ನ್ಯೂಟನ್ ನಿಯಮ ಭಾರತೀಯ ಸಿದ್ಧಾಂತದ ನಕಲು!
Team Udayavani, Jul 15, 2022, 8:21 AM IST
ಪ್ರಾಥಮಿಕ ಶಿಕ್ಷಣದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರುವ ನಿಟ್ಟಿನಲ್ಲಿ ರಾಜ್ಯ ಸರಕಾರ ನೇಮಕ ಮಾಡಿದ್ದ ಕಾರ್ಯಪಡೆಯು ಕೇಂದ್ರ ಸರಕಾರಕ್ಕೆ “ನಿಲುವು ಪತ್ರ’ ನೀಡಿದ್ದು, ಇದರಲ್ಲಿ ಭಾರತ ಮತ್ತು ಭಾರತೀಯತೆಯ ಬಗ್ಗೆ ಪ್ರಸ್ತಾವಿಸಲಾಗಿದೆ. ಅದರಲ್ಲೂ ಮುಖ್ಯವಾಗಿ ಪ್ರಪಂಚಕ್ಕೆ ವೇದ, ಯೋಗ ಮತ್ತು ತತ್ವ್ತ ಶಾಸ್ತ್ರದ ಕೊಡುಗೆಯ ಬಗ್ಗೆ ಆದ್ಯತೆ ನೀಡಲಾಗಿದೆ. ಈ ನಿಟ್ಟಿನಲ್ಲಿ ಕಾರ್ಯಪಡೆಯ ಅಧ್ಯಕ್ಷ, ನಿವೃತ್ತ ಐಎಎಸ್ ಅಧಿಕಾರಿ ಮದನ್ ಗೋಪಾಲ್ ಅವರು ಉದಯವಾಣಿ ಜತೆಗೆ ಮಾತನಾಡಿದ್ದಾರೆ.
ಎನ್‌ಇಪಿಯಲ್ಲಿ ರಾಜ್ಯಭಾಷೆ, ಮಾತೃಭಾಷೆ, ಮನೆ ಭಾಷೆಗೆ ಬೇರೆ ಬೇರೆ ರೀತಿಯ ಆಯಾಮಗಳನ್ನು ನೀಡಲಾಗಿದೆ. ಈಗ ಸಮಸ್ಯೆಯಾಗಿರುವುದು ಮಾಧ್ಯಮ ವಲ್ಲ, ಶಿಕ್ಷಣದ ಗುಣಮಟ್ಟ. ಹಿಂದೆ 5ನೇ ತರಗತಿಯ ಅನಂತರ ಇಂಗ್ಲಿಷ್ ಕಲಿಸಿದರೂ ಚೆನ್ನಾಗಿ ಕಲಿಸ ಲಾಗುತ್ತಿತ್ತು. ಇದಕ್ಕಾಗಿ ಗುಣಮಟ್ಟದ ಶಿಕ್ಷಕರು ಆವಶ್ಯಕ. ಇದನ್ನು ಯಾವ ರೀತಿಯಲ್ಲಿ ಅನುಷ್ಠಾನ ಮಾಡಬೇಕೆಂಬ ಬಗ್ಗೆ ಸಲಹೆ ಸೂಚನೆ ಗಳನ್ನು ಸ್ವೀಕರಿಸುತ್ತೇವೆ. ಕೇಂದ್ರ ಸರಕಾರವು ಎನ್‌ಸಿಎಫ್ ರಚಿಸಿದ ಅನಂತರ ರಾಜ್ಯ ದಲ್ಲಿ ಕೆಸಿಎಫ್ ರಚಿಸಿ ಪಠ್ಯಪುಸ್ತಕ ಸಿದ್ಧಗೊಳಿಸಲಾಗುತ್ತದೆ.
ನಮ್ಮ ಕೊಡುಗೆ ಅಪಾರ :
ಭಾರತೀಯ ಶಿಕ್ಷಣ ಪದ್ಧತಿಯಲ್ಲಿ ವಿಜ್ಞಾನವಿದೆ. ಆದರೆ ನಮ್ಮನ್ನು ಈವರೆಗೆ ಭಾರತೀಯ ಶಾಸ್ತ್ರೀಯ ವಿಜ್ಞಾನವು ತಿಳಿಯದಂತೆ ಬೆಳೆಸಿದ್ದಾರೆ. ನಮ್ಮ ಇತಿಹಾಸ, ತತ್ತ್ವ ಶಾಸ್ತ್ರಗಳನ್ನು ತಿಳಿದರೆ ಪ್ರಪಂಚದ ಜ್ಞಾನ ವ್ಯವಸ್ಥೆಗೆ ಭಾರತದ ಕೊಡುಗೆ ಏನು ಮತ್ತು ಅದರ ಪ್ರಯೋಜನ ಏನು ಎಂಬುದು ಸ್ಪಷ್ಟವಾಗುತ್ತದೆ.
ನ್ಯೂಟನ್ ಸಿದ್ಧಾಂತ ತಪ್ಪಲ್ಲ:
ನ್ಯೂಟನ್ ಸಿದ್ಧಾಂತ ತಪ್ಪು ಎಂದು ನಾವು ಹೇಳಿಲ್ಲ. ಅವನ ಗುರುತ್ವಾಕರ್ಷಣೆ ಸಿದ್ಧಾಂತ ವನ್ನು ಕೇರಳದ ಪುಸ್ತಕ ವೊಂದರಿಂದ ನಕಲು ಮಾಡ ಲಾಗಿದೆ ಎಂಬ ವಿಷಯ ಅಂತಾರಾಷ್ಟ್ರೀಯ ಮಟ್ಟ ದಲ್ಲಿ ಚರ್ಚೆಯಾಗುತ್ತಿದೆ. ಅದನ್ನು ಹೇಳಿದ್ದೇವೆ.
ಪೈಥಾಗೊರಸ್ ಪ್ರಮೇಯವೂ ನಮ್ಮ ಕೊಡುಗೆ :
ಪೈಥಾಗೊರಸ್ ಪ್ರಮೇಯ ಎರವಲು ಪಡೆದದ್ದು ಎಂದು ಹತ್ತಾರು ವರ್ಷಗಳಿಂದ ಚರ್ಚೆಯಾಗುತ್ತಿದೆ. ಈ ಬಗ್ಗೆ ವೈಜ್ಞಾನಿಕ ದೃಷ್ಟಿಕೋನದಿಂದ ನೋಡಲಾಗಿದೆ. ಸನಾತನ ಭಾರತದ ಗಣಿತಜ್ಞ ಬೌದ್ಧಾಯನ ಈ ಪ್ರಮೇಯ ಮಂಡಿಸಿದ್ದ. ಪೈಥಾಗೊರಸ್ ಪ್ರಮೇಯದ ಮೂಲ ಭಾರತದ ಕೊಡುಗೆ ಎಂಬುದನ್ನು ತಿಳಿಸಿದ್ದೇವೆ.
ಶಿಕ್ಷಣದ ಭಾರತೀಕರಣ :
ಶಾಲಾ ಶಿಕ್ಷಣ ಮತ್ತು ಪುಸ್ತಕವನ್ನು ಕೇಸರೀಕರಣ ಮಾಡುತ್ತಿಲ್ಲ. ಬದಲಾಗಿ ಭಾರತೀಕರಣ ಆಗುತ್ತಿದೆ. ಇಷ್ಟು ವರ್ಷಗಳ ಕಾಲ ಹತ್ತಾರು ರೀತಿಯಲ್ಲಿ ನಮ್ಮನ್ನು ಕೀಳಾಗಿ ನೋಡುವ ಮನಃಸ್ಥಿತಿ ಬೆಳೆದು ಬಂದಿದೆ. ಆದರೆ ಮ್ಯಾಕ್ಸ್‌ಮುಲ್ಲರ್ ತನ್ನ “ದಿ ಗ್ರೇಟ್ ಫಿಲಾಸಫಿ’ ಎಂಬ ಗ್ರಂಥದ 12 ಸಂಪುಟಗಳಲ್ಲಿಯೂ ಜ್ಞಾನ-ವಿಜ್ಞಾನದಲ್ಲಿ ಭಾರತದ ಪಾತ್ರವೇನೆಂದು ತಿಳಿಸಿದ್ದಾರೆ. ಈ ಎಲ್ಲ ವಿಚಾರಗಳನ್ನು ತಿಳಿದು ನಮ್ಮ ಪಠ್ಯದಲ್ಲಿ ವಿಜ್ಞಾನ, ಗಣಿತ, ತತ್ತÌಶಾಸ್ತ್ರ, ಯೋಗದಲ್ಲಿ ಭಾರತೀಯರ ಆಳವಾದ ಜ್ಞಾನಭಂಡಾರವನ್ನು ತಿಳಿಸಲಾಗುತ್ತಿದೆ.
800 ಪೊಸಿಷನ್ ಪೇಪರ್ :
ರಾಷ್ಟ್ರೀಯ ಶಿಕ್ಷಣ ನೀತಿ ಅಳವಡಿಕೆಗೆ ಒಪ್ಪಿಗೆ ನೀಡಿರುವ ವಿವಿಧ ರಾಜ್ಯಗಳು ಕೇಂದ್ರ ಸರಕಾರಕ್ಕೆ ಒಟ್ಟು 800 “ಪೊಸಿಷನ್ ಪೇಪರ್’ಗಳನ್ನು ಸಲ್ಲಿಸಿವೆ. ಕರ್ನಾಟಕದಿಂದಲೂ ಕಾರ್ಯಪಡೆ 26 ಪೇಪರ್‌ಗಳನ್ನು ಸಲ್ಲಿಸಿದೆ. ಇವುಗಳನ್ನು ಅಧ್ಯಯನ ಮಾಡಿದ ಬಳಿಕ ಕೇಂದ್ರ ಸರಕಾರ ಅಂತಿಮ ನಿರ್ಧಾರಕ್ಕೆ ಬರಲಿದೆ.
- ಎನ್.ಎಲ್. ಶಿವಮಾದು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ
Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು
Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.