ಡ್ರೈ ವೆಜಿಟೆಬಲ್ ಮಂಚೂರಿಯನ್
Team Udayavani, Aug 27, 2020, 9:49 PM IST
ಇಂದು ಎಲ್ಲರೂ ಆಹಾರ ವೈವಿಧ್ಯತೆಯನ್ನು ಬಯಸುತ್ತಾರೆ. ಅದರಲ್ಲೂ ನಗರ ಪ್ರದೇಶದಲ್ಲಿರುವವರಂತೂ ಪ್ರತೀ ದಿನ ಅಲ್ಲದಿದ್ದರೂ ವೀಕೆಂಡ್‌ನಲ್ಲಂತೂ ವೈವಿಧ್ಯಮಯ ಆಹಾರಗಳಿಗೆ ತಮ್ಮ ಆಧ್ಯತೆಯನ್ನು ನೀಡುತ್ತಿದ್ದಾರೆ. ಹಾಗಿದ್ದರೆ ಈ ವೀಕೆಂಡ್‌ಗೆ ಮನೆಯಲ್ಲೇ ಕೂತು ಚೈನೀಸ್ ಫುಡ್ ತಿನ್ನಬೇಕು ಎಂಬ ಆಸೆ ನಿಮಗಾಗಿದ್ದರೆ ಡ್ರೈ ವೆಜಿಟೆಬಲ್ ಮಂಚೂರಿಯನ್ ತಯಾರಿಸಿ ನೋಡಿ .ಹಾಗಾದರೆ ಇನ್ನೇಕೆ ತಡ ಸ್ವಾಧಿಷ್ಟಕರವಾಗಿ ಡ್ರೈ ವೆಜಿಟೆಬಲ್ ಮಂಚೂರಿಯನ್ ಮಾಡುವ ವಿಧಾನವನ್ನು ಓದಿಕೊಂಡು ನಿಮ್ಮ ಮನೆಯಲ್ಲೇ ಇದನ್ನು ಮಾಡಿಕೊಂಡು ಸ್ವಾಧಿಷ್ಟವಾಗಿ ಸವಿಯಿರಿ…
ಬೇಕಾಗುವ ಸಾಮಗ್ರಿಗಳು:
ಸಣ್ಣಗೆ ಹೆಚ್ಚಿದ ಕ್ಯಾರೆಟ್,ಬೀನ್ಸ್,ಕ್ಯಾಬೇಜ್,ಕಾಲಿಫ್ಲವರ್,ಈರುಳ್ಳಿ ಹೂವು ಒಟ್ಟಿಗೆ 3 ಕಪ್,ಕಾನ್‌ಫ್ಲೋರ್ 2 ದೊ.ಚಮಚ,ಮೈದಾ 2 ದೊ.ಚಮಚ, ಉಪ್ಪು ರುಚಿಗೆ.
ಮಾಡುವ ವಿಧಾನ:
ತರಕಾರಿಗೆ ಉಪ್ಪು ಸೇರಿಸಿ ಬೆರಸಿ ಕಾನ್‌ಫ್ಲೋರ್,ಮೈದಾ ಹಾಕಿ ಗಟ್ಟಿಯಾಗಿ ವಡೆ ಹಿಟ್ಟಿನಂತೆ ಕಲಸಿಕೊಳ್ಳಿ.ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಕಲಸಿಟ್ಟ ತರಕಾರಿ ಮಿಶ್ರಣವನ್ನು ದೊಡ್ಡ ನೆಲ್ಲಿಕಾಯಿ ಗಾತ್ರದಲ್ಲಿ ಬಿಸಿ ಎಣ್ಣೆಗೆ ಬಿಡಿ.ಗರಿಗರಿಯಾಗಿ ಕರಿದು ಎಣ್ಣೆ ಬಸಿದು ಎತ್ತಿಡಿ.ಕರಿದ ವಡೆಗಳನ್ನು (ವೆಜ್‌ಬಾಲ್ಸ್)ಗೆ ಹಾಕಿ.
ಮಂಚೂರಿಯನ್ ಸಾಸ್‌ಗೆ
ಬೇಕಾಗುವ ಸಾಮಾಗ್ರಿಗಳು:
ಬೆಳ್ಳುಳ್ಳಿ 2 ದೊ.ಚಮಚ,ವಿನೆಗರ್ 2 ದೊ.ಚಮಚ,ಸಣ್ಣಗೆ ಹೆಚ್ಚಿದ ಈರುಳ್ಳಿ 1 ದೊ.ಚ.,ಸಣ್ಣಗೆ ಹೆಚ್ಚಿದ ಶುಂಠಿ 1ದೊ.ಚ.,ಸಣ್ಣಗೆ ಹೆಚ್ಚಿದ ಹಸಿಮೆಣಸಿನಕಾಯಿ 1ಚಮಚ,ಸೋಯಾ ಸಾಸ್ 2ದೊ.ಚ.,ಸೂಪ್ ಕ್ಯೂಬ್ಸ್ 3,ಎಣ್ಣೆ 2 ದೊ.ಚ.,ರೆಡ್ ಚಿಲ್ಲಿ ಸಾಸ್ 3 ಚಮಚ,ಟೊಮೆಟೊ ಕೆಚಪ್ 2ಚಮಚ, ಕಾನ್‌ಫ್ಲೋರ್ 2 ದೊ.ಚ.,ಮತ್ತು ನೀರು 4 ಕಪ್,ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು, ಉಪ್ಪು ರುಚಿಗೆ.
ಮಾಡುವ ವಿಧಾನ:
ನೀರು ಮತ್ತು ಕಾನ್‌ಫ್ಲೋರ್ ಬೆರಸಿಡಿ.- ದಪ್ಪ ತಳದ ಪಾತ್ರೆಗೆ ಎಣ್ಣೆ ಹಾಕಿ ಶುಂಠಿ,ಈರುಳ್ಳಿ,ಬೆಳ್ಳುಳ್ಳಿ,ಹಸಿಮೆಣಸಿಕಾಯಿ ಹಾಕಿ ಕೈಯಾಡಿಸಿ ಬಾಡಿದರೆ ಸಾಕು.ತದನಂತರ ಸೋಯಾ ಸಾಸ್,ರೆಡ್ ಚಿಲ್ಲಿ ಸಾಸ್, ಟೊಮೆಟೊ ಕೆಚಪ್,ವಿನೇಗರ್ ಮಿಕ್ಸ್ ಮಾಡಿ.ನೀರು , ಕಾನ್‌ಫ್ಲೋರ್ ಮಿಶ್ರಣ ಮತ್ತು ಸೂಪ್ ಕ್ಯೂಬ್ಸ್ ಹಾಕಿ ಕುದಿಸಿ.ತದನಂತರ ಫ್ರೈ ಮಾಡಿಟ್ಟ ತರಕಾರಿ ಉಂಡೆ ಹಾಕಿ ಮಿಕ್ಸ್ ಮಾಡಿ ನಂತರ ಕೊತ್ತಂಬರಿ ಸೊಪ್ಪಿನ ಚೂರು ಹಾಕಿದರೆ ಡ್ರೈ ವೆಜಿಟೆಬಲ್ ಮಂಚೂರಿಯನ್ ಸವಿಯಲು ಸಿದ್ಧ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ
JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?
“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…
ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!
ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nagavalli Bangale Movie: ಸೆನ್ಸಾರ್ ಪಾಸಾದ ನಾಗವಲ್ಲಿ
Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್ʼ ಟ್ರೇಲರ್ ಔಟ್- ಮಿಂಚಿದ ಅಕ್ಷಯ್
Doddaballapura: ಘಾಟಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ
Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು
Hunsur: ಬ್ಯಾರಿಕೇಡ್ ಗೆ ಸಿಲುಕಿದ ಗಜರಾಜ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.