ಪ್ರಜ್ಞಾವಿಹೀನ ಮನಸ್ಥಿತಿ ಅಕ್ಷಮ್ಯ
Team Udayavani, Feb 23, 2022, 2:05 PM IST
ನ್ಯಾಯಾಂಗ ಭಾರತದ ಅತ್ಯಂತ ಕ್ರಿಯಾಶೀಲ ವಿಭಾಗ. ಶಾಸಕಾಂಗ, ಕಾರ್ಯಂಗಗಳು ತಮ್ಮ ಜವಾಬ್ದಾರಿ ಮರೆತಾಗ ಎಚ್ಚರಿಸುತ್ತಾ, ಸಾಮಾಜಿಕ ಅಸಮಾನತೆಗಳಿಗೆ, ಅನ್ಯಾಯಗಳಿಂದ ಬಸವಳಿದ ಜನರ ಕೊನೆಯ ಆಯ್ಕೆ ನ್ಯಾಯಲಯವೇ ಆಗಿರುತ್ತದೆ. ಹೀಗಾಗಿ ಇಂದಿಗೂ ನ್ಯಾಯಾಂಗ ತನ್ನ ಅದಮ್ಯ ವಿಶ್ವಾಸಾರ್ಹತೆಯನ್ನು ಕಾಪಾಡಿಕೊಂಡು ಬಂದಿದೆ. ಕ್ಲಿಷ್ಟಾನುಕ್ಲಿಷ್ಟ ಪ್ರಕರಣಗಳನ್ನು, ವಿವಾದಗಳನ್ನು ಸುಖಾಂತ್ಯಗೊಳಿಸಿ ನ್ಯಾಯಬದ್ಧ, ಕಾನೂನುಬದ್ಧ ತೀರ್ಪುಗಳನ್ನು ನೀಡಿದ ಹೆಗ್ಗಳಿಕೆಯ ಇತಿಹಾಸ ಭಾರತೀಯ ನ್ಯಾಯವ್ಯವಸ್ಥೆಗಿದೆ.
ಹೀಗಾಗಿ ಯಾವುದೇ ಸಂಧರ್ಭದಲ್ಲಿ ಅನ್ಯಾಯಗಳಾದ ಸಂಧರ್ಭ ನ್ಯಾಯಕ್ಕಾಗಿ ನ್ಯಾಯಾಲಯದ ಕದ ತಟ್ಟಿರುವವರ ವಾದದಲ್ಲಿ ಸತ್ಯ, ಪ್ರಾಮಾಣಿಕತೆಗಳಿದ್ದರೆ, ಸಂವಿಧಾನಾತ್ಮಕ ಅಂಶಗಳಿದ್ದರೆ, ವಾದಕ್ಕೆ ಪುಷ್ಟಿ ನೀಡಬಲ್ಲ ದಾಖಲೆ ಅಥವಾ ಪುರಾವೆ ಮಾದರಿಗಳಿದ್ದರೆ ಅಗತ್ಯವಾಗಿ ನ್ಯಾಯಾಂಗದ ಮೇಲೆ ವಿಶ್ವಾಸವನ್ನಿಟ್ಟು ನ್ಯಾಯಬದ್ಧ ತೀರ್ಪಿಗಾಗಿ ನಿರೀಕ್ಷಿಸುವುದು ಪ್ರಬುದ್ಧತೆ.
ಕಳೆದ ಕೆಲ ದಿನಗಳಿಂದ ರಾಜ್ಯಾದ್ಯಂತ ವಿದ್ಯಾರ್ಥಿ ವಲಯದಲ್ಲಿ ಬುಗಿಲೆದ್ದಿರುವ ಅಸಹಿಷ್ಣುತೆಯ ಕಾವು ಕಾಡ್ಗಿಚ್ಚಿನಂತೆ ವ್ಯಾಪಿಸುತ್ತಿರುವುದು ಖೇದಕರ. ಭವಿಷ್ಯದ ಸದೃಢ ಸಮಾಜದ ನಿರ್ಮಾತೃಗಳಾಗಬೇಕಾದ ಯುವ ಸಮುದಾಯ ತಮ್ಮ ನಡುವೆಯೇ ದ್ವೇಷ, ಅಸಹಿಷ್ಣುತೆ, ಧರ್ಮಾಂಧತೆಯ ಕಂದಕವನ್ನು ಸೃಷ್ಟಿಸಿಕೊಳ್ಳುತ್ತಿರುವುದು ನಿಜಕ್ಕೂ ದೊಡ್ಡ ದುರಂತವೇ ಸರಿ.
ಸಹಬಾಳ್ವೆ, ಬ್ರಾತೃತ್ವದ ಗುಣಗಳಿಂದ ಸಮಾಜಕ್ಕೆ ಅದರ್ಶವಾಗಬೇಕಿದ್ದ ವಿದ್ಯಾರ್ಥಿ ಸಮುದಾಯ ಅನಗತ್ಯ ಗಲಭೆಗಳಲ್ಲಿ ತೊಡಗಿಸಿಕೊಂಡು ನೈತಿಕ ಮತ್ತು ನಾಗರಿಕ ಪ್ರಜ್ಞೆಗಳನ್ನು ಮರೆಯುವುದು ಧನಾತ್ಮಕ ಬೆಳವಣಿಗೆಯಂತೂ ಖಂಡಿತಾ ಅಲ್ಲ. ವಿದ್ಯೆಯೇ ವಿನಯಕ್ಕೆ ಭೂಷಣವಾಗಬೇಕು. ಶಿಕ್ಷಣದ ತಳಹದಿಯ ಮೇಲೆ ಸಮಾಜ ನಿಲ್ಲುವುದು ಪ್ರಬುದ್ಧ ಸಮಾಜದ ಪರಿಕಲ್ಪನೆಯಲ್ಲಿ ಅಗತ್ಯ ವಿಚಾರ.
ಮಾನವತೆಯ ಮಹಾನತೆಯನ್ನು ಜಗತ್ತಿಗೇ ಕಲಿಸಿಕೊಟ್ಟ ಪ್ರಬುದ್ಧ ಭಾರತೀಯ ಸಂಸ್ಕೃತಿ ನಮ್ಮದು. ಶತಮಾನಗಳಿಂದ ಧಾರ್ಮಿಕ-ಅಧ್ಯಾತ್ಮಿಕ-ಸಾಂಸ್ಕೃತಿಕ ಅಸ್ಮಿತೆಯ ತಳಹದಿಯ ಮೇಲೆ ರೂಪಿತಗೊಂಡ ಸಮಾಜ ನಮ್ಮದು. ಸತ್ಯ-ನ್ಯಾಯ-ಬ್ರಾತೃತ್ವದ ಚಿಂತನೆಗಳ ಆಧಾರದಲ್ಲಿ ಹದಗೊಂಡ ಎಲ್ಲರನ್ನೂ ಒಳಗೊಳ್ಳುವ “ವಸುದೈವ ಕುಟುಂಬಕಂ” ಎಂಬ ಉದಾತ್ತ ಔದಾರ್ಯವನ್ನು ಜೀವಿಸುವ ನಾಡಿದು. ಭಾರತದ ಪ್ರತಿಯೊಂದು ಧರ್ಮವೂ ಮತ್ತೊಂದು ಧರ್ಮವನ್ನು ಗೌರವಿಸುವ, ಆಧಾರಿಸು ಎಂಬ ಸೌಹಾರ್ದದ ಆಶಯಗಳನ್ನೇ ಒಳಗೊಂಡಿದೆ. ಹೀಗಿರುವಾಗ ಪರ್ಕ್ತಿಯೋರ್ವ ನಾಗರಿಕನ ಭರವಸೆ, ಅಶೋತ್ತರಗಳ ಪ್ರತೀಕವಾಗಿರುವ ಭಾರತೀಯ ಸಂವಿಧಾನವೂ ಇದೇ ಅಶಯಗಳನ್ನೇ ಧ್ವನಿಸುತ್ತದೆ.
ಹೀಗಿದ್ದಾಗ ಭವಿಷ್ಯದಲ್ಲಿ ದೇಶಕ್ಕೆ ಸಂಪನ್ಮೂಲವಾಗಬೇಕಾದ ಉತ್ಸಾಹ-ಶಕ್ತಿ-ಸಾಮರ್ಥ್ಯಗಳು ಅನಗತ್ಯವಾಗಿ ವ್ಯಯವಾಗಿ ವ್ಯರ್ಥವಾಗುತ್ತಿರುವುದು ದುರದೃಷ್ಟಕರ. ವಿದ್ಯಾರ್ಥಿ ಶಕ್ತಿ ದೇಶದ ಅಸಲೀ ಶಕ್ತಿಯ ಪ್ರತಿರೂಪ ಎಂಬುದು ಅಕ್ಷರಶಃ ಸತ್ಯ ವಿಚಾರ. ಯುವ ಸಮುದಾಯ ಭವಿಷ್ಯದ ಭಾರತವನ್ನು ಕಟ್ಟಿ ಬೆಳೆಸುವ ಗುರುತರ ಜವಾಬ್ದಾರಿಯನ್ನು ಹೊತ್ತಿದೆ. ಸಹನೆಯ ಕಟ್ಟೆಯೊಡೆದಾಗ ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಮತ್ತು ಅಸಮಾನತೆಗಳನ್ನು ಪ್ರತಿಭಟಿಸುವ ಹಕ್ಕು ವಿದ್ಯಾರ್ಥಿಗಳ ಸಹಿತ ಪ್ರತಿಯೋರ್ವ ಭಾರತೀಯ ನಾಗರಿಕನದ್ದು ಎಂಬುದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ.
ಅಸಮಾನತೆ, ಅನ್ಯಾಯಗಳನ್ನು ಖಂಡಿಸಿ ವಿದ್ಯಾರ್ಥಿ ಸಮೂಹ ಬೀದಿಗಿಳಿದ ಪ್ರತೀ ಸಂಧರ್ಭದಲ್ಲಿಯೂ ದೇಶದಲ್ಲಿ ಯಶಸ್ವೀ ಬದಲಾವಣೆಗಳಾದ ಅನೇಕ ನಿದರ್ಶನಗಳು ಕಾಣಸಿಗುತ್ತವೆ. ಆದ್ರೆ ಆ ಶಕ್ತಿಯ ಉಪಯೋಗ ಯಾವ ಹಿತಾಸಕ್ತಿಗಾಗಿ ಆಗುತ್ತಿದೆ ಎಂಬುದರ ಅರಿವು ಇಲ್ಲಿ ನಿರ್ಣಾಯಕ. ಪ್ರಸ್ತುತ ರಾಜ್ಯದಲ್ಲಿ ಘಟಿಸುತ್ತಿರುವ ವರ್ತಮಾನಗಳ ತಾತ್ಪರ್ಯವನ್ನು ಸೂಕ್ಷ್ಮವಾಗಿ ಗ್ರಹಿಸಿದಾಗ ಭವಿಷ್ಯದ ಘೋರ ದಿನಗಳ ಕ್ಷಣಗಣನೆ ಆರಂಭವೆಂದೇ ಭಾಸವಾಗುತ್ತಿದೆ. ಕೆಲವೇ ಕೆಲವು ಕ್ಷುಲ್ಲಕ ಮತಾಂಧ ಮನಸ್ಥಿತಿಗಳ ಮತಾಂಧತೆ ಮತ್ತು ರಾಜಕೀಯ ಹಿತಾಸಕ್ತಿಗಳಿಗಾಗಿ ವಿದ್ಯಾರ್ಥಿ ಸಮುದಾಯವನ್ನು ಬಲಿಪಶುಗಳನ್ನಾಗಿಸುವುದು ಅಕ್ಷಮ್ಯ.
ಒಟ್ಟಿನಲ್ಲಿ ಪರಿಸ್ಥಿತಿಯ ಗಂಭೀರತೆಯನ್ನು ಅರಿತುಕೊಂಡು ನ್ಯಾಯಾಲಯದ ನಿರ್ದೇಶನಗಳನ್ನು ಪಾಲಿಸುವುದು ಎಲ್ಲ ನಾಗರಿಕರ ಜವಾಬ್ದಾರಿ. ಸಮಾಜದ ಹಿತಕ್ಕಾಗಿ, ಧರ್ಮ ಸೌಹಾರ್ದತೆಯನ್ನು ಕದಡದಂತೆ ಕಾಪಾಡುವ ನಿಟ್ಟಿನಲ್ಲಿ ಕನಿಷ್ಠ ಪ್ರಜ್ಞೆ ಅತ್ಯಗತ್ಯ.
– ಶಂತನು.ಕೆ
ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ, ಉಜಿರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BGT: ವಿರಾಟ್ ಬಗ್ಗೆ ಆಸೀಸ್ ಜನರಿಗೆ ಯಾಕಿಷ್ಟು ಕುತೂಹಲ; ಇದು ಕಿಂಗ್ ಸಾಮ್ರಾಜ್ಯದ ಕಥೆ
AIADMK-BJP ಮರು ಮೈತ್ರಿ ಸುದ್ದಿ: ನಿರ್ಧಾರ ಬದಲಿಸುವರೇ ಪಳನಿಸ್ವಾಮಿ?
Recipe: ಚಟ್ ಪಟ್ ಅಂತ ಮಾಡಿ ಪನೀರ್ ಪಕೋಡಾ…
Coconut Oil: ತ್ವಚೆಗೆ ತೆಂಗಿನ ಎಣ್ಣೆ ಹಚ್ಚುವುದರಿಂದಾಗುವ ಉಪಯೋಗಗಳ ಬಗ್ಗೆ ತಿಳಿಯಿರಿ
Box Office: ದೀಪಾವಳಿಗೆ ರಿಲೀಸ್ ಆದ 8 ಸಿನಿಮಾಗಳಲ್ಲಿ ಗೆದ್ದವರು ಯಾರು? ಸೋತವರು ಯಾರು?
MUST WATCH
ಹೊಸ ಸೇರ್ಪಡೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.