
Instagram ನಲ್ಲಿ ‘ಮಾಹಿತಿ ಸೋರಿಕೆ’ ತಡೆಗಟ್ಟಲು ಯಾವೆಲ್ಲಾ ತಂತ್ರ ಅನುಸರಿಸಬಹುದು !
Team Udayavani, Mar 9, 2021, 8:30 PM IST

ಇಂದು ಸಾಮಾಜಿಕ ಜಾಲತಾಣಗಳು ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗಗಳಾಗಿದೆ. ಇಲ್ಲಿ ದೈನಂದಿನ ಆಗುಹೋಗುಗಳನ್ನು, ಅಭಿಪ್ರಾಯ ಸೇರಿದಂತೆ ಹಲವಾರು ವಿಚಾರಗಳನ್ನು ಮುಕ್ತವಾಗಿ ಹಂಚಿಕೊಳ್ಳುವುದನ್ನು ಕಾಣಬಹುದು. ಡಿಜಿಟಲ್ ಯುಗದಲ್ಲಿ ಫೇಸ್ ಬುಕ್, ವಾಟ್ಸಾಪ್, ಇನ್ಸ್ ಸ್ಟಾಗ್ರಾಂ, ಟ್ವಿಟ್ಟರ್ ಮುಂತಾದ ಸೋಶಿಯಲ್ ಮೀಡಿಯಾಗಳನ್ನು ಅತೀ ಹೆಚ್ಚು ಜನರು ಬಳಸುತ್ತಿದ್ದಾರೆ ಮತ್ತು ಸಕ್ರಿಯರಾಗಿರುತ್ತಾರೆ.
ಇಂದು ಸಾಮಾಜಿಕ ಜಾಲತಾಣಗಳ ಬಳಕೆಯಿಂದ ಎಷ್ಟು ಲಾಭವಿದೆಯೋ ಅಷ್ಟೇ ಪ್ರಮಾಣದಲ್ಲಿ ನಷ್ಟಗಳಾಗುತ್ತಿದೆ. ಮುಖ್ಯವಾಗಿ ಗೌಪ್ಯತಾ ವಿಚಾರಗಳು ಸೋರಿಕೆಯಾಗುತ್ತಿದೆ. ಈ ಲೇಖನದಲ್ಲಿ ಇನ್ ಸ್ಟಾಗ್ರಾಂ ಬಳಸುವಾಗ ಭದ್ರತೆಯನ್ನು ಕಾಪಾಡಲು ಅನುಸರಿಸಬೇಕಾದ ತಂತ್ರಗಳೇನು ಎಂಬುದರ ಮಾಹಿತಿ ಇಲ್ಲಿದೆ.
- ಪ್ರೈವೇಟ್ ಅಕೌಂಟ್: ಪಬ್ಲಿಕ್ ಅಕೌಂಟ್ ಅನ್ನು ಪ್ರೈವೇಟ್ ಅಕೌಂಟ್ ಗೆ ಬದಲಾಯಿಸುವುದರಿಂದ ಹಲವಾರು ಲಾಭಗಳಿವೆ. ಈ ಫೀಚರ್ ಪ್ರಕಾರ ನಿಮ್ಮ ಪ್ರತೀ ಕಂಟೆಂಟ್ ಗಳ ಮೇಲೆ ನಿಯಂತ್ರಣವನ್ನು ಸಾಧಿಸಬಹುದು. ಯಾವುದೇ ಇನ್ಸ್ಟಾ ಗ್ರಾಂ ಬಳಕೆದಾರರನ್ನು ಬ್ಲಾಕ್ ಮಾಡುವ ಬದಲು ರಿಮೂವ್ ಮಾಡಬಹುದು. ನೀವು ಒಪ್ಪಿಗೆ ಕೊಟ್ಟರೇ ಮಾತ್ರ ಇತರರು ನಿಮ್ಮ ಅಕೌಂಟ್ ಅನ್ನು ವೀಕ್ಷಿಸಬಹುದು ಅಥವಾ ಹೊಸ ಅಪ್ಡೇಟ್ ಪಡೆಯಬಹುದು. ಇದರ ಜೊತೆಗೆ ಯಾರೆಲ್ಲಾ ತಮ್ಮ ಪೋಸ್ಟ್ ಗೆ ಕಮೆಂಟ್ ಮಾಡಲು ಅರ್ಹರು ಹಾಗೂ ‘ಆ್ಯಕ್ಟಿವಿಟಿ ಸ್ಟೇಟಸ್’ ಆಫ್ ಮಾಡುವ ಸೌಲಭ್ಯವೂ ಇದೆ.
- ಎರಡು ಹಂತದ ದೃಢೀಕರಣ(Two-factor authentication): ಇನ್ಸ್ಟಾಗ್ರಾಂ ಜೊತೆಗೆ ಇತರ ಸಾಮಾಜಿಕ ಜಾಲತಾಣಗಳಲ್ಲೂ ಈ ಫೀಚರ್ ಇವೆ. ಹೆಚ್ಚುವರಿ ಭದ್ರತೆಗಾಗಿ ಇದನ್ನು ‘ಆನ್’ ಮಾಡುವುದು ಉತ್ತಮ. ಈ ಫೀಚರ್ ಬಳಸುವುದರಿಂದ ಯಾವುದೇ ಹೊಸ ಡಿವೈಸ್ ಗಳಲ್ಲಿ ಇನ್ ಸ್ಟಾಗ್ರಾಂ ಲಾಗಿನ್ ಆದ ಸಂದರ್ಭದಲ್ಲಿ ವಿಶೇಷ ಕೋಡ್ ಅಥವಾ confirmation ಅನ್ನು ಕೇಳುತ್ತದೆ. ಇದು ನಮ್ಮ ಅಕೌಂಟ್ ಗಳನ್ನು ಸುರಕ್ಷಿತವಾಗಿಡಲು ಸಹಕಾರಿ.
- ಆತ್ಮೀಯರಿಗೆ ಮಾತ್ರ ಕಾಣುವಂತೆ ಸ್ಟೋರೀಸ್ ಗಳನ್ನು ಶೇರ್ ಮಾಡಿ: ಇನ್ ಸ್ಟಾಗ್ರಾಂನಲ್ಲಿ ‘ಕ್ಲೋಸ್ ಫ್ರೆಂಡ್ಸ್‘ ಪಟ್ಟಿ ಮಾಡುವ ಆಯ್ಕೆಯಿದೆ. ಸ್ಟೋರಿಗಳನ್ನು ಪೋಸ್ಟ್ ಮಾಡುವಾಗ ಪರಿಚಿತರಿಗೆ ಮಾತ್ರ ಕಾಣುವಂತೆ ನಿಗದಿಪಡಿಸಿ. ಇದರೊಂದಿಗೆ ಪಟ್ಟಿಯಲ್ಲಿದ್ದ ಫ್ರೆಂಡ್ಸ್ ಗಳನ್ನು ಯಾವಾಗ ಬೇಕಾದರೂ ರಿಮೂವ್ ಮಾಡಬಹುದು. ವಿಶೇಷವೆಂದರೇ ಇತರ ಬಳಕೆದಾರರಿಗೆ ನೀವು ಕ್ಲೋಸ್ ಫ್ರೆಂಡ್ಸ್ ಪಟ್ಟಿಯಲ್ಲಿ ಸೇರಿಸಿರುವ ವಿಚಾರ ಹಾಗೂ ರಿಮೂವ್ ಮಾಡಿರುವ ವಿಚಾರ ತಿಳಿಯುವುದಿಲ್ಲ.
- ಕಮೆಂಟ್ ಗಳ ಆಯ್ಕೆ: ಇನ್ ಸ್ಟಾಗ್ರಾಂ ತನ್ನ ಬಳಕೆದಾರರಿಗೆ ಕಮೆಂಟ್ ಗಳನ್ನು ಆಯ್ಕೆ ಮಾಡುವ ಮತ್ತು ಪ್ರಚೋದನಾತ್ಮಕ ಬರಹಗಳನ್ನು ನಿರ್ಬಂಧಿಸುವ ಆಯ್ಕೆಯನ್ನು ನೀಡಿದೆ. ಯಾವುದೇ ಅಸಭ್ಯ ಎನಿಸುವಂತಹ ಪದಗಳು ಇದರಿಂದಾಗಿ ಸ್ವಯಂಚಾಲಿತವಾಗಿ ಡಿಲೀಟ್ ಆಗುವುದು. ಇದಕ್ಕಾಗಿ ಯಾವುದೆಲ್ಲಾ ಪದಗಳು ಹಾಗೂ ಯಾವೆಲ್ಲಾ ಇಮೋಜಿಯನ್ನು ಇತರರು ಬಳಸಬಾರದೆಂಬ ಪಟ್ಟಿಯನ್ನು ಫಿಲ್ಟರ್ ಆಯ್ಕೆಯಲ್ಲಿ ನೀಡಲಾಗಿದೆ.
- ಟ್ಯಾಗ್ ಮಾಡುವುದನ್ನು ನಿರ್ಧರಿಸಬಹುದು: ಕೆಲವು ವ್ಯಕ್ತಿಗಳು ಸುಖಾಸುಮ್ಮನೇ ಇತರರನ್ನು ಪ್ರತಿಯೊಂದು ಪೋಸ್ಟ್ ಗಳಿಗೂ ಟ್ಯಾಗ್ ಮಾಡಿರುತ್ತಾರೆ. ಇದನ್ನು ತಪ್ಪಿಸಲು ಇನ್ ಸ್ಟಾಗ್ರಾಂ ಯಾವೆಲ್ಲಾ ವ್ಯಕ್ತಿಗಳು ತಮಗೆ ಟ್ಯಾಗ್ ಅಥವಾ mention ಮಾಡಬಹುದು ಎಂಬುದನ್ನು ನಿರ್ಧರಿಸುವ ಆಯ್ಕೆ ನೀಡಿದೆ. ಇಲ್ಲಿ everyone, only people you follow or no one to be able ಎಂಬ ಮೂರು ಆಯ್ಕೆ ನೀಡಲಾಗಿದೆ.
- ಬ್ಲಾಕ್ (Block) ಮಾಡುವ ಆಯ್ಕೆ : ಪ್ರೈವೇಟ್ ಅಕೌಂಟ್ ಆಗಿರದೆಯೂ ಇತರರನ್ನು ಬ್ಲಾಕ್ ಮಾಡುವ ಅವಕಾಶವನ್ನು ಇನ್ ಸ್ಟಾಗ್ರಾಂ ಕಲ್ಪಿಸಿದೆ. ಇದರಿಂದ ಕೆಲವು ವ್ಯಕ್ತಿಗಳ ಅಸಭ್ಯ ಕಮೆಂಟ್ ಗಳಿಂದ ಹಾಗೂ ಪೋಸ್ಟ್ ಗಳಿಂದ ಉಂಟಾಗುವ ಮಾನಸಿಕ ಕಿರಿಕಿರಿಯನ್ನು ತಡೆಗಟ್ಟಬಹುದು.
ಇದರ ಜೊತೆಗೆ ಯಾರಾದರೂ ನಿಂದಿಸಿದರೆ ಅಥವಾ ಮೆಸೇಜ್ ಗಳ ಮೂಲಕ ಕಿರುಕುಳ ನೀಡುತ್ತಿದ್ದರೇ “ರಿಪೋರ್ಟ್” ಮಾಡುವ ಅವಕಾಶವನ್ನು ಇನ್ಸ್ಟಾಗ್ರಾಂ ನೀಡಿದೆ. ಇಂದು ಮಾಹಿತಿ ಸೋರಿಕೆ ವಿಚಾರದಲ್ಲಿ ಸಾಮಾಜಿಕ ಜಾಲತಾಣಗಳು ಅಗ್ರ ಪಾತ್ರವಹಿಸುತ್ತಿದೆ. ಆದುದರಿಂದ ಪ್ರತೀ ಪೋಸ್ಟ್ ಶೇರ್ ಮಾಡುವ ಮುನ್ನ ಅವಲೋಕನ ನಡೆಸುವುದು ಉತ್ತಮ.
ಟಾಪ್ ನ್ಯೂಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ : ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?

OneNation, OneElection Bill: 31 JPC ಸದಸ್ಯರ ಕಾರ್ಯವ್ಯಾಪ್ತಿ ಏನು?ಸಲಹೆ ನೀಡುವವರು ಯಾರು

Winter: ಚಳಿಗಾಲದಲ್ಲಿ ಆರೋಗ್ಯಕರವಾಗಿರಲು ಸೇವಿಸಬೇಕಾದ ಆಹಾರಗಳು ಇವು…

Zakir Hussain ; ಸರಸ್ವತಿ, ಗಣಪತಿಯ ಆರಾಧಕರಾಗಿದ್ದರು ತಬಲಾ ಮಾಂತ್ರಿಕ

Zakir Hussain: 5 ರೂ ಕಾನ್ಸರ್ಟ್ ನಿಂದ 5 ಗ್ರ್ಯಾಮಿಯವರೆಗೆ…: ತಬಲಾ ಉಸ್ತಾದ್ ನಾದಮಯ ಪಯಣ
MUST WATCH

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.