Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ
ಈ ಸ್ಥಳವನ್ನು ಮರಣ ಹೊಂದಿದವರ ಸಾಮ್ರಾಜ್ಯ ಎಂದೂ ಕರೆಯಲಾಗುತ್ತದೆ
Team Udayavani, Nov 15, 2024, 7:15 PM IST
ಎಲ್ಲೆಂದರಲ್ಲಿ ಎಲುಬುಗಳು, ಗೋಡೆ ತುಂಬಾ ಎಲುಬುಗಳು, ತಲೆಬುರುಡೆಗಳು, ಕಂಬ ಪೂರ್ತಿ ಎಲುಬುಗಳು. ಇದೊಂಥರ ಎಲುಬುಗಳದ್ದೇ ಸಾಮ್ರಾಜ್ಯ. ಅದೆಷ್ಟೋ ಕಿಲೋ ಮೀಟರ್ ನವರೆಗೆ ಸುರಂಗದ ಒಳಗೆ ಗೋಡೆಗೆ ಅಂಟಿಕೊಂಡು ನಿಂತ ಲಕ್ಷಗಟ್ಟಲೆ ಅವಶೇಷಗಳು ತುಂಬಿದ ಭಯಾನಕ ಸ್ಥಳ. ಒಳ ಹೋಗುವ ವ್ಯಕ್ತಿಗೆ ಮುಂದೆ ಹೋಗುವುದೋ ಬೇಡವೋ ಎಂಬ ದುಗುಡ, ಭಯ, ಪ್ರಶ್ನೆಗಳನ್ನು ಬಾಗಿಲಲ್ಲೇ ಮೂಡಿಸುವ ಸ್ಥಳವಿದು. ಅಷ್ಟಕ್ಕೂ ಈ ಭಯಾನಕ ಸ್ಥಳ ಇರುವುದು ಫ್ರಾನ್ಸ್ ನ ಒಂದು ನಗರದಲ್ಲಿ!
ಹೌದು, ಪ್ಯಾರಿಸ್ ‘ದಿ ಸಿಟಿ ಆಫ್ ಲವ್’, ‘ದಿ ಸಿಟಿ ಆಫ್ ಲೈಟ್’ ಎಂದೇ ಹೆಸರುವಾಸಿಯಾದ ಸುಂದರವಾದ ನಗರ. ದಿನದಿಂದ ದಿನಕ್ಕೆ ತನ್ನ ಸೌಂದರ್ಯವನ್ನು ಹೆಚ್ಚಿಸಿಕೊಳ್ಳತ್ತಲೇ ಇರುವ ಈ ನಗರವು, ದೂರದೂರದ ಜನರನ್ನೂ ತನ್ನತ್ತ ಆಗಮಿಸುವಂತೆ ಆಕರ್ಷಿಸುತ್ತಿದೆ. ಆದರೆ ಈ ಸುಂದರತೆಯ ಗರ್ಭದೊಳಗೆ ಯಾರಿಗೂ ಕಾಣದಂತೆ ಮರೆಮಾಚಿದ ಕರಾಳ ಇತಿಹಾಸ ಇಂದು ಪ್ರಸಿದ್ಧ ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ. ಅದುವೇ ಕ್ಯಾಟಕಾಂಬ್ಸ್ ಎಂಬ ಅವಶೇಷಗಳ ಸುರಂಗ.
ಸುಮಾರು 18ನೇ ಶತಮಾನದಲ್ಲಿ ಫ್ರಾನ್ಸ್ ನ ರಾಜಧಾನಿಯಾದ ಪ್ಯಾರಿಸ್ ನಲ್ಲಿ ನಗರಗಳು ಬೆಳೆದಂತೆ ಜನಸಂಖ್ಯೆಯೂ ಹೆಚ್ಚಾಗತೊಡಗಿತು. ಕಾರಣಾಂತರಗಳಿಂದ ಜನರ ಸಾವಿನ ಸಂಖ್ಯೆ ಕೂಡ ದಿನೇದಿನೆ ಹೆಚ್ಚಾಗುತ್ತಾ ಬಂದ ಕಾರಣ ಸ್ಮಶಾನದಲ್ಲಿ ಅಂತ್ಯಸಂಸ್ಕಾರಕ್ಕೆ ಸ್ಥಳದ ಅಭಾವ ತಲೆದೋರಿತ್ತು. ದಿನದಲ್ಲಿ ಮಿತಿಮೀರಿ ಮೃತದೇಹಗಳ ಅಂತ್ಯಸಂಸ್ಕಾರ ನಡೆಸಿದ್ದರಿಂದಲೋ ಏನೋ, ಸ್ಮಶಾನದಲ್ಲಿನ ಮಣ್ಣು ಮತ್ತು ಗಾಳಿಯನ್ನು ಮಲಿನಗೊಳ್ಳಲಾರಂಭಿಸಿತ್ತು. ಸ್ಮಶಾನದ ಈ ಪರಿಸ್ಥಿತಿಯು ಸಾಮಾಜದಲ್ಲಿ ಆರೋಗ್ಯ ಸಮಸ್ಯೆಗೆ ಕಾರಣವಾಯಿತು. ಆ ಸಂದರ್ಭದಲ್ಲಿ ಸಾರ್ವಜನಿಕರ ಆರೋಗ್ಯವನ್ನು ಕಾಪಾಡುವ ದೃಷ್ಟಿಯಿಂದ ಜೊತೆಗೆ ಶವಗಳ ಅಂತ್ಯಸಂಸ್ಕಾರ ನಡೆಸಲೇಬೇಕಾದ ಅಗತ್ಯತೆ ಇದ್ದುದರಿಂದ ಈ ಕಣಿವೆಗಳನ್ನು ನಿರ್ಮಿಸಲಾಯಿತು. ಅಂದಿನ ಕರಾಳತೆಯನ್ನು ಸುರಂಗದೊಳಗೆ ಬಂಧಿಸಲಾಯಿತು.
ಕ್ಯಾಟಕಾಂಬ್ಸ್ ಒಳಗೆ ಹೊಕ್ಕ ವ್ಯಕ್ತಿಗೆ ಭಯಾನಕ ಚಲನಚಿತ್ರವನ್ನು ನೋಡಿದಂತೆ ಅನಿಸಬಹುದು. ಚಲನಚಿತ್ರದಲ್ಲಿ ನೋಡಲ್ಪಡುವ ಭಯಾನಕ ದೃಶ್ಯಗಳು ಮಾನವ ನಿರ್ಮಿತ ನಕಲಿ ದೃಶ್ಯಗಳಾಗಿದ್ದರೆ, ಇದು ಮಾನವ ನಿರ್ಮಿತ ನೈಜ್ಯ ದೃಶ್ಯ.
ಹಲವಾರು ಜನರ ಅವಶೇಷಗಳು ಇಲ್ಲಿ ರಾಶಿ ಬಿದ್ದಿದ್ದರಿಂದಲೋ ಏನೋ ಈ ಸ್ಥಳವನ್ನು ಮರಣ ಹೊಂದಿದವರ ಸಾಮ್ರಾಜ್ಯ ಎಂದೂ ಕರೆಯಲಾಗುತ್ತದೆ. ಇಲ್ಲಿನ ಗೋಡೆಗಳನ್ನು ಸುಣ್ಣದ ಕಲ್ಲಿನದ್ದಾಗಿದ್ದು, ಕೆಲವು ಕಡೆಗಳಲ್ಲಿ ಮಾನವರ ತಲೆಬುರುಡೆಗಳು, ಹಾಗು ದೇಹದ ಎಲುಬುಗಳನ್ನು ಜೋಡಿಸಿ ನಿರ್ಮಿಸಲಾಗಿದೆ. ಇಲ್ಲಿ ಸುಮಾರು 6 ದಶಲಕ್ಷಕ್ಕೂ ಹೆಚ್ಚು ಅವಶೇಷಗಳು ಇದ್ದು, ಪೂರ್ತಿ ಎಲುಬು ಮತ್ತು ತಲೆಬುರುಡೆಗಳಿಂದಲೇ ಅಲಂಕೃತಗೊಳಿಸಿದ ರೀತಿಯಲ್ಲಿ ಜೋಡಿಸಲ್ಪಟ್ಟಿದೆ.
ಇದು ಸುಮಾರು 280 ಕಿ.ಮೀ ವರೆಗೆ ಉದ್ದದ ಸುರಂಗವಾಗಿದ್ದು, ಜನರಿಗೆ ಸ್ವಲ್ಪ ದೂರದವರೆಗೆ ಮಾತ್ರ ವೀಕ್ಷಿಸಲು ಅವಕಾಶವಿದೆ. ಒಳಗೆ ಹಲವಾರು ತಿರುವುಗಳಿದ್ದು, ಎಲ್ಲೆಂದರಲ್ಲಿ ನಡೆದರೆ ದಿಕ್ಕು ತಪ್ಪುವ ಸಾಧ್ಯತೆಯೇ ಹೆಚ್ಚು. ಸರಿಯಾಗಿ ಹೇಳಬೇಕೆಂದರೆ ಇದೊಂದು ಚಕ್ರವ್ಯೂಹದ ರೀತಿ ನಿರ್ಮಿತವಾಗಿದ್ದು ಒಳಗೆ ಹೋಗುವವರು ಸರಿಯಾಗಿ ದಾರಿ ಗೊತ್ತಿರುವವರನ್ನು ಕರೆದುಕೊಂಡು ಹೋಗುವುದೇ ಸೂಕ್ತ. ಕೆಲವರು ಇದರ ಒಳಗೆ ಅಧಿಕಾರಿಗಳ ಕಣ್ತಪ್ಪಿಸಿ ರಾತ್ರಿ ಹೊತ್ತು ಹೋಗುವವರು ಇದ್ದಾರೆ. ಇದು ನಿಜವಾಗಿಯೂ ಅಪಾಯಕಾರಿಯಾಗಿದ್ದು, ಹಾಗೆ ಒಳ ಹೊಕ್ಕಿದವರು ಮರಳಿ ಬಾರದೆಯೇ ಇರಬಹುದು.
ಕ್ಯಾಟಕಾಂಬ್ಸ್ ಪ್ರವಾಸಿ ತಾಣವಾಗಿ ಪ್ರಸಿದ್ಧಿ ಪಡೆದಿದ್ದು, ಇದರ ವೀಕ್ಷಣೆಗೆಂದೆ ಹಲವಾರು ದೇಶಗಳಿಂದ ಆಗಮಿಸುತ್ತಾರೆ. ಹಾಗೆ ಬಂದ ಹಲವಾರು ಪ್ರವಾಸಿಗರಿಗೆ ಇದರ ಒಳಗೆ ವಿಚಿತ್ರ ಅನುಭವಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಅವುಗಳಲ್ಲಿ ಸುರಂಗಗಳ ಒಳಗಿಂದ ಪಿಸುಮಾತುಗಳು, ಏನೋ ಗಾಳಿಯಲ್ಲಿ ಕಣ್ಮರೆಯಾಗುವಂತಹ ಅನುಭವಗಳು ಸೇರಿವೆ.
ಕ್ಯಾಟಕಾಂಬ್ಸ್ ಒಳಗೆ ಪ್ರವೇಶಿಸುವುದರಿಂದ ಕೇವಲ ಕಾಣದ ಶಕ್ತಿಯಿಂದ ಮಾತ್ರ ಅಪಾಯ ಸಂಭವಿಸಬಹುದು ಎನ್ನುವುದಕ್ಕಿಂತ ಇತರ ಹಲವಾರು ರೀತಿಯಲ್ಲಿಯೂ ಅಪಾಯಗಳು ಎದುರಾಗಬಹುದು. ಕುಸಿದ ಸುರಂಗಗಳು, ನೆಲದಲ್ಲಿ ಹಲವಾರು ಹೊಂಡಗಳು, ಜೊತೆಗೆ ಯಾವಾಗ ಬೀಳುವುದೋ ಎನ್ನುವಂತೆ ಇರುವ ಛಾವಣಿಗಳು ಜನರಿಗೆ ಅಪಾಯವನ್ನು ಉಂಟು ಮಾಡಬಹುದು.
2ನೇ ಮಹಾಯುದ್ಧದ ಸಂದರ್ಭದಲ್ಲಿ ಫ್ರೆಂಚ್ ನ ಜನರು ಅಡಗುತಾಣವಾಗಿ, ಯೋಜನೆಗಳನ್ನು ತಯಾರಿಸಲು, ವಿಶ್ರಾಂತಿ ತಾಣವಾಗಿ ಕ್ಯಾಟಕಾಂಬ್ಸ್ ನ್ನು ಬಳಸಿಕೊಂಡಿದ್ದರು ಎನ್ನುವುದು ವಿಶೇಷ.
ಇಲ್ಲಿ ಅವಶೇಷಗಳ ರಾಶಿಯೇ ಕೇಂದ್ರಬಿಂದು. ಈ ಪ್ರದೇಶವು ಪ್ರವಾಸಿಗರಿಗೆ ಭಯಾನಕತೆಯ ನಡುವೆ ಆಕರ್ಷಣೀಯವಾಗಿ ಕಾಣಬಹುದು. ಅಂದು ಹೆಚ್ಚಿದ ಸಾವಿನ ಸಂಖ್ಯೆಯು ಸ್ಮಶಾನದಲ್ಲಿನ ಸ್ಥಳದ ಅಭಾವ ಮುಂತಾದ ನೋವು ತುಂಬಿದ ಕರಾಳ ದಿನಗಳನ್ನು, ಜನರ ಘೋರ ಪರಿಸ್ಥಿತಿಯನ್ನು ಇಂದಿನ ಕ್ಯಾಟಕಾಂಬ್ಸ್ ಬಿಚ್ಚಿಡುತ್ತಿರುವುದಂತೂ ಸುಳ್ಳಲ್ಲ.
-ಪೂರ್ಣಶ್ರೀ. ಕೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Zakir Hussain ; ಸರಸ್ವತಿ, ಗಣಪತಿಯ ಆರಾಧಕರಾಗಿದ್ದರು ತಬಲಾ ಮಾಂತ್ರಿಕ
Zakir Hussain: 5 ರೂ ಕಾನ್ಸರ್ಟ್ ನಿಂದ 5 ಗ್ರ್ಯಾಮಿಯವರೆಗೆ…: ತಬಲಾ ಉಸ್ತಾದ್ ನಾದಮಯ ಪಯಣ
Benjamin Joby: “ಬೇರೆಯವರ ಯಶಸ್ಸು ನೋಡಿ ಅಳಬೇಡ..” ವೈರಲ್ ಆಗುತ್ತಿರುವ ಈ ಬಾಲಕ ಯಾರು?
Captains’ clash: ವಿರಾಟ್ ಕೊಹ್ಲಿ- ರೋಹಿತ್ ಶರ್ಮಾ; ನಾಯಕನಾಗಿ ಯಾರು ಉತ್ತಮರು?
Winter Skin Care: ಚಳಿಗಾಲದ ತ್ವಚೆಗಾಗಿ ತುಪ್ಪದ ಸೌಂದರ್ಯ ಪ್ರಯೋಜನಗಳು
MUST WATCH
ಹೊಸ ಸೇರ್ಪಡೆ
Udupi: ಗೀತಾರ್ಥ ಚಿಂತನೆ-126: ವಾರ್ಧಕ್ಯಕ್ಕಾಗಿ ದುಃಖವಲ್ಲ, ಸಾಧನಾಚ್ಯುತಿಗಾಗಿ…
T20; ವೆಸ್ಟ್ ಇಂಡೀಸ್ ಎದುರು ಬಾಂಗ್ಲಾದೇಶ ಗೆಲುವಿನ ಆರಂಭ
T20I;ಡಬಲ್ ಹ್ಯಾಟ್ರಿಕ್ ಸಾಧನೆ ಮೆರೆದ ಆರ್ಜೆಂಟೀನಾದ ಫೆನೆಲ್
Karnataka; ಸರಕಾರಿ ಅಂಗವಿಕಲ ನೌಕರರ ಪ್ರಯಾಣ ಭತ್ತೆ ದರ ಪರಿಷ್ಕರಣೆ
Gukesh Dommaraju; ಚದುರಂಗ ಚಾಂಪಿಯನ್ ಗೆ ತವರೂರು ಚೆನ್ನೈಯಲ್ಲಿ ಭವ್ಯ ಸ್ವಾಗತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.