ಚಿಕನ್ ಅಂದ್ರೆ ತುಂಬಾ ಇಷ್ಟನಾ! ಹಾಗಾದ್ರೆ ಈ ಸುಲಭ ರೆಸಿಪಿ ನಿಮಗಾಗಿ….
ನೀವು ಮನೆಯಲ್ಲಿ ಒಮ್ಮೆ ಟ್ರೈ ಮಾಡಿ ಸವಿಯಿರಿ
ಶ್ರೀರಾಮ್ ನಾಯಕ್, Oct 28, 2022, 5:45 PM IST
ನಾವು ಇಂದು ಹೇಳಲು ಹೊರಟಿರುವ ನಾನ್ ವೆಜ್ ರೆಸಿಪಿ ಬಹಳ ಸುಲಭವಾಗಿದೆ ಮತ್ತು ಅಷ್ಟೇ ರುಚಿಯಾಗಿಯೂ ಇರುತ್ತದೆ. ಈ ರೆಸಿಪಿ ಇಷ್ಟವಾಗದೆ ಇರಲು ಸಾಧ್ಯವೇ ಇಲ್ಲ. ಹಾಗಾದರೆ ನೀವು ಮನೆಯಲ್ಲಿ ಒಮ್ಮೆ ಟ್ರೈ ಮಾಡಿ ಸವಿಯಿರಿ. ಬನ್ನಿ ಹಾಗಾದರೆ ಚಿಕನ್ ಚಾಪ್ಸ್ ಮತ್ತು ಕಲ್ಮಿ ಕಬಾಬ್ ರೆಸಿಪಿ ಮಾಡುವ ವಿಧಾನ ನೋಡೋಣ….
ಚಿಕನ್ ಚಾಪ್ಸ್ ರೆಸಿಪಿ
ಬೇಕಾಗುವ ಸಾಮಗ್ರಿಗಳು
ಚಿಕನ್- ಅರ್ಧ ಕೆ.ಜಿ., ಹಸಿಮೆಣಸು-4 ಈರುಳ್ಳಿ-2(ಸಣ್ಣಗೆ ಹೆಚ್ಚಿದ್ದು),ಮೊಟ್ಟೆ-1,ಶುಂಠಿ-ಬೆಳ್ಳುಳ್ಳಿ ಪೇಸ್ಟ್-2ಚಮಚ,ಕೊತ್ತಂಬರಿ ಪುಡಿ(ಧನಿಯಾ )-1ಚಮಚ, ಅರಿಶಿನ ಪುಡಿ-ಅರ್ಧ ಚಮಚ, ಕೊತ್ತಂಬರಿ-ಪುದೀನಾ ಸೊಪ್ಪು-ಸ್ವಲ್ಪ, ಬ್ರೆಡ್ ಚೂರು-ಸ್ವಲ್ಪ, ಅಚ್ಚ ಖಾರದ ಪುಡಿ-1ಚಮಚ,ಲಿಂಬೆ ರಸ-ಅರ್ಧ ಚಮಚ,ಕರಿಯಲು ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು.
ತಯಾರಿಸುವ ವಿಧಾನ
ಒಂದು ಪಾತ್ರೆಗೆ ಚಿಕ್ಕ-ಚಿಕ್ಕ ತುಂಡು ಮಾಡಿದ ಚಿಕನ್,ಶುಂಠಿ-ಬೆಳ್ಳುಳ್ಳಿ ಪೇಸ್ಟ್,ಈರುಳ್ಳಿ,ಸಣ್ಣಗೆ ಹೆಚ್ಚಿದ ಹಸಿಮೆಣಸು,ಕೊತ್ತಂಬರಿ-ಪುದೀನಾ ಸೊಪ್ಪು,ಮೊಟ್ಟೆ,ಅಚ್ಚ ಖಾರದ ಪುಡಿ,ಅರಿಶಿನ ಪುಡಿ,ಕೊತ್ತಂಬರಿ ಪುಡಿ,ಲಿಂಬೆ ರಸ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಸರಿಯಾಗಿ ಕೈಯಿಂದ ಮಿಕ್ಸ್ ಮಾಡಿಕೊಳ್ಳಿ.ಈಗ ಈ ಮಿಶ್ರಣವನ್ನು ಸಮಾರು 15 ರಿಂದ 20 ನಿಮಿಷ ಫ್ರಿಡ್ಜ್ ನಲ್ಲಿಡಿ. ತದನಂತರ ಒಂದು ಬಾಣಲೆಗೆ ಎಣ್ಣೆ ಹಾಕಿ ಕಾದಮೇಲೆ ಮಾಡಿಟ್ಟ ಚಿಕನ್ ಚಾಪ್ಸ್ ಮಿಶ್ರಣದಿಂದ ದೊಡ್ಡ ಲಿಂಬೆ ಹಣ್ಣಿನ ಗಾತ್ರದ ಉಂಡೆ ಕಟ್ಟಿ ಅದನ್ನು ಕೈಯಲ್ಲಿಯೇ ಸ್ವಲ್ಪ ರೋಲ್ ಮಾಡಿಕೊಳ್ಳಿ. ನಂತರ ಬೆಡ್ ಚೂರುಗಳಲ್ಲಿ ಅದನ್ನು ಹೊರಲಾಡಿಸಿ ಎಣ್ಣೆಯಲ್ಲಿ ಹಾಕಿ ಡೀಪ್ ಫ್ರೈ ಮಾಡಿ. ಬಿಸಿ-ಬಿಸಿಯಾದ ಚಿಕನ್ ಚಾಪ್ಸ್ ಅನ್ನು ಟೊಮೆಟೋ ಸಾಸ್ ಜೊತೆ ಸವಿಯಿರಿ.
ಕಲ್ಮಿ ಕಬಾಬ್ ರೆಸಿಪಿ;ಬೇಕಾಗುವ ಸಾಮಗ್ರಿಗಳು
ಚಿಕನ್ ಲೆಗ್ ಪೀಸ್ 7ರಿಂದ 8, ಅಚ್ಚ ಖಾರದ ಪುಡಿ-4ಚಮಚ, ಅರಿಶಿನ ಪುಡಿ-ಅರ್ಧ ಚಮಚ, ಗರಂ ಮಸಾಲ ಪುಡಿ-ಅರ್ಧ ಚಮಚ, ಕೊತ್ತಂಬರಿ ಪುಡಿ-1ಚಮಚ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ -2ಚಮಚ, ಈರುಳ್ಳಿ ಪೇಸ್ಟ್-3ಚಮಚ, ಲಿಂಬೆ ರಸ-1ಚಮಚ, ಮೊಸರು-ಅರ್ಧ ಕಪ್, ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು.
ತಯಾರಿಸುವ ವಿಧಾನ
ಒಂದು ಬೌಲ್ ಗೆ ಕೊತ್ತಂಬರಿ ಪುಡಿ,ಅರಿಶಿನ ಪುಡಿ, ಅಚ್ಚ ಖಾರದ ಪುಡಿ, ಗರಂ ಮಸಾಲ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ , ಮೊಸರು,ಉಪ್ಪನ್ನು ಹಾಕಿ ಸರಿಯಾಗಿ ಮಿಕ್ಸ್ ಮಾಡಿ. ನಂತರ ಈ ಮಸಾಲೆ ಮಿಶ್ರಣಕ್ಕೆ ಚಿಕನ್ ಲೆಗ್ ಪೀಸ್ ಹಾಕಿ ಅದಕ್ಕೆ ಲಿಂಬೆ ರಸ ಸೇರಿಸಿ ಸುಮಾರು 25ರಿಂದ30 ನಿಮಿಷಗಳ ಕಾಲ ಹಾಗೇ ಬಿಡಿ. ತದನಂತರ ತವಾ ಬಿಸಿ ಮಾಡಿ ಅದಕ್ಕೆ ಎಣ್ಣೆ ಹಾಕಿ ಅದರಲ್ಲಿ ಮಿಶ್ರಣ ಮಾಡಿಟ್ಟ ಚಿಕನ್ ಲೆಗ್ ಪೀಸ್ ಹಾಕಿ 15 ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಫ್ರೈ ಮಾಡಿದರೆ ಬಿಸಿ-ಬಿಸಿಯಾದ ಸ್ವಾಧಿಷ್ಟಕರವಾದ ಕಲ್ಮಿ ಕಬಾಬ್ ರೆಡಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ : ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?
OneNation, OneElection Bill: 31 JPC ಸದಸ್ಯರ ಕಾರ್ಯವ್ಯಾಪ್ತಿ ಏನು?ಸಲಹೆ ನೀಡುವವರು ಯಾರು
Winter: ಚಳಿಗಾಲದಲ್ಲಿ ಆರೋಗ್ಯಕರವಾಗಿರಲು ಸೇವಿಸಬೇಕಾದ ಆಹಾರಗಳು ಇವು…
Zakir Hussain ; ಸರಸ್ವತಿ, ಗಣಪತಿಯ ಆರಾಧಕರಾಗಿದ್ದರು ತಬಲಾ ಮಾಂತ್ರಿಕ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.