಹೆಚ್ಚಾಗಿದೆ: ಪ್ರಹ್ಲಾದ್ ಜೋಶಿ

ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಮತಾಂಧರ ಹಾವಳಿ‌ ಹೆಚ್ಚಾಗಿದೆ: ಪ್ರಹ್ಲಾದ್ ಜೋಶಿ

Police Exam: ಕಿವಿಯಲ್ಲಿ ಬ್ಲೂ ಟೂತ್ ಸಾಧನ ಇಟ್ಟು ಪರೀಕ್ಷೆ ಬರೆದು ಸಿಕ್ಕಿ ಬಿದ್ದ ಅಭ್ಯರ್ಥಿ

Police Exam: ಕಿವಿಯಲ್ಲಿ ಬ್ಲೂ ಟೂತ್ ಸಾಧನ ಇಟ್ಟು ಪರೀಕ್ಷೆ ಬರೆದು ಸಿಕ್ಕಿ ಬಿದ್ದ ಅಭ್ಯರ್ಥಿ

11-knee-1

Osteoarthritis, Knee Osteoarthritis: ಮೂಳೆ ಸವೆತ ಹಾಗೂ ಮಂಡಿ ಸವೆತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-shaa

Bollywood; ಆಲಿಯಾ ಭಟ್‌ ನಟನೆ ಚಿತ್ರದಲ್ಲಿ ನಟಿಸಲು ಒಪ್ಪದ ಶಾರೂಕ್‌!

Movies: ಒಂದೇ ವಾರ ಮೂರು ದೊಡ್ಡ ಸಿನಿಮಾಗಳು ರಿಲೀಸ್; ಬಾಕ್ಸಾಫೀಸ್‌ ಶೇಕ್‌ ಗ್ಯಾರೆಂಟಿ

Movies: ಒಂದೇ ವಾರ ಮೂರು ದೊಡ್ಡ ಸಿನಿಮಾಗಳು ರಿಲೀಸ್; ಬಾಕ್ಸಾಫೀಸ್‌ ಶೇಕ್‌ ಗ್ಯಾರೆಂಟಿ

Oscar: ಕ್ಯಾಲಿಫೋರ್ನಿಯಾ ಕಾಳ್ಗಿಚ್ಚು; ಆಸ್ಕರ್‌ ನಾಮಿನೇಷನ್‌ ವೋಟಿಂಗ್ ವಿಸ್ತರಣೆ

Oscar: ಕ್ಯಾಲಿಫೋರ್ನಿಯಾ ಕಾಳ್ಗಿಚ್ಚು; ಆಸ್ಕರ್‌ ನಾಮಿನೇಷನ್‌ ವೋಟಿಂಗ್ ವಿಸ್ತರಣೆ

Pritish Nandy: ಖ್ಯಾತ ಕವಿ, ಚಲನಚಿತ್ರ ನಿರ್ಮಾಪಕ ಪ್ರಿತೀಶ್ ನಂದಿ ನಿಧನ

Pritish Nandy: ಖ್ಯಾತ ಕವಿ, ಚಲನಚಿತ್ರ ನಿರ್ಮಾಪಕ ಪ್ರಿತೀಶ್ ನಂದಿ ನಿಧನ

1-H-R

Bollywood ನಲ್ಲಿ ಹೃತಿಕ್ ರೋಷನ್ 25 ವರ್ಷ; ಸಂಕೋಚ, ಆತಂಕ ಈಗಲೂ ಇದೆ!

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

Congress: DK Shivakumar will become Chief Minister during this period: MLA Shivaganga

Congress: ಇದೇ ಅವಧಿಯಲ್ಲಿ ಡಿ.ಕೆ.‌ ಶಿವಕುಮಾರ್ ಮುಖ್ಯಮಂತ್ರಿಯಾಗ್ತಾರೆ: ಶಾಸಕ ಶಿವಗಂಗಾ

Chhattisgarh: ಮೂವರು ನಕ್ಸಲರ ಎನ್‌ಕೌಂಟರ್‌… ವರ್ಷ ಆರಂಭದಲ್ಲೇ 9 ನಕ್ಸಲರು ಉಡೀಸ್

Chhattisgarh: ಮೂವರು ನಕ್ಸಲರ ಎನ್‌ಕೌಂಟರ್‌… ವರ್ಷ ಆರಂಭದಲ್ಲೇ 9 ನಕ್ಸಲರು ಉಡೀಸ್

6

Ajekar: ಎಷ್ಟು ದಿನ ಟವರ್‌ ನೋಡ್ಕೊಂಡಿರ್ಲಿ, ನಮ್ಗೆ ಬೇಗನೆ ಕನೆಕ್ಷನ್‌ ಕೊಡಿ ಸ್ವಾಮಿ!

Champions Trophy: Bangladesh squad announced; two senior players not included

Champions Trophy: ಬಾಂಗ್ಲಾದೇಶ ತಂಡ ಪ್ರಕಟ; ಇಬ್ಬರು ಹಿರಿಯ ಆಟಗಾರರಿಗೆ ಇಲ್ಲ ಸ್ಥಾನ

5

Kundapura: ಕೋಡಿ ಸಮುದ್ರ ತೀರದಲ್ಲಿ ಶೌಚಾಲಯ ಸಿದ್ಧವಾದರೂ ಪ್ರವಾಸಿಗರ ಬಳಕೆಗೆ ಇಲ್ಲ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.