ನಮ್ಮ ಸಂವಿಧಾನ ಎಂಥ ಸವಾಲುಗಳನ್ನೂ ಎದುರಿಸಬಲ್ಲದು
Team Udayavani, Nov 26, 2021, 6:20 AM IST
ಭಾರತೀಯ ಸಂವಿಧಾನದ ಶಿಲ್ಪಿ ಡಾ| ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮೇಲಿನ ಸಾಲುಗಳು ಸಾರ್ವಕಾಲಿಕವಾದ ಹೇಳಿಕೆಯಾಗಿವೆ. ದೇಶವನ್ನು ಕಾಡುತ್ತಿರುವ ಎಲ್ಲ ಕೆಡಕುಗಳಿಗೆ ಸಂವಿಧಾನವನ್ನು ದೂಷಿಸುವುದು ಸೂಕ್ತವೂ ಅಲ್ಲ. ಸಾಧುವೂ ಅಲ್ಲ. ಇದು ಕೆಲಸ ಗೊತ್ತಿಲ್ಲದವ ತಾನು ಬಳಸುವ ಸಾಧನಗಳನ್ನು ದೂಷಿಸಿದಂತೆಯೇ ಸರಿ.
ನಮ್ಮ ಸಂವಿಧಾನ ಎಂತಹ ಸವಾಲುಗಳನ್ನಾದರೂ ಎದುರಿಸಬಲ್ಲದು. ಅದು ಸಮರ್ಥವಾಗಿದೆ. ಆ ಶಕ್ತಿ ಯನ್ನು ಸಂವಿಧಾನ ಹೊಂದಿದೆ. ಇದು ನಾನಾ ಸಂದರ್ಭದಲ್ಲಿ ಸಾಬೀತಾ ಗಿದೆ ಕೂಡ. ಸಂವಿಧಾನ ರಚನಾ ಸಭೆಯ ಚರ್ಚೆಯಲ್ಲಿ ಭಾಗವಹಿಸಿದ ನಾಯ ಕರು ದೂರದರ್ಶಿತ್ವವನ್ನು ಹೊಂದಿದ್ದರು. ಶ್ರೀಸಾಮಾನ್ಯನ ಕಲ್ಯಾಣದ ಬಗ್ಗೆ ಅವರೆಲ್ಲರಿಗೂ ನಿಜವಾದ ಕಾಳಜಿ, ಸ್ಪಷ್ಟತೆ, ಧೈರ್ಯ ಮತ್ತು ದೃಢ ಸಂಕಲ್ಪವಿತ್ತು.
ನಾವು ಸಂವಿಧಾನದ ನಿಜವಾದ ಮೌಲ್ಯವನ್ನು, ಆಂತರ್ಯವನ್ನು ಅರ್ಥಮಾಡಿಕೊಳ್ಳಬೇಕು ಮತ್ತು ಸಂವಿಧಾನದ ಆಶಯಗಳನ್ನು ನಿಜ ಸ್ಫೂರ್ತಿಯೊಂದಿಗೆ ಜಾರಿಗೆ ತರಬೇಕು. ನಾವೆಲ್ಲರೂ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವದ ಬಗ್ಗೆ ಮಾತನಾಡುತ್ತೇವೆ. ನಾವು ಅದನ್ನು ಮತ್ತೆ ಮತ್ತೆ ಪುನರುತ್ಛರಿಸಿದರೆ ಸಾಲದು. ಅದನ್ನು ನಮ್ಮ ದಿನನಿತ್ಯದ ಬದುಕಲ್ಲಿ, ನಮ್ಮ ಆಡಳಿತದಲ್ಲಿ ಜಾರಿಗೆ ತರಬೇಕು ಮತ್ತು ಸಾಕಾರಗೊಳಿಸಬೇಕು.
ಸಂವಿಧಾನದ ಪೀಠಿಕೆಯಲ್ಲಿ ಉಲ್ಲೇಖೀಸಿರುವಂತೆ “ಭಾರತದ ಜನತೆಯಾದ ನಾವು ಈ ಸಂವಿಧಾನವನ್ನು ನಮಗೆ ನಾವೇ ಅರ್ಪಿಸಿಕೊಳ್ಳುತ್ತೇವೆ” ಎಂದರೆ ಸಂವಿಧಾನವು ಸಾಮಾನ್ಯ ಜನರ ಕಲ್ಯಾಣಕ್ಕಾಗಿ ಕೆಲಸ ಮಾಡಬೇಕು ಎಂದರ್ಥ. ನಾನು ಮತ್ತೂಮ್ಮೆ ಡಾ| ಅಂಬೇಡ್ಕರ್ ಅವರ ಹೇಳಿಕೆಯನ್ನು ಉಲ್ಲೇಖೀಸುತ್ತೇನೆ, ಅವರು “ಸಂವಿಧಾನವು ಕೇವಲ ವಕೀಲರ ದಾಖಲೆಯಲ್ಲ. ಇದು ಜೀವನದ ಒಂದು ವಾಹಕ ವಾಗಿದೆ ಮತ್ತು ಅದರ ಆತ್ಮವು ಯಾವಾಗಲೂ ಜೀವನ ಚೈತನ್ಯವಾಗಿದೆ. ಸಂವಿಧಾನವು ಜನರಿಗೆ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ಒದಗಿಸದಿದ್ದರೆ ಮತ್ತು ಅವರ ಕನಸುಗಳನ್ನು ನನಸಾಗಿಸ ದಿದ್ದರೆ, ಅದರಿಂದ ಯಾವುದೇ ಪ್ರಯೋಜನವಿಲ್ಲ’ ಎಂದು ಹೇಳಿದ್ದರು.
ಸಂವಿಧಾನದ ಆಶಯಗಳನ್ನು ವಾಸ್ತವಗೊಳಿಸುವ ಜವಾಬ್ದಾರಿ ಪಂಚಾಯತ್‌ನಿಂದ ಹಿಡಿದು ಸಂಸತ್ತಿನ ವರೆಗಿನ ರಾಜಕೀಯ ಸಂರಚನೆಯಲ್ಲಿನ ಎಲ್ಲ ಹಂತಗಳ ಚುನಾಯಿತ ಪ್ರತಿನಿಧಿಗಳದ್ದಾಗಿದೆ. ಆ ನಿಟ್ಟಿನಲ್ಲಿ ಶ್ರೀಸಾಮಾನ್ಯರಲ್ಲಿ ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸಿ ಸಂವಿಧಾನದ ಆಶಯಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಇವುಗಳನ್ನು ಕಾರ್ಯಗತಗೊಳಿಸಲಾಗುತ್ತಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳುವುದು ತಮ್ಮದೇ ಮಟ್ಟದಲ್ಲಿ ಪ್ರತಿಯೊಬ್ಬ ಸಾರ್ವಜನಿಕ ಪ್ರತಿನಿಧಿಯ ಕರ್ತವ್ಯವಾಗಿದೆ.
ಸಂವಿಧಾನದ ರಕ್ಷಣೆ ಮತ್ತು ಅದರ ಆಶಯಗಳ ಕಟ್ಟುನಿಟ್ಟಿನ ಅನುಷ್ಠಾನಕ್ಕೆ ಇರುವ ಏಕೈಕ ಮಾರ್ಗವೆಂದರೆ ಜನರನ್ನು ಜಾಗರೂಕರನ್ನಾಗಿ ಮಾಡುವುದು ಮತ್ತು ಜಾಗೃತರಾಗಿಡುವುದಾಗಿದೆ.
ಅದೇ ವೇಳೆ ನಮ್ಮ ಸಂವಿಧಾನವು ಭವ್ಯ ಪರಂಪರೆ, ಶ್ರೀಮಂತ ಸಂಪ್ರದಾಯ, ಕಾಲ ಕಾಲಕ್ಕೆ ಪರೀಕ್ಷೆಗೆ ಒಡ್ಡಿಕೊಂಡ ನಾಗರಿಕತೆಯ ಮೌಲ್ಯಗಳನ್ನು ಪ್ರತಿಬಿಂಬಿ ಸುತ್ತದೆ. ನಮ್ಮ ಸಂಸ್ಕೃತಿಯ ಅನುಭಾವಗಳನ್ನು ಸಂಸತ್ತಿನ ಎಲ್ಲ ಪ್ರವೇಶದ್ವಾರಗಳಲ್ಲಿ ಕೆತ್ತಲಾಗಿದೆ. ಈ ಪ್ರತಿಮೆಯು ನಮ್ಮ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯಿಂದ ಹೆಕ್ಕಿ ತೆಗೆದ ರತ್ನಗಳನ್ನು ಆಧರಿಸಿದೆ.
ಸಂವಿಧಾನದ ಪೀಠಿಕೆ ಮತ್ತು ಮೂಲಭೂತ ಕರ್ತವ್ಯಗಳ ಸಾಮೂಹಿಕ ಪಠನವನ್ನು ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ನಿಯಮಿತವಾಗಿ ಮತ್ತು ವಿಶೇಷವಾಗಿ ರಾಷ್ಟ್ರೀಯ ಹಬ್ಬಗಳ ವಿಶೇಷ ಸಂದರ್ಭಗಳಲ್ಲಿ ಕಡ್ಡಾಯಗೊಳಿಸಬೇಕು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ.
ಈ ಪ್ರಕ್ರಿಯೆ ನಮ್ಮ ಯುವಪೀಳಿಗೆಗೆ ನಮ್ಮ ಸಂವಿಧಾನಕ್ಕೆ ಬದ್ಧರಾಗಿರುವಂತೆ ಪ್ರೇರೇಪಿಸುತ್ತದೆ ಮತ್ತು ಅದರ ಮೌಲ್ಯಗಳು ಮತ್ತು ಸಾಂವಿಧಾನಿಕ ಸಂಸ್ಥೆಗಳನ್ನು ಗೌರವಿಸುವುದೂ ಸೇರಿದಂತೆ ನಮ್ಮ ಕರ್ತವ್ಯಗಳ ಬಗ್ಗೆ ಅರಿವು ಮೂಡಿಸುತ್ತದೆ. ಹೀಗಾಗಿ ಇಂತಹ ಒಂದು ಸಂಪ್ರದಾಯ ಹುಟ್ಟುಹಾಕುವ ಅಗತ್ಯವಿದೆ; ಇದು ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆ; ನಮ್ಮ ರಾಷ್ಟ್ರದ ಸ್ವಾತಂತ್ರ್ಯ ಹೋರಾಟಕ್ಕೆ ಪ್ರೇರಣೆ ನೀಡಿದ ಉದಾತ್ತ ಆದರ್ಶಗಳನ್ನು ಪ್ರೀತಿಸುವುದು ಮತ್ತು ಅನುಸರಿಸುವುದಕ್ಕೆ ಪ್ರೇರಣೆ ನೀಡುತ್ತದೆ; ಭಾರತದ ಸಾರ್ವ ಭೌಮತ್ವ, ಏಕತೆ ಮತ್ತು ಅಖಂಡತೆಯನ್ನು ಎತ್ತಿಹಿಡಿಯಲು ಮತ್ತು ರಕ್ಷಿಸಲು, ದೇಶವನ್ನು ರಕ್ಷಿಸಲು ಮತ್ತು ಹಾಗೆ ಮಾಡುವಂತೆ ಕರೆ ನೀಡಿದಾಗ ರಾಷ್ಟ್ರ ಸೇವೆ ಮಾಡಲು ಸ್ಫೂರ್ತಿ ಚೈತನ್ಯ ನೀಡುತ್ತದೆ. ಅರಣ್ಯ, ಸರೋವರಗಳು, ನದಿಗಳು ಮತ್ತು ವನ್ಯಜೀವಿಗಳು ಸೇರಿದಂತೆ ನೈಸರ್ಗಿಕ ಸಂಪನ್ಮೂಲ, ಪರಿಸರವನ್ನು ರಕ್ಷಿಸಲು ಮತ್ತು ಉತ್ತಮ ಪಡಿಸಲು ಮತ್ತು ಎಲ್ಲ ಜೀವಿಗಳ ಬಗ್ಗೆ ಸಹಾನುಭೂತಿ ಹೊಂದಲು ಮತ್ತು ಸಾರ್ವಜನಿಕ ಆಸ್ತಿಯನ್ನು ರಕ್ಷಿಸಲು ಮತ್ತು ಹಿಂಸಾಚಾರವನ್ನು ತಡೆಗಟ್ಟಲೂ ಇಂದು ಸಹಕಾರಿಯಾಗುತ್ತದೆ.
ನಾನು ನನ್ನ ಲೇಖನಕ್ಕೆ ಪೂರ್ಣ ವಿರಾಮ ಇಡುವ ಮುನ್ನ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮಾತುಗಳನ್ನು ಉಲ್ಲೇಖೀಸಲು ಬಯಸುತ್ತೇನೆ; “ನಮ್ಮ ಸಂವಿಧಾನವು ಆಶಾಕಿರಣವಾಗಿದೆ. ಅಂದರೆ ಏಟಟಛಿ. ಇಲ್ಲಿ ಏ ಎಂದರೆ ಹಾರ್ಮನಿ – ಸಾಮರಸ್ಯ; O ಎಂದರೆ ಅಪಾಚ್ಯುìನಿಟಿ – ಅವಕಾಶ; ಕ ಎಂದರೆ ಪೀಪಲ್ಸ್ ಪಾರ್ಟಿಸಿಪೇಶನ್ – ಜನರ ಪಾಲ್ಗೊಳ್ಳುವಿಕೆ ಮತ್ತು ಉ ಎಂದರೆ ಈಕ್ವಾಲಿಟಿ – ಸಮಾನತೆ. ನಮ್ಮ ಸಂವಿಧಾನ ವನ್ನು ಬಲಪಡಿಸಲು ಮತ್ತು ಶ್ರೀಸಾಮಾನ್ಯರ ಕಲ್ಯಾಣ ಮತ್ತು ಪ್ರಯೋಜನಕ್ಕಾಗಿ ನಿಜ ಸ್ಫೂರ್ತಿಯೊಂದಿಗೆ ಅದರ ಆಶಯಗಳನ್ನು ಜಾರಿಗೆ ತರಲು ಪ್ರಾಮಾಣಿಕ ಪ್ರಯತ್ನ ಮಾಡೋಣ.
ಸಂವಿಧಾನವು ಎಷ್ಟೇ ಉತ್ತಮವಾಗಿದ್ದರೂ ಆ ಸಂವಿಧಾನದಂತೆ ಕೆಲಸ ಮಾಡುವ ವ್ಯಕ್ತಿ ಸಚ್ಚಾರಿತ್ರ್ಯವನ್ನು ಹೊಂದಿಲ್ಲದಿದ್ದರೆ ಅದರಿಂದ ಯಾವುದೇ ಪ್ರಯೋಜನ ವಾಗುವುದಿಲ್ಲ. ಸಂವಿಧಾನದ ಅಡಿಯಲ್ಲಿ ತಪ್ಪುಗಳು ನಡೆದರೆ ಅದಕ್ಕೆ ಕಾರಣ ನಾವು ಕೆಟ್ಟ ಸಂವಿಧಾನವನ್ನು ಹೊಂದಿದ್ದೇವೆ ಎಂದಲ್ಲ. ನಾವು ಹೇಳಬೇಕಾಗಿರುವುದು ಸಂವಿಧಾನದ ನೆಲೆಗಟ್ಟಿನಲ್ಲಿ ಕೆಲಸ ಮಾಡುವ ಆ ವ್ಯಕ್ತಿ ಉತ್ತಮನಲ್ಲ. -ಡಾ| ಬಿ.ಆರ್. ಅಂಬೇಡ್ಕರ್
-ವಿಶ್ವೇಶ್ವರ ಹೆಗಡೆ ಕಾಗೇರಿಸ್ಪೀಕರ್, ವಿಧಾನಸಭೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ
Accidental Prime Minister: ದ ಮೇಕಿಂಗ್ ಆ್ಯಂಡ್ ಅನ್‌ಮೇಕಿಂಗ್ ಆಫ್ ಡಾ.ಸಿಂಗ್
Tribute Dr.Singh: ಡಾ.ಸಿಂಗ್ ಅವಧಿಯಲ್ಲಿ ಭಾರತ-ಅಮೆರಿಕ ನಡುವೆ ಅಣ್ವಸ್ತ್ರ ಒಪ್ಪಂದ
Tribute Dr.Singh: ಆರ್ಥಿಕ ಭಾಗ್ಯ ವಿಧಾತ…ಡಾ.ಮನಮೋಹನ್ ಸಿಂಗ್
Tribute Dr.Singh: ಡಾ.ಮನಮೋಹನ್ ಸಿಂಗ್ ಆಡಳಿತದ ಜನಪರ ಯೋಜನೆಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.