ಪುಸ್ತಕಗಳಿಂದ ಆಯುಷ್ಯ ಹೆಚ್ಚುತ್ತಾ? ಬೆಂಗಳೂರಿನ ಬೃಹತ್ ಪುಸ್ತಕ ಮಳಿಗೆಗಳ ಪರಿಚಯ
ದಿನೇಶ ಎಂ, Sep 4, 2022, 5:50 PM IST
“ನಹಿ ಜ್ಞಾನೇನ ಸದೃಶಂ” ವಿದ್ಯೆ, ಅದರಿಂದ ದೊರೆತ ಜ್ಞಾನ ಇವನ್ನು ಯಾರೂ ಕದಿಯೋದಕ್ಕಾಗಲಿ, ನಾಶಗೊಳಿಸೋದಕ್ಕಾಗಲಿ ಸಾಧ್ಯವಿಲ್ಲ. ಹಾಗಾಗಿ ಜ್ಞಾನಕ್ಕಿಂತ ಮಿಗಿಲಾದ ವಸ್ತು ಅಥವಾ ಮೌಲ್ಯ ಇನ್ನೊಂದಿಲ್ಲ. ಜ್ಞಾನ ಪರಂಪರೆಯಲ್ಲಿ ಗುರುವಿಗೆ ಅಗ್ರಸ್ಥಾನವಿದೆ, ಗುರಿ ತೋರೋ ಗುರು ತ್ರಿಮೂರ್ತಿಗಳಿಗೆ ಸಮ ಅನ್ನೋ ಮಾತಿದೆ. ಆದರೆ, ಆ ಗುರುವಿನ ದೇಹ ಅಂತ್ಯವಾದರು ಆ ಗುರು ತತ್ವ – ವಿದ್ಯೆ, ಕೌಶಲ್ಯಗಳ ರೂಪದಲ್ಲಿ ನಮ್ಮೊಂದಿಗೆ ಸದಾ ಇರುತ್ತದೆ. ಅಂತಹ ಅವಿನಾಶಿಯಾದ ಜ್ಞಾನದ ಬಂಡಾರವೇ ಪುಸ್ತಕಗಳು.
ಸೋಷಿಯಲ್ ಸೈನ್ಸ್ ಅಂಡ್ ಮೆಡಿಸಿನ್ ಎಂಬ ಸಂಶೋಧನಾ ಜರ್ನಲ್ನಲ್ಲಿ ಪ್ರಕಟವಾದ ಅಧ್ಯಯನವು ಪುಸ್ತಕಗಳನ್ನು ಓದುವುದರಿಂದ ಜೀವಿತಾವಧಿಯನ್ನು ಹೆಚ್ಚಿಸುತ್ತದೆ ಎಂದು ತೋರಿಸಿದೆ.
ಪುಸ್ತಕಗಳನ್ನು ಓದದ ವಯಸ್ಕರಿಗೆ ಹೋಲಿಸಿದರೆ, ವಾರದಲ್ಲಿ ಮೂರುವರೆ ಗಂಟೆಗಳವರೆಗೆ ಪುಸ್ತಕಗಳನ್ನು ಒದುವವರು ಸಾಯುವ ಸಾಧ್ಯತೆ ಶೇ17 ಪ್ರತಿಶತ ಕಡಿಮೆ – ಮತ್ತು ವಾರಕ್ಕೆ ಮೂರುವರೆ ಗಂಟೆಗಳಿಗಿಂತ ಹೆಚ್ಚು ಓದುವವರು ಶೇಖಡಾ 23 ಪ್ರತಿಶತ ಬದುಕುಳಿಯುವ ಸಾಧ್ಯತೆ ಹೆಚ್ಚು ಎಂದು ಸಂಶೋಧನೆ ತಿಳಿಸಿದೆ.
ಅಧ್ಯಯನದಲ್ಲಿ, ಪುಸ್ತಕಗಳನ್ನು ಓದದವರಿಗಿಂತ ಪುಸ್ತಕಗಳನ್ನು ಓದುವವರು ಸುಮಾರು 2 ವರ್ಷಗಳು ಹೆಚ್ಚು ಕಾಲ ಬದುಕಿದ್ದಾರೆ ಎಂದು ಆ ಅಧ್ಯಯನದ ದತ್ತಾಂಶ ತಿಳಿಸಿದೆ.
ಕರ್ನಾಟಕದ ರಾಜ್ಯಧಾನಿ ಬೆಂಗಳೂರಿನಲ್ಲಿರುವ ಹೆಸರಾಂತ ಪುಸ್ತಕ ಮಳಿಗೆಗಳ ಸಣ್ಣ ಪರಿಚಯ ನಿಮಗಾಗಿ…
- ಬುಕ್ ಸ್ಟಾಪ್ ! (ಕೋರಮಂಗಲ) :
ಇದೊಂದು ನೆಲಮಾಳಿಗೆಯಲ್ಲಿರುವ ಒಂದು ವಿಶೇಷವಾದ ಸಣ್ಣ ಪುಸ್ತಕ ಅಂಗಡಿಯಾಗಿದೆ. ಈ ಅಂಗಡಿಯೊಳಗೆ ಪ್ರವೇಶಿಸುತ್ತಿದ್ದಂತೆ ನಿಮ್ಮನ್ನು ಸ್ವಾಗತಿಸಲು ಸಾಂಪ್ರದಾಯಿಕ ಬೆಲ್ ಸೆಟ್ಟಿಂಗ್. ನಗರದ ಇತರೆ ಪುಸ್ತಕ ಮಳಿಗೆಗಳಿಗೆ ಇದನ್ನು ಹೋಲಿಸಿದರೆ ಗಾತ್ರದಲ್ಲಿ ಇದು ಸಣ್ಣದಾದರೂ ಅತ್ಯುತ್ತಮ ಪುಸ್ತಕಗಳ ಆವೃತಿಗಳನ್ನು ತನ್ನಲ್ಲಿ ಹೊಂದಿರುವ ಅಂಗಡಿಗಳಲ್ಲಿ ಒಂದೆನಿಸಿದೆ.
- ಬ್ಲಾಸಂ ಬುಕ್ ಹೌಸ್ ( ಚರ್ಚ್ ರಸ್ತೆ) :
ಈ ಸ್ಥಳವು ಸುಸಜ್ಜಿತವಾಗಿದ್ದು, ಇಲ್ಲಿ ಹೊಸ ಬರಹಗಾರರ ಪುಸ್ತಕಗಳನ್ನೂ ಕೂಡಾ ಮಾರಾಟ ಮಾಡಲಾಗುತ್ತದೆ. ಈ ಮಳಿಗೆಯು ಕಡಿಮೆ ಬೆಲೆಗೆ ಪುಸ್ತಕಗಳ ಮಾರಾಟಕ್ಕೆ ಹೆಸರುವಾಸಿಯಾಗಿದೆ. ಪುಸ್ತಕ ಮೇಳಗಳಿಗಿಂತ ಇಲ್ಲಿ ಬೆಲೆ ಹೆಚ್ಚಾಗಿದ್ದರೂ ಬ್ಲಾಸಂ ತನ್ನದೇ ಆದ ಒಂದು ಛಾಪನ್ನು ಮೂಡಿಸುವಲ್ಲಿ ಯಶಸ್ವಿಯಾಗುತ್ತದೆ
- ಹಿಗ್ಗಿನ್ ಬೋಥಮ್ಸ್ (ಎಂಜಿ ರಸ್ತೆ):
ಇದು ಬೆಂಗಳೂರಿನ ಅತ್ಯಂತ ಹಳೆಯ ಪುಸ್ತಕ ಮಳಿಗೆಗಳಲ್ಲಿ ಒಂದು. ಒಂದು ಶತಮಾನದಷ್ಟು ಹಳೆಯದಾದ, ವಸಾಹತುಶಾಹಿ ಶೈಲಿಯ ಕಟ್ಟಡದಲ್ಲಿರುವ ಹಿಗ್ಗಿನ್ ಬೋಥಮ್ಸ್ ಪುಸ್ತಕ ಮಳಿಗೆ ಓದುಗರ ಸ್ವರ್ಗ.
- ಬುಕ್ ಫೇರ್ (ಕೋರಮಂಗಲ) :
ಸಾಕಷ್ಟು ಹೆಸರುವಾಸಿಯಾಗಿರುವ ಪುಸ್ತಕದಂಗಡಿಯಾಗಿರುವ ಬುಕ್ ಫೇರ್ ಕೆಲವು ವಿಶಿಷ್ಟ ಸಂಗ್ರಹಗಳನ್ನು ಹೊಂದಿದೆ. ಇಲ್ಲಿ ಪುಸ್ತಕಗಳ ದರಕ್ಕೆ ಅನುಗುಣವಾಗಿ ವಿಭಾಗ ಮಾಡಲಾಗಿದ್ದು 100, 200 ಮತ್ತು 500 ರೂಗಳಾಗಿ ವಿಂಗಡಿಸಲಾಗಿದೆ.
- ಸಪ್ನ ಬುಕ್ ಹೌಸ್ (ಕೋರಮಂಗಲ/ಇಂದಿರಾನಗರ ) :
ಎಂಬಿಎ ಮತ್ತು ಐಐಟಿ ಪ್ರಶಿಕ್ಷಣಾರ್ಥಿಗಳಿಗೆ ಸಲಹೆ ನೀಡುವ ಪುಸ್ತಕಗಳನ್ನು ಈ ಮಳಿಗೆಯು ಮಾರಾಟ ಮಾಡುವುದರಿಂದ ಇದು ವಾಣಿಜ್ಯ ಮಳಿಗೆಯಾಗಿಯೂ ಗುರುತಿಸಲ್ಪಡುತ್ತದೆ. ಈ ಮಳಿಗೆಯು ನಾಲ್ಕು ಮಹಡಿಗಳಲ್ಲಿ ಹರಡಿಕೊಂಡಿದ್ದು, ಪುಸ್ತಕ ಖರೀದಿಗೆ ಒಂದು ದೊಡ್ಡ ಕೇಂದ್ರವಾಗಿದೆ.
- ದ ಬುಕ್ ವರ್ಮ್ (ಚರ್ಚ್ ರಸ್ತೆ) :
ಇದನ್ನು 2002 ರಲ್ಲಿ ಕೃಷ್ಣ ಎಂಬವರು ಸ್ಥಾಪಿಸಿದರು, ಈ ಮಾರಾಟಗಾರನು ಪಾದಚಾರಿ ಮಾರ್ಗದಲ್ಲಿ ಪುಸ್ತಕಗಳನ್ನು ಮಾರಾಟ ಮಾಡಿ ಕೆಲವು ವರ್ಷ ಕಳೆದ ಮೇಲೆ ಈ ಪುಸ್ತಕದಂಗಡಿ ತೆರೆದರು.
ಭಾರತೀಯ ಪುರಾಣಗಳ ಪ್ರಕಾರ, ನಿತ್ಯ ಮಂತ್ರೋಚ್ಛಾರಣೆಯಿಂದ ಆಯುಷ್ಯ ವೃದ್ಧಿಸುತ್ತದೆ ಎನ್ನುತ್ತಾರೆ. ಇಲ್ಲಿ ಮಂತ್ರ ಎಂದರೆ ನಾವು ಆಡೋ ಪ್ರತೀ ಮಾತು, ಆ ಮಾತು ಮಂತ್ರವಾಗಬೇಕಾದರೆ ನಾವು ನಿತ್ಯ ಅಧ್ಯಯನದಲ್ಲಿ ತೊಡಗಬೇಕು. ಇದನ್ನು ಅರಿಯೋಣ, ಅರಿತು ಬಾಳೋಣ, ಅರಿವೇ ಗುರು – ಗುರುವೇ ದೇವರು.
- – ದಿನೇಶ ಎಂ. ಹಳೆನೇರೆಂಕಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Recipe: ಆರೋಗ್ಯಕ್ಕೆ ಅಮೃತ, ರುಚಿಗೆ ಅದ್ಭುತ ಈ ಚಟ್ನಿ!ಒಂದ್ಸಲ ಈ ವಿಧಾನದಲ್ಲಿ ಟ್ರೈ ಮಾಡಿ…
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ : ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?
OneNation, OneElection Bill: 31 JPC ಸದಸ್ಯರ ಕಾರ್ಯವ್ಯಾಪ್ತಿ ಏನು?ಸಲಹೆ ನೀಡುವವರು ಯಾರು
Winter: ಚಳಿಗಾಲದಲ್ಲಿ ಆರೋಗ್ಯಕರವಾಗಿರಲು ಸೇವಿಸಬೇಕಾದ ಆಹಾರಗಳು ಇವು…
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ವಿದೇಶಿ ಹಕ್ಕಿಗಳ ಕಲರವ- ಕುಷ್ಟಗಿಯ ನಿಡಶೇಸಿ ಕೆರೆಗೆ ಬಂದ ಬಾನಾಡಿಗಳು!
Aranthodu: ಲಾರಿ-ಸ್ಕೂಟಿ ಅಪಘಾತ; ಸವಾರರ ಪೈಕಿ ಓರ್ವ ಮೃತ್ಯು, ಸಹಸವಾರೆ ಗಾಯ
ದೆಹಲಿ ಪರೇಡ್‌ಗೆ ಬ್ರಹ್ಮ ಜಿನಾಲಯ ಸ್ತಬ್ಧಚಿತ್ರ; ಗತ ವೈಭವ ಸಾರಲಿದೆ ಟ್ಯಾಬ್ಲೊ
SriLanka ನೌಕಾಪಡೆಯಿಂದ ತಮಿಳುನಾಡಿನ 17 ಮೀನುಗಾರರ ಬಂಧನ; ಬಿಡುಗಡೆಗೆ ಸ್ಟಾಲಿನ್ ಮನವಿ
Year Ender 2024: ಗೂಗಲ್ ನಲ್ಲಿ ಈ ವರ್ಷ ಅತೀ ಹೆಚ್ಚು ಹುಡುಕಲ್ಪಟ್ಟ ವಿಷಯ ಯಾವುದು ಗೊತ್ತಾ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.