ಕ್ರೋನ್ಸ್ ಖಾಯಿಲೆ ಬಗ್ಗೆ ಗೊತ್ತೇ; ಇದರ ಲಕ್ಷಣವೇನು?
ಈ ಕಾಯಿಲೆ ಬರಲು ಇಂಥದ್ದೇ ಕಾರಣ ಎಂಬುದು ಇನ್ನೂ ಸ್ಪಷ್ಟವಾಗಿ ತಿಳಿದಿಲ್ಲ.
Team Udayavani, Sep 25, 2021, 2:20 PM IST
ಇದಾವುದು ಹೊಸ ಕಾಯಿಲೆ ಎಂದು ಯೋಚಿಸುತ್ತಿದ್ದೀರಾ ? ಹಾಗಾದರೆ ಇದರ ಬಗ್ಗೆ ತಿಳಿದುಕೊಳ್ಳಲೇಬೇಕು. ಇದು ಕರುಳಿಗೆ ಸಂಬಂಧಪಟ್ಟ ಸೋಂಕು. ಅಮೆರಿಕದಲ್ಲಿ ಲಕ್ಷಕ್ಕೂ ಹೆಚ್ಚು ಮಂದಿ ಇದರಿಂದಲೇ ಬಳಲುತ್ತಿದ್ದಾರೆ.
ಕ್ರೋನ್ಸ್ ಕುರಿತು ಇನ್ನೂ ಹಲವು ಸಂಶೋಧನೆ ನಡೆಯುತ್ತಿದೆ. ಹಾಗಾಗಿ ಇನ್ನಷ್ಟು ಸಮಗ್ರ ಮಾಹಿತಿ ಲಭ್ಯವಾಗಬೇಕಿದೆ. ಸದ್ಯ ಲಭ್ಯವಿರುವ ಮಾಹಿತಿಯಂತೆ ಈ ಸೋಂಕು ಗಂಟಲಿನಿಂದ ಹಿಡಿದು ಗುದದ್ವಾರದವರೆಗಿನ ಯಾವ ಭಾಗದಲ್ಲೂ ಕಾಣಿಸಿಕೊಳ್ಳಬಹುದು. ಸಣ್ಣ ಕರುಳಿನಲ್ಲಿ ಕಂಡು ಬರುವುದು ಹೆಚ್ಚು ಎನ್ನುತ್ತವೆ ಇದುವರೆಗಿನ ಸಂಶೋಧನೆಗಳು. ಈ ಸೋಂಕು ಒಮ್ಮೆ ತಗುಲಿದ ಮೇಲೆ ನಿಧಾನವಾಗಿ ನಮ್ಮ ನರಗಳು ದುರ್ಬಲಗೊಳ್ಳುತ್ತಾ ಹೋಗುತ್ತವೆ.
ಈ ಕಾಯಿಲೆ ಬರಲು ಇಂಥದ್ದೇ ಕಾರಣ ಎಂಬುದು ಇನ್ನೂ ಸ್ಪಷ್ಟವಾಗಿ ತಿಳಿದಿಲ್ಲ. ಆದರೂ ನಮ್ಮ ಸುತ್ತಮುತ್ತಲಿನ ಪರಿಸರ ಮತ್ತು ನಮ್ಮ ರೋಗ ನಿರೋಧಕ ಶಕ್ತಿಯ ಸಾಮರ್ಥ್ಯ ಹಾಗೂ ವಂಶವಾಹಿನಿಗಳು ಈ ಕಾಯಿಲೆಗೆ ಕಾರಣವಾಗಬಹುದಂತೆ.
ಯಾವ ರೀತಿಯ ಲಕ್ಷಣ?
ಇತ್ತೀಚಿನ ಒಂದು ಅಧ್ಯಯನದ ಪ್ರಕಾರ ಧೂಮಪಾನ ಮಾಡುವವರಲ್ಲಿ ಈ ಸೋಂಕಿನ ಸಾಧ್ಯತೆ ಹೆಚ್ಚಂತೆ. ಇನ್ನೂ ಇದಕ್ಕೆ ಮದ್ದಿಲ್ಲ. ತೀವ್ರ ಜ್ವರ, ಅತಿಸಾರ, ಹೊಟ್ಟೆ ಸೆಳೆತ, ಮೂತ್ರ ವಿಸರ್ಜನೆಯ ಸಂದರ್ಭ ರಕ್ತ ಬರುವುದು, ಹಸಿವಿಲ್ಲದಿರುವುದು, ತೂಕದಲ್ಲಿ ನಷ್ಟವಾಗುವುದು, ಅಲರ್ಜಿ-ಹೀಗೆ ಹಲವು ಲಕ್ಷಣಗಳು. ಇಂಥ ಲಕ್ಷಣಗಳನ್ನು ಲಘುವಾಗಿ ಭಾವಿಸದೇ ಕೂಡಲೇ ವೈದ್ಯರನ್ನು ಭೇಟಿ ಮಾಡಬೇಕು. ಇಲ್ಲವಾದರೆ ಶ್ವಾಸಕೋಶ ಮತ್ತು ಕರುಳಿನ ಆರೋಗ್ಯಕ್ಕೆ ಧಕ್ಕೆಯಾಗಬಹುದು.
-ಪ್ರೀತಿ ಭಟ್ ಗುಣವಂತೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Deve Gowda; ನನಗೀಗ ವಯಸ್ಸು 92.. ಮೊಮ್ಮಗ ಗೆದ್ದ ನಂತರ ಮನೆಯಲ್ಲಿ ಮಲಗುವುದಿಲ್ಲ..
BGT Series: ಚೇತೇಶ್ವರ ಪೂಜಾರ ಅಂದು ತಿಂದ ಪೆಟ್ಟಿನ ನೋವು ಭಾರತೀಯರು ಮರೆಯುವುದುಂಟೇ?
Donald Trump Salary: ಅಮೆರಿಕದ ಅಧ್ಯಕ್ಷರಿಗೆ ಸಿಗುವ ಸಂಬಳ ಎಷ್ಟು? ಏನೇನು ಸೌಲಭ್ಯಗಳಿವೆ
Trump: ಗುಜರಾತ್ ಮೂಲದ ಪಟೇಲ್ CIA ನೂತನ ನಿರ್ದೇಶಕ: ಡೊನಾಲ್ಡ್ ಟ್ರಂಪ್ ಒಲವು
Maharashtra Polls; ಹರಿಯಾಣದಂತೆ ಬಂಡಾಯ ಸ್ಪರ್ಧಿಗಳು ಲೆಕ್ಕಾಚಾರ ತಲೆಕೆಳಗಾಗಿಸುತ್ತಾರೆಯೇ?
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.