ತ್ರಯೋದಶಿ-ಧನ್‌ತೇರಾಸ್‌


Team Udayavani, Nov 2, 2021, 6:55 AM IST

ತ್ರಯೋದಶಿ-ಧನ್‌ತೇರಾಸ್‌

ನಾವು ಅಂತ್ಯಂತ ಸಂಭ್ರಮ ದಿಂದ ಆಚರಿಸುವ ಹಬ್ಬವೆಂದರೆ ಅದು ದೀಪಾವಳಿ. ದೀಪಗಳ ಬೆಳಕುಗಳ ಪಟಾಕಿಗಳ ಈ ಹಬ್ಬವು ಕಾಲದಿಂದ ಕಾಲಕ್ಕೆ, ಪ್ರದೇಶದಿಂದ ಪ್ರದೇಶಕ್ಕೆ ಆಚರಣೆಯ ಕ್ರಮದಲ್ಲಿ ಎಷ್ಟೋ ವ್ಯತ್ಯಾಸಗಳನ್ನು ಹೊಂದಿದೆ. ಹಿಂದೆಲ್ಲ ದೀಪಾವಳಿ ಹಬ್ಬ ಬಂತೆಂದರೆ ಮನೆಯ ಮಕ್ಕಳು ಖುಷಿಯಿಂದ ಕುಣಿದು ಕುಪ್ಪಳಿಸುತ್ತಿದ್ದರು. ಮನೆ ಹಿರಿಯರು ಪೂಜೆ-ಪುನಸ್ಕಾರಗಳಲ್ಲಿ ತೊಡಗಿಸಿಕೊಂಡರೆ ಉಳಿದವರು ಸಹಕರಿಸುತ್ತಿದ್ದರು. ಹಿರಿ ಹೆಂಗಸರು ವಿವಿಧ ಅಡುಗೆಗಳನ್ನು ತಯಾರಿಸುವುದು, ಹೂ ಕಟ್ಟುವುದು ಮಾಡಿದರೆ, ಯುವತಿಯರು ರಂಗೋಲಿ ಚಿತ್ತಾರ ಬಿಡಿಸುವುದರಲ್ಲಿ ಮಗ್ನರಾಗಿರುತ್ತಿದ್ದರು. ಮಕ್ಕಳಂತೂ ಪಟಾಕಿ ಬಿಡುವುದು, ಗೊಂಬೆಯಾಟ, ಕಣ್ಣಾಮುಚ್ಚಾಲೆ, ಪೂಜೆ ಸಮಯದಲ್ಲಿ ಶ್ಲೋಕ ಹೇಳಿ ಘಂಟೆ ಬಾರಿಸುವುದು, ವಿವಿಧ ತಿಂಡಿ ತಿನಿಸುಗಳನ್ನು ತಿಂದು ಸಂಭ್ರಮಿಸುತ್ತಿದ್ದರು. ಹೀಗೆ ಮನೆ ಮಂದಿಯೆಲ್ಲ ಸಡಗರವನ್ನು ಸಂಭ್ರಮದಿಂದ ಆಚರಿಸುತ್ತಿದ್ದರು. ಆದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ಅದೆಷ್ಟೋ ಮನೆಗಳಲ್ಲಿ ಇಂತಹ ಸಂಭ್ರಮಾಚರಣೆ ಕಳೆದುಹೋಗಿದೆ. ಹಿರಿಯರು ಮೃತರಾಗಿ ಸಂಪ್ರದಾಯವನ್ನು ಮುನ್ನಡೆಸುವ ಜವಾಬ್ದಾರಿ ಮಗನ ಮೇಲೆ ಬಿದ್ದಾಗ ಮಗ ತಬ್ಬಿಬ್ಟಾಗತೊಡಗುತ್ತಾನೆ. ಆಚರಿಸುವ ಮನಸ್ಸಿದ್ದರೂ ಮಂತ್ರ ಕ್ರಮ ತಿಳಿಯದು. ತಿಳಿ ಹೇಳುವವರಲ್ಲಿ ಹೋಗಿ ಕೇಳಲು ಪುರುಸೊತ್ತಿಲ್ಲ. “ಪಾರ್ಟಿ ನಡೆಸುವುದೇ ಹಬ್ಬ’ ಎಂಬ ಪಾಶ್ಚಾತ್ಯರ ಅನುಕರಣೆಯು ಅನಿವಾರ್ಯ ಎಂಬಂತಾಗಿದೆ.

ಹೀಗೆ ಈ ದೀಪಾವಳಿಯು ಕೃಷ್ಣಾಷ್ಣಮಿ, ನವರಾತ್ರಿಗಳಂತೆ ಯಾವುದೋ ಒಂದು ದೇವತೆಯನ್ನು ಪೂಜಿಸುವ ಹಬ್ಬವಲ್ಲ. ಅನೇಕ ಪೂಜೆಗಳನ್ನೊಳಗೊಂಡ ಹಬ್ಬ.

ಇಪಾಸಿತ ಚತುರ್ದಾಶ್ಯಾಮಿಂದು ಕ್ಷಯ ತಿಥಾ ವಪಿ|
ಊಜ್ವಾಡಾ ಸ್ವಾತಿ ಸಂಯುಕ್ತೆ ತದಾ ದೀಪಾವಲೀ ಭವೇತ್‌|
ಕುರ್ಯಾತ್‌ ಸಂಲಗ್ನ ಮೇತಚ್ಚ ದೀಪೋತ್ಸವ ದಿನತ್ರಯಂ||
ಎಂಬಂತೆ ದೀಪಾವಳಿಯು ಶಾಸ್ತ್ರೋಕ್ತವಾಗಿ ಮೂರೇ ದಿನಗಳ ಹಬ್ಬವಾದರೂ ಸಮಗ್ರವಾಗಿ ಗಮನಿಸಿದಾಗ ಐದು ದಿನಗಳಲ್ಲಿ ಆಚರಣೆಗೊಳ್ಳುವ ಹಬ್ಬವೆಂದು ಸ್ಪಷ್ಟವಾಗುತ್ತದೆ. ಆ 5 ಪ್ರಧಾನ ಅಂಗಗಳೇ ಧನ ಪೂಜೆ, ನರಕಚತುರ್ದಶಿ, ಲಕ್ಷ್ಮೀ ಪೂಜೆ. ಗೋಪೂಜೆ , ಬಲೀಂದ್ರ ಪೂಜೆ. ಹೀಗೆ ದೀಪೋತ್ಸವಗಳು, ಪಟಾಕಿ ಹಾರಿಸುವುದು ಆಶ್ವಿ‌ನ ಕೃಷ್ಣ ತ್ರಯೋದಶಿಯಿಂದಾರಂಭಿಸಿ ಐದು ದಿನಗಳೂ ನಡೆಯುತ್ತವೆ.

ಈ ತ್ರಯೋದಶಿಯನ್ನು ಗುಜರಾತ್‌ ಮತ್ತು ಸೌರಾಷ್ಟ್ರಗಳಲ್ಲಿ ಧನ್‌ತೇರಾಸ್‌ ಎಂದು ಕರೆಯುತ್ತಾರೆ. ಹಿಂದಿನ ದಿನ ಅಥವಾ ಈ ದಿನ ಮನೆಗಳನ್ನು ಸುಣ್ಣ ಬಣ್ಣಗಳಿಂದ ಅಲಂಕರಿಸಿ ಮನೆಯಂಗಳವನ್ನು ಶುಚಿಗೊಳಿಸಿ ರಂಗೋಲಿಯಿಂದ ಚಿತ್ತಾರ ಬಿಡಿಸಿ ಲೋಹದ ಪಾತ್ರೆ ದೀಪಗಳನ್ನು ಶುಚಿಗೊಳಿಸಿ ಧನ ಪೂಜೆಯನ್ನು ಮಾಡುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ನಮ್ಮೂರುಗಳಲ್ಲಿಯೂ ಧನತ್ರಯೋದಶಿಯಂದು ಈ ದಿನವನ್ನು ಕರೆದು ಈ ದಿನದಲ್ಲಿ ಧನಪೂಜೆ ಮಾಡುತ್ತಾರೆ. ಶಾಸ್ತ್ರಕಾರರು ತಿಳಿಸಿಕೊಡುವಂತೆ, ಅನುಭವದಲ್ಲಿಯೂ ಧನವು ತುಂಬಾ ಪ್ರಾಧಾನ್ಯವನ್ನು ಗಳಿಸಿಕೊಂಡಿದೆ. ಹಿರಿಯರು ತಿಳಿಸಿಕೊಟ್ಟಂತೆ,

ಯದೇತದ್ದ ವಿಣಂ ನಾಮ ಪ್ರಾಣಾಹ್ಯೇತೇ ಬಹಿಶ್ಚರಾಃ|
ನ ತಸ್ಯಹರತೇ ಪ್ರಾಣಾನ್‌ ಯೋಯಸ್ಯ ಹರತೇ ಧನಂ||
ಧನವೆಂದರೆ ದೇಹದ ಹೊರಗಿರುವ ಪ್ರಾಣವೇ. ಯಾರಾದರೂ ಯಾರದ್ದಾದರೂ ಧನ ವನ್ನು ಹರಣ ಮಾಡಿದರೆ ಅವನ ಪ್ರಾಣವನ್ನೇ ಹರಣ ಮಾಡಿದಂತೆ ಎಂದಿದ್ದಾರೆ. ಧನ ನಷ್ಟಗಳು ಬಂದಾಗ ಪ್ರಾಣ ನಷ್ಟವೇ ಆದಂತೆ ಭಾಸವಾಗುತ್ತದೆ. ಆದ್ದರಿಂದ ನಮ್ಮ ಪ್ರಾಣ ಸಮಾನವಾದ ಧನದ ಪೂಜೆ ಈ ದಿನ ಅತ್ಯಂತ ಶ್ರೇಷ್ಠವೆಂದು ಹಿರಿಯರು ಉಪದೇಶಿಸಿದ್ದಾರೆ. ಹಾಗೆ,
ಆಶ್ವಿ‌ನ ಸ್ಯಾಸಿತೇ ಪಕ್ಷೇ ತ್ರಯೋದಶ್ಯಾಂ ನಿಶಾಮುಖೇ|
ಯಮದೀಪಂ ಬಹಿರ್ದದ್ಯಾದಪ ಮೃತುವಿನ ಶ್ಯತಿ||
ಎಂಬ ಸ್ಕಂದಪುರಾಣದ ಮಾತಿನಂತೆ ಆಶ್ವಯುಜ ಕೃಷ್ಣ ಪಕ್ಷದ ತ್ರಯೋದಶಿಯ ಪ್ರದೋಷವಾದ ಪರ್ವಕಾಲದಲ್ಲಿ ಅಂದರೆ ನವೆಂಬರ್‌ ಎರಡನೇ ದಿನಾಂಕದಂದು ಸಂಜೆ ಕೈಕಾಲು ಮುಖ ತೊಳೆದು ಅಂಗಳದ ತುಳಸಿಕಟ್ಟೆಯ ಬಳಿ ದಕ್ಷಿಣಕ್ಕೆ ಮುಖಮಾಡಿ ಎಳ್ಳೆಣ್ಣೆಯ ಯಮದೀಪವನ್ನು ಅಪಮೃತ್ಯು ಪರಿಹಾರಕ್ಕಾಗಿ,ಮೃತ್ಯು ನಾ ಪಾಶ ದಂಢಾಭ್ಯಾಂ ಕಾಲೇ ಶ್ಯಾಮಯಾ ಸಹ|
ತ್ರಯೋದಶ್ಯಾಂ ದೀಪದಾನಾತ್‌ ಸೂರ್ಯಜ ಪ್ರಿಯತಾಂ ಮಮ||
ಕಾಲ ಮತ್ತು ಮೃತ್ಯು ದೇವತೆಗಳೊಡನಿರುವ ಪಾಶ, ದಂಡಧಾರಿಯಾಗಿ ಶ್ಯಾಮಲಾ ಪತಿಯೂ ಆದ ಸೂರ್ಯಪುತ್ರನಾದ ಯಮನು ಹಾಗೇ ಯಮಾಂತರ್ಗದ ಸೂರ್ಯ ವಂಶಜನಾದ ರಾಮನು ಪ್ರೀತನಾಗಲಿ ಎಂಬರ್ಥವಿರುವ ಈ ಮಂತ್ರವನ್ನು ಮನೆಯವರೆಲ್ಲರೂ ಹೇಳಿ ಪ್ರತ್ಯೇಕ ದೀಪ ಹಚ್ಚಿಟ್ಟು ನಮಸ್ಕರಿಸಬೇಕು. ಒಂದೇ ದೀಪವಾದರೆ ಒಬ್ಬರ ಅನಂತರ ಒಬ್ಬರಂತೆ ದೀಪ ಎತ್ತಿಟ್ಟರಾಯಿತು.

– ವಿಶ್ವಮೂರ್ತಿ ಬಡಕಿಲ್ಲಾಯ, ಸವಣೂರು

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-jama

Yakshagana; ಮೇಳದ ಯಜಮಾನಿಕೆ ಎಂದರೆ ಆನೆ ಸಾಕಿದ ಹಾಗೆ

9-yoga

Sattvic Diet: ಪರೀಕ್ಷಾ ಒತ್ತಡ ನಿವಾರಣೆ ಯೋಗ, ಸಾತ್ವಿಕ ಆಹಾರದ ಸರಳ ಸೂತ್ರಗಳು

8-bagappa

Bagappa Harijan: ಭೀಮಾ ತೀರದಲ್ಲಿ ಮತ್ತೆ ರಕ್ತದ ಹನಿ

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.