ಆರೋಗ್ಯಕರ ಎಲೆಕೋಸು ರಾಗಿ ರೊಟ್ಟಿ ಮಾಡೋಕೆ ಇಲ್ಲಿದೆ ಸಿಂಪಲ್ ವಿಧಾನ
ರಾಗಿಯಲ್ಲೂ ನಾನಾ ಬಗೆಯ ತಿಂಡಿ ತಿನಿಸುಗಳನ್ನು ತಯಾರಿಸಬಹುದು
ಶ್ರೀರಾಮ್ ನಾಯಕ್, Sep 9, 2022, 5:45 PM IST
ಊಟ ಬಲ್ಲವನಿಗೆ ರೋಗವಿಲ್ಲ ಅನ್ನೋ ಗಾದೆ ಮಾತೇ ಹೇಳುವಂತೆ ಆರೋಗ್ಯಕರ ಆಹಾರ ಪದ್ಧತಿಯಿಂದ ಸಕಲ ರೋಗಗಳನ್ನು ದೂರವಿರಿಸಬಹುದು. ಹುಟ್ಟಿದ ಮಗುವಿನಿಂದ ಹಿಡಿದು ದೊಡ್ಡವರ ವರೆಗೂ ರಾಗಿ ಆರೋಗ್ಯಕ್ಕೆ ಅತೀ ಉತ್ತಮ. ರಾಗಿಯಲ್ಲೂ ನಾನಾ ಬಗೆಯ ತಿಂಡಿ ತಿನಿಸುಗಳನ್ನು ತಯಾರಿಸಬಹುದು ಉದಾ: ರಾಗಿ ದೋಸೆ, ರಾಗಿ ಚಪಾತಿ, ರಾಗಿ ಮುದ್ದೆ, ರಾಗಿ ಗಂಜಿ, ರಾಗಿ ಇಡ್ಲಿ ಹೀಗೆ ಹತ್ತು ಹಲವು… ಇದು ಆರೋಗ್ಯಕ್ಕೂ ಸೈ ರುಚಿಗೂ ಜೈ.
ಅಂದ ಹಾಗೆ ನಾವಿಲ್ಲಿ ಎಲೆಕೋಸಿನಿಂದ ರಾಗಿರೊಟ್ಟಿ ಮಾಡುವ ವಿಧಾನವನ್ನು ತಿಳಿಸುತ್ತಿದ್ದೇವೆ. ನೀವು ಸಹ ಮನೆಯಲ್ಲೇ ಒಂದು ಸಲ ಮಾಡಿ ನೋಡಿ . ಆಗ ನೀವೇ ಹೇಳ್ತೀರಾ ಸೂಪರ್ ಅಂತಾ…ಹಾಗಾದರೆ ಇನ್ನೇಕೆ ತಡ ಸ್ವಾದಿಷ್ಟಕರವಾದ “ಎಲೆಕೋಸು ರಾಗಿ ರೊಟ್ಟಿ” ಮಾಡುವ ವಿಧಾನವನ್ನು ತಿಳಿಯೋಣ ಬನ್ನಿ…
ರೊಟ್ಟಿಗೆ ಬೇಕಾಗುವ ಸಾಮಗ್ರಿಗಳು
ರಾಗಿ ಹಿಟ್ಟು – 1 ಕಪ್ , ಎಲೆ ಕೋಸು(ಕ್ಯಾಬೇಜ್ )– 1/2 ಕಪ್ (ಸಣ್ಣಗೆ ಹೆಚ್ಚಿದ್ದು),ಕಾಳು ಮೆಣಸಿನಪುಡಿ – 1/2 ಚಮಚ, ಅರಿಶಿನ ಪುಡಿ –1/4 ಚಮಚ,ಓಂ ಕಾಳು – 1/2 ಚಮಚ, ತುರಿದ ಮುಳ್ಳುಸೌತೆ- 1 ದೊಡ್ಡ ಚಮಚ, ತೆಂಗಿನ ತುರಿ-2 ದೊಡ್ಡ ಚಮಚ, ಕೊತ್ತಂಬರಿ ಸೊಪ್ಪು ಸ್ವಲ್ಪ, ಎಣ್ಣೆ – 2 ಚಮಚ, ತುಪ್ಪ – 1 ಚಮಚ, ಹಸಿ ಶುಂಠಿ – ಸ್ವಲ್ಪ (ಸಣ್ಣಗೆ ಹೆಚ್ಚಿದ್ದು), ರುಚಿಗೆ ತಕ್ಕಷ್ಟು ಉಪ್ಪು.
ಚಟ್ನಿಗೆ ಬೇಕಾಗುವ ಸಾಮಗ್ರಿಗಳು
ತೆಂಗಿನ ತುರಿ 1/2 ಕಪ್, ಒಣ ಮೆಣಸು – 4, ಕೊತ್ತಂಬರಿ ಬೀಜ – 1/4 ಚಮಚ, ಜೀರಿಗೆ –1/2ಚಮಚ, ಈರುಳ್ಳಿ – 1(ಸಣ್ಣಗೆ ಹೆಚ್ಚಿದ್ದು), ಹುಣಸೆ ಹುಳಿ ಸ್ವಲ್ಪ, ಎಣ್ಣೆ – 2 ಚಮಚ, ರುಚಿಗೆ ತಕ್ಕಷ್ಟು ಉಪ್ಪು.
ಎಲೆಕೋಸು ರಾಗಿರೊಟ್ಟಿ ತಯಾರಿಸುವ ವಿಧಾನ
ಒಂದು ಪಾತ್ರೆಗೆ ರಾಗಿ ಹಿಟ್ಟು, ಸಣ್ಣಗೆ ಹೆಚ್ಚಿದ ಎಲೆ ಕೋಸು, ಕಾಳು ಮೆಣಸಿನಪುಡಿ, ಅರಿಶಿನ ಪುಡಿ, ಓಂ ಕಾಳು, ತುರಿದಿಟ್ಟ ಮುಳ್ಳುಸೌತೆ, ತೆಂಗಿನ ತುರಿ, ಸಣ್ಣಗೆ ಹೆಚ್ಚಿದ ಹಸಿ ಶುಂಠಿ ಮತ್ತು ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ,ಇದಕ್ಕೆ ಸ್ವಲ್ಪ ನೀರು ಹಾಕಿ ಪುನಃ ಚೆನ್ನಾಗಿ ಕಲಸಿ ಇಟ್ಟುಕೊಳ್ಳಿ.
ತದನಂತರ ಒಂದು ಬಟರ್ ಪೇಪರ್ ಮೇಲೆ ಎಣ್ಣೆ ಸವರಿ, ಮಾಡಿಟ್ಟ ಹಿಟ್ಟಿನಿಂದ ಸಮಭಾಗ ತೆಗೆದುಕೊಂಡು, ರೊಟ್ಟಿ ತಟ್ಟಿಕೊಳ್ಳಿ.ನಂತರ ಒಂದು ಕಾವಲಿಗೆ ತುಪ್ಪ ಹಾಕಿ, ಬಿಸಿಯಾದ ಮೇಲೆ ರೊಟ್ಟಿ ಹಾಕಿ, ಎರಡೂ ಬದಿ ಬೇಯಿಸಿದರೆ, ಬಿಸಿ- ಬಿಸಿಯಾದ ಎಲೆಕೋಸು ರಾಗಿರೊಟ್ಟಿ ಚಟ್ನಿಯೊಂದಿಗೆ ಸವಿಯಲು ಸಿದ್ಧ.
ಚಟ್ನಿ ತಯಾರಿಸುವ ವಿಧಾನ
ಒಂದು ಬಾಣಲೆಗೆ ಕೊತ್ತಂಬರಿ ಬೀಜ, ಒಣ ಮೆಣಸು, ಜೀರಿಗೆ ಮತ್ತು ಎಣ್ಣೆ ಹಾಕಿ ಹುರಿಯಿರಿ. ಇದು ತಣಿದ ಮೇಲೆ ಮಿಕ್ಸಿ ಜಾರಿಗೆ ಹಾಕಿ, ಇದಕ್ಕೆ ತೆಂಗಿನ ತುರಿ, ಹುಣಸೆ ಹುಳಿ, ಈರುಳ್ಳಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಿ. ತೀರ ಗಟ್ಟಿ ಅನ್ನಿಸಿದರೆ ನೀರು ಸೇರಿಸಿ ತೆಳ್ಳಗೆ ಮಾಡಿಕೊಳ್ಳಿ.
*ಶ್ರೀರಾಮ್ ನಾಯಕ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Donald Trump Salary: ಅಮೆರಿಕದ ಅಧ್ಯಕ್ಷರಿಗೆ ಸಿಗುವ ಸಂಬಳ ಎಷ್ಟು? ಏನೇನು ಸೌಲಭ್ಯಗಳಿವೆ
Trump: ಗುಜರಾತ್ ಮೂಲದ ಪಟೇಲ್ CIA ನೂತನ ನಿರ್ದೇಶಕ: ಡೊನಾಲ್ಡ್ ಟ್ರಂಪ್ ಒಲವು
Maharashtra Polls; ಹರಿಯಾಣದಂತೆ ಬಂಡಾಯ ಸ್ಪರ್ಧಿಗಳು ಲೆಕ್ಕಾಚಾರ ತಲೆಕೆಳಗಾಗಿಸುತ್ತಾರೆಯೇ?
Chocolate ಕೇವಲ ಸಸ್ಯಾಹಾರವೇ? ಸಸ್ಯಾಹಾರಿಗಳೇ ಗಮನಿಸಿ…
Guruprasad: ಲಾಟರಿ ಮಾರುತ್ತಿದ್ದ ಹುಡುಗ ʼಮಠʼ ಕಟ್ಟಿ ʼರಂಗನಾಯಕʼನಾಗಿ ಬೆಳೆದಿದ್ದೇಗೆ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.