ವಾಟ್ಸಾಪ್ ವೆಬ್ ನಲ್ಲಿ ಬರುತ್ತಿದೆ ಮೆಸೆಂಜರ್ ರೂಮ್ಸ್: ಏನಿದು ನೂತನ ಫೀಚರ್? ದಂಗಾದ Zoom App

ಮಿಥುನ್ ಪಿಜಿ, May 13, 2020, 8:28 AM IST

mesenger-rooms-main

ಝೂಮ್ ಆ್ಯಪ್, ಗೂಗಲ್ ಮೀಟ್ ಮುಂತಾದವುಗಳಲ್ಲಿ ವಿಡಿಯೋ ಚಾಟ್ ವ್ಯವಸ್ಥೆ ಪ್ರಸಿದ್ದಿ ಪಡೆದ ಬೆನ್ನಲ್ಲೇ ಇದೀಗ ತಂತ್ರಜ್ಞಾನ ದೈತ್ಯ ಸಂಸ್ಥೆ ಫೇಸ್ ಬುಕ್ ಕೂಡ ವಾಟ್ಸಾಪ್ ವೆಬ್ ನಲ್ಲಿ ಹೊಸ ಫೀಚರ್ ಒಂದನ್ನು ಪರಿಚಯಿಸಲು ಸಿದ್ದವಾಗಿದೆ.

ಇಂದು ವಿಡಿಯೋ ಕಾಲ್ ಎಂಬುದು ಜನಮಾನಸವಾಗಿದೆ. ಲಾಕ್ ಡೌನ್ ಸಮಯದಲ್ಲಂತೂ ಝೂಮ್ ಆ್ಯಪ್ ಅತೀ ಹೆಚ್ಚು ಡೌನ್ ಲೋಡ್ ಆಗಿದ್ದು ತಂತ್ರಜ್ಞಾನ ದೈತ್ಯನ ನಿದ್ದೆಗೆಡಿಸಿದ್ದಂತೂ ಸುಳ್ಳಲ್ಲಾ. ನಂತರದಲ್ಲಿ ಗೂಗಲ್ ತನ್ನ ಜಿ-ಮೇಲ್ ಬಳಕೆದಾರರಿಗೆ ಪ್ರೀಮಿಯಂ ಮೀಟ್ ಅನ್ನು ಪರಿಚಯಿಸಿತ್ತು.  Google Duo ಕೂಡ ತನ್ನ ವಿಡಿಯೋ ಚಾಟ್ ವ್ಯವಸ್ಥೆಯಲ್ಲಿ ಹೊಸ ಫೀಚರ್ ಅನ್ನು ಅಭಿವೃದ್ಧಿಪಡಿಸಿತ್ತು.

ವಾಟ್ಸಾಪ್  ಕೂಡ , ತನ್ನ  ಮೊಬೈಲ್ ಆವೃತ್ತಿಯಲ್ಲಿ ಹೊಸದಾದ ಫೀಚರ್ಸ್​​​ಗಳನ್ನು ಬಳಕೆದಾರರಿಗೆ ಪರಿಚಯಿಸುತ್ತಾ ಬಂದಿದೆ. ಆದರೇ ವಾಟ್ಸಾಪ್ ವೆಬ್ ಗೆ ಸೀಮಿತ ಆಯ್ಕೆ ಗಳಷ್ಟೇ ಇದ್ದವು. ಇದೀಗ ವಾಟ್ಸ್ಆ್ಯಪ್ ವೆಬ್​​ನಲ್ಲಿ ಮೆಸೆಂಜರ್ ರೂಮ್ಸ್ ಎಂಬ ಹೊಸ ಫೀಚರ್ ಅನ್ನು ಸದ್ಯದಲ್ಲೇ ಪರಿಚಯಿಸಲಿದೆ.

ಏನಿದು ಮೆಸೆಂಜರ್ ರೂಮ್ಸ್ ?  

ಝೂಮ್ ಆ್ಯಪ್ ನಿಂದಾಗಿ ವಾಟ್ಸಾಪ್ ವಿಡಿಯೋ ಕಾಲ್ ತನ್ನ ಅಸ್ತಿತ್ವವನ್ನು ಕಳೆದುಕೊಂಡಿತ್ತು. ಈ ಕಾರಣಕ್ಕಾಗಿಯೇ  ಫೇಸ್​ಬುಕ್​​ ಕಳೆದ ತಿಂಗಳು ವಾಟ್ಸಾಪ್ ವೆಬ್​​ನಲ್ಲಿ ಮೆಸೆಂಜರ್ ರೂಮ್ಸ್ ಫೀಚರ್ ನೀಡುವುದರ ಬಗ್ಗೆ ಹೇಳಿಕೊಂಡಿತ್ತು. ಇದೀಗ ಸದ್ಯದಲ್ಲೇ ಈ ನೂತನ ಫೀಚರ್  ಬೀಟಾ ವರ್ಷನ್ ಮೂಲಕ ಸಿಗಲಿದೆ ಎಂದು ಸಂಸ್ಥೆ ಹೇಳಿದೆ.

ಮೆಸೆಂಜರ್ ರೂಮ್ಸ್ ಎಂಬುದು ವಿಡಿಯೋ ಗ್ರೂಪ್ ಚಾಟ್ ಫೀಚರ್ ಅನ್ನು ಹೊಂದಿದ್ದು, ವಾಟ್ಸಾಪ್  ವೆಬ್​​ ಬಳಕೆದಾರರಿಗೆ ಇದು ಬಳಕೆಗೆ ಸಿಗಲಿದೆ. ಇದರಲ್ಲಿ ಏಕಕಾಲಕ್ಕೆ 50 ಜನರಿಗೆ ಕರೆ ಮಾಡುವ ಅವಕಾಶ ಲಭ್ಯವಾಗಲಿದೆ. ಇನ್ನು ಪರ್ಸನಲ್ ಲ್ಯಾಪ್ ಟಾಪ್ ಮತ್ತು ಡೆಸ್ಕ್​​ಟಾಪ್ ಬಳಕೆದಾರರು ಮೆಸೆಂಜರ್ ರೂಮ್ಸ್ ಫೀಚರ್ ಅನ್ನು ತಮ್ಮ ವಾಟ್ಸಾಪ್ ವೆಬ್ ಮೂಲಕ ಬಳಕೆ ಮಾಡಬಹುದು. ಇದಕ್ಕೆಂದೇ ವಾಟ್ಸಾಪ್  ವೆಬ್ 2.2019.6 ವರ್ಶನ್ ಅನ್ನು ಸಿದ್ಧಪಡಿಸಿದೆ. ಸದ್ಯದಲ್ಲೇ ಈ ನೂತನ ಅಪ್ಡೇಟ್ ವರ್ಶನ್ ಮೂಲಕ ಮೆಸೆಂಜರ್ ರೂಮ್ಸ್ ಫೀಚರ್ ಬಳಕೆದಾರರಿಗೆ ಸಿಗಲಿದೆ.

WAbetainfo ಎಂಬ ಸಂಸ್ಥೆ ಈ ಕುರಿತ ಸ್ಕ್ರೀನ್ ಶಾಟ್ ಒಂದನ್ನು ಶೇರ್ ಮಾಡಿದ್ದು, ಇದರಲ್ಲಿ ಹೊಸದಾಗಿ ಅಳವಡಿಸಲಾದ ಮೆಸೆಂಜರ್ ರೂಮ್ಸ್ ಐಕಾನ್ ಕಾಣಬಹುದಾಗಿದೆ. ಇದನ್ನು ಕ್ಲಿಕ್ ಮಾಡಿದಾಕ್ಷಣ  ರೂಂ ಒಂದು ತೆರದುಕೊಳ್ಳಲಿದ್ದು  ಏಕಕಾಲದಲ್ಲಿ 50  ಜನರಿಗೆ ಕರೆ ಮಾಡಬಹುದಾಗಿದೆ. ಮತ್ತು ಲಿಂಕ್ ಶೇರ್ ಮಾಡುವ ವ್ಯವಸ್ಥೆಯೂ ಇರಲಿದೆ. (ಝೂಮ್ ಆ್ಯಪ್ ನಲ್ಲಿ 100 ಜನರಿಗೆ ಏಕಕಾಲದಲ್ಲಿ ವಿಡಿಯೋ ಕರೆ ಮಾಡಬಹುದು)

ಮೆಸೆಂಜರ್ ರೂಂ ಎಂಬುದು  ಸಂಪೂರ್ಣ ಫೇಸ್ ಬುಕ್ ನಿಯಂತ್ರಣದಲ್ಲಿರಲಿದ್ದು, ನೀವು ಫೇಸ್ ಬುಕ್ ಖಾತೆ ಹೊಂದಿಲ್ಲದಿದ್ದರೂ ಲಿಂಕ್ ಮೂಲಕ ಜಾಯಿನ್ ಆಗಬಹುದು.

ಇನ್ನು ವಾಟ್ಸಾಪ್  ಮೇ ತಿಂಗಳಿನ ಅಂತ್ಯದಲ್ಲಿ ‘ವಾಟ್ಸಾಪ್ ಪೇ ಫೀಚರ್’ ಅನ್ನು ಬಳಕೆದಾರರಿಗೆ ಪರಿಚಯಿಸುವುದಾಗಿ ಹೇಳಿದೆ. ಈ ಹಿಂದಷ್ಟೆ  ವಾಟ್ಸಾಪ್, ಗ್ರೂಪ್ ವಿಡಿಯೋ ಕಾಲ್ ನಲ್ಲಿ 8 ಜನರು ಭಾಗವಹಿಸುವಂತೆ ಫೀಚರ್ ಅನ್ನು ಅಭಿವೃದ್ಧಿಪಡಿಸಿತ್ತು. ಇದು ಐಓಎಸ್ ಮತ್ತು ಆ್ಯಪಲ್ ಬಳಕೆದಾರರಿಗೆ ಆಧೀಕೃತವಾಗಿ ಪ್ಲೇ ಸ್ಟೋರ್ ನಲ್ಲಿ/ ಆ‍್ಯಪಲ್ ಸ್ಟೋರ್ ನಲ್ಲಿ ಲಭ್ಯವಿದೆ. ನಿಮಗಿನ್ನೂ ಈ ಫೀಚರ್ ದೊರಕದಿದ್ದರೆ ಈ  ಕೂಡಲೇ ಅಪ್ ಡೇಟ್ ಮಾಡುವ ಮೂಲಕವೂ ಸೌಲಭ್ಯ ಪಡೆಯಬಹುದು.

-ಮಿಥುನ್ ಮೊಗೇರ

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Recipe; ಈ ಸ್ನಾಕ್ಸ್ ಒಂದು ಸಲ ಮಾಡಿದ್ರೆ ಸಾಕು ಪದೇ ಪದೇ ಮಾಡ್ತೀರಾ ಏನ್ ರುಚಿ ಗೊತ್ತಾ!

Recipe; ಈ ಸ್ನಾಕ್ಸ್ ಒಂದು ಸಲ ಮಾಡಿದ್ರೆ ಸಾಕು ಪದೇ ಪದೇ ಮಾಡ್ತೀರಾ ಏನ್ ರುಚಿ ಗೊತ್ತಾ!

Sheetal Devi: ಕೈಗಳಿಲ್ಲದ ಹುಡುಗಿ ಬಿಲ್ಗಾರಿಕೆಯಲ್ಲಿ ನಿಪುಣೆ; ಇದು ಸ್ಪೂರ್ತಿಯ ಕಥೆ

Sheetal Devi: ಕೈಗಳಿಲ್ಲದ ಹುಡುಗಿ ಬಿಲ್ಗಾರಿಕೆಯಲ್ಲಿ ನಿಪುಣೆ; ಇದು ಸ್ಪೂರ್ತಿಯ ಕಥೆ

1-asaasas

Haryana ಗೆಲ್ಲಲು ಕೈ ಕಸರತ್ತು: ರಾಹುಲ್ ಭೇಟಿಯಾದ ವಿನೇಶ್, ಬಜರಂಗ್ !

6-WLD

Weight Loss Drinks: ತೂಕ, ಕೊಬ್ಬು ಕಡಿಮೆ ಮಾಡಿಕೊಳ್ಳಲು ಈ ಪಾನೀಯಗಳನ್ನು ಸೇವಿಸಿ

Death Penalty: ಸ್ವಾತಂತ್ರ್ಯ ನಂತರ ಭಾರತದಲ್ಲಿ ಗಲ್ಲಿಗೇರಿಸಲ್ಪಟ್ಟ ಮೊದಲ ಮಹಿಳಾ ಕೈದಿ ಈಕೆ!

Death Penalty: ಸ್ವಾತಂತ್ರ್ಯ ನಂತರ ಭಾರತದಲ್ಲಿ ಗಲ್ಲಿಗೇರಿಸಲ್ಪಟ್ಟ ಮೊದಲ ಮಹಿಳಾ ಕೈದಿ ಈಕೆ!

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.