ಡೆಲ್ಟಾ ರೂಪಾಂತರಿಗಿಂತ ಅಪಾಯಕಾರಿ ಕೋವಿಡ್ ಹೊಸ ರೂಪಾಂತರಿ ಸಿ.1.2
ಸಿ.1.2 ಕೋವಿಡ್ ರೂಪಾಂತರಿ ಸೋಂಕಿನೆದುರು ಲಸಿಕೆಗಳು ವಿಫಲ : ಅಧ್ಯಯನ ವರದಿ
Team Udayavani, Aug 31, 2021, 12:28 PM IST
ಪ್ರಾತಿನಿಧಿಕ ಚಿತ್ರ
ನವ ದೆಹಲಿ : ದಕ್ಷಿಣ ಆಫ್ರಿಕಾ ಮತ್ತು ಇತರೆ ಕೆಲವು ದೇಶಗಳಲ್ಲಿ ಕೋವಿಡ್ ಸೊಂಕಿನ ಹೊಸ ರೂಪಾಂತರಿ ಆತಂಕ ಸೃಷ್ಟಿ ಮಾಡಿದೆ. ಲಸಿಕೆಗಳು ಕೂಡ ಈ ಸೋಂಕಿಗೆ ಪ್ರತಿಕಾಯ ಸೃಷ್ಟಿಸುವಲ್ಲಿ ವೈಫಲ್ಯ ಕಂಡಿದೆ ಎಂದು ಕೂಡ ಹೇಳಲಾಗುತ್ತಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ದಕ್ಷಿಣ ಆಫ್ರಿಕಾ ಮೂಲದ ನ್ಯಾಷನಲ್ ಇನ್ ಸ್ಟಿಟ್ಯೂಟ್ ಫಾರ್ ಕಮ್ಯುನಿಕೇಬಲ್ ಡಿಸೀಸಸ್ ಹಾಗೂ ಕ್ವಾಜುಲು ನ್ಯಾಟಲ್ ರಿಸರ್ಚ್ ಇನ್ನೋವೇಶನ್ ಮತ್ತು ಸೀಕ್ವೆನ್ಸಿಂಗ್ ಪ್ಲಾಟ್ ಫಾರ್ಮ್ ನ ವಿಜ್ಞಾನಿಗಳು, ಹೊಸ ರೂಪಾಂತರ/ವೇರಿಯಂಟ್ ಸಿ .1.2 ಕೋವಿಡ್ ಸೋಂಕನ್ನು ಈ ವರ್ಷದ ಮೇ ತಿಂಗಳಲ್ಲಿ ಮೊದಲು ಪತ್ತೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ತಮಿಳುನಾಡಿನ ಪುಂಡಪೋಕರಿಗಳು ಮೈಸೂರಿಗೆ ಬಂದು ಕ್ರೈಂ ಮಾಡುತ್ತಾರೆಂದರೆ ಏನರ್ಥ?: ಸೋಮಶೇಖರ್
ಅಂದಿನಿಂದ ಆಗಸ್ಟ್ 13 ರವರೆಗೆ, ಈ ರೂಪಾಂತರಿ ಸೋಂಕು ಚೀನಾ, ಕಾಂಗೋ, ಮಾರಿಷಸ್, ಇಂಗ್ಲೆಂಡ್, ನ್ಯೂಜಿಲ್ಯಾಂಡ್, ಪೋರ್ಚುಗಲ್ ಮತ್ತು ಸ್ವಿಟ್ಜರ್ ಲ್ಯಾಂಡ್ ನಲ್ಲಿ ಪತ್ತೆಯಾಗಿದೆ ಎಂದು ಕೂಡ ಅವರು ಹೇಳಿದ್ದಾರೆ.
ವಿದೇಶಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಈ ರೂಪಾಂತರಿ ಸೋಂಕು ಹೆಚ್ಚು ಹರಡುವ ಶಕ್ತಿಯನ್ನು ಹೊಂದಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ಕೋವಿಡ್ ನ ಮೊದಲ ಅಲೆಯಲ್ಲಿ ಕಾಣಿಸಿಕೊಂಡಿರುವ ಸೋಂಕಿನ ಉಪ ಪ್ರಕಾರದ ಸಿ .1.2 ಗೆ ರೂಪಾಂತರಿಸಲಾಗಿದೆ ಎಂದು ಹೇಳಲಾಗಿದೆ. ಇದನ್ನು ನೇಚರ್ ಆಫ್ ಇಂಟ್ರೆಸ್ಟ್ ಅಥವಾ ಸ್ವಭಾವದ ಆಸಕ್ತಿ ಎಂದು ವರ್ಗೀಕರಿಸಲಾಗಿದೆ.
ದಕ್ಷಿಣಾ ಆಫ್ರಿಕಾ ಒಳಗೊಂಡು ಕೆಲವು ದೇಶಗಳಲ್ಲಿ ಆತಂಕ ಸೃಷ್ಟಿ ಮಾಡಿದ ಈ ರೂಪಾಂತರಿ ಕೋವಿಡ್ ಸೋಂಕು, ಪ್ರತಿ ತಿಂಗಳು ಏರಿಕೆಯಾಗುತ್ತಿದೆ ಎಂದು ವರದಿಯಾಗುತ್ತಿದೆ.
ಅಲ್ಲಿ ಇತ್ತೀಚೆಗೆ ಒಂದು ಅಧ್ಯಯನ ನಡೆದಿದ್ದು, ಮೇ ತಿಂಗಳಲ್ಲಿ ಶೇಕಡಾ 0.2 ರಿಂದ ಜೂನ್ ನಲ್ಲಿ ಶೇಕಡಾ 1.6 ಕ್ಕೆ ಹೆಚ್ಚಳವಾಗಿದೆ. ಹಾಗೂ ಜುಲೈ ನಲ್ಲಿ ಶೇಕಡಾ 2ಕ್ಕೆ ತಲುಪಿದೆ ಎಂದು ಸಂಶೋಧನಾ ವರದಿ ತಿಳಿಸಿರುವುದಾಗಿ ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
ಈ ಬಗ್ಗೆ ತಿಳಿಸಿದ ವಿಜ್ಞಾನಿ ಉಪಾಸನಾ ರೈ, ಈ ಸಿ .1.2 ಕೋವಿಡ್ ಸೋಂಕಿನ ರೂಪಾಂತರಿ ಸೋಂಕು ಉಳಿದೆಲ್ಲಾ ಕೋವಿಡ್ ಸೋಂಕಿನ ರೂಪಾಂತರಗಳ ಪರಿಣಾಮವಾಗಿದೆ. ಇದು ಪ್ರೋಟೀನ್ ನ ಹೆಚ್ಚಳದಿಂದಾಗಿ ಮೂಲ ವೈರಸ್ ಗಿಂತ ಭಿನ್ನವಾಗಿದೆ ಎಂದು ಹೇಳಿದ್ದಾರೆ.
ಫಾಸ್ಟ್ ಸ್ಪ್ರಡರ್ ಸಿ .1.2 ಕೋವಿಡ್ ರೂಪಾಂತರಿ :
ಈ ಕುರಿತಾಗಿ ಮಾಹಿತಿ ನೀಡಿದ ಕೋಲ್ಕತ್ತಾದ ಸಿ ಎಸ್ ಐ ಆರ್ ನ ವಿಜ್ಞಾನಿ ರೈ, ಕೋವಿಡ್ ಸೋಂಕಿನ ಈ ರೂಪಾಂತರಿ ಅತ್ಯಂತ ವೇಗವಾಗಿ ಹರಡುವ ಸಾಮರ್ಥ್ಯವನ್ನು ಹೊಂದಿದೆ. ಹಬ್ಬುವುದಕ್ಕೆ ಆರಂಭಿಸಿದರೇ ಅದು ಇಡೀ ಜಗತ್ತಿನಾದ್ಯಂತ ಹರಡಬಹುದು. ಹಾಗೂ ಈ ಕಾರಣದಿಂದ ಜಗತ್ತಿನೆಲ್ಲಡೆ ಲಸಿಕೆಯ ಸಮಸ್ಯೆ ಮತ್ತೆ ಕಾಣಿಸಿಕೊಳ್ಳಬಹುದು ಎಂದು ಹೇಳಿದ್ದಾರೆ.
ಇದನ್ನೂ ಓದಿ : ಕಾಬೂಲ್ ತೊರೆದ ಅಮೆರಿಕ ಸೇನಾ ಪಡೆ : ಗಾಳಿಯಲ್ಲಿ ಗುಂಡು ಹಾರಿಸಿ ತಾಲಿಬಾನಿಗಳ ಸಂಭ್ರಮ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BGT: ವಿರಾಟ್ ಬಗ್ಗೆ ಆಸೀಸ್ ಜನರಿಗೆ ಯಾಕಿಷ್ಟು ಕುತೂಹಲ; ಇದು ಕಿಂಗ್ ಸಾಮ್ರಾಜ್ಯದ ಕಥೆ
AIADMK-BJP ಮರು ಮೈತ್ರಿ ಸುದ್ದಿ: ನಿರ್ಧಾರ ಬದಲಿಸುವರೇ ಪಳನಿಸ್ವಾಮಿ?
Recipe: ಚಟ್ ಪಟ್ ಅಂತ ಮಾಡಿ ಪನೀರ್ ಪಕೋಡಾ…
Coconut Oil: ತ್ವಚೆಗೆ ತೆಂಗಿನ ಎಣ್ಣೆ ಹಚ್ಚುವುದರಿಂದಾಗುವ ಉಪಯೋಗಗಳ ಬಗ್ಗೆ ತಿಳಿಯಿರಿ
Box Office: ದೀಪಾವಳಿಗೆ ರಿಲೀಸ್ ಆದ 8 ಸಿನಿಮಾಗಳಲ್ಲಿ ಗೆದ್ದವರು ಯಾರು? ಸೋತವರು ಯಾರು?
MUST WATCH
ಹೊಸ ಸೇರ್ಪಡೆ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ
Kinnigoli: ಪಕ್ಷಿಕೆರೆ; ಕೊಲೆ ಪ್ರಕರಣ ಮತ್ತಷ್ಟು ಸಂಗತಿಗಳು ಬೆಳಕಿಗೆ?
Media powerhouse: ರಿಲಯನ್ಸ್- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.