Delhi Election; ಅಧಿಕಾರ ಉಳಿಸಿಕೊಳ್ಳುವರೋ? ಪಡೆದುಕೊಳ್ಳುವರೋ?

ಗ್ಯಾರಂಟಿ ನಂಬಿರುವ ಕಾಂಗ್ರೆಸ್ ಈ ಬಾರಿ ಖಾತೆ ತೆರೆಯುವುದೇ? 'ಸನಾತನ ಸೇವಾ ಸಮಿತಿ' ಲಾಭ ಮಾಡಿಕೊಡುವುದೇ?

ವಿಷ್ಣುದಾಸ್ ಪಾಟೀಲ್, Jan 8, 2025, 4:17 PM IST

1-delhi

ಚುನಾವಣ ಆಯೋಗ ದೆಹಲಿ ವಿಧಾನಸಭಾ ಚುನಾವಣೆಯ ದಿನಾಂಕವನ್ನು ಪ್ರಕಟಿಸಿದ್ದು ಫೆಬ್ರವರಿ 5 ರಂದು ಮತದಾನ ನಡೆದರೆ, ಫೆ. 8 ರಂದು ಮತ ಎಣಿಕೆ ನಡೆಯಲಿದೆ. ಜಿದ್ದಾ ಜಿದ್ದಿನ ಕಣ ನಿರ್ಮಾಣಗೊಂಡಿದ್ದು ಶತಾಯಗತಾಯ ಆಮ್ ಆದ್ಮಿ ಪಕ್ಷದ ಕೈಯಿಂದ ಅಧಿಕಾರ ಕಸಿಯಲು ಬಿಜೆಪಿ ರಣತಂತ್ರಗಳನ್ನು ಹಣೆಯುತ್ತಿದೆ. ಇನ್ನೊಂದೆಡೆ ಮೂರನೇ ಬಾರಿಗೆ ಗೆದ್ದು ಅರವಿಂದ್ ಕೇಜ್ರಿವಾಲ್ ಅವರನ್ನು ಮತ್ತೆ ಮುಖ್ಯಮಂತ್ರಿ ಹುದ್ದೆಯಲ್ಲಿ ಕುಳ್ಳಿರಿಸಲು ಆಮ್ ಆದ್ಮಿ ಪಕ್ಷ ಹಠಕ್ಕೆ ಬಿದ್ದಿದೆ.

ಈ ಬಾರಿ ಬಿಜೆಪಿ ಮುಖ್ಯಮಂತ್ರಿ ಮುಖವನ್ನು ಘೋಷಿಸುವ ಧೈರ್ಯ ತೋರಿಲ್ಲ, ಅದರ ಹಿಂದೆ ಒಂದು ಮಟ್ಟಿಗಿನ ಆಂತರಿಕ ಭಿನ್ನಾಭಿಪ್ರಾಯಕ್ಕೆ ಕಾರಣವಾಗಬಹುದು ಎನ್ನುವ ಲೆಕ್ಕಾಚಾರವೂ ಇದೆ.

ಕಳೆದೆರಡು ಚುನಾವಣೆಯಲ್ಲಿ ಹೀನಾಯ ನಿರ್ವಹಣೆ ತೋರಿದ್ದ ಕಾಂಗ್ರೆಸ್ ಈ ಬಾರಿ ಖಾತೆ ತೆರೆಯುವುದೇ ಎನ್ನುವ ಪ್ರಶ್ನೆ ಮೂಡಿದೆ. ಈಗಾಗಲೇ ಹಲವು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿ ಗ್ಯಾರಂಟಿ ಘೋಷಿಸಿರುವ ಕೈ ಪಾಳಯ ಆಪ್ , ಬಿಜೆಪಿಯನ್ನು ಬಿಟ್ಟು ಜನರು ನಮಗೆ ಅಧಿಕಾರ ನೀಡಲಿದ್ದಾರೆ ಎನ್ನುವ ವಿಶ್ವಾಸ ಹೊರ ಹಾಕಿದೆ.

ಮಮತಾ ಬೆಂಬಲ
ದೆಹಲಿ ಚುನಾವಣೆಯಲ್ಲಿ ಆಮ್ ಆದ್ಮಿಗೆ ಟಿಎಂಸಿ ಬೆಂಬಲ ಘೋಷಿಸಿದೆ. ಮಮತಾ ಬ್ಯಾನರ್ಜಿ ಬೆಂಬಲ ಸೂಚಿಸಿದ್ದು, ಧನ್ಯವಾದ ಸಲ್ಲಿಸುವುದಾಗಿ ಕೇಜ್ರಿವಾಲ್ ಹೇಳಿದ್ದಾರೆ. ಇನ್ನೊಂದೆಡೆ ಮಾಯಾವತಿ ಅವರು ನಮ್ಮ ಬಿ ಎಸ್ ಪಿ ಪ್ರತ್ಯೇಕ ಸ್ಪರ್ಧೆ ಮಾಡಲಿದೆ ಎಂದಿದ್ದಾರೆ.

ಹಿಂದುತ್ವದ ವಿಚಾರ ಮುನ್ನೆಲೆಗೆ
ಹಿಂದುತ್ವ ಸಿದ್ದಾಂತ ಪ್ರತಿಪಾದಿಸುವ ಬಿಜೆಪಿಗೆ ಆಮ್ ಆದ್ಮಿ ಪಕ್ಷ ಸೆಡ್ಡು ಹೊಡೆದಿದೆ. ಮೃದು ಹಿಂದುತ್ವಕ್ಕೂ ಮೀರಿ ಹೇಳಿಕೆ ಮತ್ತು ಕಾರ್ಯಗಳನ್ನು ಮಾಡುತ್ತಿರುವ ಆಪ್ ”ನಮ್ಮಲ್ಲಿ ರಘುಕುಲದ ಸಂಪ್ರದಾಯವನ್ನು ಯಾವಾಗಲೂ ಅನುಸರಿಸಲಾಗಿದೆ, ಜೀವ ಹೋಗಬಹುದು ಆದರೆ ಭರವಸೆ ಹುಸಿಯಾಗಬಾರದು.ಸನಾತನ ಧರ್ಮ ಮತ್ತು ದೇವರ ಸೇವೆಯಲ್ಲಿ ಸದಾ ನಿರತರಾಗಿರುವವರನ್ನು ಗೌರವಿಸುವ ಮತ್ತು ಗೌರವಿಸುವ ಸೌಭಾಗ್ಯ ನಮ್ಮ ಪಕ್ಷಕ್ಕೆ ಇದೆ. ಸಂತರು ಮತ್ತು ಪುರೋಹಿತರಿಗೆ ಪ್ರತಿ ತಿಂಗಳು 18,000 ರೂ.ಗೌರವಧನ ನೀಡುವುದಾಗಿ ಘೋಷಣೆ ಮಾಡಿದ್ದು , ಅದನ್ನು ಅಧಿಕಾರಕ್ಕೆ ಬಂದ ಬಳಿಕ ಪೂರ್ಣಗೊಳಿಸುತ್ತೇವೆ’ ಎಂದು ಕೇಜ್ರಿವಾಲ್ ಹೇಳಿದ್ದಾರೆ.

ಕೇಜ್ರಿವಾಲ್ ‘ಸನಾತನ ಸೇವಾ ಸಮಿತಿ’ ಆರಂಭಿಸುತ್ತಿದ್ದಂತೆಯೇ ಹಲವಾರು ಬಿಜೆಪಿ ಕಾರ್ಯಕರ್ತರು ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ರಾಜಕೀಯ ಹೊಂದಾಣಿಕೆಗಳಲ್ಲಿ ಬದಲಾವಣೆಯನ್ನು ಸೂಚಿಸುವ ನಿಟ್ಟಿನಲ್ಲಿ, ಆಮ್ ಆದ್ಮಿ ಪಕ್ಷ ‘ಸನಾತನ ಸೇವಾ ಸಮಿತಿ’ ಪ್ರಾರಂಭಿಸಿದೆ. ಗಮನಾರ್ಹ ಸಂಖ್ಯೆಯ ಬಿಜೆಪಿಯ ಮಂದಿರ ಪ್ರಕೋಷ್ಠ ಸದಸ್ಯರು ಪಕ್ಷ ತೊರೆದಿದ್ದಾರೆ.

ಭಾರಿ ಭ್ರಷ್ಟಾಚಾರ ಆರೋಪ
ಆಮ್ ಆದ್ಮಿ ಪಕ್ಷದ ಹಲವು ನಾಯಕರು ಜೈಲು ಸೇರಿ ಬಂದಿರುವುದನ್ನೇ ಪ್ರಮುಖ ಚುನಾವಣ ಅಸ್ತ್ರ ಮಾಡಿಕೊಂಡಿರುವ ಬಿಜೆಪಿ ಇನ್ನೂ ಅದೇ ವಿಚಾರವನ್ನು ಮುಂದಿಟ್ಟುಕೊಂಡಿದೆ. 6 ಫ್ಲಾಗ್‌ಸ್ಟಾಫ್ ರಸ್ತೆಯಲ್ಲಿರುವ ಕೇಜ್ರಿವಾಲ್ ಅವರ ಬಂಗಲೆಯಲ್ಲಿ ‘ಚಿನ್ನದ ಕಮೋಡ್, ಈಜುಕೊಳ ಮತ್ತು ಮಿನಿ ಬಾರ್ ಇದೆ ಎಂದು ಬಿಜೆಪಿ ಆರೋಪ ಮಾಡಿದೆ. ಈ ವಿಚಾರದಲ್ಲೇ ಹೊಸ ಜಟಾಪಟಿ ಆರಂಭವಾಗಿದೆ.

ದೆಹಲಿ ಮುಖ್ಯಮಂತ್ರಿ ನಿವಾಸಕ್ಕೆ ಪ್ರವೇಶಿಸುವ ಪ್ರಯತ್ನದ ನಂತರ ಸೌರಭ್ ಭಾರದ್ವಾಜ್ ಅವರು ಇತರ ಆಪ್ ನಾಯಕರೊಂದಿಗೆ ಬುಧವಾರ(ಜ8) ಪ್ರಧಾನಿ ನಿವಾಸಕ್ಕೆ ಭೇಟಿ ನೀಡಿ ಬಿಜೆಪಿಗೆ ಸವಾಲಿನ ಕ್ಷಣ ಎದುರಿಟ್ಟರು. ಪ್ರಧಾನಿ ನಿವಾಸಕ್ಕೆ ಸಾರ್ವಜನಿಕ ಪ್ರವೇಶಕ್ಕೆ ಅವಕಾಶ ನೀಡಬೇಕೆಂದು ಒತ್ತಾಯಿಸಿದರು.ಆದರೆ ಅವರನ್ನು ತಡೆಯಲಾಗಿದೆ.

ಕೇಜ್ರಿವಾಲ್ ಗೆ ಪ್ರಬಲ ಸ್ಪರ್ಧಿಗಳು

ಆಪ್ ಎಲ್ಲಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ್ದು,ಬಿಜೆಪಿ 29 ಸ್ಥಾನಗಳಿಗೆ ಮಾತ್ರ ಅಭ್ಯರ್ಥಿಗಳನ್ನು ಹೆಸರಿಸಿದೆ. ಕಾಂಗ್ರೆಸ್ 48 ಸ್ಥಾನಗಳಿಗೆ ಸ್ಪರ್ಧಿಗಳನ್ನು ಘೋಷಿಸಿದ್ದು, ಈಗಾಗಲೇ ಕೆಲವು ಕ್ಷೇತ್ರಗಳ ಫಲಿತಾಂಶದ ಬಗ್ಗೆ ಸಾಕಷ್ಟು ಕುತೂಹಲ ಮೂಡಿಸಿದೆ. ಕೆಲವೆಡೆ ಲೆಕ್ಕಾಚಾರ ತಲೆಕೆಳಗಾಗುವ ಸಾಧ್ಯತೆಗಳೂ ಇದೆ.

ಪ್ರಮುಖವಾಗಿ ಅರವಿಂದ್ ಕೇಜ್ರಿವಾಲ್ ಅವರ ವಿರುದ್ಧ ಮಾಜಿ ಸಿಎಂ ಶೀಲಾ ದೀಕ್ಷಿತ್ ಅವರ ಪುತ್ರ ಸಂದೀಪ್ ಅವರನ್ನು ಕಣಕ್ಕಿಳಿಸಿದೆ, ಬಿಜೆಪಿ ಮಾಜಿ ಸಿಎಂ ಸಾಹಿಬ್ ಸಿಂಗ್ ವರ್ಮ ಅವರ ಪುತ್ರ ಯುವ ನಾಯಕ ಪರ್ವೇಶ್ ಅವರನ್ನು ಕಣಕ್ಕಿಳಿಸಿದೆ. ಸಂದೀಪ್ ಮತ್ತು ಪರ್ವೇಶ್ ಇಬ್ಬರೂ ಎರಡು ಬಾರಿ ಸಂಸತ್ತಿಗೆ ಚುನಾಯಿತರಾಗಿದ್ದಾರೆ. ಆದರೆ ನವದೆಹಲಿ ಕ್ಷೇತ್ರದಲ್ಲಿ ಚುನಾವಣ ಅನುಭವವನ್ನು ಹೊಂದಿಲ್ಲ. ಸಂದೀಪ್ 2004 ಮತ್ತು 2009 ರಲ್ಲಿ ಪೂರ್ವ ದೆಹಲಿಯಿಂದ ಸಂಸದರಾಗಿದ್ದರೆ, ಪರ್ವೇಶ್ 2014 ಮತ್ತು 2019 ರಲ್ಲಿ ಲೋಕಸಭೆಯಲ್ಲಿ ಪಶ್ಚಿಮ ದೆಹಲಿ ಕ್ಷೇತ್ರದ ಮೂಲಕ ಪ್ರತಿನಿಧಿಸಿದ್ದರು.

2015 ರಲ್ಲಿ 70 ಸ್ಥಾನಗಳಲ್ಲಿ 67 ಸ್ಥಾನಗಳನ್ನು ಕಸಿದುಕೊಂಡಿದ್ದ ಆಪ್ ರಾಜಕೀಯ ವಲಯವನ್ನೇ ಬೆರಗು ಮೂಡಿಸಿತ್ತು. 54.3% ಮತಗಳನ್ನು ಗೆದ್ದು ಅಧಿಕಾರಕ್ಕೇರಿತ್ತು. ಹೀನಾಯ ನಿರ್ವಹಣೆ ತೋರಿದ್ದ ಕಾಂಗ್ರೆಸ್ ಕೇವಲ 9.7% ಮತ ಗಳಿಸಿತ್ತು. ಬಿಜೆಪಿ 32.3% ಮತ ಪಡೆದಿದ್ದರೂ 3 ಮಂದಿ ಮಾತ್ರ ಗೆಲುವು ಕಂಡಿದ್ದರು.

2020 ರ ಚುನಾವಣೆಯಲ್ಲಿ ಆಪ್ ಗೆ ಹೋರಾಟದ ಸ್ಥಿತಿ
2019 ರ ಲೋಕಸಭಾ ಚುನಾವಣೆಯಲ್ಲಿ ದೆಹಲಿಯಲ್ಲಿ 7ಕ್ಕೆ 7 ಸ್ಥಾನಗಳನ್ನು ಕಳೆದುಕೊಂಡಿದ್ದ ಆಮ್ ಆದ್ಮಿ ಪಕ್ಷಕ್ಕೆ ಸವಾಲಿನ ಸ್ಥಿತಿ ಎದುರಾಗಿತ್ತು. ಆದರೆ 62 ಸ್ಥಾನಗಳನ್ನು ಗೆದ್ದು ಮತ್ತೆ ಪ್ರಾಬಲ್ಯ ತೋರಿತ್ತು. ಬಿಜೆಪಿ 8 ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತ್ತು.

ಈ ಬಾರಿ ಬಿಜೆಪಿ ಮತ್ತೆ ಹೋರಾಟ ನೀಡುತ್ತಿದ್ದು, ಆಮ್ ಆದ್ಮಿ ಪಕ್ಷ ಕೂಡ ಹೊಸ ಹೊಸ ರಣತಂತ್ರಗಳ ಮೂಲಕ ಕೇಸರಿ ಪಾಳಯಕ್ಕೆ ಸವಾಲು ಒಡ್ಡುತ್ತಿದೆ. ಒಟ್ಟಿನಲ್ಲಿ ಅಧಿಕಾರ ಉಳಿಸಿಕೊಳ್ಳುವರೋ? ಪಡೆದುಕೊಳ್ಳುವರೋ? ಎನ್ನುವ ಸ್ಥಿತಿ ರಾಷ್ಟ್ರ ರಾಜಧಾನಿಯಲ್ಲಿ ನಿರ್ಮಾಣವಾಗಿದೆ.

ಟಾಪ್ ನ್ಯೂಸ್

Pritish Nandy: ಖ್ಯಾತ ಕವಿ, ಚಲನಚಿತ್ರ ನಿರ್ಮಾಪಕ ಪ್ರಿತೀಶ್ ನಂದಿ ನಿಧನ

Pritish Nandy: ಖ್ಯಾತ ಕವಿ, ಚಲನಚಿತ್ರ ನಿರ್ಮಾಪಕ ಪ್ರಿತೀಶ್ ನಂದಿ ನಿಧನ

Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!

Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!

Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ

Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ

ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್‌: ವಿ.ನಾರಾಯಣನ್‌

ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್‌: ವಿ.ನಾರಾಯಣನ್‌

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

naxal-file

Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್‌ ನಿಶ್ಶಬ್ದ

purushotham-bilimale

Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Naxal Movement End:1990 To 2025:ಕರ್ನಾಟಕ ನಕ್ಸಲೀಯರ ಶಸ್ತ್ರಾಸ್ತ್ರ ಹೋರಾಟದ ಯುಗಾಂತ್ಯ…

Naxal Movement End:1990 To 2025:ಕರ್ನಾಟಕ ನಕ್ಸಲೀಯರ ಶಸ್ತ್ರಾಸ್ತ್ರ ಹೋರಾಟದ ಯುಗಾಂತ್ಯ…

Maha Kumbh Mela 2025: 144 ವರ್ಷಗಳಿಗೊಮ್ಮೆ ಮಹಾಕುಂಭ ಮೇಳ- ಇದರ ಹಿಂದಿದೆ ರೋಚಕ ಸಂಗತಿ!

Maha Kumbh Mela 2025: 144 ವರ್ಷಗಳಿಗೊಮ್ಮೆ ಮಹಾಕುಂಭ ಮೇಳ- ಇದರ ಹಿಂದಿದೆ ರೋಚಕ ಸಂಗತಿ!

Miracle: ಗುಳಿ ಗುಳಿ ಶಂಕರ ಎಂಬ ಮಾಂತ್ರಿಕ ಕೊಳ… ಇಲ್ಲಿದೆ ಹಲವು ಚಮತ್ಕಾರಿ ವಿಚಾರಗಳು

Miracle: ಗುಳಿ ಗುಳಿ ಶಂಕರ ಎಂಬ ಮಾಂತ್ರಿಕ ಕೊಳ… ಇಲ್ಲಿದೆ ಹಲವು ಚಮತ್ಕಾರಿ ವಿಚಾರಗಳು

ಪೊಂಗಲ್‌ – ಸಂಕ್ರಾಂತಿಗೆ ಮನರಂಜನೆಯ ಹಬ್ಬದೂಟ: ಇಲ್ಲಿದೆ ರಿಲೀಸ್‌ ಆಗಲಿರುವ ಚಿತ್ರಗಳ ಪಟ್ಟಿ

ಪೊಂಗಲ್‌ – ಸಂಕ್ರಾಂತಿಗೆ ಮನರಂಜನೆಯ ಹಬ್ಬದೂಟ: ಇಲ್ಲಿದೆ ರಿಲೀಸ್‌ ಆಗಲಿರುವ ಚಿತ್ರಗಳ ಪಟ್ಟಿ

Jagdeep Singh: ಈ ಸಿಇಒ ಪ್ರತಿದಿನ ಪಡೆಯುವ ಸಂಬಳ 48 ಕೋಟಿ ರೂ!…ಯಾರೀತ ಜಗದೀಪ್‌ ಸಿಂಗ್?

Jagdeep Singh: ಈ ಸಿಇಒ ಪ್ರತಿದಿನ ಪಡೆಯುವ ಸಂಬಳ 48 ಕೋಟಿ ರೂ!…ಯಾರೀತ ಜಗದೀಪ್‌ ಸಿಂಗ್?

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Pritish Nandy: ಖ್ಯಾತ ಕವಿ, ಚಲನಚಿತ್ರ ನಿರ್ಮಾಪಕ ಪ್ರಿತೀಶ್ ನಂದಿ ನಿಧನ

Pritish Nandy: ಖ್ಯಾತ ಕವಿ, ಚಲನಚಿತ್ರ ನಿರ್ಮಾಪಕ ಪ್ರಿತೀಶ್ ನಂದಿ ನಿಧನ

Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!

Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!

Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ

Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ

ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್‌: ವಿ.ನಾರಾಯಣನ್‌

ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್‌: ವಿ.ನಾರಾಯಣನ್‌

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.