Border Gavaskar Trophy: ಕಾಂಗರೂ ಚಾಲೆಂಜ್ ಗೆ ಅಣಿಯಾದ ಭಾರತ; ಹೇಗಿದೆ ತಂಡದ ಬಲಾಬಲ
ಕೀರ್ತನ್ ಶೆಟ್ಟಿ ಬೋಳ, Nov 21, 2024, 6:52 PM IST
ಇನ್ನು ಕೆಲವೇ ಗಂಟೆಗಳಲ್ಲಿ ಬಹು ನಿರೀಕ್ಷಿತ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್ – ಗಾವಸ್ಕರ್ ಟ್ರೋಫಿ (Border Gavaskar Trophy) ಟೆಸ್ಟ್ ಸರಣಿ ಆರಂಭವಾಗಲಿದೆ. ಪರ್ತ್ ನಲ್ಲಿ ಶುಕ್ರವಾರ (ನ.22) ಸರಣಿಯ ಮೊದಲ ಪಂದ್ಯ ನಡೆಯಲಿದೆ. ಆಸ್ಟ್ರೇಲಿಯಾದಲ್ಲಿ ನಡೆದ ಕಳೆದ ಎರಡು ಸರಣಿಗಳಲ್ಲಿ ಭಾರತ ತಂಡವು ಗೆಲುವು ಸಾಧಿಸಿದ ಕಾರಣ ಇದು ಮಹತ್ವ ಪಡೆದಿದೆ. ಅಲ್ಲದೆ ಕಳೆದೆರಡು ಬಾರಿಗಿಂತ ಈಗಿನ ಆಸ್ಟ್ರೇಲಿಯಾ ತಂಡವು ಹೆಚ್ಚು ಬಲಿಷ್ಠವಾಗಿದ್ದು, ಭಾರತಕ್ಕೆ ಸವಾಲು ನೀಡುತ್ತಿದೆ. ಅಲ್ಲದೆ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ತಲುಪಲು ಈ ಸರಣಿಯಲ್ಲಿ ಭಾರತ ತಂಡದ ಗೆಲುವು ಅತಿ ಮುಖ್ಯ.
ಹಾಗಾದರೆ ಈ ಬಾರಿಯ ಭಾರತ ತಂಡ ಹೇಗಿದೆ? ಟೀಂ ಇಂಡಿಯಾದ ಬಲಾಬಲ ಹೇಗಿದೆ? ಇಲ್ಲಿದೆ ಒಂದು ಟಿಪ್ಪಣಿ.
ಮೊದಲ ಪಂದ್ಯಕ್ಕಿಲ್ಲ ರೋಹಿತ್
ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರು ಮೊದಲ ಪಂದ್ಯಕ್ಕೆ ಲಭ್ಯರಿಲ್ಲ. ಎರಡನೇ ಮಗುವಿನ ಜನನದ ಕಾರಣಿದಂದ ಅವರು ಉಳಿದ ತಂಡದ ಜೊತೆ ಆಸ್ಟ್ರೇಲಿಯಾಗೆ ಪ್ರಯಾಣ ಬೆಳೆಸಿಲ್ಲ. ಹೀಗಾಗಿ ಪರ್ತ್ ನಲ್ಲಿ ರೋಹಿತ್ ಆಡುವುದಿಲ್ಲ. ಅವರ ಬದಲಿಗೆ ಉಪ ನಾಯಕ ಜಸ್ಪ್ರೀತ್ ಬುಮ್ರಾ ಪರ್ತ್ ನಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ. ಅಡಿಲೇಡ್ ನಲ್ಲಿ ನಡೆಯುವ ಎರಡನೇ ಪಂದ್ಯಕ್ಕೆ ರೋಹಿತ್ ತಂಡ ಕೂಡಿಕೊಳ್ಳಲಿದ್ದಾರೆ.
ಹಳೇಯ ಹುಲಿಗಳಿಲ್ಲ
ಕಳೆದ ಎರಡು ಪ್ರವಾಸಗಳಲ್ಲಿ ಆಸ್ಟ್ರೇಲಿಯಾದ ಪಾಲಿಗೆ ಕಂಟಕವಾಗಿರುವ ಮತ್ತು ಭಾರತದ ಐತಿಹಾಸಿಕ ಯಶಸ್ಸಿನಲ್ಲಿ ಪ್ರಮುಖ ವ್ಯಕ್ತಿಯಾಗಿದ್ದ ಚೇತೇಶ್ವರ ಪೂಜಾರ ಅವರು ಈ ಬಾರಿ ತಂಡದಲ್ಲಿಲ್ಲ. ಬದಲಾಗಿ, ಕೋಚ್ ಗೌತಮ್ ಗಂಭೀರ್ ಮತ್ತು ನಾಯಕ ರೋಹಿತ್ ನೇತೃತ್ವದ ತಂಡದ ಆಡಳಿತವು ಕಿರಿಯ ಪ್ರತಿಭೆಗಳನ್ನು ಬೆಂಬಲಿಸಲು ನಿರ್ಧರಿಸಿದೆ. ಪರಿವರ್ತನೆಯ ಹಂತದಲ್ಲಿರುವ ಭಾರತ ತಂಡವು ಆಸೀಸ್ ಚಾಲೆಂಜನ್ನು ಯಾವ ರೀತಿ ಎದುರಿಸುತ್ತದೆ ಎಂದು ನೋಡಬೇಕಿದೆ.
ಗಾಯದ ಸಮಸ್ಯೆಯಿಂದಾಗಿ ಮೊಹಮ್ಮದ್ ಶಮಿ ಅವರ ಅನುಪಸ್ಥಿತಿಯನ್ನು ಭಾರತ ತಂಡಕ್ಕೆ ಕಾಡಬಹುದು. ಪಾದದ ಗಾಯದಿಂದ ಕಳೆದೊಂದು ವರ್ಷದಿಂದ ಆಡಿರದ ಶಮಿ ಅವರು ಇತ್ತೀಚೆಗೆ ರಣಜಿ ಟ್ರೋಫಿಯ ಒಂದು ಸುತ್ತನ್ನು ಆಡಿದ್ದಾರೆ. ಆದರೆ ಅವರು ಆಸೀಸ್ ಪ್ರವಾಸಕ್ಕೆ ತಂಡದ ಭಾಗವಾಗಿಲ್ಲ. ಫಿಟ್ನೆಸ್ ಅನುಮತಿಸಿದರೆ ಪ್ರವಾಸದ ಉತ್ತರಾರ್ಧದಲ್ಲಿ ಬಂಗಾಳದ ವೇಗಿ ತಂಡವನ್ನು ಸೇರಿಕೊಳ್ಳುವ ನಿರೀಕ್ಷೆಯಿದೆ.
ಗಾಯಾಳುಗಳ ಸಂಕಷ್ಟ
ಕಳೆದ ಆಸೀಸ್ ಸರಣಿಯ ಕೊನೆಯಲ್ಲಿ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ ಎದುರಾಗಿತ್ತು. ಹೀಗಾಗಿ ವಾಷಿಂಗ್ಟನ್ ಸುಂದರ್, ನಟರಾಜನ್ ಮುಂತಾದವರು ಟೆಸ್ಟ್ ಗೆ ಪದಾರ್ಪಣೆ ಮಾಡಿದ್ದರು. ಆದರೆ ಈ ಬಾರಿ ಸರಣಿ ಆರಂಭಕ್ಕೆ ಮೊದಲೇ ಗಾಯಾಳುಗಳ ಸಮಸ್ಯೆ ಎದುರಾಗಿದೆ. ಬ್ಯಾಟರ್ ಶುಭಮನ್ ಗಿಲ್ ಅವರು ಅಭ್ಯಾಸ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವ ವೇಳೆ ಹೆಬ್ಬೆರಳಿಗೆ ಗಾಯ ಮಾಡಿಕೊಂಡಿದ್ದಾರೆ. ಹೀಗಾಗಿ ಮೊದಲ ಪಂದ್ಯ ಆಡವುದು ಅನುಮಾನ.
ಬ್ಯಾಟಿಂಗ್ ಬಲ ಹೇಗಿದೆ?
ಭಾರತ ತಂಡದಲ್ಲಿ ಅನುಭವಿ ಆಟಗಾರರು ಮತ್ತು ಉದಯೋನ್ಮುಖ ಪ್ರತಿಭೆಗಳ ಮಿಶ್ರಣವಿದೆ.
ಕೋರ್ ಗ್ರೂಪ್: ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ರಿಷಭ್ ಪಂತ್ ಮತ್ತು ಯಶಸ್ವಿ ಜೈಸ್ವಾಲ್ ಅವರನ್ನು ಇದೀಗ ಟೀಂ ಇಂಡಿಯಾದ ಪ್ರಮುಖ ಆಟಗಾರರಾಗಿದ್ದಾರೆ.
ಯುವ ಪಡೆ: ಸರ್ಫರಾಜ್ ಖಾನ್ ಜತೆ ಇದೀಗ ಧ್ರುವ್ ಜುರೆಲ್ ಕೂಡ ಟೀಂ ಇಂಡಿಯಾ ಸೇರ್ಪಡೆಗೊಂಡಿದ್ದಾರೆ. ಜುರೆಲ್ ಭಾರತ ಎ ತಂಡದಲ್ಲಿ ಇತ್ತೀಚಿನ ಅನಧಿಕೃತ ಟೆಸ್ಟ್‌ನಲ್ಲಿ ಪ್ರಭಾವ ಬೀರಿದ್ದಾರೆ. ವಿಕೆಟ್‌ಕೀಪರ್-ಬ್ಯಾಟರ್ ಆಗಿರುವ ಜುರೆಲ್, ಆಡುವ ಬಳಗದಲ್ಲಿ ಪೂರ್ಣ ಪ್ರಮಾಣದ ಬ್ಯಾಟರ್ ಆಗಿ ಸಾಮರ್ಥ್ಯ ಸಾಬೀತುಪಡಿಸಲು ಉತ್ಸುಕರಾಗಿದ್ದಾರೆ.
ಕೆಎಲ್ ರಾಹುಲ್ ಅವಕಾಶ: ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳದ ಟೀಕೆಗಳ ನಡುವೆಯೂ ಕೆಎಲ್ ರಾಹುಲ್ ಗೆ ಆಡಳಿತ ಮಂಡಳಿ ಬೆಂಬಲ ನೀಡಿದೆ. ರೋಹಿತ್ ಮತ್ತು ಗಿಲ್ ಅಲಭ್ಯತೆಯಿಂದಾಗಿ, ರಾಹುಲ್ ಸರಣಿಯ ಆರಂಭಿಕ ಆಟಗಾರರಲ್ಲಿ ಪ್ರಮುಖ ಪಾತ್ರ ವಹಿಸಬಹುದು.
ಬದಲಾದ ಬೌಲಿಂಗ್ ಯುನಿಟ್
ಭಾರತದ ಬೌಲಿಂಗ್ ಘಟಕವು ಅನುಭವ ಮತ್ತು ಹೊಸ ಶಕ್ತಿಯ ಮಿಶ್ರಣವನ್ನು ಹೊಂದಿದೆ. ಜಸ್ಪ್ರೀತ್ ಬುಮ್ರಾ ದಾಳಿಯನ್ನು ಮುನ್ನಡೆಸಲಿದ್ದು, ಸಹ ವೇಗಿ ಮೊಹಮ್ಮದ್ ಸಿರಾಜ್ ಸೇರಿಕೊಂಡಿದ್ದಾರೆ. ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಅವರು ಟೀಂ ಇಂಡಿಯಾದಲ್ಲಿ ಸ್ಪಿನ್ ಜೋಡಿಯಾಗಿದ್ದಾರೆ.
ಹೊಸ ಆಟಗಾರರಿಗೆ ಅವಕಾಶ
ಆಕಾಶ್ ದೀಪ್: ತವರಿನ ಟೆಸ್ಟ್‌ಗಳಲ್ಲಿ ಅವರ ಅದ್ಭುತ ಪ್ರದರ್ಶನಕ್ಕಾಗಿ ಆಕಾಶ್ ದೀಪ್ ಸ್ಥಾನ ಪಡೆದಿದ್ದಾರೆ. ಬಂಗಾಳದ ವೇಗಿ ಶಮಿಗೆ ಸೂಕ್ತ ಬದಲಿ ಆಟಗಾರ ಎಂದು ಪರಿಗಣಿಸಲಾಗಿದೆ.
ವಾಷಿಂಗ್ಟನ್ ಸುಂದರ್: ನ್ಯೂಜಿಲ್ಯಾಂಡ್ ವಿರುದ್ಧದ ಸರಣಿಯಲ್ಲಿ ಅದ್ಭುತ ಪುನರಾಗಮನ ಮಾಡಿದ ಸ್ಪಿನ್-ಬೌಲಿಂಗ್ ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ ಮತ್ತೆ ಮಿಂಚುವ ಯೋಜನೆ ಹಾಕಿದ್ದಾರೆ.
ಹರ್ಷಿತ್ ರಾಣಾ ಮತ್ತು ನಿತೀಶ್ ರೆಡ್ಡಿ: ಪರ್ತ್‌ನಲ್ಲಿ ಕನಿಷ್ಠ ಒಬ್ಬರಾದರೂ ಪಾದಾರ್ಪಣೆ ಮಾಡಬಹುದೆಂಬ ಸುದ್ದಿ ಜೋರಾಗಿದೆ. ಅಲ್ಲದೆ ಇಬ್ಬರೂ ಪದಾರ್ಪಣೆ ಮಾಡಿದರೂ ಅಚ್ಚರಿ ಏನಿಲ್ಲ.
ಟೀಂ ಇಂಡಿಯಾ ಸ್ಕ್ವಾಡ್
ರೋಹಿತ್ ಶರ್ಮಾ (ನಾ), ಜಸ್ಪ್ರೀತ್ ಬುಮ್ರಾ (ಉ.ನಾ), ಯಶಸ್ವಿ ಜೈಸ್ವಾಲ್, ಅಭಿಮನ್ಯು ಈಶ್ವರನ್, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ರಿಷಭ್ ಪಂತ್, ಸರ್ಫರಾಜ್ ಖಾನ್, ಧ್ರುವ ಜುರೆಲ್, ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ಪ್ರಸಿದ್ಧ್ ಕೃಷ್ಣ, ಹರ್ಷಿತ್ ರಾಣಾ, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tulsi Health Benefits: ತುಳಸಿ ಗಿಡದ ಔಷಧೀಯ ಗುಣಗಳ ಮಾಹಿತಿ ಇಲ್ಲಿವೆ…
Naxal: ನ.17 ಈದು ಎನ್‌ಕೌಂಟರ್- ನ.18 ಕಬ್ಬಿನಾಲೆ ಶೂಟೌಟ್: 21 ವರ್ಷದ ಹಿಂದೆ ನಡೆದಿದ್ದೇನು?
ಈ ಎಲೆಯಿಂದ ಮಾಡುವ ಖಾದ್ಯ ಆರೋಗ್ಯಕ್ಕೂ ಉತ್ತಮ… ಅದ್ಯಾವ ಎಲೆ ಅಂತೀರಾ ಇಲ್ಲಿದೆ ರೆಸಿಪಿ…
ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್ ಪಡೆದು ಸಿನಿಮಾದಲ್ಲಿ ಫೇಮ್ ಆದ ಕಲಾವಿದರು
ಖುಷಿ ಕೊಡಬಲ್ಲ ಕೆಲವು ವಿಧಾನ ತಿಳಿಸಿ…ಏನೂ ಇಲ್ಲದೆಯೂ ಸಂತೋಷವಾಗಿರಿ!
MUST WATCH
ಹೊಸ ಸೇರ್ಪಡೆ
Puttur: ಸ್ಕೂಲ್ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್
Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು
Kasaragod: ಫ್ಯಾಶನ್ ಗೋಲ್ಡ್ ವಂಚನೆ ಪ್ರಕರಣ: ಪೂಕೋಯ ತಂಙಳ್ ಮತ್ತೆ ಬಂಧನ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.