Dal Kichdi Recipe ಒಮ್ಮೆ ಈ ರೀತಿ ಟ್ರೈ ಮಾಡಿ ನೋಡಿ…
ಯಾವ ಹೊತ್ತಿನಲ್ಲಿ ಬೇಕಾದರೂ ಸವಿಯಬಹುದಾದ ರೆಸಿಪಿ ಹುಡುಕುತ್ತಿದ್ದೀರಾ
ಶ್ರೀರಾಮ್ ನಾಯಕ್, Jun 18, 2023, 9:30 AM IST
![Dal Kichdi Recipe ಒಮ್ಮೆ ಈ ರೀತಿ ಟ್ರೈ ಮಾಡಿ ನೋಡಿ](https://www.udayavani.com/wp-content/uploads/2023/06/DAL-1-620x440.jpg)
![Dal Kichdi Recipe ಒಮ್ಮೆ ಈ ರೀತಿ ಟ್ರೈ ಮಾಡಿ ನೋಡಿ](https://www.udayavani.com/wp-content/uploads/2023/06/DAL-1-620x440.jpg)
ಬೆಳಗ್ಗೆ, ಸಾಯಂಕಾಲ ಯಾವ ಹೊತ್ತಿನಲ್ಲಿ ಬೇಕಾದರೂ ಸವಿಯಬಹುದಾದ ರೆಸಿಪಿ ಹುಡುಕುತ್ತಿದ್ದೀರಾ! ಹಾಗಾದರೆ ಇಲ್ಲೊಂದು ರೆಸಿಪಿ ಇದೆ ಬಹಳ ರುಚಿಕರ ಹಾಗೂ ಆರೋಗ್ಯಕ್ಕೂ ಒಳ್ಳೆಯದು ಅದುವೇ “ದಾಲ್ ಕಿಚಡಿ“.
ಇದು ಹೆಸರುಬೇಳೆಯಿಂದ ಮಾಡುವ ರೆಸಿಪಿಯಾಗಿದ್ದು, ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು ಯಾಕೆಂದರೆ ಹೆಸರುಬೇಳೆಯಲ್ಲಿ ಪ್ರೋಟೀನ್, ಕಬ್ಬಿಣಾಂಶ ಮತ್ತು ಪೊಟ್ಯಾಷಿಯಂ ಸಮೃದ್ಧವಾಗಿದ್ದು ಪೌಷ್ಟಿಕಾಂಶಯುಕ್ತ ಆಹಾರವಾಗಿದೆ. ಇದು ಸುಲಭವಾಗಿ ಜೀರ್ಣವಾಗುತ್ತದೆ ಇದರಿಂದ ಮಕ್ಕಳಿಗಂತೂ ತುಂಬಾನೇ ಒಳ್ಳೆಯದು.
ಹಾಗಾದರೆ ಬನ್ನಿ ಸುಲಭವಾಗಿ ತಯಾರಿಸಬಹುದಾದ “ದಾಲ್ ಕಿಚಡಿ” ಮಾಡುವ ವಿಧಾನವನ್ನು ತಿಳಿಯೋಣ…
ಬೇಕಾಗುವ ಸಾಮಗ್ರಿಗಳು
ಹೆಸರುಬೇಳೆ-ಅರ್ಧ ಕಪ್, ಬೆಳ್ತಿಗೆ ಅಕ್ಕಿ-1ಕಪ್, ಜೀರಿಗೆ-1ಚಮಚ, ಪೆಪ್ಪರ್ ಪುಡಿ-ಸ್ವಲ್ಪ, ಅರಿಶಿನ ಪುಡಿ-1ಚಮಚ, ಈರುಳ್ಳಿ-2, ಒಣಮೆಣಸು-3, ಗರಂ ಮಸಾಲ-ಸ್ವಲ್ಪ, ಕೊತ್ತಂಬರಿ ಸೊಪ್ಪು-ಸ್ವಲ್ಪ, ಟೊಮೆಟೋ-1, ಶುಂಠಿ-ಬೆಳ್ಳುಳ್ಳಿ ಪೇಸ್ಟ್- 2ಚಮಚ, ತುಪ್ಪ-3ಚಮಚ, ಗೋಡಂಬಿ-ಸ್ವಲ್ಪ, ಕರಿಬೇವು,ರುಚಿಗೆ ತಕ್ಕಷ್ಟು ಉಪ್ಪು.
ತಯಾರಿಸುವ ವಿಧಾನ
ಮೊದಲಿಗೆ ಅಕ್ಕಿ ಹಾಗೂ ಹೆಸರುಬೇಳೆಯನ್ನು ಚೆನ್ನಾಗಿ ನೀರಿನಲ್ಲಿ ತೊಳೆದು ಕುಕ್ಕರ್ ಗೆ ಹಾಕಿ ,ಅರಿಶಿನ ಪುಡಿ, ಸ್ವಲ್ಪ ತುಪ್ಪ , ರುಚಿಗೆ ತಕ್ಕಷ್ಟು ಉಪ್ಪು ನೀರನ್ನು ಸೇರಿಸಿ ಬೇಯಿಸಿ ಇಟ್ಟುಕೊಳ್ಳಿ. ನಂತರ ಒಂದು ಬಾಣಲೆಗೆ ತುಪ್ಪ , ಜೀರಿಗೆ ,ಒಣಮೆಣಸು, ಕರಿಬೇವು, ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿ ಸ್ವಲ್ಪ ಹೊತ್ತು ಹುರಿಯಿರಿ ಆಮೇಲೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಗೋಡಂಬಿ, ಟೊಮೆಟೋ ಸೇರಿಸಿ ಪುನಃ ಹುರಿಯಿರಿ. ತದನಂತರ ಮೆಣಸಿನ ಪುಡಿ, ಗರಂ ಮಸಾಲ ಮತ್ತು ಪೆಪ್ಪರ್ ಪುಡಿ ಸೇರಿಸಿರಿ. ನಂತರ ಬೇಯಿಸಿಟ್ಟ ಅಕ್ಕಿ-ಹೆಸರುಬೇಳೆಯನ್ನು ಹಾಕಿ ಸ್ವಲ್ಪ ನೀರನ್ನು ಸೇರಿಸಿ ಅದಕ್ಕೆ ಕೊತ್ತಂಬರಿ ಸೊಪ್ಪು ಹಾಕಿದರೆ ರುಚಿಕರವಾದ ದಾಲ್ ಕಿಚಡಿ ಸವಿಯಲು ಸಿದ್ಧ.
-ಶ್ರೀರಾಮ್ ಜಿ ನಾಯಕ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![1](https://www.udayavani.com/wp-content/uploads/2025/02/1-24-150x90.jpg)
![1](https://www.udayavani.com/wp-content/uploads/2025/02/1-24-150x90.jpg)
ಬಚ್ಚನ್, ಮೋಹನ್‌ಲಾಲ್ ನಂತಹ 20 ಸ್ಟಾರ್ಸ್‌ಗಳಿದ್ದರೂ ಅತ್ಯಂತ ಹೀನಾಯವಾಗಿ ಸೋತ ಸಿನಿಮಾವಿದು..
![ಹದಿ ಹರೆಯದ ಪ್ರೀತಿಗಿರಲಿ ಒಂದು ಎಲ್ಲೇ: ರಾಧಾಕೃಷ್ಣರ ನಿಷ್ಕಾಮ ಪ್ರೀತಿಯೇ ಸಾಕ್ಷಿ…](https://www.udayavani.com/wp-content/uploads/2025/02/Love1-150x99.jpg)
![ಹದಿ ಹರೆಯದ ಪ್ರೀತಿಗಿರಲಿ ಒಂದು ಎಲ್ಲೇ: ರಾಧಾಕೃಷ್ಣರ ನಿಷ್ಕಾಮ ಪ್ರೀತಿಯೇ ಸಾಕ್ಷಿ…](https://www.udayavani.com/wp-content/uploads/2025/02/Love1-150x99.jpg)
ಹದಿ ಹರೆಯದ ಪ್ರೀತಿಗಿರಲಿ ಒಂದು ಎಲ್ಲೇ: ರಾಧಾಕೃಷ್ಣರ ನಿಷ್ಕಾಮ ಪ್ರೀತಿಯೇ ಸಾಕ್ಷಿ…
![Rajat: 3 ವರ್ಷದ ಹಿಂದೆ ಅನ್ ಸೋಲ್ಡ್.. ಈಗ ಆರ್‌ಸಿಬಿ ನಾಯಕ: ರಜತ್ ಕ್ರಿಕೆಟ್ ಪಯಣವೇ ರೋಚಕ](https://www.udayavani.com/wp-content/uploads/2025/02/rajat-patidar-150x84.jpg)
![Rajat: 3 ವರ್ಷದ ಹಿಂದೆ ಅನ್ ಸೋಲ್ಡ್.. ಈಗ ಆರ್‌ಸಿಬಿ ನಾಯಕ: ರಜತ್ ಕ್ರಿಕೆಟ್ ಪಯಣವೇ ರೋಚಕ](https://www.udayavani.com/wp-content/uploads/2025/02/rajat-patidar-150x84.jpg)
Rajat: 3 ವರ್ಷದ ಹಿಂದೆ ಅನ್ ಸೋಲ್ಡ್.. ಈಗ ಆರ್‌ಸಿಬಿ ನಾಯಕ: ರಜತ್ ಕ್ರಿಕೆಟ್ ಪಯಣವೇ ರೋಚಕ
![ಚಿಪ್ಪು ಹಂದಿ (ಪ್ಯಾಂಗೋಲಿನ್)ಯ ಕಳ್ಳಸಾಗಣೆ, ಬೇಟೆ ಹಿಂದಿದೆ ಬೃಹತ್ ಮಾಫಿಯಾ!](https://www.udayavani.com/wp-content/uploads/2025/02/Animal1-150x79.jpg)
![ಚಿಪ್ಪು ಹಂದಿ (ಪ್ಯಾಂಗೋಲಿನ್)ಯ ಕಳ್ಳಸಾಗಣೆ, ಬೇಟೆ ಹಿಂದಿದೆ ಬೃಹತ್ ಮಾಫಿಯಾ!](https://www.udayavani.com/wp-content/uploads/2025/02/Animal1-150x79.jpg)
ಅಳಿವಿನಂಚಿನ ಚಿಪ್ಪು ಹಂದಿ (ಪ್ಯಾಂಗೋಲಿನ್)ಯ ಕಳ್ಳಸಾಗಣೆ, ಬೇಟೆ ಹಿಂದಿದೆ ಬೃಹತ್ ಮಾಫಿಯಾ!
![Birds Mystery: ಭಾರತದಲ್ಲೊಂದು ಪಕ್ಷಿಗಳು ಆತ್ಮಹ*ತ್ಯೆ ಮಾಡಿಕೊಳ್ಳುವ ನಿಗೂಢ ಸ್ಥಳ!](https://www.udayavani.com/wp-content/uploads/2025/02/s-2-150x110.jpg)
![Birds Mystery: ಭಾರತದಲ್ಲೊಂದು ಪಕ್ಷಿಗಳು ಆತ್ಮಹ*ತ್ಯೆ ಮಾಡಿಕೊಳ್ಳುವ ನಿಗೂಢ ಸ್ಥಳ!](https://www.udayavani.com/wp-content/uploads/2025/02/s-2-150x110.jpg)
Birds Mystery: ಭಾರತದಲ್ಲೊಂದು ಪಕ್ಷಿಗಳು ಆತ್ಮಹ*ತ್ಯೆ ಮಾಡಿಕೊಳ್ಳುವ ನಿಗೂಢ ಸ್ಥಳ!