‘One Rupee Clinic’ ಡಾ. ರಾಮ್ ಚಂದಾನಿ ಅವರ ಹೊಸ ಪ್ರಯತ್ನ..!

ತಾವು ಶುಲ್ಕವಿಲ್ಲದೇ ಸೇವೆ ಪಡೆಯುತ್ತಿದ್ದೇವೆ ಎಂಬುದು ಜನರರಿಗೆ ಅನ್ನಿಸಬಾರದು ಅದರಕ್ಕಾಗಿ 1 ರೂ. ಪಡೆಯುತ್ತೇನೆ

ಶ್ರೀರಾಜ್ ವಕ್ವಾಡಿ, Feb 15, 2021, 10:51 AM IST

Doctor Opens ‘One Rupee’ Clinic for Poor People in Odisha’s Sambalpur

ಸಂಬಲ್ಪುರ್: ವೈದ್ಯೋ ನಾರಾಯಣೋ ಹರಿ ಎಂಬುವುದನ್ನು ನಂಬುವುದು ಭಾರತೀಯ ಪರಂಪರೆ. ವೈದ್ಯರನ್ನು ಇಲ್ಲಿ ದೇವರಂತೆ ಗೌರವಿಸುವ ಪರಿಪಾಠವಿದೆ. ಒಬ್ಬ ವೈದ್ಯನು ರೋಗಿಗಳ ವಿಷಯದಲ್ಲಿ ತನ್ನ ಪರಿಧಿಯೊಳಗೆ ಸರ್ವಕಾಲ ಸರ್ವಾವಸ್ಥೆಯಲ್ಲೂ ರಕ್ಷಕನ ಪಾತ್ರವನ್ನು ವಹಿಸುವುದರಿಂದ ವೈದ್ಯನನ್ನು ‘ದೇವರ ಸಮಾನನು’ ಎಂದು ಗೌರವಿಸುವ ಪದ್ಧತಿ ಭಾರತದಲ್ಲಿ ವಿಶೇಷ.

ಆಧುನೀಕರಣದ ಕಾಲಘಟ್ಟದಲ್ಲಿಯೂ, ಬಿಳಿ ಕೋಟಿನ ದಂಧೆಕೋರರುಗಳ ನಡುವೆಯಲ್ಲೂ “ವೈದ್ಯೋ ನಾರಾಯಣೋ ಹರಿ” ಎಂಬ ಮಾತಿಗೆ ನಿಜ ಅರ್ಥ ಕೊಡುತ್ತಿರುವ ಕೆಲವೇ ಕೆಲವು ವೈದ್ಯರಗಳ ಪೈಕಿಯಲ್ಲಿ ಇಲ್ಲೊಬ್ಬರು ಬಡವರಿಗಾಗಿ, ನಿರ್ಗತಿಕರಿಗಾಗಿ ಅಸಾಮಾನ್ಯ ನಿಸ್ವಾರ್ಥ ಸೇವೆಯನ್ನು ಸಲ್ಲಿಸುತ್ತಿದ್ದಾರೆ ಎನ್ನುವುದು ಹುಬ್ಬೇರಿಸುವ ಸಂಗತಿ.

ಓದಿ : ನಿಗೂಢ ಕಾಡಲ್ಲೊಂದು ಹಾರರ್‌ ಸ್ಟೋರಿ! ಸ್ಕೇರಿ ಫಾರೆಸ್ಟ್

ಹೌದು, ಒಡಿಶಾದ ಸಂಬಲ್ಪುರ್ ನಲ್ಲಿ ಒಬ್ಬ ವೈದ್ಯರು ಬಡವರಿಗಾಗಿ One Rupee Clinic ನ್ನು ಇತ್ತೀಚೆಗೆ ತೆರೆದಿದ್ದಾರೆ ಅಂದರೇ, ನೀವದನ್ನು ನಂಬಲೇಬೇಕು.

ಹೌದು, ವೀರ್ ಸುರೇಂದ್ರ ಸಾಯಿ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಆ್ಯಂಡ್ ರಿಸರ್ಚ್ (VIMSR)ನ ಮೆಡಿಸಿನ್ ವಿಭಾಗದ ಸಹಾಯಕ ಪ್ರೊಫೆಸರ್ ಶಂಕರ್ ರಾಮಚಂದಾನಿ ಅವರ ಪ್ರಯತ್ನ ಇದು. ಈ One Rupee Clinic ನಲ್ಲಿ ರೋಗಿಗಳು ಚಿಕಿತ್ಸೆ ಪಡೆಯಲು  ಕೇಚಲ 1 ರೂ. ಶುಲ್ಕ ನೀಡಿದರೇ ಸಾಕು, ಅವರು ಯಾವುದೇ ಸಾಮಾನ್ಯ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯಬಹುದಾಗಿದೆ.

‘ನಾನು ವಿ ಐ ಎಂ ಎಸ್‌ ಆರ್‌ ನಲ್ಲಿ ಸಿನಿಯರ್ ರೆಸಿಡೆಂಟ್ ಆಗಿ  ಕೆಲಸ ಮಾಡಲು ಪ್ರಾರಂಭಿಸಿದೆ. ಆದರೆ ಆ ಸ್ಥಾನದಲ್ಲಿದ್ದ ನನಗೆ ಖಾಸಗಿ ಚಿಕಿತ್ಸಾಲಯಗಳಲ್ಲಿ ಸೇವೆ ನೀಡಲು ಅನುಮತಿ ನೀಡಿರಲಿಲ್ಲ. ಆ ಸಮಯದಲ್ಲಿ ನನಗೆ ಕ್ಲಿನಿಕ್  ತೆರೆಯಲು ಸಾಧ್ಯವಾಗಲಿಲ್ಲ. ಇತ್ತೀಚೆಗೆ ನನಗೆ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಬಡ್ತಿ ಸಿಕ್ಕಿತು ಹಾಗೂ ಅದರ ಜೊತೆಗೆ ಕ್ಲಿನಿಕ್ ತೆರೆಯಲು ಈ ಅನುಮತಿ ದೊರೆಯಿತು. ಹೀಗಾಗಿ  ನಾನು ಈಗ ಬಾಡಿಗೆ ಮನೆಯಲ್ಲಿ ನನ್ನ ‘ಒಂದು ರೂಪಾಯಿ’ ಕ್ಲಿನಿಕ್ ಅನ್ನು ಆರಂಭಿಸಿದ್ದೇನೆ’ ಎನ್ನುತ್ತಾರೆ ರಾಮ್‌ ಚಂದಾನಿ.

ಓದಿ : ಪ್ರೇಮಿಗಳ ದಿನಾಚರಣೆ ವಾರದಲ್ಲಿ 25 ಲಕ್ಷ ಗುಲಾಬಿ ಹೂ ಮಾರಾಟ!

“ನಾನು ಬಡವರಿಂದ ಚಿಕಿತ್ಸಗಾಗಿ ಕೇವಲ 1 ರೂ. ಶುಲ್ಕ ಪಡೆಯುತ್ತೇನೆ. ಏಕೆಂದರೆ ತಾವು ಶುಲ್ಕವಿಲ್ಲದೇ ಸೇವೆ ಪಡೆಯುತ್ತಿದ್ದೇವೆ ಎಂಬುದು ಅವರಿಗೆ ಅನ್ನಿಸಬಾರದು. ತಮ್ಮ ಉಪಚಾರಕ್ಕಾಗಿ ತಾವು ಅಲ್ಪ ಹಣವನ್ನಾದರು ನೀಡಿದ್ದೇವೆ ಎಂಬುದು ಅವರಿಗೆ ಸಮಾಧಾನವಾಗಬೇಕಿ .” ಎಂದಿದ್ದಾರೆ. ಈ ಕ್ಲಿನಿಕ್ ಬೆಳಗ್ಗೆ 7 ರಿಂದ 8 ಗಂಟೆಯವರೆಗೆ ಹಾಗೂ ಸಂಜೆ 6 ರಿಂದ 7 ಗಂಟೆಯವರೆಗೆ ತೆರೆದಿರುತ್ತದೆ”. ಎಂದು ‘ಕೇವಲ 1 ರೂ. ಶುಲ್ಕ ಯಾಕೆ ?’ ಎಂಬ ಪ್ರಶ್ನೆಗೆ ರಾಮ್‌ ಚಂದಾನಿ ಉತ್ತರಿಸುತ್ತಾರೆ.

ಮೊದಲ ದಿನ ಎಷ್ಟು ರೋಗಿಗಳು ಭೇಟಿ ನೀಡಿದ್ದಾರೆ ?

ತಮ್ಮ ಪತ್ನಿ ದಂತ ವೈದ್ಯೆಯಾಗಿರುವುದಾಗಿ ಹೇಳುವ ರಾಮ್ ಚಂದಾನಿ, ಅವರು ಕೂಡ ತಮಗೆ ಈ ಕಾರ್ಯದಲ್ಲಿ ಸಹಕರಿಸುತ್ತಾರೆ ಎಂದು ಹೇಳುತ್ತಾರೆ. ಈ ಕ್ಲಿನಿಕ್ ಅನ್ನು ಶುಕ್ರವಾರ ಉದ್ಘಾಟಿಸಲಾಗಿದೆ ಹಾಗೂ ಮೊದಲ ದಿನ 33 ರೋಗಿಗಳು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

ತಂದೆಯ ಮಾತಿಗೆ ಗೌರವ : ರಾಮ್ ಚಂದಾನಿ

ಕುಷ್ಠರೋಗದ ರೋಗಿಯೋರ್ವನನ್ನು ಸ್ವತಃ ತನ್ನ ಕೈಯಲ್ಲಿ ಎತ್ತಿಕೊಂಡು ಅವರ ಮನೆಗೆ ಕರೆದೊಯ್ದಿದ್ದಕ್ಕಾಗಿ 2019 ರಲ್ಲಿ ದೇಶದಾದಯಂತ ಗುರುತಿಸಿಕೊಳ್ಳುವುದರ ಮೂಲಕ ಬೆಳಕಿಗೆ ಬಂದ ರಾಮ್ ಚಂದಾನಿ , ‘ನನ್ನ ದಿವಂಗತ ತಂದೆ ಬ್ರಹ್ಮಾನಂದ್ ರಾಮ್‌ ಚಂದಾನಿ ಅವರು ನರ್ಸಿಂಗ್ ಹೋಮ್ ತೆರೆಯಲು ಹೇಳಿದ್ದರು, ಆದರೆ ಇದಕ್ಕೆ ದೊಡ್ಡ ಹೂಡಿಕೆ  ಬೇಕಾಗಿತ್ತು ಮತ್ತು ಅದರಿಂದ ಬಡರೋಗಿಗಳಿಗೆ 1 ರೂ.ಗೆ ಚಿಕಿತ್ಸೆ ನೀಡುವುದು ಸಾಧ್ಯವಾಗುವುದಿಲ್ಲ. ಹೀಗಾಗಿ  ನಾನು ತಂದೆಯವರ ಗೌರವಾರ್ಥವಾಗಿ ಈ ‘ಒಂದು ರೂಪಾಯಿ’ ಕ್ಲಿನಿಕ್  ತೆರೆದಿದ್ದೇನೆ ಎಂದು ರಾಮ್ ಚಂದಾನಿ ಹೇಳಿದರು.

ಒಟ್ಟಿನಲ್ಲಿ, ಈ ದುಬಾರಿ ದುನಿಯಾದಲ್ಲೂ ಇಂತಹದ್ದೊಂದು ಆದರ್ಶ ಪ್ರಯತ್ನಕ್ಕೆ ಡಾ. ರಾಮ್ ಚಂದಾನಿ ಮುಂದಾಗಿರುವುದು ನಿಜಕ್ಕೂ ಶ್ಲಾಘಿನೀಯ.  ರಾಮ್ ಚಂದಾನಿ ಅವರ ಪ್ರಯತ್ನದ ಯಶಸ್ವಿಗೆ ಹಾಗೂ ಅವರ ಪ್ರಯತ್ನ ಹತ್ತಾರು ವೈದ್ಯರಿಗೆ ಮಾದರಿಯಾಗಿ ಬಡವರ, ನಿರ್ಗತಿಕರ ಪಾಲಿಗೆ ದೇವರಾಗಿ ಕಾಣಿಸಲಿ ಎಂದು ಪ್ರಾರ್ಥಿಸೋಣ.

–ಶ್ರೀರಾಜ್ ವಕ್ವಾಡಿ

ಓದಿ : ಏಕಾಂಗಿ ಪ್ರತಿಭಟನೆ ಮಾಡುತ್ತಿದ್ದ ದಿಶಾ ರವಿ: ಕೋರ್ಟ್ ನಲ್ಲಿ ಕಣ್ಣೀರು!

ಟಾಪ್ ನ್ಯೂಸ್

MOdi (3)

Jammu and Kashmir ಜನತೆ ಭ್ರಷ್ಟ ಮುಕ್ತ ಸರಕಾರ ಬಯಸಿದ್ದಾರೆ: ಮೋದಿ

UNITED NATIONS

UN ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಸ್ಥಾನ: ಪೋರ್ಚುಗಲ್‌ ಬೆಂಬಲ

1-wewewq

PM ರೇಸ್‌ನಲ್ಲಿ ನಾನು ಇಲ್ಲ; ಬೇಕಿದ್ದರೇ ಮೋದಿ ಕೇಳಿ: ಗಡ್ಕರಿ

Manglrui

Mangaluru: ಸಂಸ್ಥೆಯ ಬೆಳವಣಿಗೆಯಲ್ಲಿ ಮಾನವ ಸಂಪನ್ಮೂಲ ಪಾತ್ರ ಪ್ರಮುಖ: ಮಂಜುನಾಥ ಭಂಡಾರಿ

1-asasa

Test; ನ್ಯೂಜಿಲ್ಯಾಂಡ್‌ ಆಲೌಟ್‌ 88 : ಲಂಕೆಗೆ 514 ರನ್‌ ದಾಖಲೆ ಮುನ್ನಡೆ

dinesh-gu

Dinesh Gundurao; ತಿಂಗಳೊಳಗೆ ಗೃಹ ಆರೋಗ್ಯ ಯೋಜನೆ ಜಾರಿ

leopard

leopard: ಮೂಲ್ಕಿ ಕೊಯ್ಯಾರಿನಲ್ಲಿ ಸಣ್ಣ ಮರಿಯೊಂದಿಗೆ ಚಿರತೆ ಪ್ರತ್ಯಕ್ಷ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

033

Urmila Matondkar To Jayam Ravi.. ಈ ವರ್ಷ ವಿಚ್ಛೇದನ ಪಡೆದ ಸೆಲೆಬ್ರಿಟಿಗಳು ಜೋಡಿಗಳಿವು..

dharmendra kumar arenahalli

Exclusive: ಇತಿಹಾಸ ಕೇವಲ ರಾಜರ ಕಥೆಯಲ್ಲ, ಅದು ನಮ್ಮ ಜೀವನಶೈಲಿ: ಧರ್ಮೇಂದ್ರ ಕುಮಾರ್

ರಕ್ಕಸ ವೇಷದ ಒಳಗಿನ ಮಾನವೀಯ ಮುಖ; ರವಿ ಕಟಪಾಡಿ ಎಂಬ ಸೇವಕ

Ravi Katapadi: ರಕ್ಕಸ ವೇಷದ ಒಳಗಿನ ಮಾನವೀಯ ಮುಖ; ರವಿ ಕಟಪಾಡಿ ಎಂಬ ಸೇವಕ

18-nail-polish

Nail Polish: ಉಗುರುಗಳ ಅಂದ ಹೆಚ್ಚಿಸುವ ನೈಲ್ ಪಾಲಿಶ್ ನಲ್ಲಿದೆ ಕ್ಯಾನ್ಸರ್ ನ ರಾಸಾಯನಿಕ ಅಂಶ

Miracle: ಈ ಶಿವಲಿಂಗಕ್ಕೆ ದಿನದ 24 ಗಂಟೆ ಸಮುದ್ರದೇವನಿಂದಲೇ ಅಭಿಷೇಕ… ಏನಿದು ಮಹಿಮೆ

Miracle: ಈ ಶಿವಲಿಂಗಕ್ಕೆ ದಿನದ 24 ಗಂಟೆ ಸಮುದ್ರದೇವನಿಂದಲೇ ಅಭಿಷೇಕ… ಏನಿದು ಮಹಿಮೆ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

congress

Haryana ಅನ್ನದಾತರ ಕಲ್ಯಾಣಕ್ಕೆ ಆಯೋಗ ರಚನೆ: ಕಾಂಗ್ರೆಸ್‌ ವಾಗ್ಧಾನ

MOdi (3)

Jammu and Kashmir ಜನತೆ ಭ್ರಷ್ಟ ಮುಕ್ತ ಸರಕಾರ ಬಯಸಿದ್ದಾರೆ: ಮೋದಿ

court

Jama Masjid:ಮಾಜಿ ಪಿಎಂ ಸಹಿ ಕಡತ ಸಲ್ಲಿಸದ್ದಕ್ಕೆ ಕೋರ್ಟ್‌ ಟೀಕೆ

UNITED NATIONS

UN ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಸ್ಥಾನ: ಪೋರ್ಚುಗಲ್‌ ಬೆಂಬಲ

1-wewewq

PM ರೇಸ್‌ನಲ್ಲಿ ನಾನು ಇಲ್ಲ; ಬೇಕಿದ್ದರೇ ಮೋದಿ ಕೇಳಿ: ಗಡ್ಕರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.