C.P.Yogeshwara; ಮಾತೃ ಪಕ್ಷಕ್ಕೆ ಮರಳಿ ಮತ್ತೊಂದು ಹೋರಾಟಕ್ಕೆ ಸಿದ್ದವಾದ ಸೈನಿಕ!
ಚಕ್ಕೆರೆ ಪುಟ್ಟಮಾದೇ ಗೌಡ ಯೋಗೇಶ್ವರ್ ರಾಜಕೀಯ ಹೋರಾಟದ ಹಾದಿ ಮತ್ತೊಂದು ಜಿದ್ದಿನ ಅಖಾಡಕ್ಕೆ
ವಿಷ್ಣುದಾಸ್ ಪಾಟೀಲ್, Oct 23, 2024, 5:17 PM IST
ರಾಜ್ಯದಲ್ಲಿ ಮೂರು ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯುತ್ತಿದ್ದರೂ ಭಾರೀ ನಿರೀಕ್ಷೆ ಮೂಡಿಸಿರುವ ಕ್ಷೇತ್ರ ಮಾತ್ರ ಚನ್ನಪಟ್ಟಣ. ಈ ಕ್ಷೇತ್ರ ಬಿಜೆಪಿ-ಜೆಡಿಎಸ್ ಮೈತ್ರಿಯ ಉಳಿವಿನ ಅಸ್ತಿತ್ವದ ಪ್ರಶ್ನೆ ಹುಟ್ಟುಹಾಕಿದ ಕಾರಣದಿಂದಾಗಿಯೇ ಪಕ್ಷಾಂತರ ಪರ್ವ ನಡಯಲೇ ಬೇಕಾದ ಅನಿವಾರ್ಯ ಎದುರಾಯಿತು. ಸದ್ಯ ನೇರ ಹಣಾಹಣಿ ಕ್ಷೇತ್ರದಲ್ಲಿ ಕಂಡು ಬಂದಿದ್ದು ಕಾಂಗ್ರೆಸ್ ಕಾರ್ಯಕರ್ತರನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಸಂಸದ ಡಿ.ಕೆ. ಸುರೇಶ್ ಅವರು ಹುರಿದುಂಬಿಸಿ ಸೈನಿಕನ ಮೂಲಕ ಸೋಲಿನ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾರೆ. ಡಿ.ಕೆ.ಸುರೇಶ್ ಅವರೇ ತಾನು ಕಾಂಗ್ರೆಸ್ ಗೆ ಮರಳಲು ಪ್ರಮುಖ ಕಾರಣ ಎಂದು ಯೋಗೇಶ್ವರ್ ಹೇಳಿಕೊಂಡಿದ್ದಾರೆ.
ಸಿ.ಪಿ.ಯೋಗೇಶ್ವರ್ ಅವರು ಅನಿವಾರ್ಯವಾಗಿ ಕಾಂಗ್ರೆಸ್ ಸೇರ್ಪಡೆಯಾಗಬೇಕಾದ ಸ್ಥಿತಿ ನಿರ್ಮಾಣವಾಗಲು ಕಾರಣವಾಗಿದ್ದು ಬಿಜೆಪಿ ಮತ್ತು ಜೆಡಿಎಸ್ ನಡುವಿನ ‘ಮೈತ್ರಿ ಧಾರ್ಮ ಪಾಲನೆ’ ಪ್ರಮುಖ ಕಾರಣ ಎನ್ನಬಹುದು. ಆದರೆ, ಕೇವಲ ಅದೊಂದೇ ಕಾರಣ ಮಾತ್ರವಲ್ಲದೆ ಇನ್ನೂ ಹಲವು ಪ್ರತಿಷ್ಠೆಯ ವಿಚಾರಗಳೂ ಇವೆ ಎನ್ನುವುದನ್ನು ತಳ್ಳಿಹಾಕುವಂತಿಲ್ಲ. ಹಳೆಯ ಎಲ್ಲ ವಿಚಾರಗಳನ್ನು ಮರೆತಿರುವ ಯೋಗೇಶ್ವರ್ ಅವರಿಗೆ ರಾಜಕೀಯದ ಸೈಕಲ್ ಹೊಡೆಯಲು ಈಗ ಬಲವಾದ ಎರಡು ಚಕ್ರಗಳು ಸಿಕ್ಕಂತಾಗಿವೆ. ಈ ಬಾರಿ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರಾಬಲ್ಯ ಮರಳಿ ಕಟ್ಟಲು ಡಿಕೆಶಿ ಮತ್ತು ಡಿಕೆಸು ಅವರು ಟೊಂಕ ಕಟ್ಟಿ ನಿಂತಿದ್ದಾರೆ. ಯಾವಾಗ ಯೋಗೇಶ್ವರ್ ಅವರಿಗೆ ಎನ್ ಡಿಎ ಟಿಕೆಟ್ ಸಿಗುವುದಿಲ್ಲ ಎನ್ನುವುದು ಖಾತ್ರಿಯಾಯಿತೋ ಅದೇ ಕ್ಷಣಕ್ಕೆ ಪ್ರಬಲ ವರ್ಚಸ್ಸುಳ್ಳ ಅಭ್ಯರ್ಥಿಯನ್ನು ಸೆಳೆಯಲು ಕಾಂಗ್ರೆಸ್ ನಾಯಕರೆಲ್ಲರೂ ಮುಂದಾದರು ಮಾತ್ರವಲ್ಲದೆ ತ್ಯಾಗಕ್ಕೂ ಸಿದ್ದರಾದರು. ಅದಕ್ಕೆ ಸಾಕ್ಷಿಯಾದದ್ದು ಯೋಗೇಶ್ವರ್ ಅವರ ಪಕ್ಷ ಸೇರ್ಪಡೆ ವೇಳೆ ಹಲವು ನಾಯಕರ ಉಪಸ್ಥಿತಿ ಮತ್ತು ಸಿಎಂ ಸಿದ್ದರಾಮಯ್ಯ ಅವರು ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದು.
ಚುನಾವಣ ರಾಜಕೀಯದಲ್ಲಿ ಯೋಗೇಶ್ವರ್ ಒಬ್ಬ ಪ್ರಬಲ ನಾಯಕ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಅವರು ಹಲವು ಬಾರಿ ಬಿಜೆಪಿಗೆ ಅನಿವಾರ್ಯವಾಗಿದ್ದು ಅನೇಕ ರಣತಂತ್ರಗಳನ್ನು ಹಣೆದಿದ್ದು ಅವರೇ. ನೆನಪಿನಲ್ಲಿ ಇಡಲೇಬೇಕಾದ ಇತ್ತೀಚಿಗಿನ ವಿಚಾರವೆಂದರೆ ಲೋಕಸಭಾ ಚುನಾವಣೆ. ಬಿಜೆಪಿ-ಜೆಡಿಎಸ್ ಮೈತ್ರಿಗೆ ಒಪ್ಪಿ ಪಕ್ಷದ ನಾಯಕರ ಆಣತಿಯಂತೆ ಭಾರತೀಯ ಜನತಾ ಪಕ್ಷದ ಸೈನಿಕನಾಗಿ ದುಡಿದು ಡಿ.ಕೆ.ಸುರೇಶ್ ಅವರ ಎದುರು ಡಾ.ಸಿ.ಎನ್. ಮಂಜುನಾಥ್ ಅವರ ಗೆಲುವಿನಲ್ಲಿ ದೊಡ್ಡ ಕೊಡುಗೆ ನೀಡಿದ್ದು. ಈಗ ಆ ವಿಚಾರವನ್ನು ಕಾಂಗ್ರೆಸ್ ನಾಯಕರೆಲ್ಲರೂ ಮರೆತು ಯೋಗೇಶ್ವರ್ ಅವರಿಗೆ ಜೈಕಾರ ಹಾಕಬೇಕಾದ ಅನಿವಾರ್ಯ ಸ್ಥಿತಿ ಎದುರಾಗಿದೆ. ಇದಕ್ಕೆ ಹೇಳುವುದು ”ರಾಜಕಾರಣದಲ್ಲಿ ಯಾರೂ ಶಾಶ್ವತ ಶತ್ರುಗಳಲ್ಲ, ಮಿತ್ರರೂ ಅಲ್ಲ”.
ಯೋಗೇಶ್ವರ್ ಅವರು ರಾಜಕೀಯ ಜೇವನವನ್ನು ಆರಂಭಿಸಿದ್ದೇ ಕಾಂಗ್ರೆಸ್ ಪಕ್ಷದ ಮೂಲಕ. ಆದರೆ ಅಂದೂ(1999) ಬಂಡಾಯದ ಕಹಳೆ ಊದಿದ್ದ ಅವರು ಪಕ್ಷೇತರನಾಗಿ ಕಣಕ್ಕಿಳಿದು ಕಾಂಗ್ರೆಸ್ ಮಾಜಿ ಶಾಸಕರಾಗಿದ್ದ ಸಾದತ್ ಅಲಿ ಖಾನ್ ವಿರುದ್ಧ 18,828 ಮತಗಳ ಭರ್ಜರಿ ಜಯ ಸಾಧಿಸಿ ಪ್ರಾಬಲ್ಯ ತೋರಿದವರು. ಜನತಾ ದಳ ಮತ್ತು ಕಾಂಗ್ರೆಸ್ ಪ್ರಾಬಲ್ಯದ ಪ್ರದೇಶದಲ್ಲಿ ರಾಜಕಾರಣಿಗಳ ಕಣ್ಣಿಗೆ ಬಿದ್ದವರಾಗಿದ್ದರು. ಮತ್ತೆ ಕಾಂಗ್ರೆಸ್ ಗೆ ಮರಳಿ 2004 ಮತ್ತು 2008 ರಲ್ಲಿ ಜಯದ ನಗೆ ಬೀರಿದ್ದರು. 2009ರಲ್ಲಿ ಯೋಗೇಶ್ವರ್ ಕಾಂಗ್ರೆಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದರು. ಆದರೆ ಜೆಡಿಎಸ್ ನ ಎಂ.ಸಿ. ಅಶ್ವಥ್ ಎದುರು 2,282 ಮತಗಳಿಂದ ಆಘಾತಕಾರಿ ಸೋಲು ಅನುಭವಿಸಿದರು. ಅವರನ್ನು ಸೋಲಿಸಿದ್ದ ಎಂ.ಸಿ. ಅಶ್ವಥ್ ಅವರೂ ಬಿಜೆಪಿ ಸೇರ್ಪಡೆಯಾದ ಕಾರಣ ಎದುರಾದ ಉಪಚುನಾವಣೆಯಲ್ಲಿ ಹುರಿಯಾಳಾದ ಯೋಗೇಶ್ವರ್ ಬಿಜೆಪಿಯಿಂದ ಆಯ್ಕೆಯಾದ ಮೊದಲ ಶಾಸಕ ಎನಿಸಿಕೊಂಡರು. 2013 ರಲ್ಲಿ ಬಿಜೆಪಿ ಟಿಕೆಟ್ ಕೈತಪ್ಪಿದಾಗ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಯಾಗಿ ಅನಿತಾ ಕುಮಾರಸ್ವಾಮಿ ಅವರ ಎದುರು ಗೆಲುವು ಸಾಧಿಸಿ ಮತ್ತೊಮ್ಮೆ ತನ್ನ ಪ್ರಾಬಲ್ಯ ತೋರಿದ್ದರು.2018 ಮತ್ತು 2023 ರ ಚುನಾವಣೆಯಲ್ಲಿ ಜಿದ್ದಾಜಿದ್ದಿನ ಹೋರಾಟದಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿದ್ದ ಯೋಗೇಶ್ವರ್ ಎರಡು ಸೋಲು ಅನುಭವಿಸಿದ್ದರು.
ಪಕ್ಷಕ್ಕೆ ನೀಡಿದ ಕೊಡುಗೆ ಪರಿಗಣಿಸಿ ಬಿಜೆಪಿಯು ಯೋಗೇಶ್ವರ್ ಅವರನ್ನು ವಿಧಾನಪರಿಷತ್ ಗೆ ಕಳುಹಿಸಿತ್ತು. ಕೆಲ ರಾಜಕೀಯ ರಣತಂತ್ರಕ್ಕೆ ಅವರನ್ನು ಬಳಸಿಕೊಂಡಿತ್ತು. ಹಳೆ ಮೈಸೂರಿನ ಭಾಗದಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಇದಿರು ನಿಲ್ಲುವ ಸಾಮರ್ಥ್ಯ ಉಳ್ಳ ನಾಯಕನಾಗಿದ್ದ ಯೋಗೇಶ್ವರ್ ಈಗ ಆಡಳಿತಾರೂಢ ಕಾಂಗ್ರೆಸ್ ಪಾಳದದಲ್ಲಿದ್ದು ಮತ್ತೊಮ್ಮೆ ಬೆಂಗಳೂರು ಗ್ರಾಮಾಂತರ ಭಾಗ ಭಾರೀ ರಾಜಕೀಯ ಕದನಕ್ಕೆ ಸಾಕ್ಷಿಯಾಗುತ್ತಿದೆ. ಕ್ಷೇತ್ರದಲ್ಲಿ 15 ವರ್ಷದ ಒಳಗೆ ಎದುರಾಗುತ್ತಿರುವ ಮೂರನೇ ಉಪಚುನಾವಣೆ ಇದಾಗಿದೆ ಎನ್ನುವುದೂ ಗಮನಾರ್ಹ. ಮೊದಲ ಉಪಚುನಾವಣೆ ಯೋಗೇಶ್ವರ್ ಅವರ ಕಾರಣದಿಂದಲೇ ಎದುರಾಗಿತ್ತು. ಈಗ ಕುಮಾರಸ್ವಾಮಿ ಸಂಸದರಾದ ಕಾರಣದಿಂದ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದುದರಿಂದ ಉಪಚುನಾವಣೆ ಎದುರಾಗಿದೆ.
ಕ್ಷೇತ್ರದಲ್ಲಿ ಯೋಗೇಶ್ವರ್ ಗೆ ಡಿ.ಕೆ.ಬ್ರದರ್ಸ್ ಬೆಂಬಲ, ಸಂಪೂರ್ಣ ಸರಕಾರ ಮತ್ತು ಕಾಂಗ್ರೆಸ್ ಪಕ್ಷದ ಬೆಂಬಲ ಸಿಗುವ ನಿರೀಕ್ಷೆ ಇದ್ದರೆ, ಯಾರೇ ಜೆಡಿಎಸ್ ಅಭ್ಯರ್ಥಿಯಾದರೂ ಬಿಜೆಪಿ ನಾಯಕರು ಮತ್ತು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಪ್ರತಿಷ್ಠೆಯ ಕಣವಾಗಿ ಪರಿಗಣಿಸಲೇಬೇಕಾಗಿದೆ. ಸಂಸದ ಡಾ. ಮಂಜುನಾಥ್ ಅವರು ತನ್ನ ಗೆಲುವಿಗಾಗಿ ಶ್ರಮಿಸಿದ್ದ ಯೋಗೇಶ್ವರ್ ವಿರುದ್ಧ ಪ್ರಚಾರ ಮಾಡಬೇಕಾಗಿದೆ.
61 ರ ಹರೆಯದ ಚಕ್ಕೆರೆ ಪುಟ್ಟಮಾದೇ ಗೌಡ ಯೋಗೇಶ್ವರ್ ಅವರ ರಾಜಕೀಯ ಹೋರಾಟದ ಹಾದಿ ಮತ್ತೊಂದು ಜಿದ್ದಿನ ಅಖಾಡಕ್ಕೆ ಪ್ರವೇಶವಾಗಿದೆ.
*ವಿಷ್ಣುದಾಸ್ ಪಾಟೀಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ : ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?
OneNation, OneElection Bill: 31 JPC ಸದಸ್ಯರ ಕಾರ್ಯವ್ಯಾಪ್ತಿ ಏನು?ಸಲಹೆ ನೀಡುವವರು ಯಾರು
Winter: ಚಳಿಗಾಲದಲ್ಲಿ ಆರೋಗ್ಯಕರವಾಗಿರಲು ಸೇವಿಸಬೇಕಾದ ಆಹಾರಗಳು ಇವು…
Zakir Hussain ; ಸರಸ್ವತಿ, ಗಣಪತಿಯ ಆರಾಧಕರಾಗಿದ್ದರು ತಬಲಾ ಮಾಂತ್ರಿಕ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.